»   » ವಿಮರ್ಶೆ: ಸಸ್ಪೆನ್ಸ್, ಥ್ರಿಲ್ಲರ್, ಟ್ವಿಸ್ಟ್...ಯಾವುದೂ ಇಲ್ಲದ 'ಅರ್ಜುನ'

ವಿಮರ್ಶೆ: ಸಸ್ಪೆನ್ಸ್, ಥ್ರಿಲ್ಲರ್, ಟ್ವಿಸ್ಟ್...ಯಾವುದೂ ಇಲ್ಲದ 'ಅರ್ಜುನ'

Written by: ಹರಾ
Subscribe to Filmibeat Kannada

'ತಪ್ಪುಗಳಿಗೆ ತಪ್ಪದೇ ಶಿಕ್ಷೆ ಕೊಡುವವನೇ ಅರ್ಜುನ'.....ಹೀಗಂತ ಕ್ಲೈಮ್ಯಾಕ್ಸ್ ನಲ್ಲಿ ಪೊಲೀಸ್ ಅಧಿಕಾರಿ ದೇವರಾಜ್ (ಮಿಸ್ಟರ್.ವರ್ಮ) ಹೇಳ್ತಾರೆ. ಅಷ್ಟಕ್ಕೂ 'ಅರ್ಜುನ' ಇಡೀ ಚಿತ್ರಕಥೆಯನ್ನ ಎಳೆದಿರುವುದೇ ಇದೊಂದು ಸಾಲಿನಿಂದ.

ಮೊಟ್ಟ ಮೊದಲ ಬಾರಿ ಬೆಳ್ಳಿತೆರೆ ಮೇಲೆ ಅಪ್ಪ ಡೈನಾಮಿಕ್ ಸ್ಟಾರ್ ದೇವರಾಜ್ ಮತ್ತು ಮಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಒಂದಾಗಿರುವುದು ಈ ಚಿತ್ರದಲ್ಲಿ. ಹಾಗಂತ 'ಅರ್ಜುನ್' ಡಬಲ್ ಡೈನಾಮಿಕ್ ಇರಬಹುದು ಅಂತ ನೀವು ಅತಿಯಾದ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಕ್ಕೆ ಹೋದರೆ, ನಿರಾಸೆಯಾಗುವುದು ಗ್ಯಾರೆಂಟಿ. [ತಪ್ಪಿಗೆ ಶಿಕ್ಷೆ ಕೊಡೋಕೆ ಬರ್ತಾವ್ನೆ 'ಅರ್ಜುನ']

'ಅರ್ಜುನ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

Rating:
2.5/5

ಚಿತ್ರ - 'ಅರ್ಜುನ'
ನಿರ್ಮಾಣ - ಕೆ.ಮುತ್ತುರಾಜ್, ಪಿ.ರಮೇಶ್
ಚಿತ್ರಕಥೆ - ನಿರ್ದೇಶನ - ಪಿ.ಸಿ.ಶೇಖರ್
ಛಾಯಾಗ್ರಹಣ - ಕುಮಾರನ್
ಸಂಕಲನ - ಸರವಣನ್
ಸಂಗೀತ - ಅರ್ಜುನ್ ಜನ್ಯ
ತಾರಾಗಣ - ದೇವರಾಜ್, ಪ್ರಜ್ವಲ್ ದೇವರಾಜ್, ಭಾಮ, ರಮೇಶ್ ಭಟ್, ಕಡ್ಡಿಪುಡಿ ಚಂದ್ರು ಮತ್ತು ಇತರರು
ಬಿಡುಗಡೆ - 24/09/2015

ಕಥಾಹಂದರ

ಕಥಾಹಂದರ

ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ಅರ್ಜುನ (ಪ್ರಜ್ವಲ್ ದೇವರಾಜ್) ಕಷ್ಟಪಟ್ಟು ಓದಿ ಸರ್ಕಾರಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಹಿಂದು ಮುಂದು ಇಲ್ಲದ ಅರ್ಜುನನ ಹಿಂದೆ ಬಿದ್ದು ಪ್ರೀತಿ ಮಾಡಿ ಪ್ರಿಯಾ (ಭಾಮ) ಮದುವೆಯಾಗುತ್ತಾಳೆ. ಇಬ್ಬರ ಸಂಸಾರ ಆನಂದ ಸಾಗರದಲ್ಲಿ ತೇಲುವಾಗ ಪ್ರಿಯಾ ಕೊಲೆಯಾಗುತ್ತಾಳೆ. ಆ ಕೊಲೆಗೆ ಕಾರಣ ಓರ್ವ ಕಲೆಕ್ಟರ್, ಎಸಿಪಿ ಮತ್ತು ಕೌನ್ಸಿಲರ್.

ನಾವು ನೀವು ಕೇಳಿರುವ ಸಾಮಾನ್ಯ ಕಥೆ

ನಾವು ನೀವು ಕೇಳಿರುವ ಸಾಮಾನ್ಯ ಕಥೆ

ತನ್ನ ಕಛೇರಿಯಲ್ಲಿ ನಡೆಯುವ ಅವ್ಯವಹಾರವನ್ನ ಲೋಕಾಯುಕ್ತ ಕಛೇರಿಗೆ ತಲುಪಿಸಿದ ಸೇಡಿಗೆ ಕಲೆಕ್ಟರ್, ಎಸಿಪಿ ಮತ್ತು ಕೌನ್ಸಿಲರ್ ಸೇರಿ ಅರ್ಜುನನ ಪತ್ನಿಯನ್ನು ಹತ್ಯೆ ಮಾಡುತ್ತಾರೆ. ತಪ್ಪಿಗೆ ಶಿಕ್ಷೆಯಾಗಿ ಎಲ್ಲರನ್ನ ಯಮಪುರಿಗೆ ಅಟ್ಟಲು ಅರ್ಜುನ ನಿರ್ಧರಿಸುತ್ತಾನೆ. ಈ ಮಧ್ಯೆ ಕೊಲೆ ಕೇಸ್ ತನಿಖೆ ಮಾಡುವುದಕ್ಕೆ ಮಿಸ್ಟರ್ ವರ್ಮ (ದೇವರಾಜ್) ಅಖಾಡಕ್ಕೆ ಇಳಿಯುತ್ತಾರೆ. ಅರ್ಜುನ ಸೇಡು ತೀರಿಸಿಕೊಳ್ಳುತ್ತಾನಾ ಇಲ್ಲ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನಾ? ಕೊಲೆ ಕೇಸ್ ನ ವರ್ಮ ಸಾಹೇಬರು ಭೇದಿಸುವುದು ಹೇಗೆ ಅನ್ನೋದು ಬಾಕಿ ಕಥೆ.

ಕಥೆಯಲ್ಲಿ ಟ್ವಿಸ್ಟ್ ಇಲ್ಲ, ಟೆನ್ಷನ್ ಇಲ್ಲ.!

ಕಥೆಯಲ್ಲಿ ಟ್ವಿಸ್ಟ್ ಇಲ್ಲ, ಟೆನ್ಷನ್ ಇಲ್ಲ.!

'ಅರ್ಜುನ' ಹೇಳಿ ಕೇಳಿ ಕ್ರೈಂ ಡ್ರಾಮಾ ಸಿನಿಮಾ. ಕಳ್ಳ ಪೊಲೀಸ್ ಹಾವು ಏಣಿ ಆಟದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಕ್ಷಣ ಕ್ಷಣಕ್ಕೂ ಟೆನ್ಷನ್, ಟ್ವಿಸ್ಟ್ ಇರಬೇಕು. ಆದ್ರೆ, 'ಅರ್ಜುನ' ಸಿನಿಮಾದಲ್ಲಿ ಅವು ಯಾವುವೂ ಕಾಣಲ್ಲ. ಸಿನಿಮಾದಲ್ಲಿ ರೋಚಕ ಅಂಶಗಳು ಕಡಿಮೆ. ಮುಂದೇನಾಗುತ್ತೆ ಅನ್ನೋದನ್ನ ಪ್ರೇಕ್ಷಕರು ಸಲೀಸಾಗಿ ಊಹಿಸುತ್ತಾರೆ.

ಅಪ್ಪ-ಮಗನ ಜುಗಲ್ಬಂದಿ

ಅಪ್ಪ-ಮಗನ ಜುಗಲ್ಬಂದಿ

ಇಡೀ ಚಿತ್ರವನ್ನ ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ತಮ್ಮ ಹೆಗಲ ಮೇಲೆ ಹೊರಿಸಿಕೊಂಡಿದ್ದಾರೆ. ಅಪ್ಪ-ಮಗನ ನಟನೆ ಬಗ್ಗೆ ಕಾಮೆಂಟ್ ಮಾಡುವ ಹಾಗಿಲ್ಲ. ದೇವರಾಜ್ ಖದರ್ ಎಂದಿನಂತೆ ಸೂಪರ್. ಪಟ ಪಟ ಮಾತನಾಡುವ ಹುಡುಗಿಯಾಗಿ ಭಾಮಾ ಅಭಿನಯ ಓಕೆ. ಶೀತಲ್ ಶೆಟ್ಟಿ ನಟನೆಯಲ್ಲಿ ಚಾರ್ಮ್ ಇಲ್ಲ.

 ಚಿತ್ರಕಥೆಯಲ್ಲಿ ಗಟ್ಟಿತನ ಇಲ್ಲ.!

ಚಿತ್ರಕಥೆಯಲ್ಲಿ ಗಟ್ಟಿತನ ಇಲ್ಲ.!

'ಅರ್ಜುನ' ಚಿತ್ರದ ಎಳೆ ತುಂಬಾ ಸಿಂಪಲ್. ಚಿತ್ರಕಥೆಗೆ ಗಟ್ಟಿತನ ನೀಡುವಲ್ಲಿ ನಿರ್ದೇಶಕ ಪಿ.ಸಿ.ಶೇಖರ್ ಎಡವಿದ್ದಾರೆ. ಅರ್ಜುನ ಜನ್ಯ ಸಂಗೀತ ನೀಡಿರುವ ಒಂದು ಹಾಡು ಕೇಳುವುದಕ್ಕೆ ಇಂಪು.

ನೀವು ದೇವರಾಜ್ ಫ್ಯಾನಾ?

ನೀವು ದೇವರಾಜ್ ಫ್ಯಾನಾ?

ಬಹಳ ದಿನಗಳ ನಂತರ ದೇವರಾಜ್ ಕಾಣಿಸಿಕೊಂಡಿರುವ ಸಿನಿಮಾ 'ಅರ್ಜುನ'. ಮೊದಲ ಬಾರಿ ಅಪ್ಪ-ಮಗ ಈ ಸಿನಿಮಾದಲ್ಲಿ ಒಂದಾಗಿದ್ದಾರೆ. ರೀಲ್ ಮೇಲೆ ಇಬ್ಬರನ್ನ ನೋಡಲೇಬೇಕು ಅಂತಿದ್ರೆ 'ಅರ್ಜುನ' ಮಿಸ್ ಮಾಡ್ಬೇಡಿ.

English summary
Devaraj and Prajwal Devaraj starrer Kannada Movie 'Arjuna' has hit the screens today (September 24th). 'Arjuna' film review is here
Please Wait while comments are loading...

Kannada Photos

Go to : More Photos