twitter
    For Quick Alerts
    ALLOW NOTIFICATIONS  
    For Daily Alerts

    'ಕೋಮಾ' ಚಿತ್ರವಿಮರ್ಶೆ : ಹೊಸಬರ ಪ್ರಯತ್ನಕ್ಕೆ ಥಂಬ್ಸ್ ಅಪ್

    By Harshitha
    |

    ಲಕ್ಷಾಂತರ ರೂಪಾಯಿ ಸಂಬಳ ಬರುತ್ತಿದ್ದರೂ, ಅದನ್ನ ಬಿಟ್ಟು, ಐ.ಟಿ.ಹುಡುಗರು ಕೂಡಿ ಮಾಡಿರುವ 'ಕೋಮಾ' ಸಿನಿಮಾ ಪ್ರೇಕ್ಷಕರನ್ನ ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ.

    'ಕೋಮಾ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ...

    Rating:
    3.0/5

    ಚಿತ್ರ - ಕೋಮಾ
    ನಿರ್ದೇಶನ - ಚೇತನ್ ಮತ್ತು ರವಿ
    ನಿರ್ಮಾಣ - ರಾಜಾ ಸೆಲ್ವಂ, ರವಿ, ಚೇತನ್
    ಸಂಗೀತ - ಆಶಿಕ್ ಅರುಣ್
    ತಾರಾಗಣ - ದೊರೈ ಭಗವಾನ್, ಗುರುಪ್ರಸಾದ್, ಕಾರ್ತಿಕ್‌ ಕುಮಾರ್‌, ಶೃತಿ ನಂದೀಶ್
    ರಿಲೀಸ್ - 27/05/2016

    ಕಥಾಹಂದರ

    ಕಥಾಹಂದರ

    ಒಳ್ಳೆ ಫೋಟೋಗ್ರಾಫರ್ ಆಗ್ಬೇಕು ಅಂತ ನಾಯಕಿಯ ತಂದೆಯ ಬಳಿ ಫೋಟೋಗ್ರಾಫಿ ಕಲಿಯೋದಕ್ಕೆ ಬರುವ ನಾಯಕ. ವೃತ್ತಿಯಲ್ಲಿ ಪೇಂಟರ್ ಆಗಿರುವ ನಾಯಕಿಗೆ ಆಕ್ಟರ್ ಆಗ್ಬೇಕು ಎನ್ನುವ ಆಸೆ. ಫೋಟೋಗ್ರಾಫಿ ಕಲಿಯುತ್ತಾ ನಾಯಕಿಯ ಪ್ರೀತಿಯಲ್ಲಿ ಬೀಳುವ ನಾಯಕ. ಇವ್ರ ಮಧ್ಯೆ ಗುರುಪ್ರಸಾದ್ ಮತ್ತು ನಿರ್ದೇಶಕ ಭಗವಾನ್ ಓಲ್ಡ್ ಮತ್ತು ನ್ಯೂ ಕಾನ್ಸೆಪ್ಟ್ ಸಿನಿಮಾ ಸ್ಟೋರಿ. ಇವೆಲ್ಲದರ ಮಧ್ಯೆ 'ಕೋಮಾ' ಅಂದ್ರೆ ಏನು.? ಅನ್ನೋದನ್ನ ಬಿಡಿಸಿ ಹೇಳುವುದೇ 'ಕೋಮಾ' ಚಿತ್ರದ ಕಥಾಹಂದರ.

    ಪರ್ಫಾಮೆನ್ಸ್

    ಪರ್ಫಾಮೆನ್ಸ್

    ಚಿತ್ರದಲ್ಲಿ ಓಲ್ಡ್ ಡೈರೆಕ್ಟರ್ ಆಗಿ ಆಕ್ಟ್ ಮಾಡಿರುವ ಭಗವಾನ್ ಆಗಾಗ ಬಂದು ಹೋದರೂ, ಆಕ್ಟಿಂಗ್ ನಲ್ಲಿ, ಡೈಲಾಗ್ ಡಿಲೆವರಿಯಲ್ಲಿ ಇಂಪ್ರೆಸ್ ಮಾಡುತ್ತಾರೆ. ಇನ್ನೂ ಯಂಗ್ ಡೈರೆಕ್ಟರ್ ಆಗಿ ಆಕ್ಟ್ ಮಾಡಿರುವ ಗುರುಪ್ರಸಾದ್ ಬೆಸ್ಟ್ ಡೈಲಾಗ್ ರೈಟರ್ ಅಷ್ಟೇ ಅಲ್ಲಾ, ಸೂಪರ್ ಆಗಿ ಡೈಲಾಗ್ ಹೊಡಿತಾರೆ ಅನ್ನೋದನ್ನೂ ಪ್ರೂವ್ ಮಾಡಿದ್ದಾರೆ.

    ಹೊಸಬರ ನಟನೆ ಹೇಗಿದೆ?

    ಹೊಸಬರ ನಟನೆ ಹೇಗಿದೆ?

    ನಾಯಕನ ಪಾತ್ರದಲ್ಲಿ ಕಾರ್ತಿಕ್ ಕುಮಾರ್ ಆಕ್ಟಿಂಗ್ ಅಷ್ಟಕಷ್ಟೆ. ಮತ್ತಷ್ಟು ಪ್ರಯತ್ನ ಪಟ್ಟಿದ್ರೆ ಸ್ಕ್ರೀನ್ ಮೇಲೆ ಪರ್ಫಾಮೆನ್ಸ್ ಇನ್ನೂ ಚೆನ್ನಾಗಿ ಮೂಡಿ ಬರ್ತಿತ್ತು. ಶೃತಿ ನಂದೀಶ್ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದು ಕೊಟ್ಟ ಪಾತ್ರವನ್ನ ಸರಿಯಾಗಿ ನಿಭಾಯಿಸಿದ್ದಾರೆ. ಇನ್ನೂ ನಾಯಕಿ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಚೇಂದ್ರ ಪ್ರಸಾದ್ ಅಭಿನಯ ಎಂದಿನಂತಿದೆ.

    ಪ್ಲಸ್‌ ಪಾಯಿಂಟ್ಸ್

    ಪ್ಲಸ್‌ ಪಾಯಿಂಟ್ಸ್

    ಅದ್ಧೂರಿ ಲೊಕೇಶನ್ಸ್ ಮತ್ತು ಗುರುಪ್ರಸಾದ್ ಮತ್ತು ಭಗವಾನ್ ಅಭಿನಯ 'ಕೋಮಾ' ಚಿತ್ರದ ಪ್ಲಸ್ ಪಾಯಿಂಟ್ಸ್.

    ಮೈನಸ್‌ ಪಾಯಿಂಟ್ಸ್

    ಮೈನಸ್‌ ಪಾಯಿಂಟ್ಸ್

    ಕಥೆಯಲ್ಲಿ ಹೊಸತನವಿಲ್ಲದ ಮತ್ತು ನಟರ ಅಭಿನಯದಲ್ಲಿ ಪಕ್ವತೆ ಇಲ್ಲದ 'ಕೋಮಾ' ಚಿತ್ರದ ನಿಧಾನಗತಿ ನಿರೂಪಣೆ ಮೈನಸ್ ಪಾಯಿಂಟ್ಸ್ ಎನ್ನಬಹುದು.

    ಫೈನಲ್‌ ಸ್ಟೇಟ್ ಮೆಂಟ್

    ಫೈನಲ್‌ ಸ್ಟೇಟ್ ಮೆಂಟ್

    ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಹೊಸಬರ ಅವಿರೇಜ್ ಪ್ರಯತ್ನ 'ಕೋಮಾ' (*ಮಾಹಿತಿ ಕೃಪೆ - ಟಿವಿ9 ಕನ್ನಡ)

    English summary
    Forgetting Minus Points, Kannada Director Guruprasad, S.K.Bhagavan starrer 'Coma' movie is definately worth watching. Complete review of the Movie is here.
    Thursday, June 2, 2016, 16:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X