»   » ಡಾಕ್ಯುಮೆಂಟರಿ ಎನಿಸದ ಡೈನಮೈಟ್ ’ಎದೆಗಾರಿಕೆ’ ಚಿತ್ರವಿಮರ್ಶೆ

ಡಾಕ್ಯುಮೆಂಟರಿ ಎನಿಸದ ಡೈನಮೈಟ್ ’ಎದೆಗಾರಿಕೆ’ ಚಿತ್ರವಿಮರ್ಶೆ

Written by: *ವಿನಾಯಕರಾಮ್ ಕಲಗಾರು
Subscribe to Filmibeat Kannada
Rating:
3.0/5
ಆತ ಸೈಲೆಂಟ್ ಕಿಲ್ಲರ್. ಕೊಲೆಗಡುಕತನ ಆತನ ಬೆನ್ನಿಗೆ ಬಿದ್ದ ವೃತ್ತಿ. ಬಹುಶಃ ಶಾರ್ಪ್ ಶೂಟರ್ ಎಂಬ ಪದ ಹುಟ್ಟಿದ್ದೇ ಆತನಿಂದ ಇರಬಹುದು. ಅವನ ಹುಚ್ಚೆದ್ದು ಕುಣಿಯುವ ಹುಮ್ಮಸ್ಸಿನಿಂದ ಇಡೀ ಸಿನಿಮಾ ಸೋನು (ಆದಿತ್ಯ) ಎನ್ನುವ ಪಾತ್ರದ ಜೊತೆ ಪರಕಾಯಪ್ರವೇಶ ಮಾಡುತ್ತದೆ.

ಮಾತು ಮೌನಕ್ಕೆ ಶರಣಾಗುತ್ತದೆ. ಮೌನ ಸಾವಿನಲ್ಲಿ ಲೀನವಾಗುತ್ತದೆ! ಇಡೀ ಚಿತ್ರ ಒಂದು ಜರ್ನಿ. ಭೂಗತ ಜಗತ್ತಿನ ಜೊತೆ ಸಾಗುವ ಪಯಣ. ಸಾವು ಬದುಕಿನ ನಡುವೆ ಒಂದು ಚೈನ್ ಲಿಂಕ್ ಇದೆ ಎಂದು ನಂಬಿದವರಿಗೆ ಅಲ್ಲಿ ಸಾವು ಬದುಕಾಗಿ ಕಾಣುತ್ತದೆ. ಬದುಕು ಸಾವಾಗಿ ಕಾಡುತ್ತದೆ.

ಎದೆಗಾರಿಕೆ ಎಂಬ ಪದವೇ ಹೇಳುವಂತೆ ಇದೊಂದು ಪುರುಷಪ್ರಧಾನ ಮಹಿಳಾ ನಿರ್ದೇಶನದ ಚಿತ್ರ.. ಹೀಗೆಂದರೆ ನಿಮಗೆ ಎಲ್ಲವೂ ಅರ್ಥವಾದೀತು. ದುಬೈ ಭಾಯ್ ಗಾಗಿ ಮುಂಬೈ ಭೂಗತ ಲೋಕದಲ್ಲಿ ತುಕಾರಾಂ ಶೆಟ್ಟಿ (ಅಚ್ಯುತ್ ಕುಮಾರ್) ಪರವಾಗಿ ಸೋನು ಕೆಲಸ ಮಾಡುತ್ತಿರುತ್ತಾನೆ.

ಮುಂಬೈ ಅಂಡರ್ ವರ್ಲ್ಡ್ ನಲ್ಲಿ ಬಹಳಷ್ಟು ಕ್ರೈಮ್ ಮಾಡಿದ ನಂತರ ದುಬೈ ಭಾಯ್ ಆತನನ್ನು ಬೆಂಗಳೂರಿಗೆ ಮುತ್ತಪ್ಪ ರೈ (ಧರ್ಮ) ಬಳಿ ಕಳುಹಿಸುತ್ತಾನೆ. ದುಬೈ ಭಾಯ್ ಮುತ್ತಪ್ಪ ರೈಗೆ ಸೋನಾನನ್ನು ಮುಗಿಸಬೇಕೆಂದು ಸುಪಾರಿ ನೀಡಿರುತ್ತಾನೆ.

ತನ್ನನ್ನು ಮುಗಿಸಲು ದುಬೈ ಭಾಯ್ ರೈಗೆ ಸುಪಾರಿ ನೀಡಿರುವ ವಿಚಾರ ಸೋನುಗೆ ತಿಳಿದಿರುತ್ತದೆ. ಮುಂದೆ ಸೋನು ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾನೆ ಎನ್ನುವುದನ್ನು ಚಿತ್ರಮಂದಿರದಲ್ಲೇ ನೋಡುವುದು ಉತ್ತಮ.

ಅಗ್ನಿ ಶ್ರೀಧರ್ ಕಥಾ ಸಿನಿಮಾಗಳೇ ಹಾಗೆ. ಹೆಚ್ಚು ವೈಭವೀಕರಣ ಇಲ್ಲದೆ, ವಾಸ್ತವದ ಜೊತೆ ವಸ್ತುನಿಷ್ಠವಾದ ನಿಷ್ಟುರವಾದ ಥಳುಕುಹಾಕುತ್ತದೆ. ಅದಕ್ಕೆ ಈ ಹಿಂದಿನ 'ಆ ದಿನಗಳು' ಎಂಬ ಸಿನಿಮಾ ಉದಾಹರಣೆ.

ಸಿನಿಮಾ ಮಾಧ್ಯಮ ಅತ್ಯಂತ ಪ್ರಭಲ ಮತ್ತು ಪರಿಣಾಮಕಾರಿ ಮಾಧ್ಯಮ ಎನ್ನುವುದನ್ನು ಅವರ ಒಂದಷ್ಟು ಚಿತ್ರಗಳು ಮತ್ತೆ ಮತ್ತೆ ನಿರೂಪಿಸಿದ್ದವು. ಅಂತೆಯೇ ಎದೆಗಾರಿಕೆ ಚಿತ್ರ ಇನ್ನೊಂದು ಉದಾಹರಣೆಯಾಗಿ ಉದ್ಭವಾಗಿದೆ.

ನಿರ್ದೇಶಕಿಯಾಗಿ ಅಷ್ಟೇ ಅಲ್ಲ, ಪಾತ್ರಧಾರಿಯಾಗಿ ನಿರ್ದೇಶಕಿ

ನಿರ್ದೇಶಕಿಯಾಗಿ ಅಷ್ಟೇ ಅಲ್ಲ, ಪಾತ್ರಧಾರಿಯಾಗಿ ನಿರ್ದೇಶಕಿ

ಇಲ್ಲಿ ಸುಮನಾ ಕಿತ್ತೂರು ನಿರ್ದೇಶಕಿಯಾಗಿ ಅಷ್ಟೇ ಅಲ್ಲ, ಒಂದು ಪಾತ್ರಧಾರಿಯಾಗಿ ಮರೆಯಲ್ಲಿ ನಿಲ್ಲುತ್ತಾರೆ. ಇದನ್ನು ಒಬ್ಬ ಹೆಣ್ಣುಮಗಳು ನಿರ್ದೇಶಿಸಿದ್ದಾ ಎನ್ನುವ ಮಟ್ಟಕ್ಕೆ ಸುಮನಾ ಸದ್ದುಮಾಡುತ್ತಾರೆ. ಅವರಿಗೆ ಈ ವೇದಿಕೆಯ ಮೂಲಕ ಹ್ಯಾಟ್ಸಾಫ್ ಹೇಳೋಣ

ಗಮಸೆಳೆಯುವ ಸಾಧು ಕೋಕಿಲಾ ರೀರೆಕಾರ್ಡಿಂಗ್

ಗಮಸೆಳೆಯುವ ಸಾಧು ಕೋಕಿಲಾ ರೀರೆಕಾರ್ಡಿಂಗ್

ಇಡೀ ಚಿತ್ರದಲ್ಲಿ ಹೆಚ್ಚು ಸ್ಕೋರ್ ಮಾಡುವುದು ಸಂಗೀತ ನಿರ್ದೇಶಕ ಸಾಧುಕೋಕಿಲಾ. ರೀರೆಕಾರ್ಡಿಂಗ್ ಇಲ್ಲದೇ ಇದ್ದರೆ ಸಿನಿಮಾವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಅದನ್ನು ಸಾಧು ಸಮರ್ಥವಾಗಿ ನಿಭಾಯಿಸಿದ್ದಾರೆ, ನಿಬ್ಬೆರಗಾಗುವಂತೆ ಮಾಡಿದ್ದಾರೆ. ಬಂದು ಹೋಗುವ ಒಂದೇ ಒಂದು ಹಾಡು ನೀನಾದೇ ಮರೆಯದ ಮೌನ ಹಾಡು ಆಗಾಗಾ ಗುನುಗುತ್ತಲೇ ಇರುತ್ತದೆ. ಅದು ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನೂ.. ಟ್ಯೂನಿಗೆ ಹತ್ತಿರವೆನಿಸಿದರೂ ಇಲ್ಲಿ ಸಾಧು ಅವರೇ ಹಾಡಿರುವುದರಿಂದ ಅದೊಂಥರಾ ವಿಚಿತ್ರ ಮತ್ತು ವಿಶೇಷವೆನಿಸುತ್ತದೆ.

ಆದಿತ್ಯ ಅಮೋಘ ನಟನೆ ಸಿನಿಮಾದ ಪ್ಲಸ್ ಪಾಯಿಂಟ್

ಆದಿತ್ಯ ಅಮೋಘ ನಟನೆ ಸಿನಿಮಾದ ಪ್ಲಸ್ ಪಾಯಿಂಟ್

ಇನ್ನು ಆದಿತ್ಯ. ಆತನಲ್ಲಿ ಹುದುಗಿರುವ ಹುಮ್ಮಸ್ಸು ಮತ್ತು ನಟನಾ ಸಾಮರ್ಥ್ಯವನ್ನು ಸುಮನಾ ಸಲೀಸಾಗಿ ಹೊರಹಾಕಿದ್ದಾರೆ. ಆದಿತ್ಯ ಅಪರೂಪದ ನಟನೆ ಸಿನಿಮಾಗೆ ಹೆಚ್ಚು ಘನತೆ ತಂದುಕೊಟ್ಟಿದೆ.

ನಾಯಕಿ ಆಕಾಂಕ್ಷಾ ಇಲ್ಲಿ ಪೋಷಕ ನಟಿ

ನಾಯಕಿ ಆಕಾಂಕ್ಷಾ ಇಲ್ಲಿ ಪೋಷಕ ನಟಿ

ನಾಯಕಿ ಆಕಾಂಕ್ಷಾ ಇಲ್ಲಿ ಪೋಷಕ ನಟಿ. ಅಲ್ಲಲ್ಲಿ ಬಂದುಹೋಗುತ್ತಾರೆ. ಬಂದು ಹೋದಾಗಲೆಲ್ಲಾ ಆಕೆಯ ನಟನೆಯ ವಿಚಾರದಲ್ಲಿ ಕೆಮ್ಮುಂಗಿಲ್ಲ.

ಇತರ ಕಲಾವಿದರ ನಟನೆ ಸಲೀಸು

ಇತರ ಕಲಾವಿದರ ನಟನೆ ಸಲೀಸು

ಇನ್ನುಳಿದಂತೇ ಧರ್ಮ, ಅತುಲ್ ಕುಲಕರ್ಣಿ, ಸೃಜನ್ ಅವರದ್ದು ಸೃಜನಶೀಲ ನಟನೆ. ಅದರಲ್ಲಿ ಹೆಚ್ಚು ಅಂಕಪಡೆಯುವುದು ಅತುಲ್ ಕುಲಕರ್ಣಿ. ಮರಾಠಿ ರಂಗಭೂಮಿಯ ಕಲಾವಿದರೆಂದರೆ ಹುಡುಗಾಟಿಕೆಯಾ? ಅಂತೆಯೇ ನೀನಾಸಂ ಅಚ್ಯುತ ಮೊದಲಾದ ಕಲಾವಿದರು ತಮ್ಮ ಪಾತ್ರವನ್ನು ಸರಾಗವಾಗಿ ಸಾಗಿಸಿಕೊಂಡು ಹೋಗುತ್ತಾರೆ.

ಸಹಜ ಸದೃಶ ಸಂದೇಶದ ’ಎದೆಗಾರಿಕೆ’

ಸಹಜ ಸದೃಶ ಸಂದೇಶದ ’ಎದೆಗಾರಿಕೆ’

ಒಟ್ಟಾರೆ ಎದೆಗಾರಿಕೆ ಒಂದು ಡಾಕ್ಯುಮೆಂಟರಿ ಎನಿಸದ ಡಾಕ್ಯುಮೆಂಟೆಡ್ ಡಿಫರೆಂಟ್ ಡೈಮೆನ್‍ಷನಲ್ ಡೈನಮೈಟ್.. ಈ ಮೇಲೆ ನಾವು ಹೇಳಿದ ಸಾಲಿನ ಅರ್ಥ ತಿಳಿಯಬೇಕೆಂದರೆ ನೀವು ಕೊಂಚ ತಾಳ್ಮೆ ವಹಿಸಿ ಎದೆಗಾರಿಕೆ ಚಿತ್ರವನ್ನು ನೋಡಬೇಕು. ಅಲ್ಲಿ ಒಂದು ಸಹಜ ಸದೃಶ ಸಂದೇಶದ ಜೊತೆಗೆ ಭೂಗತ ಜಗತ್ತಿನ ಬೀಭತ್ಸ ಲೋಕ ಬಿತ್ತರಗೊಳ್ಳುತ್ತದೆ.

English summary
Kannada movie review 'Edegarike'. Film directed by Sumana Kittoor based on Agni Sridhar book.
Please Wait while comments are loading...

Kannada Photos

Go to : More Photos