»   » ಟ್ವಿಟ್ಟರ್ ವಿಮರ್ಶೆ: 'ಜಾಗ್ವಾರ್' ಝಗಮಗ ಬಲು ಜೋರು ಗುರು.!

ಟ್ವಿಟ್ಟರ್ ವಿಮರ್ಶೆ: 'ಜಾಗ್ವಾರ್' ಝಗಮಗ ಬಲು ಜೋರು ಗುರು.!

Posted by:
Subscribe to Filmibeat Kannada

ಅಂತೂ ಸ್ಯಾಂಡಲ್ ವುಡ್ ಬೆಳ್ಳಿಪರದೆ ಮೇಲೆ ಇಂದು ಹೊಸ 'ತಾರೆ' ಉಗಮವಾಗಿದೆ. ರಾಜಕೀಯ ರಂಗದಲ್ಲಿ ಹೆಸರು ಮಾಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಇಂದು (ಅಕ್ಟೋಬರ್ 6) ಬೆಳ್ಳಿತೆರೆ ಮೇಲೆ ಮಿಂಚಲಾರಂಭಿಸಿದ್ದಾರೆ.

ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತೆರೆಕಂಡಿರುವ 'ಜಾಗ್ವಾರ್' ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಸಿಲ್ವರ್ ಸ್ಕ್ರೀನ್ ಮೇಲೆ ನಿಖಿಲ್ ಕುಮಾರ್ ಪ್ರತಿಭೆ ಕಂಡು ಪ್ರೇಕ್ಷಕರು ನಿಬ್ಬೆರಗಾಗಿದ್ದಾರೆ. ಡ್ಯಾನ್ಸ್ ಮತ್ತು ಫೈಟ್ಸ್ ನಲ್ಲಿ ನಿಖಿಲ್ 'ಸ್ಟನ್ನಿಂಗ್' ಅಂತಿದ್ದಾರೆ ಅಭಿಮಾನಿಗಳು.


'ಜಾಗ್ವಾರ್' ಚಿತ್ರವನ್ನ ಕಣ್ತುಂಬಿಕೊಂಡಿರುವ ಸಿನಿ ಪ್ರಿಯರು ಟ್ವಿಟ್ಟರ್ ನಲ್ಲಿ ನೀಡಿರುವ ವಿಮರ್ಶೆಗಳತ್ತ ಒಮ್ಮೆ ಕಣ್ಣಾಡಿಸೋಣ ಬನ್ನಿ.....


ಪರ್ಫೆಕ್ಟ್ ಡೆಬ್ಯೂ

ಪರ್ಫೆಕ್ಟ್ ಡೆಬ್ಯೂ

'ಜಾಗ್ವಾರ್' ಚಿತ್ರ ನಿಖಿಲ್ ಕುಮಾರ್ ಗೆ ಪರ್ಫೆಕ್ಟ್ ಡೆಬ್ಯೂ ಎಂಬುದು ಕೆಲವರ ಅಭಿಪ್ರಾಯ.


ಸೂಪರ್

ಸೂಪರ್

''ನಿಖಿಲ್ ಕುಮಾರ್ ಡೆಬ್ಯೂ ಮಸ್ತ್ ಆಗಿದೆ. ಆಕ್ಷನ್ ಸೀಕ್ವೆನ್ಸ್ ಮೈನವಿರೇಳಿಸುತ್ತದೆ. ಸೆಕೆಂಡ್ ಹಾಫ್ ಸೂಪರ್. ಕಾಮಿಡಿ ಚೆನ್ನಾಗಿದೆ. ಸಾಧು ರಾಕ್ಸ್'' - ನಿಖಿಲ್ ರೆಡ್ಡಿ


ಝಬರ್ ದಸ್ತ್ ಕ್ಲೈಮ್ಯಾಕ್ಸ್

ಝಬರ್ ದಸ್ತ್ ಕ್ಲೈಮ್ಯಾಕ್ಸ್

''ನಿಖಿಲ್ ಕುಮಾರ್ ಡೆಬ್ಯೂಗೆ ಪರ್ಫೆಕ್ಟ್ ಸಿನಿಮಾ. ಝಬರ್ ದಸ್ತ್ ಕ್ಲೈಮ್ಯಾಕ್ಸ್. ಸಿನಿಮಾ ಖಂಡಿತ ಗೆಲ್ಲುತ್ತದೆ. ಉತ್ತಮ ಕಥೆ ಇರುವ ಕಮರ್ಶಿಯಲ್ ಎಂಟರ್ ಟೇನರ್. 4/5'' - ಸಿನಿಲೋಕ


ಫಸ್ಟ್ ಹಾಫ್ ಓಕೆ

ಫಸ್ಟ್ ಹಾಫ್ ಓಕೆ

'ಇಂಟರ್ವಲ್ ವರೆಗೂ ಜಸ್ಟ್ ಓಕೆ'' - ಶ್ಯಾಮ್ ಪ್ರಸಾದ್


ತೆಲುಗು ರೆಸ್ಪಾನ್ಸ್ ಹೇಗಿದೆ?

ತೆಲುಗು ರೆಸ್ಪಾನ್ಸ್ ಹೇಗಿದೆ?

''ತುಂಬಾ ಗ್ರ್ಯಾಂಡ್ ಸಿನಿಮಾ. ನಿಖಿಲ್ ಗೌಡ ಪರ್ಫಾಮೆನ್ಸ್ ಸೂಪರ್. ಆಗಾಗ ಕೊಂಚ ಸ್ಲೋ ಅಂತ ಅನಿಸಿದರೂ, ಕನ್ನಡದಲ್ಲಿ ಸದ್ದು ಮಾಡುವುದು ಪಕ್ಕಾ'' ಅಂತ ತೆಲುಗು ವೆಬ್ ತಾಣಗಳು ವಿಮರ್ಶೆ ಮಾಡಿದೆ.


ಕಾವೇರಿ ಥಿಯೇಟರ್ ನಲ್ಲಿ ಟಿಕೆಟ್ ಸೋಲ್ಡ್ ಔಟ್

ಕಾವೇರಿ ಥಿಯೇಟರ್ ನಲ್ಲಿ ಟಿಕೆಟ್ ಸೋಲ್ಡ್ ಔಟ್

ಬೆಂಗಳೂರಿನ ಕಾವೇರಿ ಥಿಯೇಟರ್ ನಲ್ಲಿ ಇವತ್ತು ಮತ್ತು ನಾಳಿನ ಎಲ್ಲಾ ಶೋಗಳ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ.


ಆನೇಕಲ್ ನಲ್ಲಿ ಲಡ್ಡು ವಿತರಣೆ

ಆನೇಕಲ್ ನಲ್ಲಿ ಲಡ್ಡು ವಿತರಣೆ

ಆನೇಕಲ್ ನಲ್ಲೂ ಕೂಡ 'ಜಾಗ್ವಾರ್' ಟಿಕೆಟ್ ಸೋಲ್ಡ್ ಔಟ್ ಆಗಿವೆ. 'ಲಕ್ಷ್ಮಿ ನರಸಿಂಹ' ಚಿತ್ರಮಂದಿರದಲ್ಲಿ ಜೆ.ಡಿ.ಎಸ್ ನಾಯಕ ಗೊಟ್ಟಿಗೆರೆ ಮಂಜಣ್ಣನ ಅಭಿಮಾನಿಗಳಿಂದ 10,000 ಲಾಡುಗಳನ್ನ ವಿತರಣೆ ಮಾಡಲಾಗುತ್ತಿದೆ.


ಪುತ್ರನ ಜೊತೆ ಸಿನಿಮಾ ನೋಡಿದ ಎಚ್.ಡಿ.ಕೆ

ಪುತ್ರನ ಜೊತೆ ಸಿನಿಮಾ ನೋಡಿದ ಎಚ್.ಡಿ.ಕೆ

ಇಂದು 'ಜಾಗ್ವಾರ್' ಚಿತ್ರದ ಮೊದಲ ಶೋನ ಮಗ ನಿಖಿಲ್ ಜೊತೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಎಚ್.ಡಿ.ಕುಮಾರಸ್ವಾಮಿ ವೀಕ್ಷಿಸಿದರು.


ನಿಮ್ಮ ವಿಮರ್ಶೆ ನಮಗೆ ತಿಳಿಸಿ...

ನಿಮ್ಮ ವಿಮರ್ಶೆ ನಮಗೆ ತಿಳಿಸಿ...

'ಜಾಗ್ವಾರ್' ಚಿತ್ರವನ್ನ ನೀವು ನೋಡಿದ್ರೆ, ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....


English summary
Nikhil Kumar starrer Kannada Movie 'Jaguar' has hit the screens today (October 6th). 'Jaguar' is receiving positive response in twitter.
Please Wait while comments are loading...

Kannada Photos

Go to : More Photos