twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ಪುನೀತ್ 'ಪವರ್'ಫುಲ್ ಪರಮಾತ್ಮ

    |

    "ಇನ್ನೊಂದು ಸಲ ಚಾನ್ಸ್ ಕೊಡೋಕೆ ನಾನೇನು ಸಿನಿಮಾ ಪ್ರೊಡ್ಯೂಸರೂ ಅಲ್ಲ ಡೈರೆಕ್ಟರೂ ಅಲ್ಲ ಪೊಲೀಸ್" ಎನ್ನುತ್ತಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಇದೇ ಮೊಟ್ಟ ಮೊದಲ ಬಾರಿಗೆ ಖಾಕಿ ತೊಟ್ಟ ಅವರು ಪ್ರೇಕ್ಷಕರಿಂದ ಭರ್ಜರಿ ಶಿಳ್ಳೆ ಗಿಟ್ಟಿಸಿದ್ದಾರೆ.

    ಪವರ್ ತೆಲುಗಿನ ದೂಕುಡು ಚಿತ್ರದ ರೀಮೇಕ್ ಆದರೂ ಕನ್ನಡಕ್ಕೆ ಅಚ್ಚುಕಟ್ಟಾಗಿ ತಂದಿದ್ದಾರೆ ನಿರ್ದೇಶಕ ಕೆ ಮಾದೇಶ್. ತೆಲುಗಿನ ನಿರ್ಮಾಪಕರೇ ಇಲ್ಲೂ ಬಂಡವಾಳ ಹೂಡಿರುವ ಕಾರಣ ಮೇಕಿಂಗ್ ನಲ್ಲಿ ಎಲ್ಲೂ ರಾಜಿಯಾಗಿಲ್ಲ. ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ.

    ತೆಲುಗು ನಟ ಮಹೇಶ್ ಬಾಬು ಅವರಿಗೆ ಎರ್ರಾಬಿರ್ರಿ ಡಾನ್ಸ್ ಮಾಡಲು ಬರುವುದಿಲ್ಲ. ಆದರೆ ಇಲ್ಲಿ ಪುನೀತ್ ರಾಜ್ ಕುಮಾರ್ ಅವರು ಧೂಳೆಬ್ಬಿಸಿದ್ದಾರೆ. ಪುನೀತ್ ಅವರು ಬಹಳಷ್ಟು ರಿಸ್ಕ್ ತೆಗೆದುಕೊಂಡು ತುಂಬಾ ಕಷ್ಟಕರವಾದ ಸ್ಟೆಪ್ಸ್ ಹಾಕಿ ಪ್ರೇಕ್ಷಕರನ್ನು ಚಕಿತಗೊಳಿಸುತ್ತಾರೆ. ಚಿತ್ರದ ಟೈಟಲ್ ನಲ್ಲೇ ಮೂರು ಸ್ಟಾರ್ ಇರುವುದರಿಂದ ನಾವು ಇನ್ನೂ ಅರ್ಧ ಸ್ಟಾರ್ ಹೆಚ್ಚಿಗೆ ಕೊಡುತ್ತಿದ್ದೇವೆ!

    Rating:
    3.5/5
    Star Cast: ಪುನೀತ್ ರಾಜ್‌ಕುಮಾರ್, ತ್ರಿಷಾ ಕೃಷ್ಣನ್, ಪ್ರಭು, ರಂಗಾಯಣ ರಘು, ಕೆಲ್ಲಿ ಡಾರ್ಜಿ
    Director: ಕೆ ಮಾದೇಶ್

    ಪಾತ್ರಕ್ಕೆ ಜೀವ ತುಂಬಿದ ಪುನೀತ್ ರಾಜ್ ಕುಮಾರ್

    ಪಾತ್ರಕ್ಕೆ ಜೀವ ತುಂಬಿದ ಪುನೀತ್ ರಾಜ್ ಕುಮಾರ್

    ತಂದೆತಾಯಿ ಮಕ್ಕಳಿಗಾಗಿ ತ್ಯಾಗ ಮಾಡುವುದು ಕಾಮನ್. ಅದೇ ತನ್ನ ತಂದೆಗಾಗಿ ಮಗ ಎಂಥಹ ಸಾಹಸ ಮಾಡುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ. ಐಪಿಎಸ್ ಅಧಿಕಾರಿ ಭರತ್ ಆಗಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪಾತ್ರಕ್ಕೆ ಜೀವತುಂಬಿದ್ದಾರೆ. ಅವರ ತಂದೆ ಪಾತ್ರವನ್ನು ಶಿವಾಜಿ ಪ್ರಭು ಪೋಷಿಸಿದ್ದಾರೆ.

    ಕೋಮಾದಿಂದ ಹೊರಬರುವ ತಂದೆ

    ಕೋಮಾದಿಂದ ಹೊರಬರುವ ತಂದೆ

    ಹದಿನಾಲ್ಕು ವರ್ಷ ಕೋಮಾದಲ್ಲಿ ತಂದೆಗೆ (ಪ್ರಭು) ಅಲ್ಲಿಂದ ಹೊರಬರುತ್ತಾರೆ. ಆದರೆ ಇವರನ್ನು ಯವುದೇ ಶಾಕಿಂಗ್ ಗೆ ಗುರಿಯಾಗದಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಎಚ್ಚರಿಸುತ್ತಾರೆ. ಅದಕ್ಕಾಗಿ ಅವರ ಮಗ (ಪುನೀತ್) ತನ್ನ ತಂದೆಗೆ ಹಳೆಯ ಘಟನೆಗಳು ನೆನಪಿಗೆ ಬರದಂತೆ ನೋಡಿಕೊಳ್ಳಲು ಮಾಡುವ ಪ್ರಯತ್ನವೇ ಚಿತ್ರದ ಕಥೆ.

    ಕಡೆಗೆ ತಂದೆಗೆ ಸತ್ಯ ಗೊತ್ತಾಗುತ್ತಾ?

    ಕಡೆಗೆ ತಂದೆಗೆ ಸತ್ಯ ಗೊತ್ತಾಗುತ್ತಾ?

    ತನ್ನ ತಂದೆಯನ್ನು ಈ ಸ್ಥಿತಿಗೆ ತಂದವರನ್ನು ಮುಗಿಸಲು ಭರತ್ ಏನೆಲ್ಲಾ ಸಾಹಸ ಮಾಡುತ್ತಾನೆ. ಐಪಿಎಸ್ ಆಫೀಸರ್ ಆಗಿರುವ ಭರತ್ ಎಂಎಲ್ಎ ತರಹ ನಟಿಸುತ್ತಾನೆ. ತನ್ನ ತಂದೆಗೆ ಅಣ್ಣಾವ್ರ ಇನ್ನೂ ಬದುಕಿದ್ದಾರೆ ಎಂದು ನಂಬಿಸುತ್ತಾನೆ. ಕಡೆಗೆ ತಂದೆಗೆ ಸತ್ಯ ಗೊತ್ತಾಗುತ್ತಾ? ಅವರು ಮತ್ತೆ ಶಾಕ್ ಗೆ ಗುರಿಯಾಗುತ್ತಾರಾ ಎಂಬುದನ್ನು ತೆರೆಯ ಮೇಲೆ ನೋಡಿದರೇನೇ ಚೆಂದ.

    ಚಿತ್ರದಲ್ಲಿ ವರನಟ ಡಾ.ರಾಜ್ ಕುಮಾರ್ ಪ್ರಸ್ತಾಪ

    ಚಿತ್ರದಲ್ಲಿ ವರನಟ ಡಾ.ರಾಜ್ ಕುಮಾರ್ ಪ್ರಸ್ತಾಪ

    ಚಿತ್ರದಲ್ಲಿ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಗೋಕಾಕ್ ಚಳವಳಿ ಪ್ರಸ್ತಾಪ ಇರುವುದು, ರಾಜ್ ರನ್ನು ಅಭಿಮಾನಿಸುವ ರಾಜಕಾರಣಿಯಾಗಿ, ಜನರನ್ನೇ ದೇವರೆಂದು ಭಾವಿಸುವ ಎಂಎಲ್ಎ ಆಗಿ ಶಿವಾಜಿ ಪ್ರಭು ಅವರು ಕೃಷ್ಣಮೂರ್ತಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಮೂಲ ಚಿತ್ರದಲ್ಲಿ ಪ್ರಕಾಶ್ ರೈ ಈ ಪಾತ್ರ ಪೋಷಿಸಿದ್ದರು.

    ಆಕ್ಷನ್ ಜೊತೆಗೆ ಕಾಮಿಡಿ ಸನ್ನಿವೇಶಗಳಿಗೆ ಒತ್ತು

    ಆಕ್ಷನ್ ಜೊತೆಗೆ ಕಾಮಿಡಿ ಸನ್ನಿವೇಶಗಳಿಗೆ ಒತ್ತು

    ಈ ಚಿತ್ರದಲ್ಲಿ ಆಕ್ಷನ್ ಸನ್ನಿವೇಶಗಳಿಗೆ ಕೊಟ್ಟಷ್ಟೇ ಒತ್ತನ್ನು ಕಾಮಿಡಿ ಸನ್ನಿವೇಶಗಳಿಗೂ ಕೊಟ್ಟಿರುವುದು ವಿಶೇಷ. ಆ ಕಾರಣಕ್ಕೆ ಪ್ರೇಕ್ಷಕರು ಸೀಟು ಬಿಟ್ಟು ಕದಲದಂತೆ ಮಾಡುತ್ತದೆ. ಪಿವಿ ಭೂಷನ್ ಅಲಿಯಾಸ್ ಪದ್ಮವಿಭೂಷಣ್ ಆಗಿ ರಂಗಾಯಣ ರಘು ಹೊಟ್ಟೆ ತುಂಬ ನಗಿಸುತ್ತಾರೆ. ನಗುತ್ತಿರುವವರಿಗೆ ಮತ್ತಷ್ಟು ಕಚಗುಳಿ ಇಡುತ್ತದೆ ಸಾಧು ಕೋಕಿಲ ಪಾತ್ರ.

    ಪುನೀತ್ ಡಾನ್ಸಿಂಗ್ ಪವರ್ ಸೂಪರ್

    ಪುನೀತ್ ಡಾನ್ಸಿಂಗ್ ಪವರ್ ಸೂಪರ್

    ಈ ಚಿತ್ರದ ಸಂಪೂರ್ಣ ಕ್ರೆಡಿಟ್ ಡೆಬಿಟ್ ಸಲ್ಲುವುದು ತೆಲುಗಿನ ನಿರ್ದೇಶಕ ಶ್ರೀನು ವೈಟ್ಲ ಅವರಿಗಾದರೂ ಪುನೀತ್ ಅವರಲ್ಲಿರುವ ಡಾನ್ಸಿಂಗ್ ಪವರನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ ಮಾದೇಶ್. ಅಷ್ಟರ ಮಟ್ಟಿಗೆ ಅವರು ಗೆದ್ದಿದ್ದಾರೆ ಎಂದೇ ಹೇಳಬೇಕು.

    ತ್ರಿಷಾ ಕೃಷ್ಣನ್ ತೊಳೆದಿಟ್ಟ ಪನ್ನೇರಳೆ ಹಣ್ಣು

    ತ್ರಿಷಾ ಕೃಷ್ಣನ್ ತೊಳೆದಿಟ್ಟ ಪನ್ನೇರಳೆ ಹಣ್ಣು

    ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸಿರುವ ತ್ರಿಷಾ ಕೃಷ್ಣನ್ ಅವರ ಸ್ನಿಗ್ಧ ಚೆಲುವಿಗೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗುತ್ತಾರೆ. ಚಿತ್ರದಲ್ಲಿ ಅವರು ತೊಳೆದಿಟ್ಟ ಪನ್ನೇರಳೆ ಹಣ್ಣಿನಂತೆ ಲಕಲಕ ಹೊಳೆಯುತ್ತಾರೆ. ತಮ್ಮ ಪಾತ್ರದಲ್ಲೂ ಅವರು ಸಂಪೂರ್ಣ ತೊಡಗಿಕೊಂಡಿದ್ದು ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ.

    ಮೂಲ ಚಿತ್ರದ ಟ್ಯೂನ್ ಗಳೇ ಇಲ್ಲೂ ರಿಪೀಟ್

    ಮೂಲ ಚಿತ್ರದ ಟ್ಯೂನ್ ಗಳೇ ಇಲ್ಲೂ ರಿಪೀಟ್

    ಇನ್ನು ಎಸ್ ತಮನ್ ಅವರು ಮೂಲ ಚಿತ್ರದ ಟ್ಯೂನ್ ಗಳನ್ನೇ ಇಲ್ಲೂ ಬಳಸಿಕೊಂಡಿದ್ದಾರೆ. ಧಂ ಪವರ್, ಗುರುವಾರ ಸಂಜೆ, ಜಗತ್ತೇ ನಮ್ದು ಹಾಡುಗಳು ನೆನಪಿನಲ್ಲಿ ಉಳಿಯುತ್ತವೆ.

    ಕೆಲ್ಲಿ ದೋರ್ಜಿ ಗಮನಾರ್ಹ ಅಭಿನಯ

    ಕೆಲ್ಲಿ ದೋರ್ಜಿ ಗಮನಾರ್ಹ ಅಭಿನಯ

    ದೀಪು ಎಸ್ ಕುಮಾರ್ ಅವರ ಸಂಕಲನ, ಕೃಷ್ಣ ಕುಮಾರ ಅವರ ಛಾಯಾಗ್ರಹಣ ಮೂಲ ಚಿತ್ರಕ್ಕೆ ಸರಿಸಮನಾಗಿದೆ. ಖಳನಟನಾಗಿ ಕೆಲ್ಲಿ ದೋರ್ಜಿ ಗಮನಾರ್ಹ ಅಭಿನಯ ನೀಡಿದ್ದಾರೆ. ತಿಲಕ್ ಶೇಖರ್, ಶೋಭರಾಜ್, ಅವಿನಾಶ್, ದೊಡ್ಡಣ್ಣ, ಶಶಿಕುಮಾರ್, ಹರೀಶ್ ರಾಜ್, ಶರತ್ ಲೋಹಿತಾಶ್ವ, ಮಂಡ್ಯ ರಮೇಶ್ ಪಾತ್ರಗಳು ನೆನಪಿನಲ್ಲಿ ಉಳಿಯುವಂತಿದೆ.

    ಕಡೆಗೂ ಕಾಡು ಪ್ರಶ್ನೆ...?

    ಕಡೆಗೂ ಕಾಡು ಪ್ರಶ್ನೆ...?

    ಒಟ್ಟಾರೆಯಾಗಿ ಮಾಸ್ ಅಂಶಗಳಿಂದ ತುಂಬಿರುವ ಈ ಚಿತ್ರದಲ್ಲಿ ಫ್ಯಾಮಿಲಿ ಆಡಿಯನ್ಸ್ ಗೆ ಬೇಕಾಗುವ ಸರಕೂ ಇದೆ. ಪುನೀತ್ ಅಭಿಮಾನಿಗಳನ್ನು ರಂಜಿಸುವ ಭರ್ಜರಿ ಅಂಶಗಳೂ ಇವೆ. ಕೊನೆಯದಾಗಿ ಕಾಡುವ ಪ್ರಶ್ನೆ ಎಂದರೆ ಇದೇ ರೀತಿಯ ಅದ್ದೂರಿ ಚಿತ್ರ ಸ್ವಮೇಕ್ ಮಾಡಲು ಸಾಧ್ಯವಿಲ್ಲವೇ?

    English summary
    Kannada movie Power *** review. Puneeth Rajkumar does a fantastic job as the super cop. While Mahesh Babu was excellent in Dookudu, Puneet beats him with his dancing skills. Puneet's dancing in the movie has been top notch. Trisha looks very glamorous in the movie and her voice over has been perfect. The movie will not let down the viewers at any point. It is a complete entertainment package for the Powerstar Fans.
    Saturday, September 29, 2018, 18:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X