twitter
    For Quick Alerts
    ALLOW NOTIFICATIONS  
    For Daily Alerts

    ಎಳೆಯ ಗೆಳೆಯರ ಸಮಾಜ ಕಳಕಳಿಗೆ ಮನಸೋತ ವಿಮರ್ಶಕರು ಏನಂದ್ರು ನೋಡಿ..

    By Suneel
    |

    ಜೀ ಕನ್ನಡ ವಾಹಿನಿಯ 'ಡ್ರಾಮಾ ಜೂನಿಯರ್ಸ್' ಖ್ಯಾತಿಯ ಪುಟಾಣಿ ಮಕ್ಕಳ ಅಭಿನಯದ 'ಎಳೆಯರು ನಾವು ಗೆಳೆಯರು' ಚಿತ್ರ ತೆರೆಕಂಡಿದ್ದು, ಪ್ರೇಕ್ಷಕರಿಗೆ ಸಂದೇಶದ ಜೊತೆಗೆ ಉತ್ತಮ ಮನೋರಂಜನೆಯನ್ನು ನೀಡಿದೆ. ಗಂಭೀರ ಸಮಸ್ಯೆಗಳನ್ನು ಸರಳವಾಗಿ ಮಕ್ಕಳ ನಟನೆಯಲ್ಲಿ ನಿರ್ದೇಶಕ ವಿಕ್ರಮ್ ಸೂರಿ ತೆರೆ ಮೇಲೆ ತಂದಿದ್ದು ಉತ್ತಮ ಪ್ರಶಂಸೆ ಪಡೆಯುತ್ತಿದೆ.

    ಚಿತ್ರದಲ್ಲಿ ಮಕ್ಕಳ ಆಟ-ತುಂಟಾಟ, ಅವರ ಮಾತುಗಳು, ಡೈಲಾಗ್ ಎಲ್ಲವನ್ನು ನೋಡಿದ ಕನ್ನಡ ಸಿನಿ ಪ್ರಿಯರು ಮನಸೋತಿದ್ದು, ಒಂದೊಳ್ಳೇ ಪಾಠಕ್ಕೆ ಶಹಭಾಷ್ ಎಂದಿದ್ದಾರೆ. ಆದರೆ ಈ ಚಿತ್ರನೋಡಿದ ವಿಮರ್ಶಕರು ಎಳೆಯರ ಅಭಿನಯದ ಚಿತ್ರಕ್ಕೆ ಏನಂದ್ರು ಗೊತ್ತಾ? ಅದಕ್ಕೆ ಉತ್ತರ ಇಲ್ಲಿದೆ['ಎಳೆಯರ' ಜೊತೆ 'ಗೆಳೆಯರ' ಸಿನಿಮಾ ನೋಡಿದ ಕಿಚ್ಚ ಸುದೀಪ್]

    ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿದ 'ಎಳೆಯರು ನಾವು ಗೆಳೆಯರು' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿರಿ..

    ಮುಗ್ಧತೆ ಪ್ರಬುದ್ಧತೆಗಳ ಮುದ್ದಾದ ಸಂಗಮ: ಪ್ರಜಾವಾಣಿ

    ಮುಗ್ಧತೆ ಪ್ರಬುದ್ಧತೆಗಳ ಮುದ್ದಾದ ಸಂಗಮ: ಪ್ರಜಾವಾಣಿ

    ಮಕ್ಕಳ ಚಿತ್ರಗಳ ಜನಪ್ರಿಯ ಸಿದ್ಧಸೂತ್ರಗಳನ್ನು ಪೂರ್ತಿಯಾಗಿ ಮುರಿಯದಿದ್ದರೂ ಹಳೆಯ ನಂಬಿಕೆಗಳನ್ನು ಒಮ್ಮೆ ಕೊಡವುವ ಕೆಲಸವನ್ನಂತೂ ಮಾಡುತ್ತದೆ. ಇಡೀ ಚಿತ್ರದಲ್ಲಿ ಒಂದೇ ಎನ್ನುವ ಕಥೆಯ ಎಳೆಯಿಲ್ಲ. ಫಸ್ಟ್ ಹಾಫ್ ಪಾತ್ರಗಳ ಮೂಲಕ ಬೆಳೆಯುತ್ತ, ದ್ವಿತೀಯಾರ್ಧದಲ್ಲಿ ಭಾವುಕ ಸನ್ನಿವೇಶಗಳಿಂದ ಮನಸ್ಸು ತಟ್ಟುತ್ತದೆ. ಪ್ರಸ್ತುತ ಸಮಾಜಕ್ಕೆ ಹಲವು ಜಾಗೃತಿ ಮೂಡಿಸುವ ಸನ್ನಿವೇಶಗಳು ಮಕ್ಕಳ ಜಗತ್ತಿನ ಮುಗ್ಧತೆಯ ಮೊಸರಿನಲ್ಲಿ ಕೃತಕತೆಯ ಕಲ್ಲಿನಂತೆ ಸಿಕ್ಕುತ್ತವೆ. ಖಳನಾಯಕರನ್ನು ಸೃಷ್ಟಿಸುವ ಗೋಜಿಗೆ ಹೋಗದೆ, ವಿಧಿಯಾಟವನ್ನೇ ಖಳನನ್ನಾಗಿಸುವ ಮೂಲಕ ಸಿನಿಮಾ ಮುಗ್ಧತೆಯಿಂದ ಪ್ರಬುದ್ಧತೆಗೆ ಏರುತ್ತದೆ. ಕಥೆಗೆ ತಕ್ಕನಾಗಿ ಪುಟಾಣಿಗಳ ಅಭಿನಯವೂ ಗಮನಸೆಳೆಯುತ್ತದೆ. ಸಂಗೀತ ಚಿತ್ರದ ಧನಾತ್ಮಕ ಅಂಶ. 'ಮನಕೆ ಶಕ್ತಿ ನೀಡು ಗುರುವೇ ಸೂರ್ಯನಂತೆ ಬೆಳಗಲಿ' ಹಾಡಿಗೆ ವಯಸ್ಸಿನ ಹಂಗು ಮೀರಿ ಎಲ್ಲರೆದೆಯ ಪ್ರಾರ್ಥನೆಯಾಗುವ ಶಕ್ತಿ ಇದೆ - ಪದ್ಮನಾಭ ಭಟ್

    ಎಳೆಯರಿಂದ ಎಳೆಯರಿಗಾಗಿ ಈ ಗೆಳೆಯರು: ವಿಜಯ ಕರ್ನಾಟಕ

    ಎಳೆಯರಿಂದ ಎಳೆಯರಿಗಾಗಿ ಈ ಗೆಳೆಯರು: ವಿಜಯ ಕರ್ನಾಟಕ

    ಸಂದೇಶ ನೀಡುವ ಗೋಜಿನಲ್ಲಿ ದಿಟ್ಟ ಮಕ್ಕಳಿಂದ ಸಾಹಸ ಕತೆ ಹೇಳಿಸುವ ಹಳೆಯ ಚಾಳಿ ಚಿತ್ರದಲ್ಲಿ ಕಂಡರೂ ಆ ಚೌಕಟ್ಟನ್ನು ಒಡೆಯುವ ಪ್ರಯತ್ನ ಆಗಿದೆ. ಎಳೆಯ ಗೆಳೆಯರು ನಟಿಸಿರುವುದರಿಂದ ಚಿತ್ರ ಮಕ್ಕಳಿಗೆ ಇಷ್ಟವಾಗುತ್ತದೆ. ಸಂದೇಶ, ಮಕ್ಕಳ ಆಟ, ಹಲವು ತಿರುವುಗಳ ಮೂಲಕ ಚಿತ್ರ ಮನೋರಂಜನೆ ನೀಡುತ್ತದೆಯಾದರೂ, ಮಕ್ಕಳಿಗೆ ಹತ್ತಿರವಾಗುವ ಕೆಲ ಅಂಶಗಳ ಕೊರತೆಯೂ ಕಾಣುತ್ತದೆ. ಬಾಲ ಕಲಾವಿದರು ಸಿಕ್ಕಿರುವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರಕ್ಕೆ ಕತೆಯಷ್ಟೇ ಮ್ಯೂಸಿಕ್ ಕೂಡ ಮಹತ್ವದ್ದಾಗಿದ್ದು, ಅನೂಪ್ ಸೀಳಿನ್ ರವರ ಎರಡೇ ಹಾಡುಗಳು ಮಕ್ಕಳಿಗಾಗಿ ಮಾಡಿದಂತಿವೆ. ಹಿಂಡು ಮಕ್ಕಳಿದ್ದರೂ ನೃತ್ಯ ಕಾಲು ಮುರಿದುಕೊಂಡು ಬಿದ್ದಿದೆ - ಶರಣು ಹುಲ್ಲೂರು

    ಡ್ರಾಮ ಮಕ್ಕಳ ಸಾಮಾಜಿಕ ಕಳಕಳಿಯ ಸಿನಿಮಾ: ಉದಯವಾಣಿ

    ಡ್ರಾಮ ಮಕ್ಕಳ ಸಾಮಾಜಿಕ ಕಳಕಳಿಯ ಸಿನಿಮಾ: ಉದಯವಾಣಿ

    ಚಿತ್ರದಲ್ಲಿ ಮಕ್ಕಳ ಚುರುಕತನದಿಂದ ಅವರ ಸಂಭಾಷಣೆ ಖುಷಿಕೊಡುತ್ತದೆ. ಮಕ್ಕಳಿಂದ ಊರು, ದೇಶ ಉದ್ಧಾರ ಮಾಡಿಸಬೇಕೆಂಬ ಕಾರಣಕ್ಕೆ ಅತಿಯಾದ ಬೋಧನೆ ಮಾಡಿಸದಿರುವುದು ಚಿತ್ರದ ಪ್ಲಸ್ ಪಾಯಿಂಟ್. ಗಂಭೀರ ವಿಷಯವನ್ನು ಮಕ್ಕಳಿಂದ ಮಜವಾಗಿ ಹೇಳಿಸಿದ್ದಾರೆ. ಆದರೆ ಕಥೆ ತೀರಾ ಹೊಸದೇನಲ್ಲ. ಕೆಲವೊಂದು ಸನ್ನಿವೇಶಗಳಾದ ರೈನ್ ಎಫೆಕ್ಟ್, ಡೈಲಾಗ್, ಬಿಲ್ಡಪ್, ಮಕ್ಕಳ ಫೈಟ್ ಬೇಕಿತ್ತಾ ಎಂಬ ಪ್ರಶ್ನೆ ಕಾಡುತ್ತದೆ. ಯಾರು ಚೆನ್ನಾಗಿ ನಟಿಸಿದ್ದಾರೆ ಎಂದು ಹೇಳುವುದು ಕಷ್ಟ. ಎಲ್ಲರೂ ಅಷ್ಟೆ ಚೆನ್ನಾಗಿ ಮಿಂಚಿದ್ದಾರೆ. ಅನೂಪ್ ಸೀಳಿನ್ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತದೆ - ರವಿಪ್ರಕಾಶ್ ರೈ

    An Oasis In The Sandalwood Desert: Bangalore Mirror

    An Oasis In The Sandalwood Desert: Bangalore Mirror

    The director scripts an engaging, if not overwhelming, fare. The first half of the film is the usual adult idea of a children's film filled with pranks. It runs like a long introduction of all the characters. The second half, however, touches some raw nerve and makes for a heartwarming watch. There is nothing novel in the plot and is more or less what adult writers in Kannada have been making out of children's films for sometime now. It is a simple plot that adults may not find too interesting. But for kids, this is an oasis in the Sandalwood desert. The little TV stars really give their best and the director has managed to extract the required performances from them. The dialogues are over the top for kids in some sequences. Eleyaru Naavu Geleyaru does not quite match the films of the golden age of children's films in Kannada but the effort towards it shows - Shyam Prasad S

    English summary
    Drama Juniours Childrens Acted Kannada Movie 'Eleyaru Naavu Geleyaru' has recieved positive response from the Critics. Here is the Colletion of 'Eleyaru Naavu Geleyaru' reviews by Top News Papers of Karnataka
    Saturday, June 3, 2017, 18:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X