twitter
    For Quick Alerts
    ALLOW NOTIFICATIONS  
    For Daily Alerts

    'ನೀನಾದೆ ನಾ' ವಿಮರ್ಶೆ: ಪ್ರೀತಿಯ ಚೂಯಿಂಗ್ ಗಮ್

    |

    ಡೈನಮಿಕ್ ಪ್ರಿನ್ಸ್ ಪ್ರಜ್ಚಲ್ ದೇವರಾಜ್ ಅವರು ತಮ್ಮದೇ ಆದಂತಹ ಪ್ರೇಕ್ಷಕರ ವರ್ಗವನ್ನು ಹೊಂದಿರುವ ನಟ. ಸ್ವಂತ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಚಿತ್ರ ಇದಾಗಿರುವ ಕಾರಣ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ಜೊತೆಗೆ ಸ್ವಮೇಕ್ ಚಿತ್ರ ಎಂಬ ತಾಜಾತನಕ್ಕಾಗಿ ಇನ್ನಷ್ಟು ಕುತೂಹಲ ಮೂಡಿಸಿತ್ತು. ಈ ಎಲ್ಲಾ ಅಂಶಗಳನ್ನು ನಿರೀಕ್ಷಿಸಿ ಹೋಗುವ ಪ್ರೇಕ್ಷಕರಿಗೆ 'ನೀನಾದೆ ನಾ' ಚಿತ್ರ ಖಂಡಿತ ಹೊಸ ಅನುಭವವನ್ನು ಕೊಡುತ್ತದೆ.

    'ಜಂಬೂ ಸವಾರಿ' ಚಿತ್ರದ ಬಳಿಕ ಪ್ರಜ್ವಲ್ ದೇವರಾಜ್ ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರವಿದು. ಪ್ರಜ್ವಲ್ ಸಹ ಬ್ರೇಕ್ ನಿರೀಕ್ಷೆಯಲ್ಲಿದ್ದರು. ಜೊತೆಗೆ ತಾಜಾತನದ ಕಥೆಗಾಗಿ ಕಾದಿದ್ದರು ಎನ್ನಿಸುತ್ತದೆ. ನಿರ್ದೇಶಕ ಕಂದಾಸ್ ಅವರು ಅವರ ಎಲ್ಲಾ ಆಸೆಗಳನ್ನು ಈ ಚಿತ್ರದ ಮೂಲಕ ನೆರವೇರಿಸಿದ್ದಾರೆ.

    ಮೇಲ್ಮೋಟಕ್ಕೆ ಇದೊಂದು ಸಿಂಪಲ್ ಕಥೆ ಎನ್ನಿಸಿದರೂ ಸಮಯ ಸರಿದಂತೆ ಪರಿಣಾಮಕಾರಿಯಾಗಿ ಮೂಡಿಬಂದಿರುವ ಅಂಶ ಪ್ರೇಕ್ಷಕರ ಗಮನಕ್ಕೆ ಬಾರದೆ ಇರದು. ಚಿತ್ರದ ಮೊದಲರ್ಧ ಧಾರಾವಾಹಿಗಳ ವೇಗವನ್ನು ನೆನಪಿಸಿ ಪ್ರೇಕ್ಷಕರು ಚಡಪಡಿಸುವಂತೆ ಮಾಡುತ್ತದೆ. ಅಸಲಿ ಕಥೆ ಶುರುವಾಗುವುದೇ ದ್ವಿತೀಯಾರ್ಧದ ನಂತರ. ಚಿತ್ರ ಚೂಯಿಂಗ್ ಗಮ್ ನಂತಿದ್ದರೂ ಜಗಿದಷ್ಟೂ ಖುಷಿ ಕೊಡುತ್ತದೆ.

    Rating:
    3.0/5
    Star Cast: ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ಕಂಡ್ವಾಲ್, ಅಂಕಿತಾ ಮಹೇಶ್ವರಿ
    Director: ಕಂದಾಸ್

    ಮೊದಲರ್ಧಕ್ಕೆ ಕನೆಕ್ಷನ್ ಕೊಡುವ ದ್ವಿತೀಯಾರ್ಧ

    ಮೊದಲರ್ಧಕ್ಕೆ ಕನೆಕ್ಷನ್ ಕೊಡುವ ದ್ವಿತೀಯಾರ್ಧ

    ದ್ವಿತೀಯಾರ್ಧ ನೋಡಿದ ಬಳಿಕ ಮೊದಲರ್ಧಕ್ಕೆ ಪ್ರೇಕ್ಷಕರು ಕನೆಕ್ಟ್ ಆಗುತ್ತಾರೆ. ನಿರ್ದೇಶಕರ ಕಂದಾಸ್ ಅವರ ಜೀವನದಲ್ಲಿ ನಡೆದಂತಹ ನೈಜಕಥೆ ಇದು ಎಂಬುದು ಇನ್ನೊಂದು ವಿಶೇಷ. ಹಾಗಾಗಿ ಅವರು ಕಥೆಯನ್ನು ತರಾತುರಿಯಲ್ಲಿ ಹೇಳಿ ಮುಗಿಸದೆ ಆದಷ್ಟು ನಿಧಾನಕ್ಕೆ ಹೇಳುತ್ತಾ ಸಾಗುತ್ತಾರೆ. ಪ್ರೇಕ್ಷಕರೂ ಫೀಲ್ ಆಗುವಂತೆ ಮಾಡುತ್ತಾರೆ.

    ಪ್ರೀತಿಗಿಂತ ಸ್ನೇಹ ದೊಡ್ಡದು ಎಂಬ ಕಥಾಹಂದರ

    ಪ್ರೀತಿಗಿಂತ ಸ್ನೇಹ ದೊಡ್ಡದು ಎಂಬ ಕಥಾಹಂದರ

    ಇಲ್ಲಿ ಚಿತ್ರದ ನಾಯಕ ದೇವ್ (ಪ್ರಜ್ವಲ್ ದೇವರಾಜ್) ಮದುವೆಯಾಗಿದ್ದರೂ ತನ್ನ ಪತ್ನಿ ಪವಿತ್ರಾ (ಪ್ರಿಯಾಂಕಾ ಕಂಡ್ವಾಲ್) ಜೊತೆಗೆ ಸ್ನೇಹಿತನಂತಿರುತ್ತಾನೆ. ಇಬ್ಬರೂ ಪರಸ್ಪರ ಒಪ್ಪಿ ವಿಚ್ಛೇದನ ಪಡೆದಿದ್ದರೂ ಜೊತೆಯಾಗಿ ಗೆಳೆಯರಂತೆ ಇರುತ್ತಾರೆ. ಪ್ರೀತಿಗಿಂತ ಸ್ನೇಹ ದೊಡ್ಡದು ಎಂಬುದು ಚಿತ್ರದ ಎಳೆ.

    ಕಡೆಗೆ ದೇವ್ ಮತ್ತು ಪವಿತ್ರಾ ಒಂದಾಗುತ್ತಾರಾ?

    ಕಡೆಗೆ ದೇವ್ ಮತ್ತು ಪವಿತ್ರಾ ಒಂದಾಗುತ್ತಾರಾ?

    ಇವರಿಬ್ಬರನ್ನೂ ಒಂದು ಮಾಡಬೇಕೆಂದು ಮನೆಯವರು, ಗೆಳೆಯರು ಬಯಸುತ್ತಾರೆ. ಕಡೆಗೆ ದೇವ್ ಮತ್ತು ಪವಿತ್ರಾ ಒಂದಾಗುತ್ತಾರಾ? ಇಲ್ಲವೇ ಎಂಬುದನ್ನು ತೆರೆಯ ಮೇಲೆ ನೋಡಿದರೇನೇ ಚೆಂದ. ಏಕೆಂದರೆ ಎಲ್ಲರ ನಿರೀಕ್ಷೆಗಳನ್ನೂ ತಲೆಕೆಳಗಾಗಿಸುತ್ತದೆ ಕ್ಲೈಮ್ಯಾಕ್ಸ್!

    ನಿರ್ದೇಶಕರ ಜೀವನದ ಕಥೆ ಇದು

    ನಿರ್ದೇಶಕರ ಜೀವನದ ಕಥೆ ಇದು

    ಇಲ್ಲಿ ಕಥೆಯೇ ಹೀರೋ. ಚಲನಚಿತ್ರ ನಿರ್ದೇಶಕನಾಗಲು ಹೊರಡುವ ಚಿತ್ರದ ಹೀರೋ ದೇವ್ ನಿರ್ಮಾಪಕರಿಗೆ ತಮ್ಮದೇ ಕಥೆಯನ್ನು ಹೇಳುತ್ತಾ ಸಾಗುತ್ತಾರೆ. ಇಲ್ಲಿ ನಿರ್ದೇಶಕರು ಪ್ರಜ್ವಲ್ ದೇವರಾಜ್ ಮೂಲಕ ತಮ್ಮದೇ ಕಥೆಯನ್ನು ಹೇಳುತ್ತಾ ಅವರನ್ನು ಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿರುವುದು ಮೆಚ್ಚಬೇಕಾದ ಅಂಶ.

    ಅರ್ಜುನ್ ಜನ್ಯ ಸಂಗೀತ ಹಿತವಾದ ಮಾಧುರ್ಯ

    ಅರ್ಜುನ್ ಜನ್ಯ ಸಂಗೀತ ಹಿತವಾದ ಮಾಧುರ್ಯ

    ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಹಾಡುಗಳಲ್ಲಿ ಹಿತವಾದ ಮಾಧುರ್ಯವಿದೆ. ಸಂಭಾಷಣೆಯಲ್ಲಿ (ಶ್ರೀಕಾಂತ್ ಹಾಗೂ ಕಂದಾಸ್) ಅಂತಹ ಪಂಚ್ ಇಲ್ಲ ಎಂಬುದನ್ನು ಬಿಟ್ಟರೆ ಅಲ್ಲಲ್ಲಿ ಮನಸ್ಸಿಗೆ ನಾಟುವಂತಹ ಡೈಲಾಗ್ ಗಳು ತೂರಿ ಬರುತ್ತವೆ.

    ಇಬ್ಬರು ಹೀರೋಯಿನ್ ಗಳ ಕಣ್ಣಾಮುಚ್ಚಾಲೆ

    ಇಬ್ಬರು ಹೀರೋಯಿನ್ ಗಳ ಕಣ್ಣಾಮುಚ್ಚಾಲೆ

    ಅವಿನಾಶ್, ಪವಿತ್ರಾ ಲೋಕೇಶ್, ದೊಡ್ಡಣ್ಣ ಪಾತ್ರಗಳು ಅಚ್ಚುಕಟ್ಟಾಗಿ ಮೂಡಿಬಂದಿವೆ. ಬುಲೆಟ್ ಪ್ರಕಾಶ್ ಅವರ ಹಾಸ್ಯ ಅಲ್ಲಲ್ಲಿ ಕಚಗುಳಿ ಇಡುತ್ತದೆ. ಹೊಸಬೆಡಗಿ ಪ್ರಿಯಾಂಕಾ ಕಂಡ್ವಾಲ್ ಮುಖ ಬಿಳಿಚಿದಂತೆ ಕಂಡರೂ ಅಭಿನಯದಲ್ಲಿ ಓಕೆ. ಲಚ್ಚಿಯಾಗಿ ಮತ್ತೊಬ್ಬ ಬೆಡಗಿ ಅಂಕಿತಾ ಮಹೇಶ್ವರಿ ಗಮನಸೆಳೆಯುತ್ತಾರೆ.

    ಧೈರ್ಯವಾಗಿ ಹೋಗಿ ನೋಡಿ

    ಧೈರ್ಯವಾಗಿ ಹೋಗಿ ನೋಡಿ

    ರಿಮೇಕ್ ಚಿತ್ರಗಳನ್ನು ನೋಡಿ ನೋಡಿ ಹಸಿದಿದ್ದ ಪ್ರೇಕ್ಷಕರಿಗೆ ಬಹಳ ದಿನಗಳ ನಂತರ ಮನೆ ಊಟ ಸಿಕ್ಕಂತಾಗಿದೆ. ಪ್ರಜ್ವಲ್ ದೇವರಾಜ್ ಅವರ ನಿರೀಕ್ಷೆಗಳನ್ನು 'ನೀನಾದೆ ನಾ' ಚಿತ್ರ ಹುಸಿ ಮಾಡುವುದಿಲ್ಲ. ಕುಟುಂಬ ಸಮೇತ ಧೈರ್ಯವಾಗಿ ಹೋಗಿ ನೋಡಿ.

    English summary
    Kannada movie Neenade Naa review. The movie is based on the real life experience of Director Khandas. The story is therefore refreshing and new and attempts to have a fresh take on the concepts of love and friendship. Neenade Naa is a Kannada movie starring Dynamic Prince Prajwal Devraj.
    Thursday, September 27, 2018, 13:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X