twitter
    For Quick Alerts
    ALLOW NOTIFICATIONS  
    For Daily Alerts

    'ಕರ್ವ' ಮರ್ಮ ಕಂಡು ಕನ್ನಡ ಸಿನಿ ವಿಮರ್ಶಕರು ಬೆಚ್ಚಿಬಿದ್ರಾ.?

    By Harshitha
    |

    ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಡೈನಾಮಿಕ್ ಸ್ಟಾರ್ ದೇವರಾಜ್, ತಿಲಕ್, ಆರ್ ಜೆ ರೋಹಿತ್ ಅಭಿನಯಿಸಿರುವ 'ಕರ್ವ' ಸಿನಿಮಾ ತೆರೆಕಂಡಿದೆ.

    ಥಿಯೇಟರ್ ನಲ್ಲಿ 'ಕರ್ವ' ಚಿತ್ರವನ್ನು ನೋಡಿ ಪ್ರೇಕ್ಷಕರಂತೂ ಬೆಚ್ಚಿಬಿದ್ದಿದ್ದಾರೆ. (ದೆವ್ವ ಇತ್ತೋ, ಇಲ್ವೋ ಅನ್ನೋದು ಬೇರೆ ಪ್ರಶ್ನೆ) ಆದ್ರೆ, ಸಾಲು ಸಾಲು ಹಾರರ್ ಸಿನಿಮಾಗಳು ಬರುತ್ತಿರುವ ಈಗಿನ ಟ್ರೆಂಡ್ ನಲ್ಲಿ 'ಕರ್ವ' ಚಿತ್ರ ಕನ್ನಡ ಸಿನಿ ವಿಮರ್ಶಕರಿಗೆ ಇಷ್ಟವಾಯ್ತಾ? ['ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!]

    ಕನ್ನಡದ ಖ್ಯಾತ ದಿನ ಪತ್ರಿಕೆಗಳು ಪ್ರಕಟಿಸಿರುವ 'ಕರ್ವ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ....

    ರಹಸ್ಯ ಬಯಲಾಗುತ್ತಾ.? - ವಿಜಯ ಕರ್ನಾಟಕ

    ರಹಸ್ಯ ಬಯಲಾಗುತ್ತಾ.? - ವಿಜಯ ಕರ್ನಾಟಕ

    ಚಿತ್ರದ ಕತೆ ಚೆನ್ನಾಗಿದೆ. ನಿಜವಾದ ಸ್ಟೋರಿ ಶುರುವಾಗುವುದು ಸಿನಿಮಾ ಅರ್ಧ ಮುಗಿದ ನಂತರ. ಇಲ್ಲಿ ಕ್ಯೂರಿಯಾಸಿಟಿ ಇದೆ. ರಹಸ್ಯ ಕತೆಯೊಂದು ತೆರೆದುಕೊಳ್ಳುತ್ತದೆ. ಸೆಕೆಂಡ್ ಹಾಫಲ್ಲಿ ಏನೂ ಬೋರಿಂಗ್ ಇಲ್ಲ. ನೀಟಾದ ಕತೆ ಇದೆ. ಸೀಟ್‌ನ ಅಂಚಿಗೆ ಅವುಚಿ ಕೂರುವಷ್ಟು ಅಲ್ಲದಿದ್ದರೂ ಒಂದು ಹಂತಕ್ಕೆ ಹಾರರ್ ಎಫೆಕ್ಟ್ ನೀಡುತ್ತದೆ. ಆದರೆ ಚಿತ್ರ ಸೋತಿದ್ದು ಫಸ್ಟ್‌ ಹಾಫ್‌ನಲ್ಲಿ. ಅಲ್ಲಿ ಹಾರರ್ ಆಗಲಿ, ಸಸ್ಪೆನ್ಸ್ ಆಗಲಿ ಇಲ್ಲ. ಸೆಕೆಂಡ್‌ ಹಾಫ್‌ಗೆ ಪ್ರೇಕ್ಷಕನನ್ನು ಕರೆದೊಯ್ಯಲು ಫಸ್ಟ್‌ ಹಾಫ್‌ ಸೋಲುತ್ತದೆ - ಪಿ.ಎಸ್.ಜೈನ್

    'ಕರ್ವ' ಕೌತುಕ - ವಿಜಯವಾಣಿ

    'ಕರ್ವ' ಕೌತುಕ - ವಿಜಯವಾಣಿ

    ‘ಕರ್ವ' ಚಿತ್ರದಲ್ಲಿ ಎರಡು ಕಥೆಗಳಿವೆ. ಒಂದು ತಿಲಕ್ ಎಂಬ ಶ್ರೀಮಂತರ ಮನೆಯ ಹುಡುಗನ ಕಥೆ. ಶೋಕಿಗಾಗಿ ಮೈತುಂಬ ಸಾಲ ಮಾಡಿಕೊಂಡಿರುತ್ತಾನೆ. ಆತನಿಗೆ ಕೆಲಸಕ್ಕೆ ಬಾರದ ಮೂವರು ಫ್ರೆಂಡ್ಸ್. ಎಲ್ಲರಿಗೂ ಹಣದ ಅವಶ್ಯಕತೆಯಿರುತ್ತದೆ. ಅದೇ ಸಮಯದಲ್ಲಿ ತಿಲಕ್​ನ ತಂಗಿಯ ಕಿಡ್ನ್ಯಾಪ್ ಆಗುತ್ತದೆ. ಇರೋ ಸಮಸ್ಯೆಗಳ ನಡುವೆ ಅದೊಂದು ಹೊಸ ತಲೆನೋವು. ಮತ್ತೊಂದು ರಾಜ ಬಂಗ್ಲೆ ಕುರಿತು. ಆದರೆ, ಅದು ಹೆಸರಿಗಷ್ಟೇ ರಾಜ ಬಂಗ್ಲೆ, ಭೂತ ಬಂಗ್ಲೆ ಅಂತಲೇ ಫೇಮಸ್. ಅದನ್ನು ಕಂಡುಹಿಡಿಯಲು ಹೋದವರಿಗೆ ಅಲ್ಲಿ ಆಗುವ ಅನುಭವಗಳು ಹೇಳತೀರದು. ಹಲವು ಟ್ವಿಸ್ಟ್ ಮತ್ತು ಟರ್ನ್​ಗಳ ಬಳಿಕ ಈ ಎರಡು ಕಥೆಗಳೂ ಒಂದೆಡೆ ಬಂದು ಸೇರುತ್ತವೆ. ಹೇಗೆ? ಎಲ್ಲಿ? ಮುಂದೇನಾಗುತ್ತೆ? ಅಂತ ಕುತೂಹಲ ಇರುವವರು ಒಮ್ಮೆ ‘ಕರ್ವ' ಅರ್ಥಾತ್ ಭೇದಿಸಲಾಗದ ರಹಸ್ಯವನ್ನು ಥಿಯೇಟರ್​ನಲ್ಲಿ ಕುಳಿತು ಭೇದಿಸಲು ಪ್ರಯತ್ನಿಸಬಹುದು! ತಾವು ಗೊಂದಲಕ್ಕೀಡಾಗದೆ, ಮುಂದೇನು ಎಂದು ಪ್ರೇಕ್ಷಕರನ್ನು ಗೊಂದಲಕ್ಕೀಡು ಮಾಡುವ ಮೂಲಕ ಅಚ್ಚುಕಟ್ಟಾಗಿ ಕಥೆ ಕಟ್ಟಿಕೊಟ್ಟಿರುವ ನಿರ್ದೇಶಕ ನವನೀತ್ ಮೊದಲ ಪ್ರಯತ್ನದಲ್ಲೆ ಗಮನಸೆಳೆದಿದ್ದಾರೆ. ಟೈಟ್ ಚಿತ್ರಕಥೆ, ‘ಕರ್ವ' ಪ್ಲಸ್ ಪಾಯಿಂಟ್. ಸಂಭಾಷಣೆ ಮತ್ತಷ್ಟು ಪಕ್ವವಾಗಬೇಕಿತ್ತು. ಹಾಡುಗಳಿಲ್ಲ, ಆದರೆ ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತ ಆಗಾಗ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತದೆ. ಮೋಹನ್ ಕ್ಯಾಮರಾ ಕೈಚಳಕವೂ ಚಿತ್ರಕ್ಕೆ ಪೂರಕವಾಗಿದೆ.

    ದೆವ್ವದ ಸೇಡು ಮುಗಿಯುವುದಿಲ್ಲ - ವಿಶ್ವವಾಣಿ

    ದೆವ್ವದ ಸೇಡು ಮುಗಿಯುವುದಿಲ್ಲ - ವಿಶ್ವವಾಣಿ

    ಇನ್ನೇನು­ ಸಿನಿಮಾ ಮುಗಿದು ಹೋಯಿತು ಎನ್ನುವುದರೊಳಗೆ ದೆವ್ವದ ಸೇಡು ಕರ್ವ-2ನಲ್ಲಿ ಮುಂದುವರೆಯುತ್ತದೆ­ಎನ್ನುವುದೇ­ ಕ್ಲೈಮ್ಯಾಕ್ಸ್­­ ಆಗುತ್ತದೆ. ನವನೀತ್ ನಿರ್ದೇಶನದಲ್ಲಿ ಕಥೆ ಚಿತ್ರಕಥೆ ಅದೇ ಹಳೆಯ ದೆವ್ವದ ಸೇಡು. ಆತ್ಮಗಳ ಆರ್ತನಾದ, ಕಿರುಚಾಟ, ಕೂಗಾಟ, ಬೆಚ್ಚಿಬೀಳಿಸುವ ಸದ್ದುಗಳನ್ನಷ್ಟೇ ಹೇಳುವುದರ ಜೊತೆಗೆ ಒಳ್ಳೆಯ ಟ್ವಿಸ್ಟ್ ಗಳನ್ನು ಇಡಲಾಗಿದ. ಆದರೆ ಇಲ್ಲಿ ನಿರ್ದೇಶಕರು ಹೊಸತನವನ್ನೇನೂ ನೀಡಿಲ್ಲ. ಚಿತ್ರಕಥೆಯಲ್ಲಿ ಕುರ್ಚಿಯ ತುದಿಯಲ್ಲಿ ಕೂರಿಸುವ ಅಂಶಗಳಿಲ್ಲ. 6-5=2 ನಿರ್ಮಾಪಕರ ಸಿನಿಮಾ ಎನ್ನುವ ಕಾರಣಕ್ಕೆ ಅಂತಹದ್ದೇ­ ಮತ್ತೊಂದು­ ಅಚ್ಚರಿಯನ್ನು­ನೀವಿಲ್ಲಿ ನಿರೀಕ್ಷೆ ಮಾಡುವಂತಿಲ್ಲ.

    'Karva' Movie Review - Times of India

    'Karva' Movie Review - Times of India

    The film is technically sound. Ravi Basrur's background score and Mohan's cinematography are real assets to the film, making Karvva technically rich. The screenplay is clever. The first half might seem a little lagging, only because the second half is packed with a lot more thrills and twists, bettering the first. The locations add to the story. The casting is good, with no character seeming out of place. Each person fits the bill. Tilak as the rich brat, Rohith as the smart conman and Vijay Chandour as the entertaining dubbing artiste ensure they keep the audience hooked with their performances, not letting down the engaging storyline that Karvva has. The makers had mentioned how this film has the thrill and entertainment factor that an Abbas-Mastan film in Bollywood has, and they don't fail those words. How? Go find out yourself - Sunayana Suresh

    English summary
    Kannada Actor Devaraj, Tilak, RJ Rohit, starrer 'Karva' movie has received mixed response from the critics. Here is the collection of reviews by Top News Papers of Karnataka.
    Sunday, May 29, 2016, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X