twitter
    For Quick Alerts
    ALLOW NOTIFICATIONS  
    For Daily Alerts

    'ಜಿಗರ್ ಥಂಡ' ನೋಡಿ ಚಿಲ್ ಆದ್ರಾ ವಿಮರ್ಶಕರು.?

    By Suneetha
    |

    ತಮಿಳು ಚಿತ್ರದವನ್ನು ಅದೇ ಹೆಸರಿನ ಸಮೇತ ಕನ್ನಡಕ್ಕೆ ರೀಮೇಕ್ ಮಾಡಿರುವ ನಿರ್ದೇಶಕರು ಗೆದ್ದಿದ್ದಾರೆ. ರವಿಶಂಕರ್ ಅವರ ಖಡಕ್ ನಟನೆ ಮತ್ತು ರಾಹುಲ್ ನ ಮುಗ್ದತೆ ಪ್ರೇಕ್ಷಕರು ಸೇರಿದಂತೆ ವಿಮರ್ಶಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ.

    ಕಿಚ್ಚ ಕ್ರಿಯೇಷನ್ಸ್ ಮೂಡಿಬಂದಿದ್ದ 'ಜಿಗರ್ ಥಂಡ' ಸಿನಿಮಾ ನಿನ್ನೆ (ಜೂನ್ 24) ಇಡೀ ಕರ್ನಾಟಕದಾದ್ಯಂತ ತೆರೆ ಕಂಡಿದ್ದು, ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ರವಿಶಂಕರ್, ['ಜಿಗರ್ ಥಂಡ' ರಿಯಲ್ ಹೀರೋ ಆರ್ಮುಗಂ ರವಿಶಂಕರ್ ಸಂದರ್ಶನ] ರಾಹುಲ್ ಮತ್ತು ಸಂಯುಕ್ತಾ ಬೆಳವಾಡಿ ಮುಖ್ಯ ಭೂಮಿಕೆಯಲ್ಲಿ ಮಿಂಚಿ ಎಲ್ಲರನ್ನು ರಂಜಿಸಿದ್ದರು.

    ಕೋಲ್ಡ್ ಬ್ಲಡೆಡ್ ಮರ್ಡರರ್ ಒಬ್ಬನ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೋಗಿ ನಾಯಕ ಯಾವ ರೀತಿಯ ಫಜೀತಿಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ ಎಂಬುದನ್ನು ಈ ಚಿತ್ರದ ಮೂಲಕ ರಸವತ್ತಾಗಿ ಬಣ್ಣಿಸಲಾಗಿತ್ತು.['ಜಿಗರ್ ಥಂಡ' ವಿಮರ್ಶೆ: ಆರ್ಮುಗಂಗೇ 'ಆಪ್' ಇಟ್ಟ ರಾಹುಲ್]

    ಶಿವ ಗಣೇಶ್ ನಿರ್ದೇಶನದ 'ಜಿಗರ್ ಥಂಡ' ಚಿತ್ರಕ್ಕೆ ಖ್ಯಾತ ವಿಮರ್ಶಕರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿಮರ್ಶಕರ ವಿಮರ್ಶೆಯ ಕಲೆಕ್ಷನ್ಸ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ....

    'ಕಲರ್ ಫುಲ್ ಮನರಂಜನೆ' - ಪ್ರಜಾವಾಣಿ

    'ಕಲರ್ ಫುಲ್ ಮನರಂಜನೆ' - ಪ್ರಜಾವಾಣಿ

    ಹೆಸರಾಂತ ನಿರ್ಮಾಪಕನ ಹತ್ತಿರ ಹೊಸ ನಿರ್ದೇಶಕನೊಬ್ಬ ಅವಕಾಶ ಕೇಳಿಕೊಂಡು ಬರುತ್ತಾನೆ. ಅವನ ಕಥೆಯನ್ನು ಕೇಳಿ ರೋಸಿದ ನಿರ್ಮಾಪಕ, ಒಳ್ಳೆಯ ರೌಡಿಸಂ ಕಥೆ ಮಾಡಿಕೊಂಡು ಬಾ ಎಂದು ಒಂದಷ್ಟು ಸೀಡಿಗಳನ್ನು ಕೊಡುತ್ತಾನೆ. ಆ ಸೀಡಿಯಲ್ಲಿನ ಸಿನಿಮಾಗಳನ್ನು ನೋಡಿಕೊಂಡು, ಇರುವುದನ್ನೇ ತಿರುಗಾ ಮುರುಗ ಮಾಡಿ ಹೊಸತೊಂದು ಕಥೆಯನ್ನು ಮಾಡಿಕೊಂಡು ಬರಬೇಕು ಎಂಬುದು ನಿರ್ಮಾಪಕನ ನಿರೀಕ್ಷೆ. ಇದು ಚಿತ್ರದ ಆರಂಭದಲ್ಲಿನ ಒಂದು ದೃಶ್ಯ. ನಿರ್ದೇಶಕ ಶಿವಗಣೇಶ್ ಕೂಡ ಇದೇ ರೀತಿ ಮಾಡಿದ್ದಾರೆ. ಆದರೆ ಅವರು ತಿರುಗಾ ಮುರುಗ ಮಾಡುವ ಶ್ರಮವನ್ನೇನೂ ತೆಗೆದುಕೊಂಡಿಲ್ಲ. ತಮಿಳಿನ ‘ಜಿಗರ್ ಥಂಡ' ಚಿತ್ರವನ್ನು ಶೀರ್ಷಿಕೆ ಸಮೇತ ಕನ್ನಡಕ್ಕೆ ತಂದಿದ್ದಾರೆ. ಫ್ರೇಂ ಟು ಫ್ರೇಂ. - ಗಣೇಶ ವೈದ್ಯ.[ಕಿಚ್ಚನ ಕೋಟೆಯಿಂದ ಹೊರ ಬರ್ತಿದೆ ಜಿಲ್ ಜಿಲ್ 'ಜಿಗರ್ ಥಂಡ']

    'ಕುತೂಹಲಕಾರಿ ಕತೆ' - ವಿಜಯ ಕರ್ನಾಟಕ

    'ಕುತೂಹಲಕಾರಿ ಕತೆ' - ವಿಜಯ ಕರ್ನಾಟಕ

    ಮಧುರೈನ ಹುಸೈನ್ ಸ್ಟಾಲ್‌ನಲ್ಲಿ ಸಿಗುವ ಜಿಲ್ ಜಿಲ್ ಜಿಗರ್ ಥಂಡಾ ಎನ್ನುವ ಸ್ಪೆಷಲ್ ಡ್ರಿಂಕ್ಸ್ ತಮಿಳುನಾಡಿನಲ್ಲಿ ಜನಪ್ರಿಯ. ಕೋಲ್ಡ್ ಮತ್ತು ಹಾಟ್ ಎರಡರ ಸಮ್ಮಿಶ್ರವಿದು. ಇದೇ ಹೆಸರಿನ ತಮಿಳು ಚಿತ್ರದ ರಿಮೇಕ್ ಕನ್ನಡದ ಜಿಗರ್ ಥಂಡ. ಬಿಸಿ ಮತ್ತು ತಣ್ಣನೆಯ ಪೇಯದಂತೆಯೇ ರೌಡಿಸಂ ಮತ್ತು ಕಾಮಿಡಿ ಎರಡರ ಸಮ್ಮಿಶ್ರಣವಾಗಿ ಎಲ್ಲೂ ಬೋರಾಗದಂತೆ ಮನರಂಜಿಸುವಲ್ಲಿ ಗೆದ್ದಿದೆ. ನಾಯಕ ನಟ ರಾಹುಲ್‌ಗೆ ಬ್ರೇಕ್ ಕೊಡಬಹುದಾದ ಮತ್ತೂ ಖಳನಟ ರವಿಶಂಕರ್ ಚಿತ್ರಬದುಕಿನಲ್ಲಿ ಅಪರೂಪ ಎನ್ನಬಹುದಾದ ಚಿತ್ರವಿದು. - ಪದ್ಮಾ ಶಿವಮೊಗ್ಗ

    'ಆರ್ಮುಗನ ಜಿಗರ್ ಮುಂದೆ ಎಲ್ಲವೂ ಥಂಡ!' - ವಿಜಯವಾಣಿ

    'ಆರ್ಮುಗನ ಜಿಗರ್ ಮುಂದೆ ಎಲ್ಲವೂ ಥಂಡ!' - ವಿಜಯವಾಣಿ

    ಟೈಟಲ್​ಅನ್ನೂ ಬದಲಿಸದೆ ತಮಿಳಿನ ‘ಜಿಗರ್​ಥಂಡ'ವನ್ನು ಕನ್ನಡದಲ್ಲಿ ರಿಮೇಕ್ ಮಾಡಲಾಗಿದೆ. ಮೂಲ ಚಿತ್ರ ನೋಡಿರಲಿ, ನೋಡದೆ ಇರಲಿ ಕನ್ನಡದ ‘ಜಿಗರ್​ಥಂಡ' ವ್ಹಾವ್ ಎನಿಸುತ್ತದೆ. ನಿರ್ವಪಕರು ಮೇಕಿಂಗ್​ನಲ್ಲಿ ಕಾಂಪ್ರಮೈಸ್ ಆಗಿಲ್ಲ. ಬೋರ್ ಹೊಡಿಸದೆ ನೋಡಿಸಿಕೊಂಡು ಹೋಗುವಲ್ಲಿ ನಿರ್ದೇಶಕ ಶಿವಗಣೇಶ್ ಕುಶಲತೆ ಮೆರೆದಿದ್ದಾರೆ. ಸಿನಿಮಾ ಸಂಪೂರ್ಣವಾಗಿ ಆರ್ಮುಗಮಯವಾಗಿದೆ. ರವಿಶಂಕರ್ ಅಷ್ಟರಮಟ್ಟಿಗೆ ಆವರಿಸಿಕೊಂಡಿದ್ದಾರೆ. ಚಿಕ್ಕಣ್ಣ ಮತ್ತು ಸಾಧು ಕೋಕಿಲ ಕಾಮಿಡಿ ಮತ್ತೊಮ್ಮೆ ಕಚಗುಳಿ ಇಟ್ಟಿದ್ದಾರೆ. ರಾಹುಲ್ ನಾಯಕನಾಗಿದ್ದರೂ ರವಿಶಂಕರ್ ಮುಂದೆ ಕೊಂಚ ಮಂಕು. ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಇಷ್ಟವಾಗುತ್ತವೆ. ಜೈ ಆನಂದ್ ಕ್ಯಾಮರಾ ಕೈಚಳಕ ಚಿತ್ರಕ್ಕೆ ಪೂರಕವಾಗಿದೆ.

    'ಕ್ರೌರ್ಯಕ್ಕೆ ಕಾಮಿಡಿಯೇ ಟಾನಿಕ್' - ಕನ್ನಡ ಪ್ರಭ

    'ಕ್ರೌರ್ಯಕ್ಕೆ ಕಾಮಿಡಿಯೇ ಟಾನಿಕ್' - ಕನ್ನಡ ಪ್ರಭ

    ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಯಾರೆಂದು ಗೊತ್ತಾದ ಮೇಲೆ ಈ ಸಿನಿಮಾ ಹೀಗೆ ಇರುತ್ತದೆ' ಎನ್ನುವ ಪೂರ್ವ ಕಲ್ಪನೆಯೊಂದಿಗೆ ಚಿತ್ರಮಂದಿರ ಹೊಕ್ಕ ಪ್ರೇಕ್ಷಕನ ಕಲ್ಪನೆಯನ್ನು ತಿರುಗಮುರುಗ ಮಾಡಿ ಅಚ್ಚರಿ ಮೂಡಿಸುವುದು ಕೂಡ ನಿರ್ದೇಶಕನ ಜಾಣ್ಮೆಗಳಲ್ಲಿ ಒಂದು. ಹೀಗಾಗಿ ನೋಡುಗ ಅಂದುಕೊಂಡಿದ್ದನ್ನೇ ತೆರೆ ಮೇಲೆ ತಂದರೆ ಅದರಲ್ಲೇನು ಮಜಾ ಎನ್ನುವ ನಿರ್ದೇಶಕರ ಬುದ್ಧಿವಂತಿಕೆಯಿಂದಲೇ ವಿಲನ್ ಕಾಮಿಡಿಯನ್ ಆಗಿ, ಕಾಮಿಡಿಯನ್ ಹೀರೋ ಆಗಿ, ಸ್ಟಾರ್ ಹೀರೋ ಕಾಮನ್ ಕ್ಯಾರೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡು ನೋಡುಗನಿಗೆ ಶಾಕ್ ಕೊಡುತ್ತಾರೆ. ಒಂದು ಸಿನಿಮಾ ಹೀಗೆ ಅಚ್ಚರಿ ತಿರುವುಗಳನ್ನು ಒಳಗೊಂಡಿದ್ದರೆ ಖಂಡಿತ, ಆ ಚಿತ್ರದಲ್ಲೊಂದು ಧಮ್ ಇರುತ್ತದೆಂದೇ ಅರ್ಥ. ಹಾಗೆ ಧಮ್ ಇರುವ ಮತ್ತು ನೋಡಿಸಿಕೊಂಡು ಹೋಗುವ ಲಕ್ಷಣ 'ಜಿಗರ್ ಥಂಡ' ಚಿತ್ರಕ್ಕಿದೆ. -ಆರ್ ಕೇಶವಮೂರ್ತಿ.

    'ಆರ್ಮುಗಂ ಕೋಟೆಯಲ್ಲಿ ಆಕ್ಷನ್ ಕಟ್ ಸಡಗರ' - ಉದಯವಾಣಿ

    'ಆರ್ಮುಗಂ ಕೋಟೆಯಲ್ಲಿ ಆಕ್ಷನ್ ಕಟ್ ಸಡಗರ' - ಉದಯವಾಣಿ

    ನಗುನಗುತ್ತಾ ಸಾಯಬಹುದಾ? ಅಸಾಲ್ಟ್ ಆರ್ಮುಗಂ ಎಂಬ ಮಹಾನ್ ರೌಡಿಯ ನಟನೆಯನ್ನು ನೋಡಿ ಜನ ನಕ್ಕು ನಕ್ಕು ಸಾಯುತ್ತಾರೆ. ಜನ ನಗುತ್ತಿದ್ದಂತೆ ಆತನೊಳಗೆ ರೌಡಿಯೂ ಸಾಯುತ್ತಾ ಹೋಗುತ್ತಾನೆ. ರೌಡಿಯನ್ನು ಸಾಯಿಸಿದ ಕಲೆಗಾರನೊಬ್ಬ ಮತ್ತೊಂದು ಜಗತ್ತಿಗೆ ಪ್ರಮೋಷನ್ ಪಡಕೊಂಡು ಇನ್ನೇನೋ ಆಗುತ್ತಾನೆ. ಹೀಗೆ ತುಂಬಾ ಸಂಕೀರ್ಣವಾದ ಕತೆಯೊಂದನ್ನು ತಮಾಷೆಯಾಗಿಯೂ ಗಂಭೀರವಾಗಿಯೂ ಹೇಳುವ ಪ್ರಯತ್ನವೇ 'ಜಿಗರ್ ಥಂಡ'. ಇನ್ನೂ ಕನ್ನಡವೇ ನಮ್ಮುಸಿರು ಎಂದು ಭಾವಿಸುವ ಅಚ್ಚ ಕನ್ನಡಿಗರು 'ಜಿಗರ್ ಥಂಡ' ಅಂದರೆ ಪಾಷಾಣಹೃದಯ ಅಂತ ಅರ್ಥಮಾಡಿಕೊಳ್ಳಬಹುದು. - ಜೋಗಿ.

    'It Is Armuga's show all the way' - Bangalore Mirror

    'It Is Armuga's show all the way' - Bangalore Mirror

    Want some entertainment? Try Jigarthanda. The drink may not be popular in Kar-nataka, but the Kannada remake of the Tamil film by the same name is some solace. With enough twists and turns and a comical take on the film industry and lives of gangsters, it is bang for the buck. Ravi Shankar has a befitting 50th film. Make no mistake, he is the star of the show. Shyam Prasad S.

    English summary
    Kannada Movie 'Jigarthanda' Critics Review. Kannada Actor P. Ravi Shankar, Kannada Actor Rahul, Kannada Actress Samyukta Belavadi starrer 'Jigarthanda' has received mixed response from the critics. Here is the collection of reviews by Top News Papers of Karnataka. The movie is directed by Shiva Ganesh.
    Saturday, June 25, 2016, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X