»   » ವಿಮರ್ಶೆ: ಮಾತಿನಲ್ಲೇ 'ಮಾಂಜ' ಕೊಡುವ 'ಮಿಮಿಕ್ರಿ ಮಂಜ'

ವಿಮರ್ಶೆ: ಮಾತಿನಲ್ಲೇ 'ಮಾಂಜ' ಕೊಡುವ 'ಮಿಮಿಕ್ರಿ ಮಂಜ'

Posted by:
Subscribe to Filmibeat Kannada

''ಸಾಲ ಕೊಟ್ಟವನು ಕೋಡಂಗಿ, ಇಸ್ಕೊಂಡವನು ಈರಭದ್ರ''....ಈ ಮಾತನ್ನ ದೊಡ್ಡವರು ಸುಖಾ ಸುಮ್ಮನೆ ಹೇಳಿಲ್ಲ ಅನ್ನೋದನ್ನ 'ಮೇಲುಕೋಟೆ ಮಂಜ' ಚಿತ್ರದ ಮೂಲಕಅತ್ಯಂತ ಮನರಂಜನಾತ್ಮಕವಾಗಿ ತೆರೆಮೇಲೆ ತೋರಿಸಿದ್ದಾರೆ.

Rating:
3.5/5

ಚಿತ್ರ : ಮೇಲುಕೋಟೆ ಮಂಜ
ನಿರ್ದೇಶನ : ಜಗ್ಗೇಶ್
ಚಿತ್ರಕಥೆ-ಸಂಭಾಷಣೆ: ಜಗ್ಗೇಶ್
ನಿರ್ಮಾಣ : ಆರ್.ಕೃಷ್ಣ
ಛಾಯಾಗ್ರಹಣ : ದಾಸರಿ ಸೀನು
ಸಂಗೀತ : ಗಿರಿಧರ್ ದಿವಾನ್
ತಾರಾಗಣ : ಜಗ್ಗೇಶ್, ಐಂದ್ರಿತಾ ರೇ, ರಂಗಾಯಣ ರಘು, ಶ್ರೀನಿವಾಸ ಪ್ರಭು, ಬ್ಯಾಂಕ್ ಜನಾರ್ಧನ್ ಮತ್ತು ಇತರರು
ಬಿಡುಗಡೆ : ಫೆಬ್ರವರಿ 10, 2017

ಕಥಾ ಹಂದರ

ಕಥಾ ಹಂದರ

ಮಂಜ (ಜಗ್ಗೇಶ್) ಮೇಲುಕೋಟೆಯ ಮಧ್ಯಮ ಕುಟುಂಬದ ಯುವಕ. ಬಿಸ್ ನೆಸ್ ಮಾಡುವುದಕ್ಕೆ ಸ್ನೇಹಿತರ ಬಳಿ, ಬಡ್ಡಿ ಕೊಡವವರು ಬಳಿ ಸಾಲ ತಗೊಂಡು ಆ ಕಡೆ ಬಿಸ್ ನೆಸ್ ನಲ್ಲಿ ನಷ್ಟವಾಗಿ, ಇತ್ತ ಸಾಲಗಾರರಿಗೆ ದುಡ್ಡು ವಾಪಸ್ ಕೊಡೋದಕ್ಕೆ ಆಗದೆ ತಲೆ ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಸಾಲಗಾರರಿಗೆ ಮಂಜ ದುಡ್ಡು ಕೊಡಲ್ಲ, ಅವರು ಮಂಜನನ್ನ ಹುಡುಕುವುದು ಬಿಡಲ್ಲ. ಹೀಗೆ ಇಡೀ ಚಿತ್ರ ಸಾಲ, ಸಾಲ ಎನ್ನುತ್ತಲೇ ಸಾಗುತ್ತದೆ.ಹೀಗಿರುವ ಮಂಜನ ಲೈಫ್ ನಲ್ಲಿ ಪಾರ್ವತಿಯ (ಐಂದ್ರಿತಾ ರೇ) ಎಂಟ್ರಿ, ಕಥೆಗೆ ಟ್ವಿಸ್ಟ್ ನೀಡುತ್ತೆ. ಅದನ್ನ ಚಿತ್ರಮಂದಿರದಲ್ಲೇ ನೋಡಿದ್ರೆ ಎಂಜಾಯ್ ಮಾಡಬಹುದು.

ಸಾಲ ಮಾಡಿ ಆದ್ರೂ ತುಪ್ಪ ತಿನ್ನಿ

ಸಾಲ ಮಾಡಿ ಆದ್ರೂ ತುಪ್ಪ ತಿನ್ನಿ

ಮನುಷ್ಯ ಬದುಕುವುದಕ್ಕೆ ಹಣ ಬೇಕು. ಉದ್ಯೋಗ ಇಲ್ಲ ಅಂದ್ರೆ ಹಣ ಇರಲ್ಲ. ಅದಕ್ಕೆ ಜೀವನ ಸಾಗಿಸುವುದಕ್ಕೆ ಸಾಲ ಮಾಡಲೇಬೇಕು. ಪ್ರಪಂಚದಲ್ಲಿ ಸಾಲ ಮಾಡದವರು ಯಾರಿದ್ದಾರೆ? ಪ್ರತಿಯೊಬ್ಬ ಭಾರತೀಯನ ಮೇಲೂ ಸಾಲ ಇದೆ. ಬ್ಯಾಂಕ್ ಗಳು ನೀಡುವ ಸಾಲವನ್ನ ದುರುಪಯೋಗ ಮಾಡಿಕೊಂಡು, ಬಡ್ಡಿ, ಮೀಟರ್ ಬಡ್ಡಿ ನೀಡುವ ಸಂಸ್ಕ್ರತಿ ಸಮಾಜದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ....ಹೀಗೆ, ಸಮಾಜದಲ್ಲಿನ ಸಣ್ಣ ಅಂಶಗಳನ್ನ ಜಗ್ಗೇಶ್ ಅವರು ಮನರಂಜನಾತ್ಮಕವಾಗಿ ಬಿಂಬಿಸಿದ್ದಾರೆ.

ಮನರಂಜನೆಯೇ 'ಮಂಜ'ನ ಮಂತ್ರ

ಮನರಂಜನೆಯೇ 'ಮಂಜ'ನ ಮಂತ್ರ

ಚಿತ್ರದ ಅಡಿಬರಹ ಹೇಳುವಾಗೆ, ಮೇಲುಕೋಟೆ ಮಂಜ ನಗುವವರಿಗೆ ಮಾತ್ರ. ಇಡೀ ಸಿನಿಮಾ ಪೂರ್ತಿ ಜಗ್ಗೇಶ್ ಅವರು ತಮ್ಮ ಮಾತಿನ ಮೂಲಕವೇ ಮಾಂಜ ಕೊಡುತ್ತಾರೆ. ಕೆಲವೊಂದು ಸೀರಿಯಸ್ ದೃಶ್ಯಗಳಲ್ಲೂ ಜಗ್ಗೇಶ್ ನಗುವೇ ಮಂತ್ರ ಎಂಬುದನ್ನ ಅನುಸರಿಸಿದ್ದಾರೆ.

ಜಗ್ಗೇಶ್ ಅವರ ಅಭಿನಯ....!

ಜಗ್ಗೇಶ್ ಅವರ ಅಭಿನಯ....!

ಇಡೀ ಚಿತ್ರವನ್ನ ಜಗ್ಗೇಶ್ ಆವರಿಸಿಕೊಂಡಿದ್ದಾರೆ. ತಮ್ಮ ಮ್ಯಾನರಿಸಂ ಹಾಗೂ ತಮ್ಮ ಬೈಗುಳದ ಡೈಲಾಗ್ ಗಳ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದಾರೆ. ಇನ್ನೂ ವಿಶೇಷ ಅಂದ್ರೆ, ಕನ್ನಡದ ಹಲವು ನಟರ ಶೈಲಿಯಲ್ಲಿ ಮಿಮಿಕ್ರಿ ಮಾಡಿ ಮೋಡಿ ಮಾಡಿದ್ದಾರೆ.

ಐಂದ್ರಿತಾ ರೇ ನಟನೆ

ಐಂದ್ರಿತಾ ರೇ ನಟನೆ

ಡಿ-ಗ್ಲಾಮರ್ ಪಾತ್ರವನ್ನ ನಿರ್ವಹಿಸಿರುವ ಐಂದ್ರಿತಾ ರೇ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಐಂದ್ರಿತಾ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲವಾದರೂ, ಮೇಲುಕೋಟೆ ಮಂಜನಿಗೆ ಉತ್ತಮ ಜೋಡಿಯಾಗಿದ್ದು, ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಜಗ್ಗೇಶ್ ನಿರ್ದೇಶನ ಹೇಗಿದೆ?

ಜಗ್ಗೇಶ್ ನಿರ್ದೇಶನ ಹೇಗಿದೆ?

ನಟನೆಯಲ್ಲಿ ಸಕಲಕಲಾವಲ್ಲಭ ಎನಿಸಿಕೊಂಡಿರುವ ಜಗ್ಗೇಶ್, ನಿರ್ದೇಶನದಲ್ಲೂ ತಮ್ಮ ಕೈಚಳಕ ತೋರಿದ್ದಾರೆ. ಯಾವುದೇ ಮುಜುಗರ ಆಗದೆ ರೀತಿ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಚಿತ್ರಕಥೆ ಹಾಗೂ ಸಂಭಾಷಣೆ ನೀಡಿದ್ದಾರೆ. ಆದ್ರೆ, ತಾಂತ್ರಿಕವಾಗಿ ಚಿತ್ರದ ಗುಣಮಟ್ಟವನ್ನ ಮತ್ತಷ್ಟು ಉತ್ತಮವಾಗಿಸಬೇಕಿತ್ತು.

ಉಳಿದವರು ಹೇಗೆ...

ಉಳಿದವರು ಹೇಗೆ...

ಮಂಜನಿಗೆ ಸಾಲ ನೀಡುವ ಪಾತ್ರದಲ್ಲಿ ರಂಗಾಯಣ ರಘು, ಜಗ್ಗೇಶ್ ಅವರ ತಂದೆ ಪಾತ್ರದಲ್ಲಿ ಶ್ರೀನಿವಾಸ ಪ್ರಭು, ಬ್ಯಾಂಕ್ ಮ್ಯಾನೇಜರ್ ಪಾತ್ರದಲ್ಲಿ ಬ್ಯಾಂಕ್ ಜನಾರ್ಧನ್ ಸೇರಿದಂತೆ ಇನ್ನು ಹಲವರು ಚಿತ್ರದಲ್ಲಿ ಅಭಿನಯಿಸಿದ್ದು, ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಸಂಗೀತ ಹೇಗಿದೆ?

ಸಂಗೀತ ಹೇಗಿದೆ?

'ಮೇಲುಕೋಟೆ ಮಂಜ' ಚಿತ್ರದ ಹಾಡುಗಳು ಥಿಯೇಟರ್ ನಲ್ಲಿ ನೋಡಿದ್ದು ಮಾತ್ರ ನೆನಪು. ಹಿನ್ನಲೆ ಸಂಗೀತದ ಬಗ್ಗೆ ಮತ್ತಷ್ಟು ಎಚ್ಚರ ವಹಿಸಿಬೇಕಿತ್ತು.

ತಾಂತ್ರಿಕವಾಗಿ ಸಿನಿಮಾ

ತಾಂತ್ರಿಕವಾಗಿ ಸಿನಿಮಾ

ದಾಸರಿ ಸೀನು ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕೆ ಪೂರಕವಾಗಿದೆ. ಸಂಕಲನದಲ್ಲಿ ಮತ್ತಷ್ಟು ಜಾಗೃತಿ ವಹಿಸಿಬೇಕಿತ್ತು. ಯಾಕಂದ್ರೆ, ಕಂಟ್ಯೂನಿಟಿ ಸಮಸ್ಯೆ ಅಲ್ಲಲ್ಲಿ ಗೋಚರವಾಗುತ್ತೆ.

ಫೈನಲ್ ಸ್ಟೇಟ್ ಮೆಂಟ್

ಫೈನಲ್ ಸ್ಟೇಟ್ ಮೆಂಟ್

'ಮೇಲುಕೋಟೆ ಮಂಜ' ಚಿತ್ರದಲ್ಲಿ ಕಥೆಗೆ ಪ್ರಾಮುಖ್ಯತೆ ಇಲ್ಲ. ಇದೊಂದು ಪಕ್ಕಾ ಔಟ್ ಅಂಡ್ ಔಟ್ ಕಾಮಿಡಿ ಎಂಟರ್ ಟೈನ್ ಮೆಂಟ್ ಸಿನಿಮಾ. ಜಗ್ಗೇಶ್ ಅವರು ಆಟ-ತುಂಟಾಟಗಳು ಚಿತ್ರದ ಹೈಲೈಟ್. ಕೊನೆಯದಾಗಿ ಹೇಳುವುದಾದರೇ ಈ ಚಿತ್ರ 'ನಗುವವರಿಗೆ ಮಾತ್ರ'

English summary
Kannada Actor jaggesh and Kannada Actress Aindrita Ray Starrer 'Melkote Manja' Movie Has hit the Screens today (February 10th). The Movie is Directed by Jaggesh. Here is the complete Review of 'Melkote Manja'
Please Wait while comments are loading...

Kannada Photos

Go to : More Photos