»   » 'ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ'

'ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ'

Posted by:
Subscribe to Filmibeat Kannada

ಸಿ.ಐ.ಡಿ ಆಫೀಸರ್ ಶಿವ (ಶಿವರಾಜ್ ಕುಮಾರ್) ಕೊಲೆ ಕೇಸ್ ತನಿಖೆ ಮಾಡಿ ಒಂದೊಂದೇ ಸಾಕ್ಷಿ-ಆಧಾರಗಳನ್ನ ಬಯಲು ಮಾಡುತ್ತಾ ಹೋದಾಗ ಪ್ರೇಕ್ಷಕರು ಸೀಟಿನ ತುದಿಯಲ್ಲಿ ಕೂರುತ್ತಾರೆ. ಕೆಲವರು ಉಗುರು ಕಡಿಯಲು ಶುರು ಮಾಡುತ್ತಾರೆ. ಶಿವನ ಜಾಣ್ಮೆಗೆ ಪ್ರೇಕ್ಷಕರು ಶಿಳ್ಳೆ-ಚಪ್ಪಾಳೆ ಹೊಡೆಯುತ್ತಾರೆ. ಪರದೆ ಮೇಲೆ ಕಾಸಿನ ಸುರಿಮಳೆ ಆಗುತ್ತೆ. ಅಷ್ಟರಮಟ್ಟಿಗೆ ಇಂದು ಬಿಡುಗಡೆ ಆಗಿರುವ 'ಶಿವಲಿಂಗ' ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರ!


'ಆಪ್ತಮಿತ್ರ', 'ಆಪ್ತರಕ್ಷಕ', 'ದೃಶ್ಯ' ದಂತಹ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾಗಳಿಗೆ ಖ್ಯಾತಿ ಪಡೆದಿರುವ ನಿರ್ದೇಶಕ ಪಿ.ವಾಸು 'ಶಿವಲಿಂಗ' ಚಿತ್ರದಲ್ಲೂ ಅಂಥದ್ದೇ ನಡುಕ ಹುಟ್ಟಿಸುವ, ಕಡೆಯವರೆಗೂ ಕುತೂಹಲ ಕಾಯ್ದಿರಿಸುವ ಕಥೆಯನ್ನ ತೆರೆಮೇಲೆ ತಂದಿದ್ದಾರೆ. [ಅಂದು ಸೌಂದರ್ಯ; ಇಂದು ವೇದಿಕಾ.! 'ಶಿವಲಿಂಗ' ಅಚ್ಚರಿ.!]

Rating:
4.0/5

'ಶಿವಲಿಂಗ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....


ಚಿತ್ರ - 'ಶಿವಲಿಂಗ'
ನಿರ್ಮಾಣ - ಕೆ.ಎ.ಸುರೇಶ್
ಕಥೆ-ಚಿತ್ರಕಥೆ-ನಿರ್ದೇಶನ - ಪಿ.ವಾಸು
ಸಂಗೀತ ನಿರ್ದೇಶನ - ವಿ.ಹರಿಕೃಷ್ಣ
ಛಾಯಾಗ್ರಹಣ - ಪಿ.ಕೆ.ಎಚ್.ದಾಸ್
ಸಂಕಲನ - ಸುರೇಶ್ ಅರಸ್
ತಾರಾಗಣ - ಶಿವರಾಜ್ ಕುಮಾರ್, ವೇದಿಕಾ, ಊರ್ವಶಿ, ವಿನಯ ಪ್ರಸಾದ್, ಶಕ್ತಿ, ವೈಶಾಲಿ ದೀಪಕ್, ಸಾಧು ಕೋಕಿಲ ಮತ್ತು ಇತರರು


ಕೊಲೆ ಕೇಸಿನ ಸುತ್ತ ಹೆಣೆದಿರುವ ಕಥೆ

ಕೊಲೆ ಕೇಸಿನ ಸುತ್ತ ಹೆಣೆದಿರುವ ಕಥೆ

ಬಿರಿಯಾನಿಗೆ ಫೇಮಸ್ ಆಗಿರುವ ರಹೀಮ್ (ಶಕ್ತಿ) ಕೊಲೆಗೀಡಾಗುವುದರಿಂದ 'ಶಿವಲಿಂಗ' ಚಿತ್ರ ಆರಂಭವಾಗುತ್ತೆ. ಅದು ಕೊಲೆ ಅಲ್ಲ, ಆತ್ಮಹತ್ಯೆ ಅಂತ ಕೋರ್ಟ್ ತೀರ್ಪು ನೀಡುತ್ತೆ. ನಡೆದಿರುವುದು ಕೊಲೆ ಎಂಬ ಶಂಕೆ ಮೇಲೆ ಕೇಸ್ ರೀ ಓಪನ್ ಆದಾಗ ತನಿಖೆ ಮಾಡಲು ಸಿ.ಐ.ಡಿ ಶಿವ (ಶಿವರಾಜ್ ಕುಮಾರ್) appoint ಆಗ್ತಾರೆ. ಚಿತ್ರ ಕಥೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುವುದು ಇಲ್ಲಿಂದಲೇ.!


ಕೊಲೆಯೋ, ಆತ್ಮಹತ್ಯೆಯೋ.?

ಕೊಲೆಯೋ, ಆತ್ಮಹತ್ಯೆಯೋ.?

ರಹೀಮ್ ಕೊಲೆ ಕೇಸ್ ತನಿಖೆ ಮಾಡಲು ಒಪ್ಪಿಕೊಳ್ಳುವ ಶಿವ, ಸತ್ಯಭಾಮ (ವೇದಿಕಾ) ಜೊತೆ ಸಪ್ತಪದಿ ತುಳಿಯುತ್ತಾರೆ. ರಹೀಮ್ ಬಗ್ಗೆ ತಿಳಿಯದ ಸತ್ಯಭಾಮಗೆ 'ಸಮಸ್ಯೆ' ಕಾಡಲು ಶುರುವಾಗುತ್ತೆ. ಅದು ಎಂತಹ 'ಸಮಸ್ಯೆ' ಅಂತ ತಿಳಿಯಲು ನೀವು ಚಿತ್ರಮಂದಿರದಲ್ಲೇ ಸಿನಿಮಾ ನೋಡಿ.


ಶಿವರಾಜ್ ಕುಮಾರ್ ಅಭಿನಯ ಹೇಗಿದೆ?

ಶಿವರಾಜ್ ಕುಮಾರ್ ಅಭಿನಯ ಹೇಗಿದೆ?

ಸಿ.ಐ.ಡಿ ಆಫೀಸರ್ ಶಿವ ಆಗಿ ಶಿವರಾಜ್ ಕುಮಾರ್ ಅಭಿನಯ ಸೂಪರ್. ಫೈಟಿಂಗ್ ಮತ್ತು ಡ್ಯಾನ್ಸ್ ನಲ್ಲಿ ಶಿವಣ್ಣ ಎನರ್ಜಿ ಬಗ್ಗೆ ಕೆಮ್ಮಂಗಿಲ್ಲ.


ವೇದಿಕಾ ಆಕ್ಟಿಂಗ್ ಬೊಂಬಾಟ್!

ವೇದಿಕಾ ಆಕ್ಟಿಂಗ್ ಬೊಂಬಾಟ್!

ನಿಜ ಹೇಳ್ಬೇಕಂದ್ರೆ, ಇಡೀ 'ಶಿವಲಿಂಗ' ಚಿತ್ರ ನಿಂತಿರುವುದೇ ನಾಯಕಿ ವೇದಿಕಾ ಮೇಲೆ. ಇದುವರೆಗೂ ಮುದ್ದು ಮುಖದ ನಟಿಯಾಗಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ವೇದಿಕಾ 'ಶಿವಲಿಂಗ' ಚಿತ್ರದಲ್ಲಿ ನಿರೀಕ್ಷೆಗೂ ಮೀರಿದ ಪರ್ಫಾಮೆನ್ಸ್ ನೀಡಿದ್ದಾರೆ.


ಕಚಗುಳಿ ಇಡುವ ಸಾಧು ಕೋಕಿಲ!

ಕಚಗುಳಿ ಇಡುವ ಸಾಧು ಕೋಕಿಲ!

ಕುತೂಹಲ ಹಾಗೂ ಭಯದ ನಡುವೆ ಪ್ರೇಕ್ಷಕರನ್ನ ರಿಲ್ಯಾಕ್ಸ್ ಮಾಡುವುದು ನಟ ಸಾಧು ಕೋಕಿಲ. ಅವರು ತೆರೆ ಮೇಲೆ ಇದ್ದಷ್ಟು ಕಾಲ ಪ್ರೇಕ್ಷಕರು ಬಾಯ್ತುಂಬ ನಗುವುದು ಗ್ಯಾರೆಂಟಿ.


ಉಳಿದವರ ಕಥೆ?

ಉಳಿದವರ ಕಥೆ?

'ಆಲ್ ಟೈಮ್ ಅಡುಗೆಮನೆ ಅನುಸೂಯ' ಆಗಿ ನಟಿ ಊರ್ವಶಿ, ವಿನಯ ಪ್ರಸಾದ್, ಅಶೋಕ್, ವೈಶಾಲಿ ದೀಪಕ್, ಅವಿನಾಶ್ ರವರ ಅಭಿನಯ ಅಚ್ಚುಕಟ್ಟಾಗಿದೆ.


ಅಚ್ಚರಿ ಮೂಡಿಸುವ ಶಕ್ತಿ!

ಅಚ್ಚರಿ ಮೂಡಿಸುವ ಶಕ್ತಿ!

ರಹೀಮ್ ಪಾತ್ರಧಾರಿ ಶಕ್ತಿ ಅಭಿನಯದ ಬಗ್ಗೆ ತುಟಿ ಎರಡು ಮಾಡುವ ಹಾಗಿಲ್ಲ.


ಕಾಡುವ ಪಾರಿವಾಳ

ಕಾಡುವ ಪಾರಿವಾಳ

'ಆಪ್ತ ರಕ್ಷಕ' ಚಿತ್ರದಲ್ಲಿ ಹಾವು ಇದ್ದ ಹಾಗೆ, 'ಶಿವಲಿಂಗ' ಚಿತ್ರದಲ್ಲಿ ಪಾರಿವಾಳ ಇದೆ. ಸಿ.ಐ.ಡಿ ಆಫೀಸರ್ ತನಿಖೆಗೆ ಪಾರಿವಾಳ ನೀಡುವ ಸುಳಿವು ಇಡೀ ಚಿತ್ರದ ತಿರುಳು.


ವಿ.ಹರಿಕೃಷ್ಣ ಸಂಗೀತ

ವಿ.ಹರಿಕೃಷ್ಣ ಸಂಗೀತ

ವಿ.ಹರಿಕೃಷ್ಣ ನೀಡಿರುವ ಬ್ಯಾಕ್ ಗ್ರೌಂಡ್ ಸ್ಕೋರ್ ಚಿತ್ರಕಥೆಗೆ ಪೂರಕವಾಗಿದೆ. ಆದ್ರೆ, ಹಾಡುಗಳು ಮಾತ್ರ ಕೊಂಚ ಸಪ್ಪೆ.


ಗಟ್ಟಿಯಾದ ನಿರೂಪಣೆ

ಗಟ್ಟಿಯಾದ ನಿರೂಪಣೆ

ಕ್ಲೈಮ್ಯಾಕ್ಸ್ ವರೆಗೂ ಕೊಲೆಗಾರ ಯಾರು ಅಂತ ಬಿಟ್ಟುಕೊಡದೆ, ಪ್ರತಿ ಸೀನ್ ನಲ್ಲೂ ಸಸ್ಪೆನ್ಸ್ ಇಟ್ಟು, ಪ್ರೇಕ್ಷಕರಿಗೆ ಎಲ್ಲೂ ಬೋರಾಗದಂತೆ, ಸೀಟು ತುದಿಗೆ ಬಂದು ಕೂರುವ ಹಾಗೆ ಚಿತ್ರಕಥೆ ಹೆಣೆದಿರುವ ಪಿ.ವಾಸು ಅವರ ನಿರೂಪಣಾ ಸಾಮರ್ಥ್ಯವನ್ನ ಮೆಚ್ಚಲೇಬೇಕು.


'ಆಪ್ತಮಿತ್ರ' ಛಾಯೆ!

'ಆಪ್ತಮಿತ್ರ' ಛಾಯೆ!

'ಶಿವಲಿಂಗ' ಚಿತ್ರವನ್ನ ನೋಡುವ ಪ್ರೇಕ್ಷಕರಿಗೆ ಅಲ್ಲಲ್ಲಿ 'ಆಪ್ತಮಿತ್ರ' ಸಿನಿಮಾ ನೆನಪಾದರೆ ಅಚ್ಚರಿ ಇಲ್ಲ.


ಕ್ಲೈಮ್ಯಾಕ್ಸ್ ಡಮ್ಮಿ!

ಕ್ಲೈಮ್ಯಾಕ್ಸ್ ಡಮ್ಮಿ!

ಕ್ಲೈಮ್ಯಾಕ್ಸ್ ನಲ್ಲಿ ಇರುವ ಬಹುದೊಡ್ಡ ಟ್ವಿಸ್ಟ್ ಪ್ರೇಕ್ಷಕರಿಗೆ ಪೇಲವ ಅನಿಸಿದರೂ, ಇಡೀ ಚಿತ್ರವನ್ನ ನಿರೂಪಣೆ ಮಾಡಿರುವ ಶೈಲಿ ಚೆನ್ನಾಗಿದೆ.


ಕ್ಯಾಮರಾ ವರ್ಕ್

ಕ್ಯಾಮರಾ ವರ್ಕ್

ಪಿ.ಕೆ.ಎಚ್.ದಾಸ್ ರವರ ಕ್ಯಾಮರಾ ವರ್ಕ್ ಮತ್ತು ಅದರೊಂದಿಗೆ ಮಿಕ್ಸ್ ಆಗಿರುವ ಸ್ಪೆಷಲ್ ಎಫೆಕ್ಟ್ಸ್ ಹಾರರ್ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ. ನಿರ್ಮಾಪಕ ಕೆ.ಎ.ಸುರೇಶ್ 'ಶಿವಲಿಂಗ' ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ ಅನ್ನೋದಕ್ಕೆ ಪ್ರತಿ ಫ್ರೇಮ್ ಸಾಕ್ಷಿ.


ಮಿಸ್ ಮಾಡ್ಬೇಡಿ!

ಮಿಸ್ ಮಾಡ್ಬೇಡಿ!

'ಶಿವಲಿಂಗ' ಇಡೀ ಫ್ಯಾಮಿಲಿ ಕೂತು ನೋಡಬಹುದಾದ ಚಿತ್ರ. ಹಾರರ್ ಮತ್ತು ಸಸ್ಪೆನ್ಸ್ ಪ್ರಿಯರಿಗೆ 'ಶಿವಲಿಂಗ' ಹಬ್ಬ. ಈ ವೀಕೆಂಡ್ ನಲ್ಲಿ ನೀವು ಫ್ರೀ ಇದ್ರೆ, ಈಗಲೇ 'ಶಿವಲಿಂಗ' ಚಿತ್ರಕ್ಕೆ ಟಿಕೆಟ್ ಬುಕ್ ಮಾಡಿ. ಇಲ್ಲಾಂದ್ರೆ, ಮತ್ತೊಂದು 'ಆಪ್ತಮಿತ್ರ' ಮಿಸ್ ಮಾಡಿಕೊಂಡಂತೆ.


English summary
Kannada Actor Shiva Rajkumar starrer 'Shivalinga' movie has hit the screens today (February 12th). Review of P.Vasu directorial 'Shivalinga' is here.
Please Wait while comments are loading...

Kannada Photos

Go to : More Photos