twitter
    For Quick Alerts
    ALLOW NOTIFICATIONS  
    For Daily Alerts

    ಜಟ್ಟ ನೋಡಿ ಥ್ರಿಲ್ ಆದವರ ವಿಮರ್ಶೆಗಳು

    By ಮಲೆನಾಡಿಗ
    |

    ಬೆಂಗಳೂರು, ಭೂಗತ ಜಗತ್ತು, ಪ್ರೀತಿ ಪ್ರೇಮ ಪ್ರಣಯ ಸುತ್ತ ಗಿರಿಕಿ ಹೊಡೆಯುತ್ತಿದ್ದ ಗಾಂಧಿನಗರವನ್ನು ಬೇರೆ ಒಂದು ಪ್ರದೇಶಕ್ಕೆ 'ಜಟ್ಟ' ಚಿತ್ರ ಕರೆದೊಯ್ಯುತ್ತದೆ. ನಿರ್ದೇಶಕ ಗಿರಿರಾಜ್ ಅವರ ಪ್ರಯತ್ನಕ್ಕೆ ಕನ್ನಡ ನೆಲದ ಕಥೆಗೆ ಕಿಶೋರ್, ಸುಕೃತಾ, ಪಾವನ, ಬಿ ಸುರೇಶ, ಪ್ರೇಮ್ ಕುಮಾರ್ ಅಭಿನಯಕ್ಕೆ, ಆಶ್ಲೆ ಅಭಿಲಾಶ್ ಸಂಗೀತ ಮೋಡಿಗೆ ಸಹೃದಯ ಕನ್ನಡ ಪ್ರೇಕ್ಷಕರು ಮಾರು ಹೋಗಿದ್ದಾರೆ.

    ಜಟ್ಟ' ಎಂಬ ಶೀರ್ಷಿಕೆಯೇ ಒಂಥರಾ ಆಕರ್ಷಕ ಹಾಗೂ ವಿಚಿತ್ರವಾಗಿದೆ. ಕೆಲವರು ಇದೇನು ಶೀರ್ಷಿಕೆ ಎಂದುಕೊಂಡರೆ ಇನ್ನೂ ಕೆಲವರಿಗೆ ಏನಿರಬಹುದು? ಎಂಬ ಕುತೂಹಲ ಹುಟ್ಟಿಸಿತ್ತು. ಈ ಬಗ್ಗೆ ಗಿರಿರಾಜ್ ತಮ್ಮ ಫೇಸ್ ಬುಕ್ ನಲ್ಲಿ, 'ಜಟ್ಟ' ಗೇರುಸೊಪ್ಪ ಕಾಡಿನ, ಬುಡಕಟ್ಟು ಜನಾಂಗದಲ್ಲಿ ಜನಿಸಿರುವ, ಇವತ್ತಿನ ಕಾಲಘಟ್ಟದಲ್ಲಿ ಇರುವ ಒಬ್ಬ ವ್ಯಕ್ತಿಯ ಹೆಸರು ಎಂದು ಸ್ಪಷ್ಟಪಡಿಸಿದ್ದರು. ಜಟ್ಟ ಶೀರ್ಷಿಕೆ ಬಗ್ಗೆ ಇಲ್ಲಿ ಓದಿ

    ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ 'ಜಟ್ಟ' ಚಿತ್ರ ನೋಡುವಂತಹ ಚಿತ್ರವಲ್ಲ, ಇದು ಕಾಡುವಂತಹ ಚಿತ್ರ ಮತ್ತೆ ಮತ್ತೆ ಕನವರಿಸುವಂತಹ ಚಿತ್ರ! ಇಲ್ಲಿ ಭಾವನೆಗಳ ಸಂಘರ್ಷವಿದೆ. ಕಾಡಿನ ಸೌಂದರ್ಯವಿದೆ. ಹೆಣ್ಣಿನ ಕೂಗಿದೆ. ಗಂಡಿನ ಮೌನವಿದೆ. ಹೆಣ್ಣು ಗಂಡಿನ ಬದುಕಿನ ವೈರುಧ್ಯಗಳ ಜಟಾಪಟಿ ಇದೆ ಎಂದು ಒನ್ ಇಂಡಿಯಾ ಕನ್ನಡದಲ್ಲಿ ಬಂದ ವಿಮರ್ಶೆಯನ್ನು ಓದಿರುತ್ತೀರಿ.

    ಈಗ ವಿವಿಧ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಪತ್ರಕರ್ತರು, ಅಭಿಮಾನಿಗಳು, ಸಿನಿರಸಿಕರು ತಿಳಿಸಿರುವ ಅಭಿಪ್ರಾಯದ ಸಾರ ಸಂಗ್ರಹ ಇಲ್ಲಿದೆ ತಪ್ಪದೇ ಓದಿ.. ನಿಮ್ಮ ಅಭಿಪ್ರಾಯವನ್ನು ತಪ್ಪದೇ ನಮಗೆ ಮೇಲ್ ಮಾಡಿ

    ಪ್ರಜ್ಞೆ vs ಪರಿಸರ : ವಿಜಯವಾಣಿ

    ಪ್ರಜ್ಞೆ vs ಪರಿಸರ : ವಿಜಯವಾಣಿ

    ಕಾಡಿನ ಬುಡಕಟ್ಟು ಸಮುದಾಯ ಪ್ರತಿನಿಧಿಸಿರುವ 'ಜಟ್ಟ' ಪಾತ್ರವನ್ನು ಕಿಶೋರ್ ಆವಾಹಿಸಿಕೊಂಡಿದ್ದಾರೆ. 'ಭಾರತ ದೇಶ ಹೆಣ್ಣಿಗೆ ಶಾಪ' ಎಂಬ ವಸ್ತುವಿನ ಮೇಲೆ ರಿಸರ್ಚ್ ಮಾಡುವ 'ಕಂಬಳಿ ಹುಳು' ಸುಕೃತಾಅ ಸವಾಲಿನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

    ಬಿ ಸುರೇಶ್ ಅಭಿನಯಕ್ಕೆ ಅವಕಾಶ ಸಿಕ್ಕಿಲ್ಲ.ಕ್ಲೈಮ್ಯಾಕ್ಸ್ ಮುಂಚಿನ ಡಿಫರೆಂಟ್ ಡ್ಯಾನಿ ಸಾಹಸ ತೀರಾ ವೈಲಂಟ್. ಒಟ್ಟಾರೆ ಈ ಚಿತ್ರ ವ್ಯಕ್ತಿ ವ್ಯಕಿತ್ವ ವೈರುಧ್ಯ ದ ಬೀಜ ಉದುರಿಸುವಲ್ಲಿ ಸಕ್ಸಸ್ -ಕ. ವೀರೇಶ್

    ಇದೊಂದು ಬೇರೆಯೇ ಸ್ತರದ ಸಿನಿಮಾ

    ಇದೊಂದು ಬೇರೆಯೇ ಸ್ತರದ ಸಿನಿಮಾ

    ಈಗಾಗಲೇ ನವಿಲಾದವರು ಮೂಲಕ ಕಲಾತ್ಮಕ ಚಿತ್ರಪ್ರೇಮಿಗಳಿಗೆ ಗೊತ್ತಾಗಿರುವ ನಿರ್ದೇಶಕ ಗಿರಿರಾಜ್, ಹೊಸ ಕತೆಯನ್ನು ಒಂದೇ ಗುಕ್ಕಿಗೆ ಹಲವನ್ನು ಹೇಳಿಬಿಡುವ ಹಿತವಾದ ಆತುರ ತೋರಿದ್ದಾರೆ. ಎಷ್ಟೋ ಸಲ ಅವರ ಮಾತುಗಳು ಅಲ್ಲಲ್ಲಿ ಅಹಿತಕರವಾಗಿ ಕೇಳಿಸಿರಬಹುದು.

    ಆದರೆ, ಸಂಕೀರ್ಣ ಸಂಬಂಧಗಳ ಸಂಘರ್ಷಮಯ ಯಾತ್ರೆ, ಯಾತನೆಯನ್ನು ಅನುಭವಿಸುವುದಕ್ಕೆ ನಿಮ್ಮನ್ನು ಬಿಡುತ್ತಾರೆ. ಈ ಕತೆಯನ್ನು ಪ್ರೇಕ್ಷಕ ಸ್ವಂತ ಮಾಡಿಕೊಳ್ಳುವಂತೆ ಕಲಾವಿದರು ದುಡಿದಿದ್ದಾರೆ- ವಿಕಾಸ್ ನೇಗಿಲೋಣಿ, ಉದಯವಾಣಿ

    ನಟಿ ಶ್ವೇತ ಪಂಡಿತ್

    ಬಿಗ್ ಬಾಸ್ ಖ್ಯಾತಿಯ ಶ್ವೇತ ಪಂಡಿತ್ ಜಟ್ಟ ಸಿನಿಮಾ ನೋಡಿ ಥ್ರಿಲ್ ಆಗಿ ಟ್ವೀಟ್ ಮಾಡಿದ್ದು ಹೀಗೆ

    ಶ್ಯಾಮ್ ಪ್ರಸಾದ್ ರೇಟಿಂಗ್

    ಬಹು ದಿನಗಳ ನಂತರ ಬೆಂಗಳೂರು ಮಿರರ್ ಪತ್ರಕರ್ತ ಎಸ್ ಶ್ಯಾಮಸುಂದರ್ ಅವರು ಚಿತ್ರವೊಂದಕ್ಕೆ 4.5/5 ನೀಡಿದ್ದಾರೆ. ಕಿಶೋರ್ ಅವರ ವೃತ್ತಿ ಜೀವನದ ಅದ್ಭುತ ಚಿತ್ರ ಎಂದು ಟ್ವೀಟ್ ಮಾಡಿದ್ದಾರೆ.

    ಶಿವು ಅಡ್ಡ ವಿಮರ್ಶೆ

    ಶಿವು ಅಡ್ಡ ವಿಮರ್ಶೆ

    ಜಟ್ಟ "ಸೇಡೊಂದೆ ಪರಮಸುಖ" ಎಂಬ taglineನ ಮನ್ಸಲ್ಲಿ ಇಟ್ಕೊಂಡು ಚಿತ್ರಕ್ಕೆ ಹೋದರೆ "ultimate" ಸೇಡಲ್ಲ ಬೇರೇನೋ ಬಾಳಿನ ಸುಖಕ್ಕೆ ಕಾರಣ ಎಂಬ ವಿಷಯ ತಿಳಿಯತ್ತೆ...ಚಿತ್ರದ ಒಂದೊಂದು ಫ್ರೇಮ್ ಅಲ್ಲೂ ಲಿಂಗ ಬೇಧ, ಜಾತೀಯತೆ, ಧರ್ಮತೆ, ಕ್ರೌರ್ಯ, ಕ್ರಾಂತಿ ಕಿಚ್ಚು ಎಲ್ಲವೂ ಕಾಣತ್ತೆ ಆದರೆ ಒಂದು 'ನಂಬಿಕೆ' ಯೊಂದಿಗೆ...ಆ ನಂಬಿಕಯೇ " ಜಟ್ಟ"... ಚಿತ್ರದ ಒಂದೊಂದು scene ವರ್ಣಿಸುವಾಸೆ ಆದರೆ ಎಲ್ಲಿ ಚಿತ್ರದ ಬಗ್ಗೆ ಸುಳಿವು ಬಿಟ್ಟು ಕೊಟ್ಟ್ಬಿಡ್ತೀನೋ ಎಂಬ ಭಯ!!! ಗಿರಿರಾಜ್ ರವರು ಒಂದು Phd ಪದವಿಗೆ ಶ್ರಮಿಸಬೇಕಾಗೋ ರೀತಿಯಲ್ಲಿ ಚಿತ್ರಕ್ಕೆ,ಚಿತ್ರದ ಕಥೆ,ನಿರೂಪಣೆಗೆ ವಿಷಯ ಸಂಪಾದಿಸಿದ್ದಾರೆ. ವಿಮರ್ಶೆ ಪೂರ್ತಿ ಪಾಠ ಇಲ್ಲಿ ಓದಿ

    ಒನ್ ಇಂಡಿಯಾ ಇಂಗ್ಲೀಷ್ ವರದಿ

    As a whole Jatta is a different movie. It is a must watch for the people, who crib that there is no good movies in Kannada. Read more

    ವಿಜಯ ಕರ್ನಾಟಕರ 3.5/5

    ವಿಜಯ ಕರ್ನಾಟಕರ 3.5/5

    ಇಲ್ಲಿ ಬರುವ ಒಂದೊಂದು ಪಾತ್ರಗಳೂ ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳ ಪ್ರತಿಬಿಂಬವೆ. ಅವೆಲ್ಲವನ್ನೂ ಒಂದೇ ಚಿತ್ರದಲ್ಲಿ ಹದವಾಗಿ ಸಮೀಕರಿಸಿ ಕೊಟ್ಟಿದ್ದು ನಿರ್ದೇಶಕರ ಹೆಚ್ಚುಗಾರಿಕೆ.

    ಜಟ್ಟನ ಪಾತ್ರಕ್ಕೆ ಕಿಶೋರ್ ಬಿಟ್ಟು ಬೇರೆಯವರನ್ನು ಊಹಿಸಿಕೊಳ್ಳುವುದು ಕಷ್ಟ. ಸುಕೃತಾ ವಾಗ್ಲೆ ಪ್ರೇಕ್ಷಕರ ಎದುರು ಪ್ರತ್ಯಕ್ಷವಾಗುವ ಮತ್ತೊಂದು ಅಚ್ಚರಿ -ಮಹಾಂತೇಶ್ ಬಹಾದುಲೆ

    ಲೋಹಿತ್ ರಾಜ್

    ಲೋಹಿತ್ ರಾಜ್

    HATS OFF to Giriraj Bm Sir Really loved ur work .. i loved jatta's concept and the fresh subject .. You earlier said tht jatta is nt an seat edge entertainer But jatta made us to sit quietly and observe what happens till the end the narration is awesome gripping sequences makes u entertain till the end.hope ur efforts will be paid off Sir ಲೋಹಿತ್ ರಾಜ್ ಪೂರ್ತಿ ವಿಮರ್ಶೆ ಇಲ್ಲಿ ಓದಿ

    ಅನಂತ್ ಜೋಯಿಸ್

    ಅನಂತ್ ಜೋಯಿಸ್

    ಪ್ರಾಮಾಣಿಕವಾಗಿ ಹೇಳಬೇಕೆ೦ದರೆ ಚಿತ್ರದ ಟ್ರೈಲರ್ ನೋಡಿದಾಗ ಸ್ವಲ್ಪ ಬೇಸರವಾಗಿತ್ತು. ಏನೋ ಹೇಳಲು ಹೋಗಿ ಎಡವಿದ್ದಾರೇನೋ ಎನಿಸಿತ್ತು...ನೋಡಲೋ ಬೇಡವೋ ಎ೦ಬ ದ್ವ೦ದ್ವದಲ್ಲೆ ಇದ್ದೆ. ಆದರು ನಿರ್ದೇಶಕರು ಲೂಸಿಯ ಚಿತ್ರದ ಸ೦ವಾದದ ಸಮಯದಲ್ಲಿ ಮಾತನಾಡುವಾಗ ಅವರಲ್ಲಿದ್ದ ಆತ್ಮವಿಶ್ವಾಸದ ಮೇಲೆ ನ೦ಬಿಕೆ ಇಟ್ಟು ಚಿತ್ರ ನೋಡಿದೆ.

    ನೆಮಾದ ಮೂಲಕ ಸಮಾಜಕ್ಕೆ ಒ೦ದು ಸ೦ದೇಶ ಕೊಡಬೇಕು ಅನ್ನೋ ನಿರ್ದೇಶಕರ ಆಶಯವನ್ನ ಮೆಚ್ಚಬೇಕು. ಒಟ್ಟಾರೆ ಒ೦ದು ಹೊಸ ಪ್ರಯತ್ನ, ವಿಭಿನ್ನವಾದ ಪ್ರಯತ್ನ.

    ಸಿದ್ದು ಕೌಜಲಗಿ ಅಭಿಪ್ರಾಯ

    ಸಿದ್ದು ಕೌಜಲಗಿ ಅಭಿಪ್ರಾಯ

    Revenge is ultimate??? Or Mercy is ultimate??? Jatta is the answer. Its high time we all start watching such good films with good content; rather than shitty, commercial, crappy, routine, boring films. My rating : 4/5. Definitely worth watching once, for a different experience.-

    ಚಿತ್ರದ ಪ್ರತಿಯೊಂದು ಅಂಶವನ್ನು ಬಿಡಿಸಿ ವಿಶ್ಲೇಷಿಸಿದ್ದಾರೆ ಸಿದ್ದು ಕೌಜಲಗಿ ಅವರ ವಿಮರ್ಶೆ ಪೂರ್ತಿ ಓದಿ

    ಹರೀಶ್ ಮಲ್ಯ ಪ್ರತಿಕ್ರಿಯೆ

    ಹರೀಶ್ ಮಲ್ಯ ಪ್ರತಿಕ್ರಿಯೆ

    Giriraj Bm has claimed that he has not made edge of seat thriller. But he has succeeded in getting the audience involved till the climax. The film has several layers with each of the characters sharing more than one traits with other characters. ಹರೀಶ್ ಮಲ್ಯ ಅಭಿಪ್ರಾಯ ಪೂರ್ತಿ ಸಂಗ್ರಹ ಇಲ್ಲಿ ಓದಿ

    ಸ್ಯಾಂಡಲ್ ವುಡ್ ಸುದ್ದಿ ವಿಮರ್ಶೆ

    ಸ್ಯಾಂಡಲ್ ವುಡ್ ಸುದ್ದಿ ವಿಮರ್ಶೆ

    Jatta's(Kishore) character is influenced by other characters in the movie.. Kishore Is Marvellous in his Character and opts a new body language which he has carried really well. Sukrutha Wagle the lady has a long way to go in Sandalwood,she is awesome in some lovely sequences and her dialogues are the plus point in the movie. ಸ್ಯಾಂಡಲ್ ವುಡ್ ಸುದ್ದಿ ವಿಮರ್ಶೆ ಪೂರ್ತಿ ಓದಿ

    English summary
    Here are the Kannada film Jatta critics and readers review collection. The movie has Kishore, Sukrutha Wagale and Pavana in the lead roles. The movie directed by Giriraj. Kishore is essaying the role of a forest guard
    Saturday, October 12, 2013, 14:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X