»   » ವಿಮರ್ಶೆ: ಉಡಾಫೆ ಕೃಷ್ಣ, ಬಜಾರಿ ರುಕ್ಕು ಕಥೆ ಚೆನ್ನಾಗಿದೆ

ವಿಮರ್ಶೆ: ಉಡಾಫೆ ಕೃಷ್ಣ, ಬಜಾರಿ ರುಕ್ಕು ಕಥೆ ಚೆನ್ನಾಗಿದೆ

Written by: ಸುನೀತಾ ಗೌಡ
Subscribe to Filmibeat Kannada

ಹುಟ್ಟುವಾಗ ಅಳು ಅಳು ಎಂದರೂ ಅಳದ ಮಗು, ಒಮ್ಮೆ ಅಳಲು ಶುರು ಮಾಡಿದವನು ನಿಲ್ಲಿಸೋದೇ ಇಲ್ಲ. ಅಳುತ್ತಿರುವ ಮಗುವನ್ನು ಎಷ್ಟು ನಗಿಸಲು ಪ್ರಯತ್ನಪಟ್ಟರು ಮಗು ಅಳು ನಿಲ್ಲಿಸೋದೇ ಇಲ್ಲ.

ಅದೇ ಎದುರು ಮನೆಯಲ್ಲಿ ಇರುವ ಹೆಣ್ಣು ಮಗು ಯಾವಾಗಲೂ ನಗು-ನಗುತ್ತಾ ಇರುತ್ತೆ. ಆ ನಗುವನ್ನು ನೋಡಿದ ಇವನು ಬರು-ಬರುತ್ತಾ ಆ ಹೆಣ್ಣು ಮಗುವನ್ನು ಅಳಿಸುತ್ತಾ, ಇವನು ನಗುತ್ತಾ ಅದರಲ್ಲಿ ಮಜಾ ತಗೋತಾನೆ.['ಕೃಷ್ಣ-ರುಕ್ಕು' ರೋಮ್ಯಾನ್ಸ್ ನೋಡಲು ನೀವು ರೆಡಿನಾ?]

ಹೀಗೆ ಇವಳನ್ನು ಅಳಿಸುತ್ತಾ, ಅವನು ನಗುತ್ತಾ ಒಟ್ಟಿಗೆ ಆಟ ಆಡಿಕೊಂಡು, ಒಬ್ಬರಿಗೊಬ್ಬರು ಚಾಡಿ ಹೇಳಿಕೊಂಡು ಹಾಗೆ ಒಟ್ಟೊಟ್ಟಿಗೆ ಬಾಲ್ಯವನ್ನು ಕಳೆಯುತ್ತಾರೆ ಕಥೆಯ ನಾಯಕ ಕೃಷ್ಣ ಮತ್ತು ನಾಯಕಿ ರುಕ್ಮಿಣಿ.

ಪ್ರಕೃತಿಯ ಸುಂದರ ಮಡಿಲು ಚಿಕ್ಕಮಗಳೂರಿನ ಒಂದು ಚಿಕ್ಕ ಹಳ್ಳಿಯಲ್ಲಿ ಕೃಷ್ಣ-ರುಕ್ಕು ಅವರ ಲವ್ ಸ್ಟೋರಿ, ಮಾಮೂಲಿ ಅಲ್ಲಾ ಒಂಥರಾ ಲವ್ ಸ್ಟೋರಿ ಆರಂಭವಾಗುತ್ತೆ.[ಅಂತೂ ಇಂತೂ 'ಕೃಷ್ಣ-ರುಕ್ಕು', ಸೈಲೆಂಟ್ ಆಗಿ ಡಬ್ಬಿಂಗ್ ಮುಗಿಸಿದ್ರು!]

Rating:
3.0/5

ಚಿತ್ರ: 'ಕೃಷ್ಣ-ರುಕ್ಕು'
ನಿರ್ಮಾಣ: ಉದಯ್ ಮೆಹ್ತಾ
ಕಥೆ-ಚಿತ್ರಕಥೆ-ನಿರ್ದೇಶನ: ಅನಿಲ್ ಕುಮಾರ್
ಸಂಗೀತ: ಶ್ರೀಧರ್ ವಿ. ಸಂಭ್ರಮ್
ಛಾಯಾಗ್ರಹಣ: ಜಗದೀಶ್ ವಾಲಿ
ತಾರಾಗಣ: ಅಜೇಯ್ ರಾವ್, ಅಮೂಲ್ಯಾ, ಗಿರಿಜಾ ಲೋಕೇಶ್, ಶೋಭರಾಜ್, ಲಕ್ಷ್ಮಿ ಸಿದ್ಧಯ್ಯ, ಸ್ವಪ್ನ ರಾಜ್, ಲೇಖಾ ಚಂದ್ರ ಮತ್ತು ಮುಂತಾದವರು.
ಬಿಡುಗಡೆ: ಫೆಬ್ರವರಿ 26

ಸ್ಯಾಂಡಲ್ ವುಡ್ ನ ಕೃಷ್ಣ ಅಂತಾನೇ ಖ್ಯಾತಿ ಗಳಿಸಿರುವ ಅಜೇಯ್ ರಾವ್ ಮತ್ತು ಗೋಲ್ಡನ್ ಕ್ವೀನ್ ಅಮೂಲ್ಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಕೃಷ್ಣ-ರುಕ್ಕು' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

'ಕೃಷ್ಣ-ರುಕ್ಕು' ಕಥಾಹಂದರ

ಕೃಷ್ಣನ (ಅಜೇಯ್ ರಾವ್) ಮಾವನ ಮಗಳು ರುಕ್ಕು(ಅಮೂಲ್ಯ). ಯಾವಾಗಲೂ ಜಗಳ ಕಾಯುತ್ತಿರುವ ಇವರಿಬ್ಬರೆಂದರೆ ಎರಡು ಮನೆಯವರಿಗೂ ತುಂಬಾ ಪ್ರೀತಿ. ಸದಾ ರುಕ್ಕುವನ್ನು ಗೋಳು ಹೊಯ್ಕೊಳ್ಳೋದು ಅಂದ್ರೆ ಕೃಷ್ಣನಿಗೆ ತುಂಬಾ ಇಷ್ಟ. ಆದರೆ ಎಷ್ಟೇ ಗೋಳಾಡಿಸಿದರು ಅವಳನ್ನು ಕಂಡರೆ ಕೃಷ್ಣನಿಗೆ ಒಂಥರಾ ಇಷ್ಟ. ಹೀಗೆ ಇವರಿಬ್ಬರ ನಡುವೆ ಸಾಗುವ ಜಗಳ, ಕೋಪ, ಪ್ರೀತಿ, ಸ್ನೇಹ ಇದೇ ಇಡೀ ಸಿನಿಮಾದ ಕಥೆ.[ಬ್ಯಾಂಕಾಕ್ ನಲ್ಲಿ ಅಜೇಯ್ ರಾವ್ ಮತ್ತು ಅಮೂಲ್ಯಾ]

ಮುಂದೇನಾಗುತ್ತೆ?

ರುಕ್ಕು ಎದುರುಗಡೆ ಬಂದಾಗ ಅವಳ ಹೊಟ್ಟೆ ಉರಿಸಿ, ಮಜಾ ತೆಗೆದುಕೊಳ್ಳುವ ಕೃಷ್ಣ, ಅವಳ ಬೆಸ್ಟ್ ಫ್ರೆಂಡ್ ಅನ್ನೇ ಲವ್ ಮಾಡುವ ನಾಟಕ ಮಾಡುತ್ತಾನೆ. ಇದಕ್ಕೆ ಪ್ರತಿಯಾಗಿ ರುಕ್ಕು ಕೂಡ ಒಬ್ಬನ ಪ್ರೀತಿಯಲ್ಲಿ ಬೀಳುತ್ತಾಳೆ ಆದರೆ ಆತ ಬರಿ ಪ್ರೀತಿ ಮಾಡುವ ಹಾಗೆ ನಾಟಕ ಮಾಡುತ್ತಿದ್ದು, ರುಕ್ಕುಗೆ ಮೋಸ ಮಾಡಲು ಹೊಂಚು ಹಾಕುತ್ತಿರುತ್ತಾನೆ. ಆಮೇಲೇನಾಗುತ್ತೆ 'ಕೃಷ್ಣ-ರುಕ್ಕು' ತಮಗಿರುವ ಪ್ರೀತಿಯನ್ನು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾರಾ? ಮದುವೆ ಆಗುತ್ತಾರ? ಅನ್ನೋದನ್ನ ನೀವು ಥಿಯೇಟರ್ ನಲ್ಲಿ ಒಮ್ಮೆ ಹೋಗಿ ನೋಡಿ.

'ಕೃಷ್ಣ' ಅಜೇಯ್ ರಾವ್ ನಟನೆ

ಸ್ಯಾಂಡಲ್ ವುಡ್ ನಲ್ಲಿ ಕೃಷ್ಣ ಅಂತಾನೇ ಖ್ಯಾತಿ ಪಡೆದಿರುವ ನಟ ಅಜೇಯ್ ರಾವ್ ಅವರು 'ರುಕ್ಕು'ಳ ಅತ್ತೆ ಮಗನಾಗಿ ಸಖತ್ತಾಗಿ ನಟಿಸಿದ್ದಾರೆ. ಸದಾ ಅವಳಿಗೆ ಕಿರಿಕ್ ಮಾಡಿ ಅವಳ ಹೊಟ್ಟೆ ಉರಿಸಿ ಒಂದಲ್ಲಾ ಒಂದು ವಿಚಾರಕ್ಕೆ ಕೋಳಿ ಜಗಳ ಮಾಡುವ ಉಡಾಫೆ ಕೃಷ್ಣನ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಆದರೆ ಇನ್ನು ಸ್ವಲ್ಪ ಜಾಸ್ತಿ ಪರಿಪಕ್ವವಾಗಿ ಕಾಣಿಸಿಕೊಂಡಿದ್ದರೆ ಚೆನ್ನಾಗಿತ್ತು ಅನ್ಸುತ್ತೆ.

'ರುಕ್ಕು' ಅಮೂಲ್ಯ

ಇಡೀ ಸಿನಿಮಾದ ಹೈಲೈಟ್ ರುಕ್ಕು ಅಲಿಯಾಸ್ ಅಮೂಲ್ಯ ಅವರು. ಜಗಳ ಮಾಡುವುದರಿಂದ ಹಿಡಿದು ಹುಡುಗನೊಬ್ಬ ಲವ್ ಲೆಟರ್ ಕೊಟ್ಟಾಗ ಮಾಡುವ ಪ್ರತಿಯೊಂದು ಎಕ್ಸ್ ಪ್ರೆಶನ್ಸ್ ಹಾಗೂ ಆಕೆಯ ಮುಗ್ದತೆ ಪ್ರೇಕ್ಷಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮುಖ್ಯವಾಗಿ ಹೊಟ್ಟೆ ಬಾಕತನದ ರುಕ್ಕು ತಿನ್ನುವ ಸ್ಟೈಲ್ ಗೆ ಪ್ರೇಕ್ಷಕರ ಮುಖದಲ್ಲಿ ಸಣ್ಣಗೆ ನಗು ಮೂಡುತ್ತದೆ. ಅಂತೂ ಬಜಾರಿ ರುಕ್ಕು ಎಲ್ಲರಿಗೂ ಇಷ್ಟ ಆಗ್ತಾಳೆ.

ಉಳಿದವರು?

ರುಕ್ಕು ಅಪ್ಪನ ಪಾತ್ರ ವಹಿಸಿದ್ದ ಶೋಭರಾಜ್ ಅವರು ಸ್ವಲ್ಪ ತಮ್ಮ ಅದೇ ಹಳೇ ಖದರ್ ತೋರಿದ್ದಾರೆ. ಚಿತ್ರದಲ್ಲಿ ಕಾಮಿಡಿ ಪಾತ್ರದಾರಿಗಳು ಯಾರು ಇಲ್ಲದಿದ್ದರೂ ಆ ಜಾಗ ತುಂಬಲು ನಟಿ ಗಿರಿಜಾ ಲೋಕೇಶ್ ಅವರಿದ್ದರು. ಉಳಿದಂತೆ ಲಕ್ಷ್ಮಿ ಸಿದ್ಧಯ್ಯ, ಸ್ವಪ್ನ ರಾಜ್ ಮತ್ತು ಲೇಖಾ ಚಂದ್ರ ಅವರು ತಮ್ಮ ತಮ್ಮ ಪಾತ್ರಗಳಿಗೆ ತಕ್ಕ ನ್ಯಾಯ ಒದಗಿಸಿದ್ದಾರೆ.

ತೆಲುಗು ರೀಮೇಕ್

ತೆಲುಗಿನ 'ಉಯ್ಯಾಲೆ ಜಂಪಾಲೆ' ಚಿತ್ರದ ಕಥೆಯನ್ನು ಹೋಲುವ 'ಕೃಷ್ಣ-ರುಕ್ಕು' ಕನ್ನಡ ಸಿನಿ ಪಂಡಿತರಿಗೆ ಹಾಗೂ ಪಕ್ಕಾ ಫ್ಯಾಮಿಲಿ ಎಂರ್ಟಟೈನರ್ ಬಯಸುವ ಸಿನಿಮಾ ಪ್ರೀಯರಿಗೆ ಅಜೇಯ್ ರಾವ್-ಅಮೂಲ್ಯ ಜುಗಲ್ ಬಂದಿಯ 'ಕೃಷ್ಣ-ರುಕ್ಕು' ಸಿನಿಮಾ ಖಂಡಿತ ಇಷ್ಟವಾಗುತ್ತೆ.

ಸಂಗೀತ:

ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಅವರು ಮ್ಯೂಸಿಕ್ ಕಂಪೋಸಿಸಷನ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಒಂದೆರಡು ಹಾಡುಗಳು ಚೆನ್ನಾಗಿದ್ದು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಪುನೀತ್ ರಾಜ್ ಕುಮಾರ್ ಅವರು ಹಾಡಿರುವ 'ಡೋಂಗು ಡೋಂಗು' ಸಾಂಗು ಸಖತ್ ಮನರಂಜನೆ ನೀಡುತ್ತೆ. ಮಿಕ್ಕಂತೆ 'ಹೇಳಿಲ್ಲ ಯಾರಲ್ಲೂ ನಾನು' ಹಾಡು ವಿದೇಶದ ಸೊಬಗಿನ ಜೊತೆಗೆ ನಿಮ್ಮನ್ನು ರೋಮ್ಯಾಂಟಿಕ್ ಫೀಲ್ ಗೆ ಕರೆದೊಯ್ಯುತ್ತದೆ.

ಕ್ಯಾಮಾರ ಕಣ್ಣಿಂದ

ಛಾಯಾಗ್ರಾಹಕ ಜಗದೀಶ್ ವಾಲಿ ಅವರ ಕ್ಯಾಮಾರ ಕಣ್ಣಲ್ಲಿ ಚಿಕ್ಕಮಗಳೂರಿನ ರಮಣೀಯ ಪರಿಸರ ಅದ್ಭುತವಾಗಿ ಸೆರೆಗೊಂಡಿದ್ದು, ಪ್ರೇಕ್ಷಕರನ್ನು ಎಲ್ಲಿಗೋ ಕರೆದೊಯ್ಯುತ್ತದೆ. ಭೋರ್ಗರೆದು ಹರಿಯುವ ಜಲಪಾತವನ್ನು ಕೂಡ ತುಂಬಾ ಚೆನ್ನಾಗಿ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿಯಲಾಗಿದೆ. ಒಟ್ನಲ್ಲಿ ಕ್ಯಾಮಾರಾ ವರ್ಕ್ ಸೂಪರ್.

ಒಮ್ಮೆ ನೋಡಲಡ್ಡಿಯಿಲ್ಲ

ಯಾವಾಗಲೂ ಒಂದೇ ಥರದ ಲವ್ ಸ್ಟೋರಿ ನೋಡಿ ನೋಡಿ ಬೋರಾಗಿದ್ದ ಪ್ರೇಕ್ಷಕರಿಗೆ, ಒಂಥರಾ ಲವ್ ಸ್ಟೋರಿ ಹೊಂದಿರುವ 'ಕೃಷ್ಣ-ರುಕ್ಕು' ಒಂದು ಬಾರಿ ನೋಡಲಡ್ಡಿಯಿಲ್ಲ, ಈ ವೀಕೆಂಡ್ ನಲ್ಲಿ ಫ್ರೀಯಾಗಿದ್ದರೆ ಒಮ್ಮೆ 'ಕೃಷ್ಣ-ರುಕ್ಕು' ಲವ್ ಸ್ಟೋರಿ ಜೊತೆಗೆ ಕೋಳಿ ಜಗಳ ನೋಡ್ಕೊಂಡು ಬನ್ನಿ.

English summary
Kannada movie 'Krishna Rukku' Review. Kannada Actor Ajay Rao, Kannada Actress Amoolya in the lead role. The movie is directed by 'Dilwala' fame Anil Kumar.
Please Wait while comments are loading...

Kannada Photos

Go to : More Photos