»   » ಚಿತ್ರ ವಿಮರ್ಶೆ: 'ಖುಷಿ ಖುಷಿಯಾಗಿ' ಹೋಗಿ ಬನ್ನಿ

ಚಿತ್ರ ವಿಮರ್ಶೆ: 'ಖುಷಿ ಖುಷಿಯಾಗಿ' ಹೋಗಿ ಬನ್ನಿ

Posted by:
Subscribe to Filmibeat Kannada

ಹೊಸ ವರ್ಷದಂದೇ ಗಾಂಧಿನಗರದಲ್ಲಿ ಸಂತಸ ತಂದಿರುವ ಚಿತ್ರ 'ಖುಷಿ ಖುಷಿಯಾಗಿ'. ಇಂದು (ಜ.1) ರಾಜ್ಯದಾದ್ಯಂತ ರಿಲೀಸ್ ಆಗಿರುವ 'ಖುಷಿ ಖುಷಿಯಾಗಿ' ಸಿನಿಮಾ ಪ್ರೇಕ್ಷಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಅಲ್ಲಿಗೆ, ಗಣೇಶ್-ಅಮೂಲ್ಯ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ ಅಂತರ್ಥ. [ಹೊಸ ವರ್ಷಕ್ಕೆ ಗೆಲುವಿನ 'ಖುಷಿ' ಯಾರಿಗೆ?]

ಎಲ್ಲರಿಗೂ ಗೊತ್ತಿರುವ ಹಾಗೆ, 'ಖುಷಿ ಖುಷಿಯಾಗಿ' ಸಿನಿಮಾ ಟಾಲಿವುಡ್ ನಲ್ಲಿ ಅಭೂತಪೂರ್ವ ಯಶಸ್ಸು ಕಂಡ 'ಗುಂಡೆಜಾರಿ ಗಲ್ಲಂತಯಿಂದಿ' ಚಿತ್ರದ ರೀಮೇಕ್. ಚಿತ್ರಕಥೆಯಲ್ಲಿ ಕೊಂಚ ಬದಲಾವಣೆಗಳನ್ನು ಹೊರತು ಪಡಿಸಿದರೆ, ಥೇಟ್ ತೆಲುಗಿನ ಚಿತ್ರದಂತೆ ಕಾಣುವ 'ಖುಷಿ ಖುಷಿಯಾಗಿ' ಪ್ರೇಕ್ಷಕರಿಗೆ ಖುಷಿ ನೀಡುವುದು ಕಾಮಿಡಿ ಕಿಕ್ ನಿಂದ.

Rating:
3.0/5

ಚಿತ್ರ: ಖುಷಿ ಖುಷಿಯಾಗಿ
ನಿರ್ಮಾಣ: ಹರಿಪ್ರಸಾದ್ ರಾವ್, ಪ್ರಸಾದ್ ಚೌದರಿ
ನಿರ್ದೇಶನ: ಯೋಗಿ.ಜಿ.ರಾಜ್
ಸಂಗೀತ ನಿರ್ದೇಶನ: ಅನೂಪ್ ರೂಬೆನ್ಸ್
ತಾರಾಗಣ : ಗಣೇಶ್, ಅಮೂಲ್ಯ, ನಂದಿನಿ ರೈ, ಸಾಧು ಕೋಕಿಲ ಮತ್ತು ಇತರರು.
ಬಿಡುಗಡೆ : ಜನವರಿ 1, 2015
ಕಥಾಹಂದರ

ಕಥಾಹಂದರ

ಸಾಫ್ಟ್ ವೇರ್ ಕಂಪನಿ ಉದ್ಯೋಗಿ ರಾಜ್ (ಗಣೇಶ್) ಗೆ ಪ್ರೇಮದ ಅಮಲಿನಲ್ಲಿ ತೇಲುವ ಹಂಬಲ. ತನ್ನ ಹುಡುಗಿ ಅಪ್ಸರೆಯಂತಿರಬೇಕೆನ್ನುವ ಆಸೆ. ಈ ಆಸೆಗೆ ಪುಷ್ಠಿ ಸಿಗುವುದು ಪ್ರಿಯಾ (ನಂದಿನಿ ರೈ) ಅನ್ನುವ ಹುಡುಗಿಯನ್ನ ರಾಜ್ ನೋಡಿದ ಮೇಲೆ. ಲವ್ @ ಫಸ್ಟ್ ಸೈಟ್ ಆದ್ಮೇಲೆ, ಆಕೆಯನ್ನ ಭೇಟಿ ಮಾಡೋಕೆ ತಡಕಾಡುವ ರಾಜ್, ಹಾಗೂ ಹೀಗೂ ಆಕೆಯ ಫೋನ್ ನಂಬರ್ ಪತ್ತೆ ಹಚ್ಚುತ್ತಾನೆ.

ರಾಂಗ್ ನಂಬರ್ ಎಡವಟ್ಟು

ರಾಂಗ್ ನಂಬರ್ ಎಡವಟ್ಟು

'ಫ್ಯಾನ್ಸಿ ನಂಬರ್' ಪ್ರಭಾವದಿಂದ ಪ್ರಿಯಾ ಬದಲು ನಂದಿನಿ (ಅಮೂಲ್ಯ) ಜೊತೆ ಫೋನ್ ನಲ್ಲೇ 'ಕನೆಕ್ಟ್' ಆಗುವ ರಾಜ್, ಅದು ರಾಂಗ್ ನಂಬರ್ ಅಂತ ಗೊತ್ತಾಗುವ ಹೊತ್ತಿಗೆ ಪ್ರಿಯಾಗೆ ಪ್ರಿಯತಮ ಸಿಕ್ಕಿರುತ್ತಾನೆ. ಅದು 'ರಾಜ್' ಕೃಪೆಯಿಂದಲೇ ಅನ್ನುವುದು ಚಿತ್ರದ ಟ್ವಿಸ್ಟ್.

ಯಾರಿಗೆ ಯಾರು?

ಯಾರಿಗೆ ಯಾರು?

ಪ್ರಿಯಾ (ನಂದಿನಿ ರೈ) ಅಂತ ನಂದಿನಿ ಜೊತೆ ಹರಟುತ್ತಾ ಪ್ರೀತಿಯಲ್ಲಿ ಬೀಳುವ ರಾಜ್, ಕೊನೆಗೆ ಯಾರಿಗೆ ಸೋಲುತ್ತಾನೆ? ನಂದಿನಿ, ಪ್ರಿಯಾ ಅಲ್ಲ ಅಂತ ಗೊತ್ತಾದಾಗ, ನಂದಿನಿಗೆ ಟಾಟಾ ಹೇಳುವ ರಾಜ್ ಗೆ, ನಂದಿನಿ (ಅಮೂಲ್ಯ) ಪಾಠ ಕಲಿಸುವುದಾದರೂ ಹೇಗೆ? ಇಬ್ಬರ ಮಧ್ಯೆ ಸಾಧು ಮಾಡುವ ಎಡವಟ್ಟೇನು? ಈ ಮಜವಾದ ಕಥೆಯನ್ನ ನೀವು ತೆಲುಗಿನಲ್ಲಿ ನೋಡಿಲ್ಲ ಅಂದ್ರೆ 'ಖುಷಿ ಖುಷಿಯಾಗಿ' ಚಿತ್ರಮಂದಿರಕ್ಕೆ ಹೋಗಿ ನೋಡಿ.

ಗಣೇಶ್ 'ಪಟಾಕಿ'

ಗಣೇಶ್ 'ಪಟಾಕಿ'

'ಖುಷಿ ಖುಷಿಯಾಗಿ' ಸಿನಿಮಾದಲ್ಲಿ ಗಣೇಶ್ ತಮ್ಮ ಎಂದಿನ ಅಭಿನಯ ನೀಡಿದ್ದಾರೆ. ಪಟ ಪಟ ಅಂತ ಮಾತನಾಡುತ್ತಾ ಹುಡುಗಿಯರ ಕಾಲೆಳೆಯುವ 'ರಾಜ್' ಪಾತ್ರದಲ್ಲಿ ಗಣೇಶ್ ಲೀಲಾಜಾಲ. ಇಲ್ಲಿವರೆಗೂ ಹುಡುಗಿಯರನ್ನ ಸೆಳೆಯೋಕೆ ಕಿಲೋಮೀಟರ್ ಗಟ್ಟಲೆ ಡೈಲಾಗ್ ಹೊಡೆಯುತ್ತಿದ್ದ ಗಣೇಶ್, 'ಕ್ಲಾಸ್' ಮತ್ತು 'ಮಾಸ್' ಅಭಿಮಾನಿಗಳಿಗಾಗಿ ಬಾಯ್ತುಂಬಾ ಬೆಂಕಿ ಕಿಡಿಗಳನ್ನ ಉಗುಳಿರುವುದು 'ಖುಷಿ ಖುಷಿಯಾಗಿ' ಸ್ಪೆಷಲ್.

ಅಮೂಲ್ಯ 'ಅಮಲು'

ಅಮೂಲ್ಯ 'ಅಮಲು'

ಕೊಂಚ ಲೇಟಾಗಿ ಎಂಟ್ರಿ ಕೊಡುವ ಅಮೂಲ್ಯ, ತೆರೆಮೇಲೆ ಮುದ್ದು ಮುದ್ದು. ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಅಮೂಲ್ಯ ರವರ ಮಾಗಿದ ಅಭಿನಯ 'ಖುಷಿ ಖುಷಿಯಾಗಿ' ಚಿತ್ರದಲ್ಲಿ ಕಾಣಬಹುದು. [ಖುಷಿ ಖುಷಿಯಾಗಿ ಆಡಿಯೋ ವಿಮರ್ಶೆ: ಖುಷಿಯಿಂದ ಕೇಳಿ]

ಕಾಮಿಡಿ ಕಿಕ್

ಕಾಮಿಡಿ ಕಿಕ್

'ಖುಷಿ ಖುಷಿಯಾಗಿ' ಚಿತ್ರದ ಮೇನ್ ಹೈಲೈಟೇ ಕಾಮಿಡಿ ಕಿಕ್. ಗಣೇಶ್ ಮತ್ತು ಸಾಧು ಕೋಕಿಲ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಂಡಾಗೆಲ್ಲಾ, ಪ್ರೇಕ್ಷಕರು ಗೊಳ್ ಅಂತ ನಗುತ್ತಾರೆ. ಸಿನಿಮಾ ಕೊಂಚ ಹಳಿತಪ್ಪುತ್ತಿದೆ ಅನ್ನುವಾಗ ಎಲ್ಲರನ್ನ ರಿಲ್ಯಾಕ್ಸ್ ಮಾಡೋದು ಇಬ್ಬರು ಕೊಡುವ ಕಾಮಿಡಿ ಇಂಜೆಕ್ಷನ್.

ಸೆಕೆಂಡ್ ಹಾಫ್ ಸ್ಲೋ

ಸೆಕೆಂಡ್ ಹಾಫ್ ಸ್ಲೋ

ಮೊದಲಾರ್ಧದಲ್ಲಿ ಲವಲವಿಕೆ ಇಂದ ಸಾಗುವ ಚಿತ್ರಕಥೆ, ಸೆಕೆಂಡ್ ಹಾಫ್ ನಲ್ಲಿ ಕೊಂಚ ಕುಂಟುತ್ತದೆ. ತೆಲುಗು ಚಿತ್ರವನ್ನ ಅಲ್ಲಲ್ಲಿ ಯಥಾವತ್ತಾಗಿ ನಕಲಿಸುವ ಬದಲು, ನಿರ್ದೇಶಕರು ಕೊಂಚ ಕ್ರಿಯಾತ್ಮಕವಾಗಿ ಯೋಚಿಸಿದ್ದರೆ, 'ಖುಷಿ ಖುಷಿಯಾಗಿ'ಯಿಂದ ಎಲ್ಲರನ್ನೂ ಡಬಲ್ ಖುಷಿ ಪಡಿಸಬಹುದಿತ್ತು. 'ಗುಂಡೆಜಾರಿ ಗಲ್ಲಂತಯಿಂದಿ' ಚಿತ್ರವನ್ನ ನೋಡಿರುವ ಬಹುತೇಕರಿಗೆ 'ಖುಷಿ ಖುಷಿಯಾಗಿ' ಚಿತ್ರದಲ್ಲಿ ಅಂತಹ ಬದಲಾವಣೆಯೇನೂ ಕಾಣಿಸುವುದಿಲ್ಲ.

ಮನರಂಜನಾ ಪ್ರಿಯರಿಗೆ 'ಖುಷಿ' ಸಿನಿಮಾ

ಮನರಂಜನಾ ಪ್ರಿಯರಿಗೆ 'ಖುಷಿ' ಸಿನಿಮಾ

ಮನಸ್ಸಿಗೆ ಮುದ ನೀಡುವ ಸಂಗೀತ, ಉಪ್ಪು-ಹುಳಿ-ಖಾರದ ಮಿಶ್ರಣದಂತೆ ಒಂದೋ ಎರಡೋ ಫೈಟ್, ಮಧ್ಯೆ ಕಾಮಿಡಿ, ಒಂದಿಷ್ಟು ಲವ್ವು. ಕೊಟ್ಟ ಕಾಸಿಗೆ ಮೋಸ ಆಗದಂತೆ ಸ್ವಲ್ಪ ಮೈಂಡ್ ರಿಲ್ಯಾಕ್ಸ್ ಮಾಡಿಕೊಳ್ಳಬೇಕು ಅನ್ನುವವರು 'ಖುಷಿ ಖುಷಿಯಾಗಿ' ಚಿತ್ರವನ್ನ ಆರಾಮಾಗಿ ಒಮ್ಮೆ ನೋಡಬಹುದು.

English summary
Kannada movie Khushi Khushiyagi has hit the screens today (January 1st). Khushi Khushiyagi is a treat for Golden Star Ganesh fans. Ganesh and Amoolya chemistry has impressed the Audience once again through Khushi Khushiyagi.
Please Wait while comments are loading...

Kannada Photos

Go to : More Photos