twitter
    For Quick Alerts
    ALLOW NOTIFICATIONS  
    For Daily Alerts

    ಕಮಲ್ ಹಾಸನ್ ಅಭಿನಯದ ಉತ್ತಮ ವಿಲನ್ ಚಿತ್ರವಿಮರ್ಶೆ

    By ರಾಜಾರಾಂ ಹೊಳ್ಳ
    |

    Rating:
    3.0/5
    ಕಮಲ್ ಹಾಸನ್ ಅಭಿನಯದ, ರಮೇಶ್ ಅರವಿಂದ್ ನಿರ್ದೇಶನದ ವರ್ಷದ ಬಹು ನಿರೀಕ್ಷಿತ ಚಿತ್ರ ಉತ್ತಮ ವಿಲನ್ ಸಾಕಷ್ಟು ಅಡಚಣೆಯ ನಂತರ ಅಂತೂ ತೆರೆಮೇಲೆ ಬಂದಿದೆ.

    ಸರಿಸುಮಾರು ಎರಡು ವರ್ಷದ ಹಿಂದೆ ಘೋಷಣೆಯಾಗಿದ್ದ ಉತ್ತಮ ವಿಲನ್ ಚಿತ್ರ ಮಾರ್ಚ್ 2014ರಲ್ಲಿ ಸೆಟ್ಟೇರಿತ್ತು. ಅಂದಿನಿಂದ ಇಂದಿನವರೆಗೆ (ಮೇ 1) ಸದಾ ಒಂದಿಲ್ಲೊಂದು ಸುದ್ದಿಯಲ್ಲಿದ್ದ ಚಿತ್ರಕ್ಕೆ ರಿಲೀಸ್ ದಿನವೂ ವಿಘ್ನ ತಪ್ಪಿಲ್ಲ ಎನ್ನುವುದು ನೋವಿನ ವಿಚಾರ. (ಕಮಲ್ ಸಿಟ್ಟು ಯಾರ ಮೇಲೆ)

    ಸದಾ ಪ್ರೇಕ್ಷಕರಿಗೆ ಹೊಸತನವನ್ನು ನೀಡಲು ಬಯಸುವ ಅಪ್ರತಿಮ ಕಲಾವಿದ ಕಮಲ್ ಹಾಸನ್ ಅವರ 'ಉತ್ತಮ ವಿಲನ್' ಚಿತ್ರ ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಮೂಡಿ ಬಂದಿದೆಯೇ?

    ಸಿನಿ ಅಭಿಮಾನಿಗಳು ಎರಡು ವರ್ಷ ಕಮಲ್ ಚಿತ್ರಕ್ಕಾಗಿ ಕಾದಿದ್ದು ಸಾರ್ಥಕವಾಯಿತೇ? ವಿಮರ್ಶೆ ಸ್ಲೈಡಿನಲ್ಲಿ ನೋಡಿ..

    ಕಥೆಯ ಬಗ್ಗೆ ಒಂದಿಷ್ಟು

    ಕಥೆಯ ಬಗ್ಗೆ ಒಂದಿಷ್ಟು

    8ನೇ ಶತಮಾನದ ಒಬ್ಬ ಕಲಾವಿದ ಹಾಗೂ ಇಂದಿನ ಸೂಪರ್ ಸ್ಟಾರ್ ಒಬ್ಬನ ಕಥಾಹಂದರ ಹೊಂದಿರುವ ಚಿತ್ರ. ತಾನು ಸಾವನ್ನಪ್ಪುವ ಮುನ್ನ ಸಿನಿಮಾ ರಂಗಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕೆನ್ನುವುದು ನಾಯಕನ ಆಶಯವಾಗಿರುತ್ತದೆ.

    ಕಥೆಯ ಬಗ್ಗೆ ಇನ್ನೂ ಸ್ವಲ್ಪ

    ಕಥೆಯ ಬಗ್ಗೆ ಇನ್ನೂ ಸ್ವಲ್ಪ

    ತನ್ನ ವೈವಾಹಿಕ ಜೀವನ ಗೊಂದಲ ಮತ್ತು ನೋವಿನ ಗೂಡಾದಾಗ ಅದನ್ನೇ ಆಧರಿಸಿ ಸಿನಿಮಾ ಮಾಡಬೇಕೆಂದು ನಾಯಕ ಬಯಸುತ್ತಾನೆ. ಇದಕ್ಕಾಗಿ ತನ್ನ ಗುರುವಿನ (ಕೆ ಬಾಲಚಂದರ್) ಮನಸ್ಸನ್ನು ವಲಿಸಿ ಅವರೇ ಚಿತ್ರವನ್ನು ನಿರ್ದೇಶಿಸುವಂತೆ ಮಾಡುತ್ತಾನೆ. ಚಿತ್ರದ ಕಥೆ ಎಂಟನೇ ಶತಮಾನದ ಮತ್ತು ಇಂದಿನ ಕಥೆಯ ಜೊತೆಗೆ ಸಾಗುತ್ತದೆ. ಎಂಟನೇ ಶತಮಾನದ ಕಥೆಗೂ ಈಗಿನ ಕಥೆಗೂ ಏನು ಲಿಂಕು, ಸೂಪರ್ ಸ್ಟಾರಿನ ಹಣೆಬರಹ ಕೊನೆಗೆ ಏನಾಗುತ್ತದೆ ಎನ್ನುವುದನ್ನು ಚಿತ್ರಮಂದಿರದಲ್ಲೇ ನೋಡಿ..

    ಕಮಲ್ ಹಾಸನ್ ಮಾಸ್ಟರ್ ಪೀಸ್ ನಟನೆ

    ಕಮಲ್ ಹಾಸನ್ ಮಾಸ್ಟರ್ ಪೀಸ್ ನಟನೆ

    ಕಮಲ್ ಹಾಸನ್ ನಟನೆಯೇ ಚಿತ್ರದ ಪ್ರಮುಖ ಬೆನ್ನೆಲುಬು. ಚಿತ್ರದ ಉತ್ತಮನ್ ಮತ್ತು ಮನೋರಂಜನ್ ಪಾತ್ರದಲ್ಲಿ ಕಮಲ್ ಹಾಸನ್ ಅಪ್ರತಿಮ ಅಭಿನಯವನ್ನು ನೀಡಿದ್ದಾರೆ. ಚಿತ್ರದ ಇಂಟ್ರಡಕ್ಷನ್ ಹಾಡಿನಲ್ಲಿ ಕಮಲ್ ಅವರ ನೃತ್ಯ ಅಮೋಘ. ಸೆಂಟಿಮೆಂಟ್, ರೋಮ್ಯಾನ್ಸ್ ಪಾತ್ರದಲ್ಲಿ ಕಮಲ್ ತಾನ್ನೊಬ್ಬ ಮಹಾನ್ ಕಲಾವಿದ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.

    ಇತರ ಕಲಾವಿದರು

    ಇತರ ಕಲಾವಿದರು

    ನಾಸರ್, ಕೆ ಬಾಲಚಂದರ್, ಕೆ ವಿಶ್ವನಾಥ್, ಪಾರ್ವತಿ ನಾಯರ್, ಊರ್ವಶಿ, ಆಂದ್ರಿಯಾ, ಅನಂತ್ ಮಹಾದೇವನ್ ಮುಂತಾದವರು ತಮ್ಮ ತಮ್ಮ ಪಾತ್ರದಲ್ಲಿ ಉತ್ತಮವಾಗಿ ನಟಿಸಿದ್ದಾರೆ.

    ಸಿನಿಮಾಟೋಗ್ರಾಫಿ ಮತ್ತು ಸಂಗೀತ

    ಸಿನಿಮಾಟೋಗ್ರಾಫಿ ಮತ್ತು ಸಂಗೀತ

    ಶಮದ್ ಅವರ ಸಿನಿಮಾಟೋಗ್ರಾಫಿ ಚಿತ್ರದ ಪ್ಲಸ್ ಪಾಯಿಂಟ್. ಗಿಬ್ರನ್ ಅವರ ಸಂಗೀತ ಎವರೇಜ್, ಬ್ಯಾಕ್ ಗ್ರೌಂಡ್ ಮ್ಯೂಸಿಕಿಗೆ ಚಿತ್ರದಲ್ಲಿ ಹೆಚ್ಚಿನ ಅವಕಾಶವಿಲ್ಲ. ಹಾಡಿನ ದೃಶ್ಯಗಳು ಕೆಲವೊಂದು ಕಡೆ ಇನ್ನೂ ಕಲರ್ ಫುಲ್ ಆಗಿರಬೇಕಿತ್ತು.

    ತಾಳ್ಮೆ ಪರೀಕ್ಷಿಸುವ ಚಿತ್ರದ ಅವಧಿ

    ತಾಳ್ಮೆ ಪರೀಕ್ಷಿಸುವ ಚಿತ್ರದ ಅವಧಿ

    ಎರಡು ಗಂಟೆ 51 ನಿಮಿಷ ಅವಧಿಯ ಚಿತ್ರ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಅದರಲ್ಲೂ ಇಂಟರ್ವಲ್ ನಂತರದ ಅವಧಿ ಚ್ಯೂಯಿಂಗ್ ಗಮ್ ರೀತಿಯಲ್ಲಿ ಸಾಗುವುದು ಪ್ರೇಕ್ಷಕರಿಗೆ ಆಕಳಿಕೆ ಬರುವಂತೆ ಮಾಡುತ್ತದೆ.

    ಚಿತ್ರ ನಿರೀಕ್ಷಿತ ಮಟ್ಟಕ್ಕಿದೆಯೇ?

    ಚಿತ್ರ ನಿರೀಕ್ಷಿತ ಮಟ್ಟಕ್ಕಿದೆಯೇ?

    ಕಮಲ್ ಹಾಸನ್ ಅವರ ಬಹು ನಿರೀಕ್ಷಿತ ಉತ್ತಮ ವಿಲನ್ ಮೊದಲಾರ್ಥದಲ್ಲಿ ವೇಗವಾಗಿ ಸಾಗಿದರೂ, ದ್ವಿತೀಯಾರ್ಧದಲ್ಲಿ ಪ್ಯಾಸೆಂಜರ್ ರೈಲಿನ ರೀತಿಯಲ್ಲಿ ಸಾಗುತ್ತದೆ. ಚಿತ್ರದ ಸಂಕಲನ ಭಾಗ ಇನ್ನೂ ಚುರುಕಾಗಿರ ಬಹುದಾಗಿತ್ತು. ನಿರ್ದೇಶಕ ರಮೇಶ್ ಅರವಿಂದ್ ಕೆಲವೊಂದು ಅನಾವಶ್ಯಕ ದೃಶ್ಯಗಳಿಗೆ ಮುಲಾಜಿಲ್ಲದೇ ಕತ್ತರಿ ಪ್ರಯೋಗಿಸಬಹುದಿತ್ತು. ಚಿತ್ರವನ್ನು ಕಮಲ್ ಅಭಿಮಾನಿಗಳು ಅಪ್ಪಿಕೊಳ್ಳಬಹುದು.

    Read in English: Uttama Villain Movie Review
    English summary
    Kamal Haasan starer, Ramesh Aravind directed Uttama Villain movie review.
    Friday, May 1, 2015, 16:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X