twitter
    For Quick Alerts
    ALLOW NOTIFICATIONS  
    For Daily Alerts

    ಭಾವನೆಗಳ ನಿರುತ್ತರಕ್ಕೆ ವಿಮರ್ಶಕರ ಅಭಿಪ್ರಾಯವೇನು!

    ಸಂಬಂಧದ ಸೂಕ್ಷ್ಮತೆಗಳ ಮೇಲೆ ಬೆಳಕು ಚೆಲ್ಲುವ 'ನಿರುತ್ತರ' ಚಿತ್ರವನ್ನು ನೋಡಿದ ಪ್ರೇಕ್ಷಕರು ಕಥೆ ಮತ್ತು ಪ್ರತಿ ದೃಶ್ಯಕ್ಕೂ ರಸುಲ್‌ ಪೂಕುಟ್ಟಿ ಅವರ ಧ್ವನಿ ಸಂಯೋಜನೆ ಸಾಥ್‌ ನೀಡಿರುವ. ನೀಲಾದ್ರಿ ಕುಮಾರ್‌ರ ಸಂಗೀತಕ್ಕೆ ಸೋತು ಭಾವನಾತ್ಮಕವಾಗಿ ಮ

    By Suneel
    |

    ಅಪೂರ್ವ ಕಾಸರವಳ್ಳಿ ನಿರ್ದೇಶನದ ಚೊಚ್ಚಲ ಚಿತ್ರ 'ನಿರುತ್ತರ' ನೆನ್ನೆ (ಡಿಸೆಂಬರ್ 23) ರಾಜ್ಯಾದ್ಯಂತ ಬಿಡುಗಡೆ ಆಗಲದೆ. ಸೆನ್ಸಾರ್ ಅಂಗಳದಿಂದ ಪಾಸ್ ಆಗಿ 'ನಿರುತ್ತರ' ಚಿತ್ರ 'U/A' ಸರ್ಟಿಫಿಕೇಟ್ ಪಡೆದುಕೊಂಡಿತ್ತು.

    ಸಂಬಂಧದ ಸೂಕ್ಷ್ಮತೆಗಳ ಮೇಲೆ ಬೆಳಕು ಚೆಲ್ಲುವ ಈ ಚಿತ್ರವನ್ನು ನೋಡಿದ ಪ್ರೇಕ್ಷಕರು ಕಥೆ ಮತ್ತು ಪ್ರತಿ ದೃಶ್ಯಕ್ಕೂ ರಸುಲ್‌ ಪೂಕುಟ್ಟಿ ಅವರ ಧ್ವನಿ ಸಂಯೋಜನೆ ಸಾಥ್‌, ನೀಲಾದ್ರಿ ಕುಮಾರ್‌ರ ಸಂಗೀತಕ್ಕೆ ಸೋತು ಭಾವನಾತ್ಮಕವಾಗಿ ಮೆಚ್ಚಿಕೊಂಡಿದ್ದಾರೆ. ಈ ಚಿತ್ರಕ್ಕೆ ವಿಮರ್ಶಕರು ಕೂಡ ಮನಸೋತಿದ್ದಾರಾ?[ಭಾವನಾ-ರಾಹುಲ್ ಬೋಸ್ ನಟನೆಯ 'ನಿರುತ್ತರ' ಈ ವಾರ ತೆರೆಗೆ]

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ "ನಿರುತ್ತರ" ಸಿನಿಮಾದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿರಿ.[ರಾಹುಲ್ ಕನ್ನಡ ಉಚ್ಚಾರಣೆ ಕೇಳಿ ಭಾವನಾ 'ನಿರುತ್ತರ']

    ಸಂಬಂಧಗಳ ಸಂಘರ್ಷದ ಪ್ರಶ್ನೋತ್ತರ- ಪ್ರಜಾವಾಣಿ

    ಸಂಬಂಧಗಳ ಸಂಘರ್ಷದ ಪ್ರಶ್ನೋತ್ತರ- ಪ್ರಜಾವಾಣಿ

    ದಾಂಪತ್ಯದಲ್ಲಿ ಬಿರುಕು ಮೂಡಿದಾಗ ಗಂಡ-ಹೆಂಡತಿ ನಡುವೆ 3 ನೆಯವರು ಪ್ರವೇಶಿಸುವ, ಹೆಂಡತಿ ತನಗಿಂತ ಕಿರಿಯ ಹುಡುಗನ ಜತೆ ಸಂಬಂಧ ಬೆಳೆಸುವ ಕಥೆಗಳನ್ನು ಇಟ್ಟುಕೊಂಡ ಸಿನಿಮಾಗಳು ಸಾಕಷ್ಟು ಬಂದಿವೆ. ‘ನಿರುತ್ತರ' ಅಂಥದ್ದೇ ಕಥನದ ಎಳೆಯನ್ನು ಇರಿಸಿಕೊಂಡಿದ್ದರೂ ಪ್ರೇಮ ಸಂಬಂಧದ ಹಲವು ಆಯಾಮಗಳನ್ನ ಆಧುನಿಕ ಬದುಕಿನ ಸಂದರ್ಭದಲ್ಲಿಟ್ಟು ಪರೀಕ್ಷಿಸುವ ರೀತಿಯಿಂದಾಗಿ ಭಿನ್ನವಾಗಿ ನಿಲ್ಲುತ್ತದೆ. ಹೆಣ್ಣಿನ ಬದುಕನ್ನು ನೋಡುವ ಪುರುಷಪ್ರಧಾನ ‘ದೃಷ್ಟಿಕೋನ' ಮತ್ತು ಅವಳ ಜೊತೆಗಿನ ಸಂಬಂಧವನ್ನು ಪರಿಭಾವಿಸುವ ರೂಢಿಗತ ಕ್ರಮವನ್ನೂ ಈ ಸಿನಿಮಾ ದಿಟ್ಟವಾಗಿ ಪ್ರಶ್ನಿಸುತ್ತದೆ. ಸಂಪಾದನೆ ಹಿಂದೆ ಬಿದ್ದು ಪ್ರೇಮದ ಒರತೆಯನ್ನು ಬತ್ತಿಸಿಕೊಂಡವರ ದಾಂಪತ್ಯ ಬದುಕಿನ ಅರ್ಥಹೀನತೆ ಮತ್ತು ಸಮಾಜದ ರಿವಾಜಿನಲ್ಲಿ ‘ಅನೈತಿಕ' ಎಂದು ಪರಿಗಣಿತವಾಗುವ ಸಂಬಂಧದಲ್ಲಿಯೂ ಇರಬಹುದಾದ ಜೀವಂತಿಕೆ ಹಂಸಳ ಬದುಕಿನಲ್ಲಿ ಮುಖಾಮುಖಿಯಾಗುತ್ತವೆ. ಆದರೆ ಮನೆಯವರ ವಿರೋಧವನ್ನೂ ಲೆಕ್ಕಿಸದೇ ಕಟ್ಟಿಕೊಂಡ ದಾಂಪತ್ಯದಿಂದ ಅವಳು ವಿಮುಖಳಾಗಿ ಅಚಿಂತ್‌ನ ತೆಕ್ಕೆಗೆ ಸರಿಯುವುದನ್ನು ಸಮರ್ಥಿಸಿಕೊಳ್ಳುವಾಗ ಮಾತ್ರ ನಿರ್ದೇಶಕರು ಹಗುರವಾದ ಜನಪ್ರಿಯ ಸೂತ್ರಗಳಿಗೆ ಜೋತುಬಿದ್ದಿದ್ದಾರೆ. ಫ್ಲಾಶ್‌ಬ್ಯಾಕ್‌ ಮತ್ತು ಸದ್ಯವನ್ನು ಎಲ್ಲಿಯೂ ಗೊಂದಲಕ್ಕೆ ಎಡೆಯಾಗದಂತೆ ನಿರ್ದೇಶಕರು ಸೊಗಸಾಗಿ ಹೆಣೆದು ಕಥೆ ಹೇಳಿದ್ದಾರೆ.

    ನಿರಂತರ ಉಪೇಕ್ಷೆಗೆ ನಿಲುಕಿದ ಮರುತ್ತರ- ಉದಯವಾಣಿ

    ನಿರಂತರ ಉಪೇಕ್ಷೆಗೆ ನಿಲುಕಿದ ಮರುತ್ತರ- ಉದಯವಾಣಿ

    ಉಸಿರನ್ನು ಅದುಮಿಡಬಹುದು, ನಿಟ್ಟುಸಿರನ್ನಲ್ಲ! ಒಂದಲ್ಲಾ ಒಂದು ರೀತಿ ಪ್ರೀತಿ ಸಿಕ್ಕದೇ ಹೋದಾಗ ನಿಟ್ಟುಸಿರುಗಳು ಮನೆಯನ್ನು ದಾಟಿ ಆಚೆ ಬರುತ್ತದೆ. ಆಚೆ ಬಂದ ನಿಟ್ಟುಸಿರು ಒಂದು ಸಲ ನಿಂತು ಸುತ್ತಲೂ ನೋಡುತ್ತದೆ; ಸಹಾನುಭೂತಿಯನ್ನಲ್ಲ, ಮತ್ತೆ ಪ್ರೀತಿಯನ್ನೇ ಅದು ಭೇಟಿ ಆಗಲು ನೋಡುತ್ತದೆ. ಆ ಭೇಟಿ ಸಮಾಜದ ಕಣ್ಣಿಗೆ ಬೇಟೆ ಆಡುತ್ತಿರುವಂತೆ ಕಾಣುತ್ತದೆ, ತಕ್ಷಣ ಅದಕ್ಕೆ ಅನೈತಿಕ ಅಂತ ಪಟ್ಟ ಕಟ್ಟಿಬಿಡುತ್ತಾರೆ. ಮನಸ್ಸು ಬಯಸುವ ಪ್ರೀತಿ ಸ್ವತ್ಛಂದ ಅಂದಾದಮೇಲೆ ಅದನ್ನು ಪಡೆದುಕೊಳ್ಳುವ ಮಾರ್ಗ ಮಾತ್ರ ಯಾಕೆ ಅನೈತಿಕ? ಹೋಗಲಿ, ಸಮಾಜ ಏನೇ ಹೇಳಲಿ, ನಿನ್ನ ಮನಸ್ಸಿಗಾದರೂ ನೀನು ಬಯಸಿದ ಪ್ರೀತಿ ಸಿಕ್ಕಿತಾ? ಅಥವಾ ಪ್ರೀತಿಯ ಹುಡುಕಾಟವಷ್ಟೇ ಶಾಶ್ವತವಾ? ಅಂಥ ಒಂದು ನಿಟ್ಟುಸಿರು ಬಿಡುವ ಹಂಸ, ಅವಳ ಗಂಡ ಪ್ರದೀಪ್‌ ಹಾಗೂ ಅವಳ ಪ್ರಿಯಕರ ಅಚಿಂತ್‌ ಕತೆಯನ್ನು ನಿರ್ದೇಶಕಿ ಅಪೂರ್ವ ಕಾಸರವಳ್ಳಿ "ನಿರುತ್ತರ' ಹೆಸರಲ್ಲಿ ಹೇಳಿದ್ದಾರೆ, ಮೌನ ಆಕ್ರಂದನಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ಮೊದಲ ಚಿತ್ರದಲ್ಲೇ ಮಾಡಿರುವ ಅಪೂರ್ವ ಅಲ್ಲಲ್ಲಿ ಗೆದ್ದಿದ್ದಾರೆ. ಮಧ್ಯವಯಸ್ಕ ಹೆಣ್ಣಿನ ಹಂಬಲ, ಹೊಯ್ದಾಟಗಳನ್ನು ಸೂಕ್ಷ್ಮವಾಗಿ ಕಣ್ಣೋಟ, ನಿಟ್ಟುಸಿರುಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ಅವರ ಸಮವಾಗಿ ಅಭಿನಯಿಸಲು ಕಿರಣ್‌ ಶ್ರೀನಿವಾಸ್‌ ಪ್ರಯತ್ನಪಟ್ಟಿದ್ದಾರೆ ಮತ್ತು ಅವರ ಪ್ರೀತಿಗೆ ಸೋತಿದ್ದಾರೆ.

    ನಿರುತ್ತರ: ಉತ್ತರದೊಳಗಿನ ನಿರುತ್ತರ -ವಿಜಯಕರ್ನಾಟಕ

    ನಿರುತ್ತರ: ಉತ್ತರದೊಳಗಿನ ನಿರುತ್ತರ -ವಿಜಯಕರ್ನಾಟಕ

    ಬಣ್ಣ ಬದಲಿಸುವ ಚಾಳಿ ಈ ಪ್ರೀತಿಗಿರುವುದೇ ಆಕಾಶದ ಹೋಲಿಕೆಗೆ ಕಾರಣ ಅನ್ನುತ್ತಾನೆ ಆತ. ಹೀಗೆ ಬಣ್ಣ ಬದಲಿಸುವ ಪ್ರೀತಿಯನ್ನು ಹುಡುಕಲು ಹೋಗುವ ಕಥಾ ನಾಯಕಿ ಹಂಸ (ಭಾವನಾ)ಳ ಬದುಕು ಕೊನೆಗೆ ಆಕೆಯನ್ನೇ ನಿರುತ್ತರಳನ್ನಾಗಿ ನಿಲ್ಲಿಸುತ್ತದೆ. ಪ್ರೇಮದ ತೀವ್ರ ಹುಡುಕಾಟದಲ್ಲಿರುವ ಆಕೆ ಏನೆಲ್ಲ ಸಂಕಷ್ಟಗಳನ್ನು ಎದುರಿಸುತ್ತಾಳೋ ಅದೆಲ್ಲವೂ 'ನಿರುತ್ತರ'ದಲ್ಲಿದೆ. ಇದು ವಿಕ್ರಮ್‌ ಹತ್ವಾರ್‌ ಕತೆಯನ್ನು ಆಧರಿಸಿದ ಚಿತ್ರ. ಸಂಬಂಧಗಳ ಸೂಕ್ಷ್ಮತೆಯೇ ಕತೆಯ ಜೀವಾಳ. ಅಂತಹ ಮನುಷ್ಯ ಸಂಬಂಧವನ್ನು ಸಂಗೀತದ ಜತೆ ಬೆರೆಸಿ ಚಿತ್ರ ಮಾಡಿದ್ದಾರೆ ನಿರ್ದೇಶಕ ಅಪೂರ್ವ ಕಾಸರವಳ್ಳಿ. ಸಂಗೀತಕ್ಕೆ ಮನುಷ್ಯ ಭಾವನೆ ಬೇಗ ಬೆರೆಯುವುದರಿಂದ 'ನಿರುತ್ತರ' ವಿಭಿನ್ನ ಪ್ರಯೋಗವಾಗಿ ಕಾಣುತ್ತದೆ. ನಾವೀಗ ಸಾಂಗತ್ಯದ ಬದುಕನ್ನು ಒಪ್ಪಿಕೊಂಡಿದ್ದರಿಂದ ಕತೆಯು ಅಚ್ಚರಿಯಾಗಿ ಕಾಡದು. ಅಸಲಿ ಕತೆ ತೆರೆದುಕೊಳ್ಳುವುದೇ ದ್ವಿತಿಯಾರ್ಧದಲ್ಲಿ. ಅಲ್ಲಿಯವರೆಗೂ ಸಂಗೀತಕ್ಕೆ ಸಂಬಂಧಿಸಿದ ಡಾಕ್ಯುಮೆಂಟರಿ ಅನ್ನುವ ಫೀಲ್‌ ಈ ಚಿತ್ರ ಕೊಡುತ್ತದೆ. ನಿರ್ದೇಶಕ ಅಪೂರ್ವ, ತಂದೆಯ (ಗಿರೀಶ್‌ ಕಾಸರವಳ್ಳಿ) ಕಲಾತ್ಮಕ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ವ್ಯಾಪಾರಿ ಚಿತ್ರಗಳ ರೀತಿಯಲ್ಲಿ ಆಲೋಚನೆ ಮಾಡಿದವರು. ಹಾಗಾಗಿಯೇ ಎರಡೂ ಅಭಿರುಚಿಗಳು ಈ ಚಿತ್ರದಲ್ಲಿವೆ. ವ್ಯಾಪಾರಿ ಸಿನಿಮಾದ ಅಂಶಗಳ ಜತೆಗೆ ಅಲ್ಲಲ್ಲಿ ರೂಪಕಗಳನ್ನು ಕಟ್ಟಿಕೊಡುತ್ತಾರೆ ನಿರ್ದೇಶಕರು. ಮರಕ್ಕೂ ಹೆಣ್ಣಿನ ಜನ್ಮಕ್ಕೂ ಹೋಲಿಕೆ ಮಾಡಿದ ರೀತಿ ಚೆನ್ನಾಗಿದೆ. ಪ್ರತಿ ದೃಶ್ಯಕ್ಕೂ ರಸುಲ್‌ ಪೂಕುಟ್ಟಿ ಅವರ ಧ್ವನಿ ಸಂಯೋಜನೆ ಸಾಥ್‌ ನೀಡುತ್ತದೆ. ನೀಲಾದ್ರಿ ಕುಮಾರ್‌ರ ಸಂಗೀತ ಸಿನಿಮಾದ ನಿಜ ನಾಯಕ.

    Niruttara Movie Review - The Times of India

    Niruttara Movie Review - The Times of India

    Director Apurva Kasaravalli's debut vehicle explores modern-day relationships. All the characters come from upper middle-class settings and the film is glossy and rich in production values. With so much going for it you think everything would be perfect, but the film just falls short of that because of its length, which makes it seem over indulging in the narrative. The film begins on a rather dramatic note, which leads the viewers to take a look at what happened in the lives of four people - a rock musician, a documentary filmmaker, a corporate honcho and his music-loving wife. The film explores the consequences of their paths crossing each others'.

    English summary
    Director Apurva Kasaravalli's debut vehicle explores modern day relationships. Here is What Reviewers say about Kannada Movie Niruttara.
    Saturday, December 24, 2016, 15:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X