»   » ಟ್ವಿಟ್ಟರ್ ವಿಮರ್ಶೆ: ಅದ್ದೂರಿ ಗ್ರಾಫಿಕ್ಸ್ ನ ನಾಗರಹಾವು:'ವಿಷ್ಣು-ರಮ್ಯಾ' ರಾಕ್ಸ್

ಟ್ವಿಟ್ಟರ್ ವಿಮರ್ಶೆ: ಅದ್ದೂರಿ ಗ್ರಾಫಿಕ್ಸ್ ನ ನಾಗರಹಾವು:'ವಿಷ್ಣು-ರಮ್ಯಾ' ರಾಕ್ಸ್

ಡಾ.ವಿಷ್ಣುವರ್ಧನ್ ಹಾಗೂ ರಮ್ಯಾ ಅಭಿನಯದ ನಾಗರಹಾವು ಸಿನಿಮಾ ರಿಲೀಸ್-ಪ್ರೇಕ್ಷಕರು ಫುಲ್ ಥ್ರಿಲ್ ಆಗಿದ್ದಾರೆ.ಹಾಗದ್ರೆ ಸಿನಿಮಾ ನೋಡಿದ ಅಭಿಮಾನಿಗಳು ಏನು ಹೇಳಿದ್ದಾರೆ ಅಂತ ನೋಡಿ

Written by: ಭರತ್ ಕುಮಾರ್
Subscribe to Filmibeat Kannada

ದಕ್ಷಿಣ ಭಾರತದಲ್ಲಿ ಬಾರಿ ಕುತೂಹಲ ಹುಟ್ಟಿಸಿದ್ದ ನಾಗರಹಾವು ಚಿತ್ರ ಕೊನೆಗೂ ಈ ವಾರ ತೆರೆಮೇಲೆ ಬಂದಿದೆ. ಡಾ.ವಿಷ್ಣುವರ್ಧನ್, ರಮ್ಯಾ ಹಾಗೂ ದಿಗಂತ್ ಅಭಿನಯದ ಚಿತ್ರಕ್ಕೆ ಈಗಾಗಲೇ ಭರ್ಜರಿ ಒಪನಿಂಗ್ ಸಿಕ್ಕಿದೆ. 1100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಾಗರಹಾವು ಬಿಡುಗಡೆಯಾಗಿದ್ದು, ಬಹುತೇಕ ಎಲ್ಲಾ ಕಡೆ ಹೌಸ್ ಪುಲ್ ಪ್ರದರ್ಶನ ಕಾಣ್ತಿದೆ.

ಆರು ವರ್ಷದ ಬಳಿಕ ತೆರೆಮೇಲೆ ವಿಷ್ಣುದಾದಾರನ್ನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಎರಡು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ನಟಿ ರಮ್ಯಾ ನಾಗಿಣಿ ಪಾತ್ರದಲ್ಲಿ ಕಮ್ ಬ್ಯಾಕ್ ಆಗಿದ್ದಾರೆ. ಈ ಎರಡು ಸರ್ಪ್ರೈಸ್ ಗಳ ಜೊತೆ ವಿಷ್ಣುವರ್ಧನ್ ಅವರ 201ನೇ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಎಲ್ಲ ವಿಶೇಷತೆಗಳು ಸೇರಿ ನಾಗರಹಾವು ಪ್ರೇಕ್ಷಕರಲ್ಲಿ ಬಹುದೊಡ್ಡ ನಿರೀಕ್ಷೆ ಹುಟ್ಟಿಸಿತ್ತು.['ನಾಗರಹಾವು' ರಿಲೀಸ್: ಅಭಿಮಾನಿಗಳಿಂದ ಭರ್ಜರಿ ಸ್ವಾಗತ ]


ಈ ಎಲ್ಲಾ ನಿರೀಕ್ಷೆ, ಕುತೂಹಲಗಳಿಗೆ ಈಗ ತೆರೆಬಿದ್ದಿದ್ದು, ಜನರು ಸಿನಿಮಾ ನೋಡಿದ್ದಾರೆ. ಹಾಗಾದ್ರೆ, ಬನ್ನಿ ನಾಗರಹಾವು ಚಿತ್ರದ ಮೊದಲ ಶೋ ನೋಡಿದ ಚಿತ್ರಪ್ರೇಮಿಗಳು ಏನು ಹೇಳಿದ್ದಾರೆ ಅಂತ ನೋಡೋಣ.


ನಾಗರಹಾವು ಅದ್ಬುತ

ಈಗ ತಾನೆ ಚಿತ್ರಮಂದಿರದಿಂದ ಹೊರ ಬಂದೆ. ನಿಜಕ್ಕೂ ನಾಗರಹಾವು ಚಿತ್ರ ಅದ್ಬುತವಾಗಿದೆ. ಅತ್ಯುತ್ತಮವಾಗಿದೆ ರಮ್ಯಾ ಅಭಿನಯ'


ಫಸ್ಟ್ ಹಾಫ್ ಗುಡ್

'ನಾಗರಹಾವು ಚಿತ್ರದ ಫಸ್ಟ್ ಹಾಫ್ ಚೆನ್ನಾಗಿದೆ. ಈಗ ಇಂಟರ್ ವಲ್. ಸೆಕೆಂಡ್ ಹಾಫ್ ನಲ್ಲಿ ಫ್ಲ್ಯಾಶ್ ಬ್ಯಾಕ್ ಬರುತ್ತೆ.' ಪ್ರವೀಣ್


ರಮ್ಯಾ ರಾಕ್ಸ್

'ಮೊದಲಾರ್ಧ ಚೆನ್ನಾಗಿದೆ. ನಾಗರಹಾವು ಚಿತ್ರದಲ್ಲಿ ರಮ್ಯಾ ಮಿಂಚಿದ್ದಾರೆ.'-ಎನ್ನುವುದು ಕೆಲವರ ಅಭಿಫ್ರಾಯ


ಸೆಕೆಂಡ್ ಹಾಫ್ ಎಳೆಯಲಾಗಿದೆ

'ಚಿತ್ರದ ದ್ವೀತಿಯಾರ್ಧವನ್ನ ತುಂಬಾ ಎಳೆಯಲಾಗಿದೆ.'


ಅದ್ದೂರಿ ಗ್ರಾಫಿಕ್ಸ್

'ಅದ್ದೂರಿ ಗ್ರಾಫಿಕ್ಸ್ ಹೊಂದಿರುವ ನಾಗರಹಾವು ಅಷ್ಟಕ್ಕಷ್ಟೇ. ವಿಷ್ಣುವರ್ಧನ್ ಅಭಿಮಾನಿಗಳು ನೋಡಲೇಬೇಕಾದ ಚಿತ್ರ'-ಪ್ರಿಯಾಂಕ


ಯಾವುದೇ ಅರ್ಥವಿಲ್ಲ

'ಚಿತ್ರದ ಮೊದಲ ಭಾಗದಲ್ಲಿ ಯಾವುದೇ ಅರ್ಥವಿಲ್ಲ.'-ಮನೋಜ್ ಕುಮಾರ್


ಎರಡನೇ ಭಾಗ ಚೆನ್ನಾಗಿರುತ್ತೆ

'ಚಿತ್ರದ ಮೊದಲ ಭಾಗದಲ್ಲಿ ಯಾವುದೇ ಅರ್ಥವಿಲ್ಲ. ಎರಡನೇ ಭಾಗದಲ್ಲಿ ಹಾಗೆ ಇರಲ್ಲ ಅಂತ ಭಾವಿಸುತ್ತೆನೆ'-ಶ್ಯಾಮ್ ಪ್ರಸಾದ್


ಮಿಶ್ರ ಪ್ರತಿಕ್ರಿಯೆ

ನಿರೀಕ್ಷೆಯಂತೆ ನಾಗರಹಾವು ಜನರನ್ನ ರಂಜಿಸಿದೆ. ಆದ್ರೆ, ಚಿತ್ರದ ಕಥೆಗೆ ಯಾವುದೆ ಅರ್ಥವಿಲ್ಲ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ. ರಮ್ಯಾ ಅವರ ಅಭಿನಯ ನೋಡುಗರಿಗೆ ಖುಷಿ ಕೊಡುತ್ತೆ. ಇನ್ನು ವಿಷ್ಣುವರ್ಧನ್ ಅವರನ್ನ ತೆರೆಮೇಲೆ ನೋಡೋದೆ ಅಭಿಮಾನಿಗಳಿಗೆ ದೊಡ್ಡ ಖುಷಿಯಂತೆ.


English summary
Kannada movie 'Nagarahavu' has hit the screens today (october 14). this movie is receiving good response in twitter. Actress Ramya, Dr Vishnuvardhan and Actor Diganth in the lead role. The movie is directed by Kodi Ramakrishna. Here is the first day first show craze, tweets, audience response.
Please Wait while comments are loading...

Kannada Photos

Go to : More Photos