twitter
    For Quick Alerts
    ALLOW NOTIFICATIONS  
    For Daily Alerts

    ಸಸ್ಪೆನ್ಸ್ 'ಗೇಮ್' ಚಿತ್ರಕ್ಕೆ ವಿಮರ್ಶಕರು ಥ್ರಿಲ್ಲ್ ಆದ್ರಾ?

    By Suneetha
    |

    ನಿಜ ಕಥೆಯಾಧರಿತ ಸಿನಿಮಾ ಮಾಡುವುದರಲ್ಲಿ ನಿಸ್ಸೀಮರಾಗಿರುವ ನಿರ್ದೇಶಕ ಎ.ಎಂ.ಆರ್ ರಮೇಶ್ ಅವರು ಈ ಬಾರಿ ನಟ ಅರ್ಜುನ್ ಸರ್ಜಾ ಅವರ ಜೊತೆ ಸೇರಿಕೊಂಡು 'ಗೇಮ್' ಎಂಬ ಸಿನಿಮಾವನ್ನು ಹೊರ ತಂದಿದ್ದಾರೆ.

    ಈ ಬಾರಿ ಒಂದು ಕೊಲೆಯ ಹಿಂದಿನ ರಹಸ್ಯ ಬಯಲು ಮಾಡುವ ಕಥೆಯನ್ನು ಆಯ್ದುಕೊಂಡಿದ್ದ ನಿರ್ದೇಶಕರ 'ಗೇಮ್' ಸಿನಿಮಾ ನಿನ್ನೆ ತಾನೆ (ಫೆಬ್ರವರಿ 26) ಇಡೀ ರಾಜ್ಯಾದ್ಯಂತ ಜೊತೆಗೆ ತಮಿಳು ಭಾಷೆಯಲ್ಲಿಯೂ ಏಕಕಾಲದಲ್ಲಿ ತೆರೆ ಕಂಡಿತ್ತು.['ಗೇಮ್' ವಿಮರ್ಶೆ; ಕುಡಿದು ಗಾಡಿ ಓಡಿಸುವ ಎಲ್ರೂ ನೋಡ್ಲೇಬೇಕ್!]

    ಇನ್ನು ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಸಂದೇಶ ಸಾರುವ 'ಗೇಮ್' ಸಿನಿಮಾದ ಬಗ್ಗೆ ಕನ್ನಡ ದಿನಪತ್ರಿಕೆಯ ಖ್ಯಾತ ವಿಮರ್ಶಕರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಸರ್ಜಾರ ರಹಸ್ಯ 'ಗೇಮ್' ಚಿತ್ರದ ಸ್ಪೆಷಾಲಿಟಿ ಏನು?]

    ಬಹುಭಾಷಾ ನಟ ಅರ್ಜುನ್ ಸರ್ಜಾ, ಬಾಲಿವುಡ್ ನಟಿ ಮನೀಷಾ ಕೊಯಿರಾಲ, ಕಾಶ್ಮೀರಿ ಚೆಲುವೆ ಅಕ್ಸಾ ಭಟ್ ಹಾಗೂ ತಮಿಳು ನಟ ಶ್ಯಾಮ್ ಅಭಿನಯದ 'ಗೇಮ್' ಚಿತ್ರಕ್ಕೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

    'ಕೌತುಕದ ಕಥನ'- ಪ್ರಜಾವಾಣಿ

    'ಕೌತುಕದ ಕಥನ'- ಪ್ರಜಾವಾಣಿ

    ಕೊಲೆಯ ಪ್ರಸಂಗವನ್ನು ಪೊಲೀಸ್‌ ಅಧಿಕಾರಿಯೊಬ್ಬ ಭೇದಿಸುವ ಜಾಣ್ಮೆಯ ಕಥೆ ಎ.ಎಂ.ಆರ್. ರಮೇಶ್ ನಿರ್ದೇಶನದ ‘ಗೇಮ್' ಚಿತ್ರದ್ದು. ಅಕ್ಷಯ್ ಮತ್ತು ಮಾಯಾ ಗಂಡ-ಹೆಂಡತಿ. ವಿಮೆಯ ಹಣ, ಆಸ್ತಿಯ ಆಸೆಗಾಗಿ ಮತ್ತು ತನ್ನ ಪ್ರೇಯಸಿಯ ಜತೆ ಬದುಕುವ ಕಾರಣಕ್ಕಾಗಿ ಅಕ್ಷಯ್ ತನ್ನ ಹೆಂಡತಿಯನ್ನು ಕೊಲ್ಲುತ್ತಾನೆ. ಅದನ್ನು ಹೃದಯಾಘಾತ ಎಂದು ಬಿಂಬಿಸಲು ಅವನು ಪ್ರಯತ್ನಿಸುತ್ತಾನೆ. ಮರಣೋತ್ತರ ಪರೀಕ್ಷೆ ನಡೆಸಬೇಕು ಎನ್ನುವ ಸಂದರ್ಭದಲ್ಲಿ ಶವ ಕಾಣೆಯಾಗುತ್ತದೆ. ಇದೇ ಸಂದರ್ಭದಲ್ಲಿ ಶವಾಗಾರದ ಭದ್ರತಾ ಸಿಬ್ಬಂದಿಗೆ ಅಪಘಾತವಾಗಿ, ಆಸ್ಪತ್ರೆ ಸೇರುತ್ತಾನೆ. ಮುಂದೇನಾಗುತ್ತದೆ ಎಂಬುದೇ 'ಗೇಮ್'.[ಅರ್ಜುನ್ ಸರ್ಜಾ, ಮನಿಷಾ 'ಗೇಮ್' ಟ್ರೈಲರ್ ನೋಡಿದ್ರಾ?]

    'ನಿಧಾನಗತಿಯ ಆಟ' - ವಿಜಯ ಕರ್ನಾಟಕ

    'ನಿಧಾನಗತಿಯ ಆಟ' - ವಿಜಯ ಕರ್ನಾಟಕ

    ವಿದೇಶಿ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡಿದ ಹಲವು ನಿದರ್ಶನಗಳು ನಮ್ಮ ಮುಂದಿವೆ. ಇತರೆಡೆಯ ಕತೆಗಳನ್ನು ಇಲ್ಲಿಗೆ ಹೊಂದಿಸುವಾಗ ನಿರ್ದೇಶಕರಿಗೆ ಎದುರಾಗುವ ಮೊದಲ ಸಮಸ್ಯೆಯೇ ನೇಟಿವಿಟಿಯದ್ದು. ಎಂತಹ ವಸ್ತುವನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದರ ಮೇಲೆ ಈ ಚಿತ್ರಗಳ ಭವಿಷ್ಯ ನಿಂತಿರುತ್ತದೆ. ಸ್ಪಾನಿಷ್ ಭಾಷೆಯಲ್ಲಿ 2012ರಲ್ಲಿ ತೆರೆಕಂಡ 'ದಿ ಬಾಡಿ' ಸಿನಿಮಾದ ಪ್ರೇರಣೆಯಿಂದ ತಯಾರಾಗಿರುವ ಸಿನಿಮಾ 'ಗೇಮ್'. ಇದನ್ನು ತೆರೆಗೆ ಅಳವಡಿಸುವಲ್ಲಿ ನಿರ್ದೇಶಕ ಎ.ಎಂ.ಆರ್.ರಮೇಶ್ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗದು. ಆದರೆ ಇಂತಹ ಕಥೆಗಳನ್ನೂ ನಮಗೆ ಹೊಂದಿಸಿಕೊಳ್ಳಬಹುದು ಎನ್ನುವ ಅವರ ಪ್ರಯತ್ನಕ್ಕೆ ತಲೆದೂಗಬಹುದು. - ಶಶಿಧರ ಚಿತ್ರದುರ್ಗ.

    'ಸಸ್ಪೆನ್ಸ್ ಗೇಮ್ ನಲ್ಲಿ ಏನೂ ಥ್ರಿಲ್ಲ್ ಇಲ್ಲ' - ಕನ್ನಡ ಪ್ರಭ

    'ಸಸ್ಪೆನ್ಸ್ ಗೇಮ್ ನಲ್ಲಿ ಏನೂ ಥ್ರಿಲ್ಲ್ ಇಲ್ಲ' - ಕನ್ನಡ ಪ್ರಭ

    ಶ್ರೀಮಂತ ಕುಟುಂಬದ ಹಿನ್ನಲೆಯಲ್ಲಿ ಮಹಿಳೆಯೊಬ್ಬಳ ಕೊಲೆ ಸುತ್ತ ಹೆಣೆದ ದೃಶ್ಯರೂಪಕವೇ ಗೇಮ್. ಇಲ್ಲಿ, ಗೇಮ್ ಎನ್ನುವುದರ ಒಟ್ಟು ಅರ್ಥ ಹಳೇ ದ್ವೇಷ ತೀರಿಸಿಕೊಳ್ಳುವುದೇ ಆಗಿದೆ. ಅದರ ಜತೆಗೆ 'ಮದ್ಯಪಾನ ಮಾಡಿ, ವಾಹನ ಚಲಾಯಿಸಬೇಡಿ' ಎಂಬ ಸಾಮಾಜಿಕ ಸಂದೇಶವೂ ಇದೆ. ಹೀಗೆ ಹೇಳುವುದಕ್ಕಾಗಿ ಅವರು ಸುಮಾರು 2 ಘಂಟೆ ತೆಗೆದುಕೊಂಡಿರುವುದು ಪ್ರೇಕ್ಷಕನಿಗೆ ಮನರಂಜನೆಗಿಂತ ನಿರಾಶೆ ಹುಟ್ಟಿಸುವುದೇ ಹೆಚ್ಚು.- ದೇಶಾದ್ರಿ ಹೊಸ್ಮನೆ.

    'ಸಾವಿನ ಮನೆಯಲ್ಲಿ ಸೇಡಿನ 'ಗೇಮ್' - ವಿಜಯವಾಣಿ

    'ಸಾವಿನ ಮನೆಯಲ್ಲಿ ಸೇಡಿನ 'ಗೇಮ್' - ವಿಜಯವಾಣಿ

    ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ.. ವಾಹನ ಓಡಿಸಿ ಅಪಘಾತ ಮಾಡಬೇಡಿ.. ಅಪಘಾತ ಮಾಡಿದರೆ ಗಾಯಾಳುಗಳ ಸಹಾಯಕ್ಕೆ ನಿಲ್ಲದೆ ಹೋಗಬೇಡಿ.. ಈ ಸಂದೇಶಕ್ಕೆ ಹಾರರ್ ಹಾಗೂ ಸಸ್ಪೆನ್ಸ್ ಸ್ಪರ್ಶ ಕೊಟ್ಟು 'ಆಟ' ಮುಗಿಸಿದ್ದಾರೆ ನಿರ್ದೇಶಕ ಎ.ಎಂ.ಆರ್ ರಮೇಶ್. ಪ್ರೇಯಸಿಗಾಗಿ ಅಲ್ಲಲ್ಲ, ಆಸ್ತಿಗಾಗಿ ಹೆಂಡತಿಯನ್ನು 'ಬಿಎಲ್18' ಎಂಬ ವಿಷಪ್ರಾಶನ ಮೂಲಕ ಕೊಲ್ಲುತ್ತಾನೆ ಅಕ್ಷಯ್. 8 ತಾಸಿನ ಬಳಿಕ ಹೃದಯಾಘಾತಕ್ಕೆ ತುತ್ತಾಗಿ ಸಾಯುವ 'ಬಿಎಲ್18' ಅನ್ನು 'ವೈನ್' ಆಗಿಯೇ ಸೇವಿಸಿ ಕೊಲೆಯಾಗುವ ಮಾಯಾ ಹೆಣ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ರಾತ್ರೋ ರಾತ್ರಿ ಮಾಯ. ಯಾರು ಕಳವು ಮಾಡಿದರು?ಯಾಕೆ ಮಾಡಿದರು? ಎನ್ನುವುದು ಕಥಾಕೌತುಕ.

    'A BODY OF EVIDENCE' - Bangloremirrir.com

    'A BODY OF EVIDENCE' - Bangloremirrir.com

    Director AMR Ramesh, who excels in making films on sensational real-life subjects, has taken to remaking a Spanish film this time. Game is Kannada's El Cuerop (The Body). However, the film is a fast-paced thriller that has its moments. The original film was worth copying. Ramesh does not deviate much from the original and even translates some of the dialogues. By Shyam Prasad S.

    English summary
    Kannada Movie 'Game' Critics Review. Kannada Actor Arjun Sarja, Actress Manisha Koirala, Tamil Actor Shyam, starrer 'Game' has received mixed response from the critics. here is the collection of reviews by Top News Papers of Karnataka. The movie is directed by 'Attahasa' fame Director A.M.R Ramesh.
    Saturday, February 27, 2016, 13:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X