twitter
    For Quick Alerts
    ALLOW NOTIFICATIONS  
    For Daily Alerts

    ಗೂಗ್ಲಿ ಚಿತ್ರ ವಿಮರ್ಶೆ: ಯುವ ಪ್ರೇಮಿಗಳು ಆಲ್ ಔಟ್

    By Rajendra
    |

    ಚಿತ್ರದಲ್ಲಿ ಯುವ ಪ್ರೇಮಿಗಳ ಹೃದಯಕ್ಕೆ ನಾಟುವಂತಹ ಎಲ್ಲಾ ಅಂಶಗಳು ಇವೆ. ಒಂದು ಯೂತ್ ಫುಲ್, ರೊಮ್ಯಾಂಟಿಕ್ ಹಾಗೂ ಕಾಮಿಡಿ ಕಥೆಯ ಮೂಲಕ ಪವನ್ ಒಡೆಯರ್ 'ಗೂಗ್ಲಿ'ಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗುತ್ತಾರೆ.

    ಚಿತ್ರದ ನಾಯಕ ನಟ ಬ್ರಿಲಿಯಂಟ್ Rascal ಸ್ಟುಡೆಂಟ್. ಹಾಗಂತ ಅವರ ಪ್ರಾಂಶುಪಾಲರೇ ಹೇಳುತ್ತಾರೆ. ಇನ್ನು ಚಿತ್ರದ ನಾಯಕಿ ದಂತದಗೊಂಬೆ. ಇಲ್ಲಿ ಹುಡುಗಿ ಹಿಂದೆ ಹುಡುಗ ಬೀಳಲ್ಲ. ತುಂಬಾ ಇಂಟರೆಸ್ಟಿಂಗ್ ಕ್ಯಾರೆಕ್ಟರ್ ಆದ ಹುಡುಗನ ಹಿಂದೆ ಹುಡುಗಿ ಬೀಳುತ್ತಾಳೆ. ಕಥೆ ಸ್ಪಿನ್ ಆಗುತ್ತಾ ಆಗುತ್ತಾ ಪ್ರೇಕ್ಷಕರ ಜೊತೆ ಗೂಗ್ಲಿ ಆಟ ಆಡುತ್ತದೆ. [ಯಶ್ ಸಂದರ್ಶನ]

    ಎಲ್ಲೋ ಒಂದು ಕಡೆ ಲವ್ ಸ್ಪಿನ್ ಆಗುತ್ತದೆ. ಅವಳು ದೂರ ಸರಿಯುತ್ತಾಳೆ. ಇವನು ಹತ್ತಿರವಾಗಲು ಬರುತ್ತಾನೆ. ಇದೇ ರೀತಿ ಸ್ಪಿನ್ನಿಂಗ್ ಎಮೋಷನ್ ನಲ್ಲಿ ಸಾಗುವ ಕಥೆ ಕಡೆಗೆ ಒಂದು ಹಂತಕ್ಕೆ ಬಂದು ನಿಲ್ಲುತ್ತದೆ. ಇನ್ನೇನು ಸಿಕ್ಸರ್ ಹೊಡೆಯಬಹುದು ಎಂದುಕೊಳ್ಳುವ ಸಮಯದಲ್ಲಿ ಮತ್ತೆ ಕೈಗೆ ಸಿಗಂದಂತಾಗುತ್ತದೆ. ಕಡೆಯ ತನಕ ಇದೇ ರೀತಿ ಸಾಗಿ ಪ್ರೇಕ್ಷಕರನ್ನು ಕೆಣಕಿ, ಕಚಗುಳಿ ಇಡುತ್ತದೆ.

    ಚಿತ್ರ: ಗೂಗ್ಲಿ
    ನಿರ್ಮಾಪಕರು: ಜಯಣ್ಣ, ಭೋಗೇಂದ್ರ
    ಕಥೆ, ಚಿತ್ರಕಥೆ, ನಿರ್ದೇಶನ, ಸಂಭಾಷಣೆ: ಪವನ್ ಒಡೆಯರ್
    ಛಾಯಾಗ್ರಹಣ: ವೈದಿ
    ಸಂಕಲನ: ಸನತ್ ಸುರೇಶ್
    ಸಂಗೀತ: ಜೋಶ್ವಾ ಶ್ರೀಧರ್
    ಹಿನ್ನೆಲೆ ಸಂಗೀತ: ಅನೂಪ್ ಸೀಳಿನ್
    ಸಾಹಸ ನಿರ್ದೇಶನ: ಪಳನಿರಾಜ್, ರವಿವರ್ಮ
    ನೃತ್ಯ ನಿರ್ದೇಶನ: ಮುರಳಿ
    ಸಾಹಿತ್ಯ: ಯೋಗರಾರ್ ಭಟ್, ಜಯಂತ ಕಾಯ್ಕಿಣಿ, ಕವಿರಾಜ್
    ಪಾತ್ರವರ್ಗ: ಯಶ್, ಕೃತಿ ಖರಬಂದ, ಅನಂತನಾಗ್, ಸುಧಾಬೆಳವಾಡಿ, ಸಾಧುಕೋಕಿಲ, ನೀನಾಸಂ ಅಶ್ವತ್ ಮುಂತಾದವರು.

    ಡಾಕ್ಟರ್ ಮತ್ತು ಉದ್ಯಮಿ ಜೊತೆ ಲವ್ವುಡವ್ವು

    ಡಾಕ್ಟರ್ ಮತ್ತು ಉದ್ಯಮಿ ಜೊತೆ ಲವ್ವುಡವ್ವು

    ಚಿತ್ರದ ನಾಯಕ ಶರತ್ (ಯಶ್) ಚಿಕ್ಕ ವಯಸ್ಸಿನಲ್ಲೇ ತುಂಬ ದೊಡ್ಡ ಸಾಧನೆ ಮಾಡಿರುತ್ತಾನೆ. ಅವನೊಬ್ಬ ಪ್ರಭಾವಿ ಉದ್ಯಮಿ. ಇನ್ನು ಚಿತ್ರದ ನಾಯಕಿ ಸ್ವಾತಿ (ಕೃತಿ ಖರಬಂದ) ಡಾಕ್ಟರ್. ವಯಸ್ಸಿನಲ್ಲಿ ಇಬ್ಬರೂ ಚಿಕ್ಕವರಾದರೂ ಸಾಧನೆಯಲ್ಲಿ ಮಾತ್ರ ದೊಡ್ಡವರು. ಪ್ರೀತಿ ಪ್ರೇಮದ ವಿಚಾರಕ್ಕೆ ಬಂದರೆ ಇನ್ನೂ ಹದಿಹರೆಯದ ತುಡಿತ.

    ಸ್ಪಿನ್ನಿಂಗ್ ಕಥೆ ಹೆಣೆಯುವಲ್ಲಿ ಪವನ್ ಗೆದ್ದಿದ್ದಾರೆ

    ಸ್ಪಿನ್ನಿಂಗ್ ಕಥೆ ಹೆಣೆಯುವಲ್ಲಿ ಪವನ್ ಗೆದ್ದಿದ್ದಾರೆ

    ಈ ರೀತಿಯ ಸ್ಪಿನ್ನಿಂಗ್ ಕಥೆಯನ್ನು ಹೆಣೆಯುವಲ್ಲಿ ಪವನ್ ಒಡೆಯರ್ ಗೆದ್ದಿದ್ದಾರೆ. ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ಸಂಭಾಷಣೆ ಎಲ್ಲೂ ಅವರ ಕೈಮೀರಿಲ್ಲ. ಶೀರ್ಷಿಕೆಗೆ ತಕ್ಕಂತೆ ಕಥೆ ಸಾಗುತ್ತದೆ. ಇನ್ನೇನು ಹಿಡಿತಕ್ಕ ಸಿಗುತ್ತದೆ ಎಂದಾಗ ಆಫ್ ಸ್ಪಿನ್ ಆಗುತ್ತದೆ.

    ಕೃತಿ ಖರಬಂದ ತಾರುಣ್ಯದ ಅಭಿನಯ

    ಕೃತಿ ಖರಬಂದ ತಾರುಣ್ಯದ ಅಭಿನಯ

    ಶರತ್ ಪಾತ್ರದಲ್ಲಿ ಯಶ್ ಹುರುಪಿನ ಅಭಿನಯ ನೀಡಿದ್ದಾರೆ. ಬುದ್ಧಿವಂತ, ತರಲೆ, ಪ್ರೇಮಿ, ಉತ್ಸಾಹಿ, ಉದ್ಯಮಿಯಾಗಿ ಅವರು ಭಿನ್ನ ಅಭಿನಯ ನೀಡಿದ್ದಾರೆ. ಇನ್ನು ಆಗಷ್ಟೇ ವೈದ್ಯಪದವಿ ಪಡೆದುಬಂದ ಸ್ವಾತಿಯಾಗಿ ಕೃತಿ ಖರಬಂದ ಅವರದು ಅಷ್ಟೇ ತಾರುಣ್ಯದ ಅಭಿನಯ. ಮುಗ್ಧ ಹುಡುಗಿಯಾಗಿ ಗಮನಸೆಳೆಯುತ್ತಾರೆ.

    ಚಿತ್ರದಲ್ಲಿ ಯಾರ ಪಾತ್ರ ಹೇಗಿದೆ?

    ಚಿತ್ರದಲ್ಲಿ ಯಾರ ಪಾತ್ರ ಹೇಗಿದೆ?

    ಅನಂತ್ ನಾಗ್ ಹಾಗೂ ಸುಧಾ ಬೆಳವಾಡಿ ಅವರು ಪೋಷಕರ ಪಾತ್ರಗಳಲ್ಲಿ ಮನೋಜ್ಞ ಅಭಿನಯ. ಪುತ್ರನ ಎಲ್ಲಾ ಸುಗುಣಗಳನ್ನು ಬೆಂಬಲಿಸುವ ಜನಕನಾಗಿ ಅನಂತ್ ನಾಗ್ ಅವರದು ಒಂಚೂರು ಗಂಭೀರ ಮಿಶ್ರಿತ ಹಾಸ್ಯ ಪಾತ್ರ. ಇನ್ನು ಪತ್ರಕರ್ತನಾಗಿ ನೀನಾಸಂ ಅಶ್ವತ್ ಹಾಗೂ ಫೋಟೋಗ್ರಾಫರ್ ಆಗಿ ಸಾಧುಕೋಕಿಲ ಅವರ ಪಾತ್ರಗಳು ಮದುವೆ ಊಟದ ಜೊತೆಗೆ ಉಪ್ಪಿನಕಾಯಿ ತರಹ ಇವೆ.

    ಹಾಡುಗಳ ಮೇಕಿಂಗ್ ಕಲರ್ ಫುಲ್

    ಹಾಡುಗಳ ಮೇಕಿಂಗ್ ಕಲರ್ ಫುಲ್

    ಇನ್ನು ಹಾಡುಗಳ ಮೇಕಿಂಗ್ ಕಲರ್ ಫುಲ್ ಆಗಿದ್ದು ಕಣ್ಣುಗಳಿಗೆ ಹಿತವಾಗಿದೆ. ಬಣ್ಣಗಳ ಬಳಕೆ, ಸಾಹಿತ್ಯ ಹಾಗೂ ಮುರಳಿ ಅವರ ಕೊರಿಯೋಗ್ರಫಿಯಲ್ಲಿ ಲಯಬದ್ಧತೆ ಎದ್ದುಕಾಣುತ್ತದೆ. ಬಿಸಿಲು ಕುದುರೆ, ಗಂಡು ಜನ್ಮ ನೀರು ಇದ್ದಂಗೆ, ಗೂಗ್ಲಿ ಗಂಡಸರೆ ಎಂಬ ಹಾಡುಗಳು ಚೆನ್ನಾಗಿ ಮೂಡಿಬಂದಿವೆ.

    ಫೈಟ್ಸ್ ನಲ್ಲಿ ನೈಜ ಅನುಭವ

    ಫೈಟ್ಸ್ ನಲ್ಲಿ ನೈಜ ಅನುಭವ

    ಸುಂದರ ದೃಶ್ಯಗಳನ್ನು ಸೆರೆಹಿಡಿಯಲ್ಲಿ ವೈದಿ ಅವರ ಛಾಯಾಗ್ರಹಣ ಸೊಗಸಾಗಿದೆ. ಹಲವಾರು ತಿರುವು ಮರುವುಗಳಲ್ಲಿ ಸಾಗುವ ಕಥೆಯನ್ನು ಹಿಡಿದು ಹೂವಿನ ಮಾಲೆಯಂತೆ ಅಚ್ಚುಕಟ್ಟಾಗಿ ಪೋಣಿಸಿದೆ ಸನತ್ ಅವರ ಸಂಕಲನ. ಪಳನಿರಾಜ್, ರವಿವರ್ಮ ಅವರ ಫೈಟ್ಸ್ ನೈಜ ಅನುಭವ ನೀಡುತ್ತವೆ.

    ಎಲ್ಲರೂ ನೋಡಬಹುದಾದ ಚಿತ್ರ

    ಎಲ್ಲರೂ ನೋಡಬಹುದಾದ ಚಿತ್ರ

    ಇನ್ನು ಜೋಶ್ವಾ ಶ್ರೀಧರ್ ಅವರ ಸಂಗೀತ ಹಾಗೂ ಅನೂಪ್ ಸೀಳಿನ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ತನ್ನದೇ ಆದಂತಹ ಒಂದು ವಿಶಿಷ್ಟ ಮೆರುಗು ನೀಡಿದೆ. ಒಟ್ಟಾರೆಯಾಗಿ ಯುವಕರು ಯುವತಿಯರು, ದೊಡ್ಡವರು ಚಿಕ್ಕವರು, ಹೆಂಗಸರು ಗಂಡಸರು ಎಲ್ಲರೂ ನೋಡಬಹುದಾದ ಚಿತ್ರ!

    English summary
    Kannada film Googly review. Its good romantic comedy film. Googly is for those who are young at heart and who love this genre movies. The action-romance film directed by Pawan Wadeyar and produced by Jayanna combines. Yash and Kriti Kharbanda are the lead actors while Ananth Nag, Sadhu Kokila,among others play the supporting roles.
    Saturday, July 20, 2013, 11:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X