»   » ಅಬ್ಬರಿಸಿ, ಬೊಬ್ಬಿರಿಯುತ್ತಿರುವ 'ರಥಾವರ'ನ ಬಗ್ಗೆ ವಿಮರ್ಶಕರು ಏನಂದ್ರು?

ಅಬ್ಬರಿಸಿ, ಬೊಬ್ಬಿರಿಯುತ್ತಿರುವ 'ರಥಾವರ'ನ ಬಗ್ಗೆ ವಿಮರ್ಶಕರು ಏನಂದ್ರು?

Posted by:
Subscribe to Filmibeat Kannada

ಮಂಗಳಮುಖಿಯರ ಜೀವನಶೈಲಿ ಹಾಗು ಅವರ ಬಗ್ಗೆ ಕಳಕಳಿಯ ಸಂದೇಶ ಹೊತ್ತ 'ರಥಾವರ' ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಎಮ್ ಎಲ್ ಎಯ ನಿಷ್ಠಾವಂತನಾಗಿ ಶ್ರೀಮುರಳಿ , ಡಿಂಪಲ್ ಕ್ವೀನ್ ರಚಿತಾ ರಾಮ್, ರವಿಶಂಕರ್, 'ಭಜರಂಗಿ' ಲೋಕಿ, ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ, 'ರಥಾವರ' ನಿಗೆ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಆಕ್ಷನ್-ಕಟ್ ಹೇಳಿದ್ದಾರೆ.

ಚೊಚ್ಚಲ ನಿರ್ದೇಶನದಲ್ಲೇ ವಿಭಿನ್ನ ಪ್ರಯತ್ನ ಮಾಡಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿರುವ ಚಂದ್ರಶೇಖರ ಬಂಡಿಯಪ್ಪ ಅವರ ಮೊದಲ ಪ್ರಯತ್ನ ಹೇಗಿದೆ.? ಜೊತೆಗೆ ಕನ್ನಡ ದಿನಪತ್ರಿಕೆಯ ಖ್ಯಾತ ಚಿತ್ರ ವಿಮರ್ಶಕರು 'ರಥಾವರ'ನ ಬಗ್ಗೆ ಏನು ಹೇಳಿದ್ದಾರೆ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

'ಚೆಂದದ ಕತೆಯೊಳಗೇ ಉಂಟು ಹೊಂದದ ರಾಗಮಾಲಿಕೆ' - ಉದಯವಾಣಿ

ರೌಡಿಸಂ ಕೆಟ್ಟದ್ದು ಅನ್ನುವ ನಮ್ಮ ಚಿತ್ರರಂಗದ ಅನಾದಿ ಕಾಲದ ಫಿಲಾಸಫಿಯನ್ನೇ ಬೇರೆ ಥರ ಹೇಳುವ ಪ್ರಯತ್ನವನ್ನು ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಮಾಡಿದ್ದಾರೆ. ಹಾಗಾಗಿ ಈ ಕತೆ ತುಂಬ ಹೊಸತಾಗಿ ನಮಗೆ ಇಷ್ಟವಾಗುತ್ತದೆ. ರಾಜಕೀಯ ಮಹತ್ವಾಕಾಂಕ್ಷೆಯ ಬೆಟ್ಟಕ್ಕೆ ಕಲ್ಲು ಹೊರುವ ಹುಡುಗನನ್ನು ಬಳಸಿಕೊಂಡು, ತಾನು ಮುಖ್ಯಮಂತ್ರಿ ಆಗುವ ಆಸೆ ಈಡೇರಿಸಿಕೊಳ್ಳಲು ನೋಡುತ್ತಾನೆ. ಅದು ತೆಗೆದುಕೊಳ್ಳುವ ತಿರುವನ್ನು ತುಂಬ ಚಂದದಿಂದ, ತುಂಬ ತೀವ್ರವಾಗಿ, ಹಲವು ಕಡೆ ತುಂಬ ಲೌಡ್ ಆಗಿ ಹೇಳಲು ನಿರ್ದೇಶಕರು ಪ್ರಯತ್ನಪಟ್ಟಿದ್ದಾರೆ. - ವಿಕಾಸ್ ನೇಗಿಲೋಣಿ

'ರಥಬೀದಿಯಲ್ಲಿ ಕುರುಕ್ಷೇತ್ರ' - ಪ್ರಜಾವಾಣಿ

ಮೃತಪಟ್ಟ ಹಿಜ್ಡಾಗಳ ಮುಖ ನೋಡಿದರೆ ಓಳಿತಾಗುತ್ತದೆ ಎನ್ನುವ ನಂಬಿಕೆ ಮತ್ತು ಆ ಸುತ್ತ ಒಳಿತು-ಕೆಡುಕುಗಳನ್ನು ಇಲ್ಲಿನ ಚಿತ್ರಕಥೆಯಲ್ಲಿ ಮುಖ್ಯ ಎಳೆಯಾಗಿ ಬಳಸಿಕೊಳ್ಳಲಾಗಿದೆ. ಕ್ಲೈಮ್ಯಾಕ್ಸ್ ನಲ್ಲಿ ಹಿಜ್ಡಾಗಳ ಎಳೆ ಇಟ್ಟುಕೊಂಡು ಕೊಂಚ ಕಸರತ್ತು ನಡೆಸಿದ್ದರೆ, 'ರಥಾವರ' ಮತ್ತಷ್ಟು ಗಟ್ಟಿಕೊಳ್ಳುತ್ತಿತ್ತು. ರಥ ಮತ್ತು ನವಮಿಯ ಪ್ರೇಮಕಥೆಯೂ ಗಾಢವಾಗಿಲ್ಲ. ಒಬ್ಬ ಸ್ಟಾರ್ ನಟಿ ಬೇಕು ಎನ್ನುವಂತೆ ರಚಿತಾ ಇಲ್ಲಿದ್ದಾರೆ ಅಷ್ಟೇ. ಪಾತ್ರಕ್ಕೂ ಕಿಮ್ಮತ್ತಿಲ್ಲ. - ಡಿ.ಎಂ.ಕುರ್ಕೆ ಪ್ರಶಾಂತ್

'ಸರಿ ತಪ್ಪು ಮಾಸ್ ಮತ್ತು!' - ವಿಜಯವಾಣಿ

ಸರಿ-ತಪ್ಪು ಅರಿವಾಗುವ ಮೊದಲೇ ಪಾಪಿಗಳ ಲೋಕಕ್ಕೆ ಕಾಲಿರಿಸಿದ್ದಾನೆ ನಾಯಕ; ವಿಷಯ ಏನು ಅಂತ ಗೊತ್ತಾಗುವುದರೊಳಗೆ ಮಾಸ್ ಮತ್ತಿನಲ್ಲಿ ಮುಳುಗುತ್ತಾನೆ ಪ್ರೇಕ್ಷಕ. 'ರಥಾವರ' ಸ್ಪೆಷಲ್ ಇದು. ಅನಗತ್ಯ ಪೀಠಿಕೆಗೆ ಅವಕಾಶ ಕೊಡದೆ, ಟೈಟಲ್ ಕಾರ್ಡ್ ನಿಂದಲೇ ನೋಡುಗನ ಮನಸ್ಸು ಆವರಿಸಿಕೊಳ್ಳುತ್ತದೆ ನಿರೂಪಣೆ, ಸ್ನೇಹ, ಪ್ರೀತಿ, ಹಾಸ್ಯ, ಸೆಂಟಿಮೆಂಟ್ ಎಲ್ಲವೂ ಇಲ್ಲಿದೆ. ಮಾರಾಮಾರಿಯ 'ರಥ'ದಲ್ಲಿ ಅವೆಲ್ಲ ಬಿಡಿಭಾಗಗಳಷ್ಟೇ.

'ಹೊಸ ದಾರಿಯಲ್ಲಿ ಹೊರಟ ರಥ' - ಕನ್ನಡಪ್ರಭ

'ಬದಲಾವಣೆ' ಎಂಬುದು ಮತ್ತೆ ಮತ್ತೆ ರಿಪೀಟ್ ಆದರೆ ಅದನ್ನು ಮೀರಲಾಗದೆ ಒದ್ದಾಡುವ ಅಪಾಯಗಳಿವೆ. ಯಾಕೆಂದರೆ ಪಲ್ಯ ರುಚಿಯಾಗಿದ್ದರೂ ಅದೇ ಊಟವಾಗಬಾರದು ಎನ್ನುವ ಸತ್ಯ ಶ್ರೀಮುರಳಿಗೂ ಮನವರಿಕೆಯಾಗಿರುತ್ತದೆಂಬ ಭರವಸೆಯಲ್ಲೇ 'ರಥಾವರ'ದ ಬಗ್ಗೆ ಮಾತನಾಡುವುದಾದರೆ ಪಕ್ಕಾ ಮಾಸ್ ಅಪೀಲ್ ಚಿತ್ರ. ಹಾಗಾದರೆ ಕ್ಲಾಸ್ ಗೆ? ಅವರಿಗೂ ಇಷ್ಟವಾಗುತ್ತದೆ ಎನ್ನುವುದಕ್ಕೆ ಚಿತ್ರದಲ್ಲಿ ಮುದ್ದಾದ ಪ್ರೇಮಕಥೆ ಇದೆ. ಸೆಂಟಿಮೆಂಟ್ ನ ತಂಗಾಳಿಯೂ ಇದೆ. ಪಡ್ಡೆ ಹುಡುಗರನ್ನು ಕುಣಿಸುವ ಹಾಡು, ಡೈಲಾಗ್ ಗಳ ಅಬ್ಬರವೂ ಇಲ್ಲುಂಟು.- ಆರ್ ಕೇಶವಮೂರ್ತಿ

English summary
Kannada Movie 'Rathaavara' Critics Review. Actor Srimurali, Actress Rachita Ram Starrer 'Rathavara' has received mixed response from the critics. Here is the collection of reviews by Top News Papers of Karnataka. The movie is directed by debut director Chandrashekar Bandiyappa.
Please Wait while comments are loading...

Kannada Photos

Go to : More Photos