twitter
    For Quick Alerts
    ALLOW NOTIFICATIONS  
    For Daily Alerts

    ಲೂಸಿಯಾ: ಓದುಗರು, ವಿಮರ್ಶಕರ ವಿಮರ್ಶೆ ಸಂಗ್ರಹ

    By Mahesh
    |

    ಮೊದಲಿನಿಂದ ನಂಗೊಂದು ಕುತೂಹಲ ಇತ್ತು , ಯಾಕೆ ಪವನ್ ಈ ಚಿತ್ರಕ್ಕೆ ಲೂಸಿಯಾ ಎಂದು ಹೆಸರಿಟ್ಟರು ಎಂದು. ಬಹಳ ಮಂದಿ ನನ್ನ ಗೆಳೆಯರು ನನ್ನನ್ನು ಕೇಳಿದ್ದರು ಕೂಡ . ಆದ್ರೆ ಚಿತ್ರ ನೋಡಿದ ಮೇಲೆ ಈ ಚಿತ್ರಕ್ಕೆ ಈ ಹೆಸರೇ ಸೂಕ್ತವಾಗಿದೆ ಎನಿಸುತ್ತದೆ.

    ತತ್ವಜ್ಞಾನಿ Aristotle ಹೇಳಿದ್ದು - "often when one is asleep, there is something in consciousness which declares that what then presents itself is but a dream" .

    ಮೇಲಿನ ಪದಗಳು ಲೂಸಿಯಾ ಗೆ ಬಹಳ ಹತ್ತಿರವೆನಿಸುತ್ತವೆ. ನಿಮ್ಮ ಸಣ್ಣ ಬದುಕು ಇನ್ನೊಬ್ಬರ ದೊಡ್ಡ ಕನಸು . ಹಾಗೆಯೇ ಇನ್ನೊಬ್ಬರ ದೊಡ್ಡ ಬದುಕು ನಿಮ್ಮ ಸಣ್ಣ ಕನಸು ಆಗಿರಬಹದು. ಚಿತ್ರ ಮುಗಿಯುವುದರೊಳಗೆ ನೀ ಮಾಯೆಯೊಳಗೊ ಮಾಯೆ ನಿನ್ನೊಳಗೊ ಎಂಬ ಗೊಂದಲಕ್ಕೆ ಬೀಳುತ್ತೀರಿ. ಅಷ್ಟರ ಮಟ್ಟಿಗೆ ಪವನ್ ನಿಮ್ಮನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

    ಲೂಸಿಯಾತೀರಾ ಅಪರೂಪದ ನಿರೂಪಣೆಯಿದೆ . ಚಿತ್ರದ ಸಂಕಲನ ಅದ್ಬುತ. ಹಾಗಂತ ಈ ತರಹದ ನಿರೂಪಣೆ ಈ ಮೊದಲು ಕನ್ನಡಲ್ಲಿ ಬಂದಿಲ್ಲ ಅಂತಲ್ಲ . ಉಪೇಂದ್ರ 'A' ನಲ್ಲಿ ಇಂತ ಪ್ರಯತ್ನ ಮಾಡಿದ್ದಾರೆ. ನೀವು ರೋಮಾಂಚಕ ಅನುಭವ ನೀಡುವ ಕಥೆ ಇಸ್ಟಪಡುವವರಾದರೆ , ಆಂಗ್ಲ ಬಾಷಾ ಚಿತ inception, Fight Club ತರಹದ ಚಿತ್ರ ವೀಕ್ಷಕರಾದರೆ ಲೂಸಿಯಾ ಖಂಡಿತವಾಗಿಯೂ ನಿಮಗೆ ಇಷ್ಟವಾಗುತ್ತದೆ.

    ಹಾಗೆಂದು ಚಿತ್ರದಲ್ಲಿ ನ್ಯೂನ್ಯತೆಗಳಿಲ್ಲವೆಂದಲ್ಲ. ಪೊಲೀಸರ ತನಿಖೆಯ ಪಥವನ್ನು ಸರಿಯಾಗಿ ತೋರಿಸದೆ ತನಿಖೆಯನ್ನು ಕೊನೆಗೊಳಿಸುವುದು ಬಾಲಿಶ ಎನಿಸುತ್ತದೆ. ಸಣ್ಣ ಪುಟ್ಟ ತಾಂತ್ರಿಕ ತಪ್ಪುಗಳಿದ್ದರೂ ಚಿತ್ರದ badget ತೀರಾ ಕಡಿಮೆಯಾದ್ದರಿಂದ ಅದೆಲ್ಲವನ್ನೂ ಮರೆತು ಬಿಡೋಣ...-ಕೆ.ನಿತೇಶ್

    ಹೊಸ ಬದಲಾವಣೆಗೆ ಮುನ್ನುಡಿಯಾಗಿರುವ ಲೂಸಿಯಾ ಚಿತ್ರದ ಬಗ್ಗೆ ಇನ್ನಷ್ಟು ಓದುಗರ, ಇತರೆ ದೇಶಿ, ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳ ಅಸಮಗ್ರ ಸಂಗ್ರಹ ಇಲ್ಲಿದೆ. ನಿಮ್ಮ ಅಭಿಪ್ರಾಯವನ್ನು ಕಳಿಸಿ ಸೂಕ್ತವಿದ್ದರೆ ಪ್ರಕಟಿಸುತ್ತೇವೆ..

    ಕನಸಿನ ಹೊಸ ಲೋಕ: ಶ್ರೀನಿಧಿ ಡಿಎಸ್

    ಕನಸಿನ ಹೊಸ ಲೋಕ: ಶ್ರೀನಿಧಿ ಡಿಎಸ್

    ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರ, ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಪ್ರಯತ್ನ. ವಾಸ್ತವ ಮತ್ತು ಕನಸುಗಳ ನಡುವಿನ ಎರಡು ಕಥೆಗಳನ್ನ ಹೆಣೆದಿರುವ ರೀತಿಯೇ ಅದ್ಭುತ.

    ವೀಕ್ಷಕರಲ್ಲಿ ಸಿನಿಮಾ ಮಂದಿರದಿಂದ ಹೊರ ಹೋದ ಮೇಲೆ ಅವರಲ್ಲಿ ಯಾವುದೇ ಅನುಮಾನಗಳು ಉಳಿಯಬಾರದು ಎಂಬ ಕಾರಣಕ್ಕೆ, ಎಚ್ಚರಿಕೆಯಿಂದ ಎಲ್ಲ ಸಿಕ್ಕುಗಳನ್ನ ಬಿಡಿಸಲು, ಪವನ್ ಬೇಕೆಂದೇ ಸಮಯ ತೆಗೆದುಕೊಂಡಿದ್ದಾರೆ ಅನ್ನಿಸಿತು. ಕನ್ನಡದ ಮಟ್ಟಿಗೆ ಈ ರೀತಿಯ ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಹೊಚ್ಚ ಹೊಸದು. ಹೀಗಾಗಿ ಇಂಟರವಲ್ ನಂತರ ಕೊಂಚ ನಿಧಾನಗತಿಯ ಪಯಣ.

    ಮೆದುಳನ್ನ ಮನೇಲಿಟ್ಟು ಬಂದು ಸಿನಿಮಾ ನೋಡಿ ಎಂದು ಘಂಟಾಘೋಷವಾಗಿ ಹೇಳೋರು ಹುಟ್ಟಿಕೊಂಡಿರೋ ಈ ಕಾಲದಲ್ಲಿ ಮೆದುಳಿಗೆ ಕೆಲಸ ಕೊಡೋ ಸಿನಿಮಾ ಮಾಡಿದ್ದಾರೆ ಪವನ್. ಹೋಗಿ ನೋಡ್ಕೊಂಡು ಬನ್ನಿ. ನಿರಾಸೆ ಆಗಲ್ಲ. ಇನ್ನಷ್ಟು ಇಲ್ಲಿ ಓದಿ

    ಹಾಲಿವುಡ್ ರೇಂಜ್ ಚಿತ್ರ: ರೂಪಲಕ್ಷ್ಮಿ

    ಹಾಲಿವುಡ್ ರೇಂಜ್ ಚಿತ್ರ: ರೂಪಲಕ್ಷ್ಮಿ

    ಲೂಸಿಯಾ ಅಂದರೆ ಬೆಳಕು! ಕತ್ತಲೆಯಲ್ಲಿ ಕಪ್ಪು / ಬಿಳುಪು ಮಾತ್ರ ಕಾಣುವ ಬಣ್ಣಗಳು ಬೆಳಕಿನಲ್ಲಿ ಬಂದಾಗ ಅದರ ನಿಜ ಬಣ್ಣಗಳು ಬಯಲಾಗುವಂತೆಯೇ, ಬಣ್ಣ ಬಣ್ಣದ ಕನಸು ಹಾಗೂ ಕಪ್ಪು ಬಿಳುಪಿನ ವಾಸ್ತವಗಳ ನಡುವೆ ಚಿತ್ರ ಓಡಾಡುತ್ತದೆ.

    ‘ಲೂಸಿಯಾ' ಚಿತ್ರದ ಅತ್ಯುತ್ತಮ ಭಾಗ ಸ್ಕ್ರಿಪ್ಟ್ ಹಾಗೂ ಸಂಕಲನ. ಎರಡೆರಡು ಶೇಡ್ ಗಳಿರುವಂತಹ ಸ್ಕ್ರಿಪ್ಟ್ ಬರೆಯಲು ಹಾಗೂ ಚಿತ್ರೀಕರಣದ ನಂತರ ಅದನ್ನು ಒಂದಾದ ನಂತರ ಸರಿಯಾಗಿ ಜೋಡಿಸುವುದು ಕೂಡ ಬಹಳ ಕಷ್ಟ ಜೊತೆಗೆ ತುಂಬಾ ತಾಳ್ಮೆ ಬೇಕು.

    ಎರಡೂ ಶೇಡ್ ಗಳಿಗೂ ಹೊಂದುವಂತೆ ಹಾಡುಗಳನ್ನು ಬರೆದ ತೇಜಸ್ವಿ, ಭಟ್ಟರನ್ನು ಮೆಚ್ಚಲೇ ಬೇಕು. ಕ್ಷಣ ಮಾತ್ರದಲ್ಲಿ ನಾಲ್ಕೈದು ಗೂಂಡಾಗಳನ್ನು ಸದೆಬಡಿಯುವುದು ಕಂಡು ಬೇಸತ್ತ ಮಂದಿಗೆ ಹಾಲಿವುಡ್ ಮಟ್ಟದ ಕಥೆ ‘ಲೂಸಿಯಾ' ವನ್ನು ಉಣಬಡಿಸಿದ್ದಾರೆ ನಿರ್ದೇಶಕ ‘ಪವನ್' ಮತ್ತು ತಂಡದವರು.

    ‘ಲೂಸಿಯಾ' ನೋಡಿ ನೀ ಮಾಯೆಯೊಳಗೋ, ಮಾಯೆ ನಿನ್ನೊಳಗೋ?...... ಅಂತಾ ಧಿಡೀರ್ ತತ್ವಜ್ಞಾನಿಗಳಾಗಿಬಿಡ್ತೀರಿ! ಪೂರ್ಣ ವಿಮರ್ಶೆ ಇಲ್ಲಿ ಓದಿ

    Dream Come True: ಸಿನಿ ಸಿಂಚನ

    Dream Come True: ಸಿನಿ ಸಿಂಚನ

    Pawan Kumar's Lucia turns my dream into reality. It has a brilliant concept, one that leaves you with a ‘wow' feeling at the climax; some beautifully executed scenes and some first rate acting. Not that the film doesn't have any issues, but boy, what a concept! Lucia is a story that plays on your idea of a good life.

    Lucia is a brave attempt, considering that it has no mainstream heroes or producers. When you add in the fact that film has a remarkable concept that almost borders on being a philosophical thriller, you know this is a very good film. Read full review here

    ಒಳ್ಳೆ ಹೈಬ್ರಿಡ್ ಹುಳ ಬಿಟ್ರು

    ಒಳ್ಳೆ ಹೈಬ್ರಿಡ್ ಹುಳ ಬಿಟ್ರು

    ಲೂಸಿಯ ನೋಡಿದ ನಂತರ ಅನಿಸಿದ್ದು...ಪವನ್ ಕುಮಾರ್ ಮೇಲೆ ನಂಬಿಕೆ ಇಟ್ಟು ಪ್ರಿ-ಆರ್ಡರ್ ಮಾಡಿದ್ದಕ್ಕೂ ಸಾರ್ಥಕವಾಯ್ತು...ಕನ್ನಡದಲ್ಲಿ ಉಪ್ಪಿ ನಾಟಿ ಹುಳ ಬಿಡ್ತಿದ್ರು...ಈಗ ಇವರು ಒಳ್ಳೆ ಹೈಬ್ರಿಡ್ ಹುಳ ಬಿಟ್ಟವ್ರೆ..ಓಂ ಥರ ರಾಗಿ ಮುದ್ದೆ-ಪಿಜ್ಜಾ ಹಾಗೆ ಹಳ್ಳಿ ಮತ್ತೆ ನಗರದ ಚಿತ್ರ...ಕಥೆ-ಚಿತ್ರಕಥೆ-ಛಾಯಾಗ್ರಹಣ-ಸಂಗೀತ ಸಕ್ಕತ್ತಾಗಿದೆ..ಎಲ್ಲರದ್ದು ಅದ್ಬುತ ನಟನೆ...ಪ್ರತಿಯೊಬ್ಬರು ನೋಡಲೆಬೇಕಾದ ಅತ್ತ್ಯುತ್ತಮ ಕನ್ನಡ ಚಿತ್ರ...


    ಹಾಗೆ ನಟರು-ತಂತ್ರಜ್ಞರು-ನಿರ್ಮಾಪಕರ ಹೆಸರು ತುಂಬ ಚಿಕ್ಕದಾಗಿ ಹಾಕಿದ್ದಾರೆ ನೋಡೋಕೆ ಆಗಲ್ಲ:-(...ಆದರೆ ಪ್ರಿ-ಆರ್ಡರ್ ಮಾಡಿದವರ ಹೆಸರು ಊರಗಲ ಹಾಕಿದ್ದಾರೆ ಎರಡು ಕಣ್ ಸಾಲದು ನೋಡೋಕೆ ..ಚೇತನ್

    ಮುಂಬೈ ಬಾಸ್ ವಿಮರ್ಶೆ

    ಮುಂಬೈ ಬಾಸ್ ವಿಮರ್ಶೆ

    Director Pawan Kumar's new Kannada film Lucia is a mystery movie with a surprise twist in the end. In other words, it's not your average Sandalwood potboiler.

    The parallel stories are however unequally weighted in favour of Nikki the usher. Nikki the movie star is a mystery and some of his actions remain unexplained even after the denouement. The police investigation is something of a joke as the cops get to the bottom of the case far too easily.

    Kumar maintains a steady, if not engrossing, pace with amusing digressions such as Nikki's attempts to learn English and antics such as the silly song and dance routine "Jamma Jamma" that takes a dig at item numbers.-MB

    ಲೈವ್ ಮಿಂಟ್-ನಂದಿನಿ ರಾಮನಾಥ್

    ಲೈವ್ ಮಿಂಟ್-ನಂದಿನಿ ರಾಮನಾಥ್

    With so many ideas battling for attention at any given point during the 135-minute running time, it's hardly surprising that Lucia collapses under the weight of its ambitions, but not before rolling out engaging characters, relatable dialogue, quirky humour and evocative locations in and around Bangalore.

    Kumar correctly suggests that neither experience is as uncomplicated as it appears, but then he has the rest of the stuff to deal with-the dream pill business, the single-screen cinema that has to be saved from creditors, the police and detective who pop up every now and then.-Livemint

    Stuck in a maze-ಶ್ಯಾಮ್ ಪ್ರಸಾದ್

    Stuck in a maze-ಶ್ಯಾಮ್ ಪ್ರಸಾದ್

    The film works like a psychiatrist trying to interpret the dreams of a patient. Instead of building up the suspense, it leads to a maze of confusion. The only interesting turn comes too late in the day to save the film.

    There were no hazards in guessing from the trailers that the film looked like a Sandalwoodised version of Hollywood disaster, Last Action Hero.

    The whole story is about how Satish gets slipped into the critical condition he is in. This hardly leaves any scope for suspense. There is a promising music director in Poornachandra Tejaswi.

    Lucia does not have the humour of Mungerilal Ke Haseen Sapne, nor does it have the extravagance of Last Action Hero.-Read more

    ದೀಪಕ್ ಕಶ್ಯಪ್ ವಿಮರ್ಶೆ

    ದೀಪಕ್ ಕಶ್ಯಪ್ ವಿಮರ್ಶೆ

    when the world had Leonardo da vinci, Picasso and their master pieces we always feel pride in tellin we had our own Raja Ravi verma.

    When the world has Stephen Spielberg, Nolan and their cult movies we always take pride in mentioning our own Shankar Nag and Uppi.When the whole world has Inception,Fight Club DVD's as their prized possessions for lifetime, we had our own Kasturi Nivasa,Accident, Mata and so on.LUCIA the just born baby from 2 years of gestation is just a add-on to the list "All we do is admire the creator and the creation which is a marvel "-ದೀಪಕ್ ಕಶ್ಯಪ್
    ಲೂಸಿಯಾ ಗೆಲ್ಲಲಿ: ಅಮರನಾಥ್

    ಲೂಸಿಯಾ ಗೆಲ್ಲಲಿ: ಅಮರನಾಥ್

    ಲೂಸಿಯಾ ಚಿತ್ರ ನೋಡಿ ಬಂದೆ. ಕನ್ನಡದಲ್ಲಿ ಪ್ರೇಕ್ಷಕರು ದುಡ್ಡು ಹಾಕಿ ಮಾಡಿದ ಮೊದಲ ಚಿತ್ರ ಇದು ಅನ್ನೋದು ಎಷ್ಟು ದಿಟವೋ, ಕನ್ನಡದಲ್ಲಿ ಇಂತಹ ಸಬ್ಜೆಕ್ಟ್ ಬಂದಿಲ್ಲ ಅನ್ನೋದು ಅಷ್ಟೇ ದಿಟ. ಚಿತ್ರದ ಕಥೆಯಲ್ಲಿ ಒಳ ಸುಳುಗಳಿಲ್ಲ, ಚಿತ್ರದಲ್ಲಿ ನೂರಾರು ಪಾತ್ರಗಳಿಲ್ಲ, ಚಿತ್ರ ಹೊರ ದೇಶದಲ್ಲಿ ಚಿತ್ರಿಸಿಲ್ಲ.

    ಆದರೆ ಚಿತ್ರದಲ್ಲಿ ಪ್ರತಿಯೊಬ್ಬ ಮನುಷ್ಯನಲ್ಲಿರುವ ಒಳ ಮನಸ್ಸಿನ ಮಿಡಿತವಿದೆ. ನಾವು ಜೀವನದಲ್ಲಿ ಏನಾಗಿರುತ್ತೇವೋ, ಅದನ್ನು ಹೊರತು ಪಡಿಸಿ ನಮ್ಮ ಬಗ್ಗೆ ನಾವು ಕಾಣುವ ಕನಸೇ ಲೂಸಿಯಾ. ಪವನ್ ನಿಜಕ್ಕೂ ಒಳ್ಳೆಯ ಚಿತ್ರಕಥೆ ಹೆಣೆದಿದ್ದಾರೆ. ಲೂಸಿಯಾ ಗೆಲ್ಲಲಿ. ಕನ್ನಡ ಚಿತ್ರರಂಗದಲ್ಲಿ ತೆರೆದುಕೊಳ್ಳುತ್ತಿರುವ ಇಂತಹ ಹೊಸ ಬದಲಾವಣೆಗಳು ಗೆಲ್ಲಲಿ-ಅಮರನಾಥ್ ಶಿವಶಂಕರ್

    ಲೂಸಿಡ್ ಡ್ರೀಮ್ಸ್

    ಲೂಸಿಡ್ ಡ್ರೀಮ್ಸ್

    Watched Lucia....just got mind fucked...it s truly an international movie..i didnt see anything like this in Indian screen so far..simply mindblowing..this movie for the people who r obsessed with World cinema and Hollywood films...Pawan Kumar u r simply genius...my question s is ter something called Lucid Dreams? or is it just a science fiction..?-ಶಿವಪ್ರಸಾದ್ ಸುಳಿ

    ಪದಗಳೇ ಸಿಗುತ್ತಿಲ್ಲ-ಅನಂತ್

    ಪದಗಳೇ ಸಿಗುತ್ತಿಲ್ಲ-ಅನಂತ್

    LUCIA !!! No reviews, no explanations about this much hyped Kannada film from me. One cannot just explain this film with just words. And enough has been already said about performances of everyone in the film, camera work, music etc etc.

    My dear non-kannadiga friends, do go and watch the movie in your nearest theatres. It is released with English sub titles. I shall guarantee that you WILL like the movie. Last but not the least, film not only has met but has exceeded the expectations !!! Hats off to the entire LUCIA team.-ಅನಂತ ಜೋಯಿಸ್

    ಕಿಕ್ಕಿರಿದ ಕನಸಲ್ಲಿ ಪ್ರೇಮಸಂಕಟ-ಜೋಗಿ

    ಕಿಕ್ಕಿರಿದ ಕನಸಲ್ಲಿ ಪ್ರೇಮಸಂಕಟ-ಜೋಗಿ

    ಪವನ್ ಅವರು ನಮ್ಮ ಮೆಮೋರಿ ಟೆಸ್ಟ್ ಮಾಡುವ ಚಿತ್ರ ನೀಡಿದ್ದಾರೆ. ಮುಂದಿನ ದೃಶ್ಯ ಯಾವುದು ಎಂದು ಹೇಳಿದರೆ ಒಂದು ಲೂಸಿಯಾ ಫ್ರೀ! ಹಿಂದಿನ ದೃಶ್ಯ ಯಾವುದಿತ್ತು ಎಂದು ನೆನಪಿಸಿಕೊಂಡರೂ ಅದೇ ಬಹುಮಾನ !

    ಲೂಸಿಯಾ ಎರಡೆರಡು ಸಲ ನೋಡಬೇಕಾದ ಚಿತ್ರ. ಕನಸು ಹಾಗೂ ವಾಸ್ತವ ಎರಡರಲ್ಲೂ ಚಂದದ ಹಾಡುಗಳಿವೆ. ಸಿದ್ದಾರ್ಥ್ ಸುನಿ ಚೆಂದದ ಕನಸಂತೆ ತೋರಿಸಿದ್ದಾರೆ. ಈ ಚಿತ್ರಕ್ಕೆ ನೀನಾಸಂ ಸತೀಶ್ ಗಿಂತ ಸೂಕ್ತ ನಟನನ್ನು ಊಹಿಸಿಕೊಳ್ಳುವುದು ಕಷ್ಟ.

    ಕನಸು- ವಾಸ್ತವ ಯಾವುದು ಎನ್ನುತ ಕತೆಯೊಳಗಿನ ಒಗಟನ್ನು ಬಿಡಿಸುವುದಕ್ಕೆ ಟಿವಿ ವಾಹಿನಿ ಸಂದರ್ಶನ ನಂಬಿಕೊಂಡಿದ್ದು ಮಾತ್ರ ಸರಳ, ಅತಿರೇಕ ಮತ್ತು ಮಿತಿ--ಉದಯವಾಣಿ ಬಾಲ್ಕನಿ ಪುಟದಲ್ಲಿ ಪೂರ್ಣ ವಿಮರ್ಶೆ ಓದಿ

    ರಕ್ಷಿತ್ ಶೆಟ್ಟಿ ಅಭಿಪ್ರಾಯ

    ರಕ್ಷಿತ್ ಶೆಟ್ಟಿ ಅಭಿಪ್ರಾಯ

    What an extraordinary film. Purely world class. Pawan's 2 years effort has given us an amazing product. I am really proud to be an online distributor for an epic film. Overwhelmed, inspired and emotionally taken aback. LUCIA is a must watch... Do not miss it -Rakshith Shetty

    ನಿರ್ದೇಶಕರ ಮಾತು

    ನಿರ್ದೇಶಕ ಪವನ್ ಅವರು ಖುಷಿಯಿಂದ ಟ್ವೀಟ್ ಮಾಡಿದ್ದು ಹೀಗೆ

    ಲೂಸಿಯಾ ಗಳಿಕೆ

    ಲೂಸಿಯಾ ಗಳಿಕೆ ಈಗ ಹೇಗಿದೆ

    ವಿಜಯ ಕರ್ನಾಟಕ ವಿಮರ್ಶೆ

    ವಿಜಯ ಕರ್ನಾಟಕ ವಿಮರ್ಶೆ

    ಒಂದಷ್ಟು ವರ್ಲ್ಡ್ ಸಿನಿಮಾ (ಸಿನಿಮಾ ಫೆಸ್ಟಿವಲ್‌ಗಳಲ್ಲಿ ಅವಾರ್ಡ್ ಪಡೆದ)ಗಳನ್ನು ಗುಡ್ಡೆ ಹಾಕಿಕೊಂಡು, ತಾನೂ ಒಂದು ಅವಾರ್ಡ್ ಪಡೆಯಬೇಕು ಎಂದು ಡಿಸೈಡ್ ಮಾಡಿ ಕುಳಿತರೆ ಲೂಸಿಯಾ ಸಿನಿಮಾ ಹುಟ್ಟುತ್ತದೆ. ಹೌದು, ಈ ಸಿನಿಮಾದ ಸ್ಕ್ರೀನ್ ಪ್ಲೇ ವಿಧಾನ, ಎಡಿಟಿಂಗ್ ಟೆಕ್ನಿಕ್ ಅವಾರ್ಡ್ ಸಿನಿಮಾಗಳ ಮಾದರಿಯಲ್ಲಿದೆ. ಅರ್ನಾಲ್ಡ್ ಅಭಿನಯದ 'ದಿ ಲಾಸ್ಟ್ ಆಕ್ಷನ್ ಹೀರೋ' ಹಾಗೂ ಕ್ರಿಸ್ಟೋಫರ್ ನೋಲಾನ್ ನಿರ್ದೇಶನದ 'ಇನ್‌ಸೆಪ್ಷೆನ್' ಚಿತ್ರದ ದಟ್ಟ ಪ್ರಭಾವ ಲೂಸಿಯಾ ಸಿನಿಮಾದಲ್ಲಿದೆ.

    ಲೂಸಿಯಾ ಚಿತ್ರದ ಟೈಟಲ್ ಕಾರ್ಡ್ ತೋರಿಸುವ ವಿಧಾನ ಚೆನ್ನಾಗಿದೆ. ತಿನ್ಬೇಡಕಮ್ಮಿ....ಹೇಳು ಶಿವಾ...ಜಮ್ಮ ಜಮ್ಮಾ ಹಾಡುಗಳು ಕೇಳುವುದಕ್ಕೆ ಹಾಗೂ ನೋಡುವುದಕ್ಕೆ ಚೆನ್ನಾಗಿದೆ. ಉಳಿದಂತೆ ಸತೀಶ್ ಹಾಗೂ ಶ್ರುತಿ ನಟನೆಯಲ್ಲಿ ಹೇಳಿಕೊಳ್ಳುವಷ್ಟು ವಿಶೇಷತೆ ಇಲ್ಲ.

    ಚಿತ್ರದ ಮೊದಲರ್ಧ ಕನಸು ಹಾಗೂ ವಾಸ್ತವ ಬದುಕಿನ ನೋಟ. ಆ ನಂತರ ಪವನ್, ಎರಡನ್ನೂ ಮಿಕ್ಸ್ ಮಾಡುತ್ತಾರೆ. ಆ ರೀತಿ ತುಂಬಾನೇ ಸಂಕೀರ್ಣ ಸ್ಕ್ರೀನ್ ಪ್ಲೇಯಿಂದ ಸಿನಿಮಾ ಅರ್ಥವಾಗದೇ ಸಾಮಾನ್ಯ ಪ್ರೇಕ್ಷಕನಿಂದ ದೂರ ನಿಂತು ಬಿಡುತ್ತದೆ. ಕ್ಲೈಮ್ಯಾಕ್ಸ್ ಅಂತೂ ನಿರ್ದೇಶಕರೊಬ್ಬರಿಗೆ ಅರ್ಥವಾಗಬೇಕು.- ಎಚ್ ಮಹೇಶ್

    English summary
    Director Pawan Kumar's Lucia Kannada film gets good review from Oneindia readers and critics. Here is the collection of reviews, opinion and critics view on Lucia movie
    Sunday, September 8, 2013, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X