twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ಇದು ಗಂಗ್ನಮ್ ಸ್ಟೈಲ್ ಅಲ್ಲ ರಂಗನ್ ಸ್ಟೈಲ್

    |

    ಇಂದಿನ ಯುವಕರು ಫೇಸ್ ಬುಕ್ ಚಾಟಿಂಗನ್ನು ಅತಿಯಾಗಿ ಮೋಹಿಸಿದರೆ ಏನೆಲ್ಲಾ ಎಡವಟ್ಟುಗಳಾಗುತ್ತವೆ? ಹೇಗೆಲ್ಲಾ ಯುವಕರು ಮೋಸಹೋಗುತ್ತಾರೆ ಎಂಬ ಫ್ರೆಶ್ ಸಬ್ಜೆಕ್ಟ್ ಇಟ್ಟುಕೊಂಡು ಎಸ್.ಪ್ರಶಾಂತ್ ಅವರು ಒಳ್ಳೆಯ ಸಂದೇಶಾತ್ಮಕ ಚಿತ್ರವನ್ನು 'ರಂಗನ್ ಸ್ಟೈಲ್' ಚಿತ್ರದ ಮೂಲಕ ಕೊಟ್ಟಿದ್ದಾರೆ.

    ಸ್ಟೈಲಿಶ್ ಆಗಿರುವ ಹುಡುಗನ ಜೀವನದಲ್ಲಿ ಒಬ್ಬ ಹುಡುಗಿ ಬಂದತೆ ಏನಾಗುತ್ತದೆ, ಅವನ ಲೈಫ್ ಹೇಗೆ ಟರ್ನ್ ತೆಗೆದುಕೊಳ್ಳುತ್ತದೆ, ದುರಂತಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದೆ ಚಿತ್ರದ ಕಥಾವಸ್ತು. [ಕನ್ನಡ ಚಿತ್ರವಿಮರ್ಶೆಗಳನ್ನು ಓದಿ]

    Rating:
    3.0/5
    Star Cast: ಪ್ರದೀಪ್, ಕನ್ನಿಕಾ ತಿವಾರಿ, ದೀಪಿಕಾ ದಾಸ್
    Director: ಎಸ್. ಪ್ರಶಾಂತ್

    'ಜಾಲಿ ಡೇಸ್, ಪೆರೋಲ್, ಕೃಷ್ಣನ್ ಲವ್ ಸ್ಟೋರಿ ಆಟ, ಕೆಂಪೇಗೌಡ, ಚಿಂಗಾರಿ ಚಿತ್ರಗಳು ಪ್ರದೀಪ್ ಗೆ ಅಷ್ಟಾಗಿ ಹೆಸರು ತರಲಿಲ್ಲ. ಆದರೆ ರಂಗನ್ ಸ್ಟೈಲ್ ನಲ್ಲಿ ಮಾತ್ರ ತಮ್ಮದೇ ಆದಂತಹ ಛಾಪು ಮೂಡಿಸಿದ್ದಾರೆ. ಇಲ್ಲಿ ಅವರದೇ ಆದಂತಹ ಸ್ಟೈಲ್ ಇದೆ. ಫೇಸ್ ಬುಕ್ ಕಲ್ಚರ್ ಗೆ ಮಾರುಹೋಗುತ್ತಿರುವ ಯೂತ್ ಗೆ ಒಂದು ಒಳ್ಳೆಯ ಸಂದೇಶವೂ ಇದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

    ಕಾಲೇಜು ಹುಡುಗಿಯ ಹೃದಯ ಗೆಲ್ಲುವ ರಂಗ

    ಕಾಲೇಜು ಹುಡುಗಿಯ ಹೃದಯ ಗೆಲ್ಲುವ ರಂಗ

    ಸಿ.ಡಿ ಅಂಗಡಿ ನಡೆಸುವ ರಂಗ (ಪ್ರದೀಪ್) ಸುಂದರ ಕಾಲೇಜು ಹುಡಿಗಿಯೊಬ್ಬಳು (ಕನ್ನಿಕಾ ತಿವಾರಿ) ತನ್ನ ಕಡೆ ನೋಡಿದಳು, ಕೈಬೀಸಿದಳು ಎಂದು ಲವ್ವಲ್ಲಿ ಬೀಳುತ್ತಾನೆ. ಅವಳ ಹಿಂದೆ ಅಲೆಯುತ್ತಾನೆ. ಕಡೆಗೆ ಅವಳ ಹೃದಯವನ್ನೂ ಗೆಲ್ಲುತ್ತಾನೆ. ಆದರೆ ಇನ್ಯಾರೊಂದಿಗೋ ನಡೆಸಿದ ಫೇಸ್ ಬುಕ್ ಚಾಟಿಂಗ್ ಅವನನ್ನು ಬಲಿ ತೆಗೆದುಕೊಳ್ಳುತ್ತದೆ.

    ಕಡೆಗೆ ರಂಗ ಏನಾಗುತ್ತಾನೆ ಎಂಬುದೇ ಟ್ವಿಸ್ಟ್

    ಕಡೆಗೆ ರಂಗ ಏನಾಗುತ್ತಾನೆ ಎಂಬುದೇ ಟ್ವಿಸ್ಟ್

    ಅದು ಏನು ಎಂಬುದನ್ನು ನೀವು ತೆರೆಯ ಮೇಲೆ ನೋಡಿದರೇನೇ ಚೆಂದ. ರಂಗ ಲವ್ ಮಾಡುವ ದಿವ್ಯಾ (ಕನ್ನಿಕಾ ತಿವಾರಿ) ದೊಡ್ಡಪ್ಪನಾಗಿ ಶರತ್ ಲೋಹಿತಾಶ್ವ ಅವರದು ಲೈಟ್ ಆಗಿ ಖಳನಟನ ಶೇಡ್ ಇರುವ ಪಾತ್ರ. ಆರಂಭದಲ್ಲಿ ಎಗರಾಡುವ ಅವರು ಕೊನೆಕೊನೆಗೆ ಸಾಫ್ಟ್ ಆಗುತ್ತಾರೆ.

    ಮುಗ್ಧ ಹುಡುಗಿಯಾಗಿ ಕನ್ನಿಕಾ ತಿವಾರಿ

    ಮುಗ್ಧ ಹುಡುಗಿಯಾಗಿ ಕನ್ನಿಕಾ ತಿವಾರಿ

    ಇನ್ನು ಮುಗ್ಧ ಹುಡುಗಿಯಾಗಿ ಕನ್ನಿಕಾ ತಿವಾರಿ ಗಮನಸೆಳೆಯುತ್ತಾರೆ. ಆದರೆ ಸೆಂಟಿಮೆಂಟ್ ದೃಶ್ಯಗಳಲ್ಲಿ ಯಾಕೋ ಸ್ವಲ್ಪ ಡಲ್ ಆಗಿ ಕಾಣುತ್ತಾರೆ. ಚಿತ್ರದಲ್ಲಿ ಅಲ್ಲಲ್ಲಿ ಬರುವ ಸೆಂಟಿಮೆಂಟ್ ಸನ್ನಿವೇಶಗಳು ಕಥೆ ಇನ್ನೊಂದಿಷ್ಟು ತೂಕ ತಂದುಕೊಟ್ಟಿವೆ.

    ಕಣ್ಣಿಗೆ ತಂಪೆರೆಯುವ ಸಿನಿಟೆಕ್ ಸೂರಿ ಛಾಯಾಗ್ರಹಣ

    ಕಣ್ಣಿಗೆ ತಂಪೆರೆಯುವ ಸಿನಿಟೆಕ್ ಸೂರಿ ಛಾಯಾಗ್ರಹಣ

    ಛಾಯಾಗ್ರಹಣವಂತೂ (ಸಿನಿಟೆಕ್ ಸೂರಿ) ತಾಜಾ ತಂಗಾಳಿಯಂತೆ ಕಣ್ಣಿಗೆ ರಾಚುತ್ತದೆ. ಗಂಗಮ್ಮನ ಸ್ಟೈಲ್ ಡಾನ್ಸ್ ಗಂಗ್ನಮ್ ಸ್ಟೈಲ್ ನಷ್ಟು ಇಲ್ಲದಿದ್ದರೂ ಪರ್ವಾಗಿಲ್ಲ ಎಂಬ ಮಟ್ಟಿಗಿದೆ. ಹಿಂದಿಯ 'ಕಾಮಿಡೀ ಸರ್ಕಸ್' ಖ್ಯಾತಿಯ ಭಾರತಿ ಸಿಂಗ್ ಅವರು "ಗಂಗಮ್ಮನ್ ಸ್ಟೈಲ್" ಹಾಡಿನಲ್ಲಿ ಅವರ ದಢೂತಿ ದೇಹದ ತೂಕಕ್ಕೆ ತಕ್ಕಂತೆ ಕುಣಿದಿದ್ದಾರೆ.

    ಮಂಜು ಮಾಂಡವ್ಯ ಪಂಚಿಂಗ್ ಸಂಭಾಷಣೆ

    ಮಂಜು ಮಾಂಡವ್ಯ ಪಂಚಿಂಗ್ ಸಂಭಾಷಣೆ

    ಚಿತ್ರದ ಗಮನಸೆಳೆಯುವ ಅಂಶಗಳಲ್ಲಿ ಮಂಜು ಮಾಂಡವ್ಯ ಅವರ ಪಂಚಿಂಗ್ ಸಂಭಾಷಣೆಯೂ ಒಂದು. ಸ್ಯಾಂಪಲ್ ಗೆ ಒಂದೆರಡು ಡೈಲಾಗ್ ಗಳು...ಲವ್ವರ್ಸ್ ಗೆ ಎಸ್ ಎಂಎಸ್ಸೆ ಆಕ್ಸಿಜನ್, ಕಿಸ್ಸೆ ಗ್ಲೂಕೋಸು. ಇನ್ನೊಂದು ಕಡೆ ಸಾಧು ಕೋಕಿಲಾ ಅವರು ರೇಖಾ ದಾಸ್ ಗೆ ಮಲ್ಲಿಗೆ ಹೂವು ತಂದಿದ್ದೀನಿ ರೆಡಿಯಾಗು ಕಬಡ್ಡಿಗೆ ಅಂತಾರೆ ಆಗ ರೇಖಾ ದಾಸ್: "ಮೊದಲು ಕುಂಟಾಬಿಲ್ಲೆ ಆಡೋದು ಕಲಿತ್ಕೋ ಆಮೇಲೆ ಕಬಡ್ಡಿ ಆಡೀಯಂತೆ"

    ಕಾಮಿಡಿಗೂ ಸಾಕಷ್ಟು ಜಾಗ ನೀಡಲಾಗಿದೆ

    ಕಾಮಿಡಿಗೂ ಸಾಕಷ್ಟು ಜಾಗ ನೀಡಲಾಗಿದೆ

    ಚಿತ್ರದಲ್ಲಿ ಕಾಮಿಡಿಗೂ ಸಾಕಷ್ಟು ಸ್ಥಾನ ನೀಡಲಾಗಿದೆ. ಸಾಧು ಕೋಕಿಲ, ರೇಖಾ ದಾಸ್, ತಬಲಾ ನಾಣಿ ಅವರ ಅಭಿನಯಕ್ಕೆ ನಗು ತಡೆದುಕೊಳ್ಳಲು ಸಾಧ್ಯವಾಗಲ್ಲ. ಅದರಲ್ಲೂ ಸಾಧು ಹಾಗೂ ರೇಖಾ ದಾಸ್ ಅವರ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ.

    ಚಿಂದಿ ಉಡಾಯಿಸಿರುವ ಕಿಚ್ಚ ಸುದೀಪ್

    ಚಿಂದಿ ಉಡಾಯಿಸಿರುವ ಕಿಚ್ಚ ಸುದೀಪ್

    ಗೆಸ್ಟ್ ಅಪಿಯರೆನ್ಸ್ ನಲ್ಲಿ ಸುದೀಪ್ ಚಿಂದಿ ಉಡಾಯಿಸಿದ್ದಾರೆ. ಅವರ ಮೈಮೇಲೆ ಖಾಕಿ ಇಲ್ಲದಿದ್ದರು ಕೆಂಪೇಗೌಡ, ವೀರಮದಕರಿ ಆವಾಹನೆಯಾದಂತೆ ಡೈಲಾಗ್ ಹೊಡೆದು ಅಭಿಮಾನಿಗಳ ಶಿಳ್ಳೆ ಗಿಟ್ಟಿಸುತ್ತಾರೆ. ಅನ್ ಎಕ್ಸ್ ಪೆಕ್ಟೆಡ್ ಆಗಿ ಸತ್ತರೆ ಪಾಪ ಅಂತಾರೆ, ಆಯುಸ್ಸು ಮುಗಿದು ಸತ್ತರೆ ಅಯ್ಯೋ ಅಂತಾರೆ, ಸುಸೈಡ್ ಮಾಡಿಕೊಂಡು ಸತ್ತರೆ ಹೇಡಿ ಅಂತಾರೆ ಎಂದು ಪ್ರೇಮಿಗಳಲ್ಲಿ ಧೈರ್ಯ ತುಂಬುತ್ತಾರೆ.

    ಗುರುಕಿರಣ್ ಸಂಗೀತ ಎಂಜಾಯ್ ಮಾಡಬಹುದು

    ಗುರುಕಿರಣ್ ಸಂಗೀತ ಎಂಜಾಯ್ ಮಾಡಬಹುದು

    ಗುರುಕಿರಣ್ ಸಂಗೀತ "ಕಪ್ಪಾಗಿದ್ರು ಪರ್ವಾಗಿಲ್ಲ ಹುಡುಗೀರ್ದು...ಫೇಸು" ಎಂಬ ಹಾಡಿನ ಮೇಕಿಂಗ್ ಚೆನ್ನಾಗಿ ಮೂಡಿಬಂದಿದೆ. ಉಳಿದ ಹಾಡುಗಳು ಎಂಜಾಯ್ ಮಾಡುವಂತಿವೆ. ಗಂಗಮ್ಮನ ಸ್ಟೈಲ್ ಹಾಡು ನಿರೀಕ್ಷಿಸಿದ ಮಟ್ಟದಲ್ಲಿಲ್ಲ.

    ಮೊದಲರ್ಧ ಫುಶ್ ಫುಲ್ ಆದರೆ ದ್ವಿತೀಯಾರ್ಧ

    ಮೊದಲರ್ಧ ಫುಶ್ ಫುಲ್ ಆದರೆ ದ್ವಿತೀಯಾರ್ಧ

    ಚಿತ್ರದ ಮೊದಲರ್ಧ ಫುಶ್ ಫುಲ್ ರೈಲಿನಂತೆ ಬಹಳ ವೇಗವಾಗಿ ಸಾಗಿ ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಕೊಂಚ ವೇಗ ಕಡಿಮೆಯಾದರೂ ಮುಂದೇನಾಗುತ್ತದೆ ಎಂಬ ಕುತೂಹಲದಲ್ಲಿ ಕಥೆ ಸಾಗುತ್ತದೆ. ಪಿ.ಆರ್. ಸೌಂದರ್ ರಾಜ್ ಅವರ ಸಂಕಲನ ಇದಕ್ಕೆ ಸಾಥ್ ನೀಡುತ್ತದೆ.

    ಒಮ್ಮೆ ನೋಡಬೇಕಾದ ಸಿನಿಮಾ ಇದು

    ಒಮ್ಮೆ ನೋಡಬೇಕಾದ ಸಿನಿಮಾ ಇದು

    ಇದೊಂದು ನೈಜ ಕಥೆಯಾದ ಕಾರಣ ನಿರ್ದೇಶಕರು ಆ ಕಥೆಗೆ ಸಂಪೂರ್ಣ ನ್ಯಾಯ ಸಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಅಂತ್ಯಕ್ಕೆ ಇನ್ನೊಂದು ಸಿನಿಮೀಯ ತಿರುವು ನೀಡಬಹುದಾಗಿತ್ತು ಎನ್ನಿಸುತ್ತದೆ. ಪ್ರೇಕ್ಷಕರು ಛೇ ಎಂದು ಬೇಸರಿಸಿಕೊಳ್ಳುತ್ತಿರಲಿಲ್ಲ. ಫೇಸ್ ಬುಕ್ ಚಾಟಿಂಗ್ ಪ್ರೇಮಿಗಳು, ಲವ್ ಮಾಡುತ್ತಿರುವವರು, ಯುವಕರು/ಯುವತಿಯರು ಒಮ್ಮೆ ನೋಡಬೇಕಾದ ಸಿನಿಮಾ 'ರಂಗನ್ ಸ್ಟೈಲ್'.

    English summary
    Kannada movie Rangan Style review. It is filled with style, dialogues are different and Pradeep body language is also raw in looks. Overall it is an One time entertainer.
    Saturday, September 29, 2018, 18:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X