twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: 'ಕಹಿ' ಅನುಭವ, ಉಪ್ಪು-ಹುಳಿ-ಖಾರದ ಅಭಾವ

    |

    'ಹುಟ್ಟು ಮತ್ತು ಸಾವು ಮಧ್ಯೆ ನಡೆಯುವುದು ನಾಟಕ'

    'ಬೇಡದೇ ಇರುವ ಘಟನೆಗಳಿಂದ ಬೇಕಾಗಿರುವುದು ಹುಟ್ಟಿದರೆ..!?'

    ಈ ಎರಡು ಮಾತುಗಳ ಮಧ್ಯೆ ನಡೆಯುವ 'ಕಹಿ' ಘಟನೆಗಳೇ 'ಕಹಿ' ಚಿತ್ರದ ಹೂರಣ. ಆ ಮೂಲಕ ಮನುಷ್ಯನೊಳಗಿನ 'ಕಹಿ' ಗುಣಗಳನ್ನು ತೋರಿಸಲಷ್ಟೇ 'ಕಹಿ' ಸಿನಿಮಾ ಸೀಮಿತ.

    Rating:
    3.0/5
    Star Cast: ಹರಿಶರ್ವ, ಸೂರಜ್ ಗೌಡ, ಕೃಷಿ ತಾಪಂಡಾ, ಮಾತಂಗಿ ಪ್ರಸನ್, ರಮೇಶ್ ಭಟ್
    Director: ಅರವಿಂದ್ ಸಸ್ತ್ರಿ

    'ಕಹಿ' ಕಥಾಹಂದರ

    'ಕಹಿ' ಕಥಾಹಂದರ

    ಅತ್ತ ಮದುವೆ ಆಗಿ ಮೂರು ವರ್ಷಗಳು ಉರುಳಿದ್ದರೂ 'ಮಗು' ಆಗಿಲ್ಲ ಎಂಬ ಚಿಂತೆ ಅಖಿಲಾಗೆ (ಕೃಷಿ ತಾಪಂಡ). ಇತ್ತ ಮುಂಬೈಗೆ ಹೋಗಿ ನೃತ್ಯದಲ್ಲಿ ಏಳಿಗೆ ಸಾಧಿಸುವ ಬಯಕೆ ವಿದ್ಯಾಗೆ (ಮಾತಂಗಿ ಪ್ರಸನ್). ಇಬ್ಬರ ಆಸೆ ಈಡೇರುವುದರ ನಡುವೆ ನಡೆಯುವ 'ಕಹಿ' ಘಟನೆಗಳ ಗುಚ್ಛವೇ 'ಕಹಿ'.

    ಕರಾಳ ಬೆಂಗಳೂರು

    ಕರಾಳ ಬೆಂಗಳೂರು

    ಕತ್ತಲ ರಾತ್ರಿಯಲ್ಲಿ ನಡೆಯುವ ಡ್ರಗ್ಸ್ ದಂಧೆ, ಅಮಾಯಕ ಹೆಣ್ಮಕ್ಕಳ ಮೇಲಾಗುವ ಅತ್ಯಾಚಾರ, ಕೊಲೆ ಸೇರಿದಂತೆ 'ಕಹಿ' ಚಿತ್ರದಲ್ಲಿ ಬೆಂಗಳೂರಿನ ಕರಾಳ ಮುಖವನ್ನೂ ಅನಾವರಣ ಮಾಡಲಾಗಿದೆ.

    ಸೂರಜ್ ಗೌಡ ಅಭಿನಯ

    ಸೂರಜ್ ಗೌಡ ಅಭಿನಯ

    'ಮದುವೆಯ ಮಮತೆಯ ಕರೆಯೋಲೆ' ಚಿತ್ರದಲ್ಲಿ ಚಾಕಲೇಟ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಸೂರಜ್ ಗೌಡ, 'ಕಹಿ' ಚಿತ್ರದಲ್ಲಿ 'ವಿಕೃತ ಕಾಮಿ'.! ನೆಗೆಟಿವ್ ಶೇಡ್ ನಲ್ಲಿ ಸೂರಜ್ ಗೌಡ ಪರ್ಫಾಮೆನ್ಸ್ ಗೆ ಫುಲ್ ಮಾರ್ಕ್ಸ್ ನೀಡಬಹುದು.

    ಹೊಸಬರ ಪರ್ಫಾಮೆನ್ಸ್ ಹೇಗಿದೆ?

    ಹೊಸಬರ ಪರ್ಫಾಮೆನ್ಸ್ ಹೇಗಿದೆ?

    ಮಾತಂಗಿ ಪ್ರಸನ್, ಹರಿಶರ್ವ, ಕೃಷಿ ತಾಪಂಡ ಸೇರಿದಂತೆ 'ಕಹಿ' ಚಿತ್ರದಲ್ಲಿ ಹೊಸಬರದ್ದೇ ರಾಜ್ಯಭಾರ. ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

    ನೈಜವಾಗಿದೆ 'ಮೇಕಿಂಗ್'

    ನೈಜವಾಗಿದೆ 'ಮೇಕಿಂಗ್'

    'ಕಹಿ' ಚಿತ್ರದ ಮೇಕಿಂಗ್ ಸ್ಟೈಲ್ ತುಂಬಾ ನೈಜವಾಗಿದೆ. ಸಿನಿಮಾ ಎಂದ ಮಾತ್ರಕ್ಕೆ ನಟರಿಗೆ ಇಲ್ಲಿ 'ಮೇಕಪ್' ಮಾಡಿಲ್ಲ. ಅದ್ಧೂರಿ ಕಾಸ್ಟ್ಯೂಮ್ಸ್ ಇಲ್ಲ. ಭರ್ಜರಿ ಸೆಟ್ ಹಾಕಿಲ್ಲ. ಡ್ಯಾನ್ಸ್ ಮತ್ತು ಫೈಟ್ ಅಂತೂ ಇಲ್ಲವೇ ಇಲ್ಲ. ಇಲ್ಲೇ...ನಮ್ಮ ಪಕ್ಕದಲ್ಲೇ ಘಟನೆಗಳು ನಡೆಯುತ್ತಿವೆ ಎಂಬ ಫೀಲ್ ನೊಂದಿಗೆ 'ಕಹಿ' ಬೆಂಗಳೂರಿನಲ್ಲೇ ಚಿತ್ರೀಕರಣಗೊಂಡಿದೆ.

    ಟೆಕ್ನಿಕಲಿ ಸಿನಿಮಾ ಹೇಗಿದೆ?

    ಟೆಕ್ನಿಕಲಿ ಸಿನಿಮಾ ಹೇಗಿದೆ?

    ಹೊನಲು-ಬೆಳಕಿನ ಆಟದಲ್ಲಿ ಕ್ಯಾಮರಾ ವರ್ಕ್ ಚೆನ್ನಾಗಿದೆ. ನಾಲ್ವರ ವಿವಿಧ ಕಥೆಯನ್ನು ಒಟ್ಟಾಗಿ ಸೇರಿಸುವ ಸಂಕಲನದಲ್ಲಿ ಜಾಣ್ಮೆ ಇದೆ. ಬ್ಯಾಕ್ ಗ್ರೌಂಡ್ ಸ್ಕೋರ್ ಕಥೆಗೆ ಪೂರಕ ಹಾಗೂ ಕಠೋರ.

    ನುಂಗಲಾರದ 'ಕಹಿ' ಅನುಭವ

    ನುಂಗಲಾರದ 'ಕಹಿ' ಅನುಭವ

    ಮಗು ಬೇಕು ಅಂತ ಬಯಸುವ ಮದುವೆ ಆಗಿರುವ ಹೆಣ್ಣು ಅತ್ಯಾಚಾರಕ್ಕೆ ಒಳಗಾಗಿ, ಗರ್ಭಿಣಿ ಆಗಿ, ಕಡೆಗೆ ಆಕೆಯ ಬಾಯಲ್ಲೇ 'ಬೇಡದೇ ಇರುವ ಘಟನೆಗಳಿಂದ ಬೇಕಾಗಿರುವುದು ಹುಟ್ಟಿದರೆ..!?' ಎಂಬ ಮಾತು ಹೇಳಿಸಿರುವುದು ಹೆಂಗಸರಿಗಂತೂ ನುಂಗಲಾರದ, ಅರಗಿಸಿಕೊಳ್ಳಲೂ ಆಗದ 'ಕಹಿ' ಅನುಭವ.!

    ಫೈನಲ್ ಸ್ಟೇಟ್ ಮೆಂಟ್

    ಫೈನಲ್ ಸ್ಟೇಟ್ ಮೆಂಟ್

    ಚಿತ್ರದಲ್ಲಿ ಹೊಸಬರ ಜೊತೆಗೆ ಹೊಸತನ ಇದೆ. ಹೊಸ ಪ್ರಯತ್ನ ಹಾಗೂ ಹೊಸ ಪ್ರಯೋಗ ಕೂಡ ಇದೆ. 'ಕಹಿ' ಸಿನಿಮಾ 'ಕ್ಲಾಸ್' ಆಡಿಯನ್ಸ್ ಗೆ ಹೇಳಿಮಾಡಿಸಿದ್ದು. ಮಸಾಲೆ ಸಿನಿಮಾಗಳಲ್ಲಿ ಇರುವಂತೆ ಇಲ್ಲಿ 'ಉಪ್ಪು, ಹುಳಿ, ಖಾರ' ಇಲ್ಲ. ಬರೀ 'ಕಹಿ' ಮಾತ್ರ. ಹೀಗಾಗಿ, ಈ ಚಿತ್ರ 'ಮಾಸ್' ಅಭಿಮಾನಿಗಳಿಗಲ್ಲ!

    English summary
    Kannada Movie 'Kahi' has hit the screens today (November 4th). 'Kahi' is about a series of events that unfold Modern Day Bengaluru, which is worth watch for Class Audience.
    Wednesday, September 26, 2018, 22:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X