»   » 'ನಿನ್ನಿಂದಲೇ' ರಿವ್ಯೂ: ಎಡವಟ್ಟಾಯ್ತು ತಲೆಕೆಟ್ಟೋಯ್ತು

'ನಿನ್ನಿಂದಲೇ' ರಿವ್ಯೂ: ಎಡವಟ್ಟಾಯ್ತು ತಲೆಕೆಟ್ಟೋಯ್ತು

Written by: ಉದಯರವಿ
Subscribe to Filmibeat Kannada

ಇದಿಷ್ಟು ಕಥೆ ಹೇಳಲು ಜಯಂತ್ ಸಿ ಪರಾಂಜಿ ಅವರು ನ್ಯೂಯಾರ್ಕ್ ಅನ್ನೇ ಏಕೆ ಆಯ್ಕೆ ಮಾಡಿಕೊಂಡರೋ. ಇಲ್ಲೇ ನಮ್ಮ ಬೆಂಗಳೂರು, ಮೈಸೂರು, ಮಂಗಳೂರು ಆಯ್ಕೆ ಮಾಡಿಕೊಂಡಿದ್ದರೂ ಆಗಿತ್ತು. ನ್ಯೂಯಾರ್ಕ್ ಕಥೆಗೆ ಪೂರಕವಲ್ಲದಿದ್ದರೂ ಅಷ್ಟು ದೂರ ಯಾಕೆ ಹೋದರೋ. ಇಲ್ಲದ ಕಥೆಯನ್ನು ಅನಾವಶ್ಯಕವಾಗಿ ಎಳೆದಿದ್ದಾರೆ. ಈ ರೀತಿಯ ಉದ್ಗಾರಗಳು ಥಿಯೇಟರ್ ನಿಂದ ಹೊರ ಬರುತಿದ್ದಂತೆ ಕಿವಿಗೆ ಬಿದ್ದರೆ ಅಚ್ಚರಿಪಡಬೇಕಾಗಿಲ್ಲ.

ಹೌದು 'ನಿನ್ನಿಂದಲೇ' ಚಿತ್ರದಲ್ಲಿ ಎಲ್ಲವೂ ಇದೆ ಆದರೆ ಅದ್ಭುತ ಕಥೆಯಾಗಲಿ, ಅದಕ್ಕೆ ತಕ್ಕ ನಿರೂಪಣೆಯಾಗಲಿ ಇಲ್ಲದಿರುವುದು ದೊಡ್ಡ ಕೊರತೆ. ಇಲ್ಲದ ಕಥೆಯನ್ನೇ ರಬ್ಬರ್ ನಂತೆ ಎಷ್ಟು ಸಾಧ್ಯವೋ ಅಷ್ಟು ಎಳೆದಿದ್ದಾರೆ ಜಯಂತ್. ಆರಂಭದಲ್ಲಿ ಭರ್ಜರಿ ಟೇಕಾಫ್ ತೆಗೆದುಕೊಳ್ಳುವ ಚಿತ್ರ ಮುಂದೆ ಸಾಗಿದಂತೆ ಪ್ರೇಕ್ಷಕರು ನಿಟ್ಟುಸಿರು ಬಿಡುತ್ತಾರೆ.

ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಹಳ ಹಸಿದಿದ್ದರು. ಕಳೆದ ಒಂದು ವರ್ಷದಿಂದ ಯಾವುದೇ ಚಿತ್ರವಿಲ್ಲದೆ ಚಡಪಡಿಸಿದ್ದರು. ಇಂತಹ ಸಂದರ್ಭದಲ್ಲಿ ಅವರ ನಿರೀಕ್ಷೆಗಳು ಬಹಳಷ್ಟಿದ್ದವು. ಆದರೆ ನಿರ್ದೇಶಕರು ತಣ್ಣೀರೆರಚಿದ್ದಾರೆ ಎನ್ನದೆ ವಿಧಿಯಿಲ್ಲ. ಹಾಗಂತ ಚಿತ್ರ ತೀರಾ ಕಳಪೆ ಎಂದು ಹೇಳುವಂತಿಲ್ಲ.

Rating:
3.0/5

ಚಿತ್ರ: ನಿನ್ನಿಂದಲೇ
ನಿರ್ಮಾಣ: ಹೊಂಬಾಳೆ ಫಿಲಂಸ್ (ವಿಜಯ್ ಕಿರಗಂದೂರು)
ನಿರ್ದೇಶನ, ರಚನೆ: ಜಯಂತ್ ಸಿ ಪರಾಂಜಿ
ಸಂಗೀತ: ಮಣಿಶರ್ಮ
ಛಾಯಾಗ್ರಹಣ: ಪಿ.ಜಿ.ವಿಂದಾ
ಸಂಕಲನ: ಮಾರ್ತಾಂಡ್ ವೆಂಕಟೇಶ್
ತಾರಾಗಣ: ಪುನೀತ್ ರಾಜ್ ಕುಮಾರ್, ಎರಿಕಾ ಫರ್ನಾಂಡೀಸ್, ತಿಲಕ್ ಶೇಖರ್, ಬ್ರಹ್ಮಾನಂದಂ, ಸಾಧು ಕೋಕಿಲಾ, ಅವಿನಾಶ್, ವಿನಾಯಕ ಜೋಷಿ, ಸೋನಿಯಾ ದೀಪ್ತಿ, ಸಿಹಿಕಹಿ ಚಂದ್ರು, ಉಲ್ಲಾಸ್, ಶ್ರೀನಿವಾಸ ಪ್ರಭು ಮುಂತಾದವರು.

ಪುನೀತ್ ಆಕ್ಟಿಂಗ್, ಫೈಟಿಂಗ್ ಮಸ್ತ್ ಆದರೆ...
  

ಪುನೀತ್ ಆಕ್ಟಿಂಗ್, ಫೈಟಿಂಗ್ ಮಸ್ತ್ ಆದರೆ...

ಚಿತ್ರದಲ್ಲಿ ಪುನೀತ್ ಅವರ ಅಭಿನಯ ಅವರ ಹಾವಭಾವ, ಡಾನ್ಸಿಂಗ್, ಫೈಟಿಂಗ್ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿವೆ. ಇನ್ನು ನಾಯಕಿ ಎರಿಕಾ ಫರ್ನಾಂಡೀಸ್ ಅವರು ಅಷ್ಟೇ ಆಗಷ್ಟೇ ಮಾರುಕಟ್ಟೆಗೆ ಬಂದ ಘಮಘಮ ಎನ್ನುವ ತಾಜಾ ಮಲ್ಲಿಗೆ ತರಹ ಕಂಗೊಳಿಸುತ್ತಾರೆ. ಪುನೀತ್ ಗೆ ಪೈಪೋಟಿ ನೀಡುವಂತೆ ಅಭಿನಯಿಸಿದ್ದಾರೆ.

ಬ್ರಹ್ಮಾನಂದಂ ಕಾಮಿಡಿ ಟ್ರ್ಯಾಜಿಡಿಯಾಗಿದೆ
  

ಬ್ರಹ್ಮಾನಂದಂ ಕಾಮಿಡಿ ಟ್ರ್ಯಾಜಿಡಿಯಾಗಿದೆ

ಚಿತ್ರದಲ್ಲಿ ಸಾಕಷ್ಟು ಕಲಾವಿದರಿದ್ದರೂ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲದಿರುವುದು ಇನ್ನೊಂದು ಲೋಪ. ತೆಲುಗಿನ ಅತ್ಯದ್ಭುತ ಕಾಮಿಡಿ ನಟ ಬ್ರಹ್ಮಾನಂದಂ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ಸೋತಿದ್ದಾರೆ. ಇನ್ನು ಸಾಧುಕೋಕಿಲ ಅವರ ಕಾಮಿಡಿಗೆ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ.

ತಾಂತ್ರಿಕವಾಗಿ ಚಿತ್ರ ಅತ್ಯದ್ಭುತ
  

ತಾಂತ್ರಿಕವಾಗಿ ಚಿತ್ರ ಅತ್ಯದ್ಭುತ

ಆದರೆ ಚಿತ್ರ ತಾಂತ್ರಿಕವಾಗಿ ಅತ್ಯದ್ಭುತವಾಗಿದೆ. ನ್ಯೂಯಾರ್ಕ್ ನಲ್ಲಿನ ರಮಣೀಯ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಪಿ.ಜಿ.ವಿಂದಾ ಅವರ ಛಾಯಾಗ್ರಹಣ ಸೂಪರ್. ಮಣಿಶರ್ಮ ಅವರ ಸಂಗೀತದ ಎಲ್ಲಾ ಹಾಡುಗಳನ್ನೂ ಸೊಗಸಾಗಿ ಚಿತ್ರೀಕರಿಸಲಾಗಿದೆ. ಅದರಲ್ಲೂ "ನಿಂತೇ ನಿಂತೇ..." ಹಾಗೂ "ಹಾರು ಹಾರು..." ಎಂಬ ಹಾಡುಗಳ ಮೇಕಿಂಗ್ ಕಣ್ಣಿಗೆ ಹಬ್ಬ.

ಚಿತ್ರದಲ್ಲಿ ರಿಚ್ ಆಗಿರುವ ಕಾಸ್ಟ್ಯೂಮ್ಸ್
  

ಚಿತ್ರದಲ್ಲಿ ರಿಚ್ ಆಗಿರುವ ಕಾಸ್ಟ್ಯೂಮ್ಸ್

ಚಿತ್ರದ ಗಮನಸೆಳೆಯುವ ಅಂಶಗಳಲ್ಲಿ ಸಂಭಾಷಣೆಯೂ ಒಂದು. ಉದಾಹರಣೆಗೆ "ಐಶ್ವರ್ಯಾ ರೈ ಚೆನ್ನಾಗಿದ್ದಾರೆ ಎಂದು ನಮ್ಮಮ್ಮ ಎಂದು ಕರೆಯಕ್ಕೆ ಆಗುತ್ತಾ?", ದೇಶ ಅಂದಾಗ ಭಾರತ ರಾಜ್ಯ ಅಂದಾಗ ಕರ್ನಾಟಕ ಭಾಷೆ ಅಂದ್ರೆ ಕನ್ನಡ ಕನ್ನಡಿಗರು ಈ ರೀತಿಯ ಸಾಕಷ್ಟು ಡೈಲಾಗ್ ಗಳು ಶಿಳ್ಳೆಗಿಟ್ಟಿಸುತ್ತವೆ. ವಿಕಿ ವೆಂಕಟೇಶ್ ಆಗಿ ಪುನೀತ್ ಅವರದು ಲವಲವಿಕೆಯ ಹುರುಪು ತುಂಬುವ ಪಾತ್ರ. ಪ್ರಮೀಳಾ ಪಾತ್ರದಲ್ಲಿ ಮುಗ್ಧವಾಗಿ ಎರಿಕಾ ಕಾಣಿಸುತ್ತಾರೆ.

ಮೈನವಿರೇಳಿಸುವ ಸ್ಕೈ ಡೈವಿಂಗ್ ಸನ್ನಿವೇಶಗಳು
  

ಮೈನವಿರೇಳಿಸುವ ಸ್ಕೈ ಡೈವಿಂಗ್ ಸನ್ನಿವೇಶಗಳು

ಚಿತ್ರದಲ್ಲಿ ಬಳಸಿರುವ ಕಾಸ್ಟ್ಯೂಮ್ಸ್ ಎಂಥವರ ಕಣ್ಣನ್ನೂ ಕುಕ್ಕುತ್ತದೆ. ಸ್ಕೈ ಡೈವಿಂಗ್ ಸನ್ನಿವೇಶಗಳು ಮೈನವಿರೇಳಿಸುವಂತಿವೆ, ಎರಡು ಫೈಟ್ಸ್ ಭರ್ಜರಿಯಾಗಿವೆ. ಇನ್ನು ತಿಲಕ್ ಅವರದು ಯುಎಸ್ ಪೊಲೀಸ್ ಅಧಿಕಾರಿ ಪಾತ್ರ. ಒಬ್ಬ ಗ್ರಾಮೀಣ ಪೊಲೀಸ್ ಪೇದೆ ಮೇಲೆ ಕೈಮಾಡಿದರೆ ಕಥೆ ಏನಾಗುತ್ತದೆ ಎಂದು ಗೊತ್ತಲ್ಲ. ಆದರೆ ಇಲ್ಲಿ ಯುಎಸ್ ಪೊಲೀಸ್ ತಿಲಕ್ ರನ್ನು ವಿಕ್ಕಿ ಬೆಂಡೆತ್ತಿ ಬ್ರೇಕು ಹಾಕುತ್ತಾನೆ. ಆದರೂ ವಿಕ್ಕಿಗೆ ಏನೂ ಆಗಲ್ಲ. ಈ ರೀತಿಯ ಸನ್ನಿವೇಶಗಳಲ್ಲಿ ಜಾಗ್ರತೆ ವಹಿಸಬೇಕಾಗಿತ್ತು.

ಇಷ್ಟಕ್ಕೂ ಕಥೆ ಏನೆಂದರೆ...
  

ಇಷ್ಟಕ್ಕೂ ಕಥೆ ಏನೆಂದರೆ...

ಫ್ರೆಂಡಿಶಿಪ್ ಬೇರೆ ಪ್ರೀತಿ ಬೇರೆ. ಫ್ರೆಂಡ್ ಶಿಪ್ ಎಂಬ ಸಂಬಂಧಕ್ಕೆ ಲವರ್ ಎಂಬ ಲೇಬಲ್ ಅಂಟಿಸಬಾರದು ಎನ್ನುವ ವಿಕಿ ಕಡೆಗೆ ತನ್ನ ಗೆಳತಿ ಪ್ರಮೀಳಾ ಕೈಹಿಡಿಯುತ್ತಾನೆ. ಇದಿಷ್ಟು ಕಥೆಯನ್ನು ಅನಾವಶ್ಯಕವಾಗಿ ಎಳೆಯಲಾಗಿದೆ. ದ್ವಿತೀಯಾರ್ಧದಲ್ಲಿ ಕಥೆಯ ವೇಗ ಆಮೆಯನ್ನು ಓವರ್ ಟೇಕ್ ಮಾಡುವಂತೆ ಸಾಗುತ್ತದೆ. ಆದರೆ ಸುಸ್ತಾಗುವುದು ಮಾತ್ರ ಬಡಪಾಯಿ ಪ್ರೇಕ್ಷಕರು.

ಕೊನೆಯ ಮಾತು
  

ಕೊನೆಯ ಮಾತು

ಉಳಿದಂತೆ ವಿನಾಯಕ ಜೋಶಿ, ಅವಿನಾಶ್, ಉಲ್ಲಾಸ್ ಹಾಗೂ ತೆಲುಗಿನ ಸೋನಿಯಾ ದೀಪ್ತಿ ಅವರ ಪಾತ್ರಗಳು ಇದ್ದೂ ಇಲ್ಲದಂತೆ ಇವೆ. ಮಾರ್ತಾಂಡ್ ಕೆ ವೆಂಕಟೇಶ್ ಅವರ ಎಡಿಟಿಂಗ್ ಟೇಬಲ್ ಮೇಲೆ ಏನಾದರೂ ಕೊಂಚ ಕತ್ತರಿ ಆ ಕಡೆ ಈ ಕಡೆ ಬಿದ್ದಿದ್ದರೆ ಅಸಲಿಗೆ ಮೋಸವಾಗುತ್ತಿತ್ತು. ಅದನ್ನು ಕಂಟ್ರೋಲ್ ಮಾಡುವಲ್ಲಿ ಅವರ ಕೈಚಳಕ ಎದ್ದುಕಾಣುತ್ತದೆ. ಈಗ ಬರುತ್ತಿರುವ ಡಬಲ್ ಮೀನಿಂಗ್, ಕ್ರೈಂ ಥ್ರಿಲ್ಲರ್, ಹಾರರ್ ಚಿತ್ರಗಳಿಗೆ ಹೋಲಿಸಿದರೆ ನಿನ್ನಿಂದಲೇ ಚಿತ್ರ ಶೇಕಡ ನೂರಕ್ಕೆ ನೂರರಷ್ಟು ಉತ್ತಮ.

English summary
Power Star Puneeth Rajkumar & Erica Fernadise lead Kannnada movie 'Ninnindale' review. Ninnindale is a packed family entertainer filled with all the necessary ingredients, which includes simple and cute love story, unexpected twists, thrilling adventurous scenes and melodious songs. First half is too good, and slow pace in the second half is a minor drawback.
Please Wait while comments are loading...

Kannada Photos

Go to : More Photos