twitter
    For Quick Alerts
    ALLOW NOTIFICATIONS  
    For Daily Alerts

    'ವಿರಾಟ್' ವಿಮರ್ಶೆ; ಕಡ್ಡಾಯವಾಗಿ ದರ್ಶನ್ ಅಭಿಮಾನಿಗಳಿಗೆ ಮಾತ್ರ

    |

    ''ತಲೆ ಎತ್ತಿ ನಡೆಯುವುದು ಸ್ವಾಭಿಮಾನದ ಲಕ್ಷಣ. ತಲೆ ತಗ್ಗಿಸಿ ನಡೆಯುವುದು ಗೌರವದ ಲಕ್ಷಣ. ತಲೆ ತಿರುಗಿಸಿಕೊಂಡು ಹೋಗೋದು ದುರಹಂಕಾರದ ಲಕ್ಷಣ. ಅಂತವರ ತಲೆ ಕಡಿಯುವುದು 'ವಿರಾಟ್' ಲಕ್ಷಣ.!''

    ಇಂತಹದ ಅಬ್ಬರದ ಡೈಲಾಗ್ ಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ವಿರಾಟ್' ಸಿನಿಮಾದ ಉದ್ದಕ್ಕೂ ಇದೆ. ಗ್ಲಾಮರ್ ತುಂಬಲು ಮೂವರು ಹೀರೋಯಿನ್ ಗಳು ಇದ್ದಾರೆ. ಅಲ್ಲಿಗೆ, ಎಲ್ಲರ ನಿರೀಕ್ಷೆಯಂತೆ ಲವ್ವಿ ಡವ್ವಿ ಇರಲೇಬೇಕು ಅಂತ ಕಟ್ಟುಪಾಡಿಗೆ ಬಿದ್ದಿರುವ ನಿರ್ದೇಶಕರು ಚಿತ್ರಕಥೆಯ ಮೂಲ ಉದ್ದೇಶವನ್ನೇ ಮರೆತು ಹೋಗಿರುವುದು ಮಾತ್ರ ಬೇಸರದ ಸಂಗತಿ. [ದರ್ಶನ್ 'ವಿರಾಟ್' ದರ್ಶನ ಹೇಗಿದೆ? ಟ್ವಿಟ್ಟರ್ ನಲ್ಲಿ ವಿಮರ್ಶೆ]

    Rating:
    3.0/5
    Star Cast: ದರ್ಶನ್, ಚೈತ್ರ ಚಂದ್ರನಾಥ್, ಇಶಾ ಚಾವ್ಲಾ, ವಿದಿಶಾ, ಶ್ರೀನಿವಾಸ ಮೂರ್ತಿ
    Director: ಎಚ್ ವಾಸು

    'ವಿರಾಟ್' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

    'ವಿರಾಟ್' ಕಥೆ ಏನು?

    'ವಿರಾಟ್' ಕಥೆ ಏನು?

    ಕತ್ತಲೆಯಲ್ಲಿ ಕಳೆಯುತ್ತಿರುವ ಕರ್ನಾಟಕಕ್ಕೆ ಬೆಳಕು ನೀಡಿ ಪವರ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಅಂತ ಹೊಸ 'ಪವರ್ ಪ್ರಾಜೆಕ್ಟ್'ಗೆ ನಾಂದಿ ಹಾಡುವ ಕೋಟ್ಯಾಧಿಪತಿ, ಪ್ರಸಾದ್ ಗ್ರೂಪ್ ಆಫ್ ಕಂಪನೀಸ್ ಚೇರ್ ಮೆನ್ ವಿರಾಟ್ (ದರ್ಶನ್) ಸುತ್ತ ನಡೆಯುವ ಕಥೆ ಈ ಸಿನಿಮಾ.

    'ವಿರಾಟ್'ಗೆ ಅಡ್ಡಗಾಲು ಹಾಕೋರು ಯಾರು?

    'ವಿರಾಟ್'ಗೆ ಅಡ್ಡಗಾಲು ಹಾಕೋರು ಯಾರು?

    ಅತ್ತ ಇನ್ನೊಂದು ಪವರ್ ಪ್ರಾಜೆಕ್ಟ್ ಪ್ಲಾನ್ ಮಾಡಿ ಕೋಟಿ ಕೋಟಿ ರೂಪಾಯಿ ಲೂಟಿ ಹೊಡೆಯೋಕೆ ಸಿಂಗ್ (ರವಿಶಂಕರ್) ಕೂಡ ಪ್ರಾಜೆಕ್ಟ್ ಸ್ಯಾಂಕ್ಷನ್ ಮಾಡಿಸಿಕೊಳ್ಳುವುದಕ್ಕೆ ರೇಸ್ ನಲ್ಲಿರ್ತಾರೆ. ಇಬ್ಬರ ಪೈಕಿ ಯಾರ ಪ್ಲಾನ್ ಗೆ ಮುಖ್ಯಮಂತ್ರಿ ಗ್ರೀನ್ ಸಿಗ್ನಲ್ ನೀಡುತ್ತಾರೆ? ಅದಕ್ಕೆ ರವಿಶಂಕರ್ ರೂಪಿಸುವ ತಂತ್ರ-ರಣತಂತ್ರ ಬಾಕಿ ಸ್ಟೋರಿ.

    ಮೂವರು ಹೀರೋಯಿನ್ ಗಳು ಯಾಕೆ?

    ಮೂವರು ಹೀರೋಯಿನ್ ಗಳು ಯಾಕೆ?

    'ವಿರಾಟ್' ಚಿತ್ರಕ್ಕೆ ಅಸಲಿ ಟ್ವಿಸ್ಟ್ ನೀಡುವುದೇ ಮೂವರು ಹೀರೋಯಿನ್ ಗಳು. ಪವರ್ ಪ್ರಾಜೆಕ್ಟ್ ಮಧ್ಯೆ 'ಪ್ರೀತಿ..ಪ್ರೀತಿ' ಅಂದುಕೊಂಡು ಕೀರ್ತಿ, ಸ್ಫೂರ್ತಿ ಮತ್ತು ಪ್ರೀತಿ ಅನ್ನೋ ಮೂವರು ಹುಡುಗಿಯರು 'ವಿರಾಟ್' ಹಿಂದೆ ಬೀಳ್ತಾರೆ. ಆಮೇಲಿನ ಕಥೆಯನ್ನ ನೀವು ಚಿತ್ರಮಂದಿರದಲ್ಲೇ ನೋಡಿ....

    ದರ್ಶನ್ ಆಕ್ಟಿಂಗ್ ಹೇಗಿದೆ?

    ದರ್ಶನ್ ಆಕ್ಟಿಂಗ್ ಹೇಗಿದೆ?

    ಕೋಟ್ಯಾಧಿಪತಿಯಾಗಿ, ಜವಾಬ್ದಾರಿಯುತ ನಾಗರೀಕನಾಗಿ, ಉತ್ತಮ ಸ್ನೇಹಿತನಾಗಿ, ಒಳ್ಳೆಯ ಮಗನಾಗಿ ದರ್ಶನ್ ನಟನೆ ಸೂಪರ್. ಅವರ ಗತ್ತು, ಗೈರತ್ತು, ಆಕ್ಷನ್ ನಲ್ಲಿನ ತಾಕತ್ತು ಬಗ್ಗೆ ಎರಡು ಮಾತಿಲ್ಲ. ಇಡೀ ಚಿತ್ರಕ್ಕೆ ದರ್ಶನ್ ಕಳೆ ಕೊಟ್ಟಿದ್ದಾರೆ.

    ಹೀರೋಯಿನ್ ಗಳ ನಟನೆ.....

    ಹೀರೋಯಿನ್ ಗಳ ನಟನೆ.....

    ನಟನೆ ವಿಷಯದಲ್ಲಿ ಇಶಾ ಚಾವ್ಲಾ ಬೋಲ್ಡ್ ಅಂಡ್ ಬ್ಯೂಟಿಫುಲ್ಲಾದ್ರೆ, ವಿದಿಶಾ ಶ್ರೀವಾಸ್ತವ್ ತುಂಬಾ ಸಾಫ್ಟ್. ಡ್ಯಾನ್ಸ್ ನಲ್ಲಿ ಮಾತ್ರ ಇಬ್ಬರೂ ಡಲ್ಲು. ಇಬ್ಬರಿಗೂ ಹೋಲಿಸಿದರೆ ಚೈತ್ರ ಚಂದ್ರನಾಥ್ ಪರ್ವಾಗಿಲ್ಲ.

    ಕೇಡಿ ರವಿಶಂಕರ್ ಬಗ್ಗೆ....

    ಕೇಡಿ ರವಿಶಂಕರ್ ಬಗ್ಗೆ....

    ಸಿಂಗ್ ಪಾತ್ರದಲ್ಲಿ ರವಿಶಂಕರ್ ನಟನೆ ಬಗ್ಗೆ ಕೆಮ್ಮಂಗಿಲ್ಲ. 'ವಿರಾಟ್' ಸಿನಿಮಾದಲ್ಲಿ ಅವರನ್ನ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತೇನೋ....ಅನ್ನೋ ಕೊರಗು ಚಿತ್ರಮಂದಿರದಿಂದ ಹೊರಬಂದ ಪ್ರೇಕ್ಷಕರಲ್ಲಿ ಕಾಡುತ್ತೆ.

    ಉಳಿದವರ ಬಗ್ಗೆ....

    ಉಳಿದವರ ಬಗ್ಗೆ....

    ಉಳಿದಂತೆ ಸುಮಲತಾ ಅಂಬರೀಶ್ ಮತ್ತು ಸುಹಾಸಿನಿ ಕೊಟ್ಟ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

    ಕಾಮಿಡಿ ಕಿಕ್

    ಕಾಮಿಡಿ ಕಿಕ್

    'ವಿರಾಟ್' ಚಿತ್ರದಲ್ಲಿ ಕಾಮಿಡಿ ಕಿಂಗ್ ಗಳಾದ ಸಾಧು ಕೋಕಿಲ, ಬುಲೆಟ್ ಪ್ರಕಾಶ್, ತರಂಗ ವಿಶ್ವ ಮತ್ತು ಚಿದಾನಂದ್ ಇದ್ದಾರೆ. ಆದರೂ, ಪ್ರೇಕ್ಷಕರಿಗೆ ಕಾಮಿಡಿ ಕೊರತೆ ಕಾಡುತ್ತೆ.

    ನಿಜವಾದ ಕಾಮಿಡಿ ಆಕ್ಷನ್ ನಲ್ಲಿ!

    ನಿಜವಾದ ಕಾಮಿಡಿ ಆಕ್ಷನ್ ನಲ್ಲಿ!

    'ವಿರಾಟ್' ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಇದೆ. ಹೊಡಿಬಡಿ ದೃಶ್ಯಗಳು ಸಾಹಸ ಪ್ರಿಯರಿಗೆ ಮನರಂಜನೆ ನೀಡುವುದರಲ್ಲಿ ಡೌಟ್ ಇಲ್ಲ. ಆದ್ರೆ, ದರ್ಶನ್ ಎಸೆಯುವ ಟೈ (Tie) ನಿಂದ ಕೇಡಿಗಳು ಹಾರಿ ಹೋಗುವುದು, ತೆಂಗಿನಮರ ಬುಡ ಸಮೇತ ನೆಲಕ್ಕೆ ಉರುಳುವುದು, ಗೋಡೆ ಸೀಳು ಬಿಡುವುದನ್ನ ಕಂಡು ಪ್ರೇಕ್ಷಕರು ಹಲ್ಲು ಬಿಡುತ್ತಾರೆ!!

    ಪ್ರೇಕ್ಷಕರ ಬೇಸರ ಒಂದೇ.!

    ಪ್ರೇಕ್ಷಕರ ಬೇಸರ ಒಂದೇ.!

    ಕರ್ನಾಟಕದ ವಿದ್ಯುತ್ ಸಮಸ್ಯೆಗೆ 'ವಿರಾಟ್' ಚಿತ್ರದಲ್ಲಿ ಒಂದು ಪರಿಹಾರ ಇರಬಹುದೇನೋ ಅಂತ ನಿರೀಕ್ಷೆ ಹೊತ್ತು ಚಿತ್ರಮಂದಿರಕ್ಕೆ ಕಾಲಿಡುವ ಪ್ರೇಕ್ಷಕರಿಗೆ ನಿರಾಸೆ ಆಗಲ್ಲ ಅಂದ್ರೆ ಅದು ಸುಳ್ಳು. ಮೂವರು ಹೀರೋಯಿನ್ ಗಳಿಗೆ ಪ್ರಾಮುಖ್ಯತೆ ನೀಡುವುದಕ್ಕೆ ಹೋಗಿ ಪವರ್ ಪ್ರಾಜೆಕ್ಟ್ ನ ನಿರ್ದೇಶಕರು ಕೈಬಿಟ್ಟಂತೆ ಭಾಸವಾಗುತ್ತೆ.

    ಕ್ಲೈಮ್ಯಾಕ್ಸ್ ನಲ್ಲಿ ಪ್ರೇಕ್ಷಕ ಗಲಿಬಿಲಿ!

    ಕ್ಲೈಮ್ಯಾಕ್ಸ್ ನಲ್ಲಿ ಪ್ರೇಕ್ಷಕ ಗಲಿಬಿಲಿ!

    ಸಿನಿಮಾ ಮುಗಿದರೂ ಪ್ರೇಕ್ಷಕರು ಇನ್ನೂ ಸೀಟು ಬಿಟ್ಟು ಎದ್ದಿರಲ್ಲ. 'ಮಗಾ...ಎದ್ದೇಳ್ಳೋ ಸಿನಿಮಾ ಮುಗೀತು' ಅಂತ ಒಬ್ಬರು ಹೇಳಿದ್ರೆ, 'ಇನ್ನೂ ಇಲ್ಲ ಕೂತ್ಕೊಳ್ಳೋ' ಅಂತ ಇನ್ನೊಬ್ಬರು ಹೇಳ್ತಾರೆ. ಇಬ್ಬರ ಸಂಭಾಷಣೆ ನಡುವೆ ಟೈಟಲ್ ಕಾರ್ಡ್ ಬಂದ ನಂತರ, ಸಿನಿಮಾ ಮುಗಿದಿರುವುದು ಖಾತ್ರಿ ಆಗಿ ಇಬ್ಬರೂ ಥಿಯೇಟರ್ ಎಕ್ಸಿಟ್ ಕಡೆ ಮುಖ ಮಾಡುತ್ತಾರೆ. ಇದು 'ವಿರಾಟ್' ಮೊದಲ ಶೋನಲ್ಲಿ ಆದ ಘಟನೆ.

    ಎಲ್ಲವೂ ಇದೆ!

    ಎಲ್ಲವೂ ಇದೆ!

    'ವಿರಾಟ್' ಚಿತ್ರದಲ್ಲಿ ಮನರಂಜನೆಗೆ ಬೇಕಾಗಿರುವ ಎಲ್ಲಾ ಎಲಿಮೆಂಟ್ಸ್ ಇದ್ದೂ, ಏನೋ ಇಲ್ಲದಂತೆ ಪ್ರೇಕ್ಷಕರಿಗೆ ಭಾಸವಾಗುತ್ತೆ. ನಿರ್ದೇಶಕರು ಚಿತ್ರಕಥೆಯಲ್ಲಿ ಹೆಚ್ಚು ಜಾಗರೂಕತೆ ವಹಿಸಿದ್ದರೆ, 'ವಿರಾಟ್' ಅತ್ತ್ಯುತ್ತಮ ಚಿತ್ರವಾಗುತ್ತಿತ್ತೇನೋ....

    ಫೈನಲ್ ಸ್ಟೇಟ್ ಮೆಂಟ್

    ಫೈನಲ್ ಸ್ಟೇಟ್ ಮೆಂಟ್

    ದರ್ಶನ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಸಿನಿಮಾ 'ವಿರಾಟ್'. ಮಾಸ್ ಅಭಿಮಾನಿಗಳು ಬಯಸುವ ಫಾರ್ಮುಲಾ 'ವಿರಾಟ್' ಚಿತ್ರದಲ್ಲಿದೆ. ಯಾವ ನಿರೀಕ್ಷೆ ಮಾಡದೆ, ಕೇವಲ ಮನರಂಜನೆ ಬಯಸುವ ಪ್ರೇಕ್ಷಕರು 'ವಿರಾಟ್' ಚಿತ್ರವನ್ನ ಆರಾಮಾಗಿ ಒಮ್ಮೆ ನೋಡಬಹುದು.

    English summary
    Kannada Actor Darshan starrer 'Viraat' movie has hit the screens today (January 29th). Review of H.Vasu directorial 'Viraat' is here.
    Saturday, September 29, 2018, 18:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X