twitter
    For Quick Alerts
    ALLOW NOTIFICATIONS  
    For Daily Alerts

    ದುನಿಯಾ ವಿಜಯ್ 'RX ಸೂರಿ' ಚಿತ್ರದ ಬಗ್ಗೆ ವಿಮರ್ಶಕರು ಏನಂದ್ರು?

    By Harshitha
    |

    ದುನಿಯಾ ವಿಜಯ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'RX ಸೂರಿ'. ಇದು ನೈಜ ಕಥೆ ಆಧರಿಸಿರುವ ಚಿತ್ರ. ಅದ್ರಲ್ಲೂ, ಆಂಧ್ರ ನೆಲದ ಪರಿಟಾಲ ರವಿ-ಸೂರಿ ನಡುವಿನ ರಕ್ತ ಚರಿತ್ರೆ ಈ ಸಿನಿಮಾ ಅನ್ನುವ ಕಾರಣಕ್ಕೆ ಭಾರಿ ಪ್ರಚಾರ ಗಿಟ್ಟಿಸಿತ್ತು.

    ನವ ನಿರ್ದೇಶಕ ಶ್ರೀ ಜೈ ನಿರ್ದೇಶಿಸಿರುವ 'RX ಸೂರಿ' ಈ ವಾರ ರಿಲೀಸ್ ಆಗಿದೆ. ಚಿತ್ರಕ್ಕೆ ಒಳ್ಳೆ ಓಪನ್ನಿಂಗ್ ಸಿಕ್ಕಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದ ಶಿವರಾಜ್ ಕುಮಾರ್ ಕೂಡ 'RX ಸೂರಿ' ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ['RX ಸೂರಿ' ಚಿತ್ರ ನೋಡಿ ಸೀಟಿ ಹೊಡೆದ ಶಿವಣ್ಣ]

    ಆದ್ರೆ ವಿಮರ್ಶಕರು ಚಿತ್ರದ ಬಗ್ಗೆ ಏನು ಹೇಳ್ತಾರೆ. 'RX ಸೂರಿ' ರೈಡ್ ನ ವಿಮರ್ಶಕರು ಎಂಜಾಯ್ ಮಾಡಿದ್ರಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು 'RX ಸೂರಿ' ಚಿತ್ರದ ಬಗ್ಗೆ ನೀಡಿರುವ ವಿಮರ್ಶೆ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.......

    ರಕ್ತಚರಿತ್ರೆಯ ಹೊಸ ಪುಟ! - ಪ್ರಜಾವಾಣಿ

    ರಕ್ತಚರಿತ್ರೆಯ ಹೊಸ ಪುಟ! - ಪ್ರಜಾವಾಣಿ

    ತಂಗಿಯ ಮೊಬೈಲ್‌ಗೆ ಪೋಲಿಗಳು ಕಳುಹಿಸಿದ ಅಶ್ಲೀಲ ಚಿತ್ರಗಳಿಂದ ಕೆರಳುವ ಸೂರಿ (ವಿಜಯ್) ಅವರನ್ನು ಬಡಿಯುತ್ತಾನೆ. ಆ ಪೋಲಿಗಳ ರಕ್ಷಣೆಗೆ ಧಾವಿಸುವ ಡಾನ್ ಕ್ವಾಟ್ರುನನ್ನು ಕೊಲ್ಲುವ ಮೂಲಕ ಸೂರಿಯ ಹೆಸರು ಪೊಲೀಸ್ ಠಾಣೆಯ ‘ರೌಡಿಗಳ ಪಟ್ಟಿ'ಗೆ ಸೇರುತ್ತದೆ. ಮುಂದಿನದೆಲ್ಲ ರಕ್ತಪರ್ವ! ರೌಡಿ ಪಾಳೇಪಟ್ಟಿನಲ್ಲಿ ಹೆಸರಿಗಾಗಿ ಸ್ನೇಹಿತರೇ ಶತ್ರುಗಳಾಗುವುದು, ರೌಡಿ ಹಣೆಪಟ್ಟಿ ಹೊತ್ತವನನ್ನು ಸಮಾಜ ನೋಡುವ ಬಗೆ, ಕುಟುಂಬದ ಮನಸ್ಥಿತಿಗಳು- ಹೀಗೆ ರೌಡಿ ಜಗತ್ತಿನ ಹಲವು ವಿಷಯಗಳನ್ನು ‘ಆರ್ಎಕ್ಸ್ ಸೂರಿ' ಚಿತ್ರ ಹೇಳುತ್ತದೆ. - ಡಿ.ಎಂ.ಕುರ್ಕೆ ಪ್ರಶಾಂತ

    ಆರ್.ಎಕ್ಸ್.ಸೂರಿ, ಬರೀ ಶಬ್ಧ, ಮೈಲೇಜೇ ಇಲ್ಲ, ಪ್ರೇಕ್ಷಕನಿಗೆ ಬರೀ ಹೊಗೆ - ಕನ್ನಡಪ್ರಭ

    ಆರ್.ಎಕ್ಸ್.ಸೂರಿ, ಬರೀ ಶಬ್ಧ, ಮೈಲೇಜೇ ಇಲ್ಲ, ಪ್ರೇಕ್ಷಕನಿಗೆ ಬರೀ ಹೊಗೆ - ಕನ್ನಡಪ್ರಭ

    ಸಿನಿಮಾದಲ್ಲಿ ಏನಿದೆ ಎಂದರೆ ರೌಡಿಸಮ್ ಇದೆ, ಲಾಂಗು ಮಚ್ಚುಗಳ ಸುಲಲಿತ ಬೀಸಾಟ ಇದೆ, ತಾಳಲಾರದ ಹಿರೋಯಿಸಂ ಇದೆ, ಅತಿರೇಕವೆಂದರೆ ಅತಿರೇಕವೆನಿಸುವ ನಟನೆಯಿದೆ, ನಗೆಪಾಟಲಿನಂತೆ ಕಾಣುವ ಭಾವನಾತ್ಮಕ ದೃಶ್ಯಗಳಿವೆ, ವಾಕರಿಕೆ ತರಿಸುವ ಸೊಂಟದ ಕೆಳಗಿನ ಸಂಭಾಷಣೆಯುಳ್ಳ ಕಾಮಿಡಿ ಟ್ರ್ಯಾಕ್ ಇದೆ, ಅಬ್ಬರಿಸಿ ಬೊಬ್ಬಿರಿವ ಸಂಗೀತವಿದೆ, ಎಂದೋ ಹಳಸಿದ ಚಿತ್ರಕಥೆಯಿದೆ. ಚೊಚ್ಚಲ ನಿರ್ದೇಶಕ ಶ್ರೀ ಜಯ್ ಸಿನೆಮಾದ ಎಲ್ಲ ವಿಭಾಗಗಳಲ್ಲೂ ದಾರಿ ತಪ್ಪಿದ್ದಾರೆ. ಆಕಸ್ಮಿಕವಾಗಿ ಭೂಗತಲೋಕಕ್ಕೆ ಬಂದು, ತನ್ನವರ ದ್ರೋಹದಿಂದಲೇ ಹತನಾಗುವುದು ಜೊತೆಗೊಂದು ಪ್ರೇಮ ಕಥೆ ತುರುಕುವುದು ಬಹುಶಃ ಇಂದಿಗೆ ಪ್ರಾಚೀನ ಎನ್ನುವಷ್ಟು ಹಳೆಯ ಕಥೆ ಇದನ್ನು ಮತ್ತೆ ರಚಿಸಿದ್ದೇನೆ ಎಂದು ಹೇಳುವ ನಿರ್ದೇಶಕನ ದಾರ್ಷ್ಟ್ಯಕ್ಕೆ ಮರುಗಬೇಕೋ, ಸಿಡುಕಬೇಕೋ ಎಂಬುದು ಪ್ರೇಕ್ಷಕನ ದ್ವಂದ್ವ. ಇದಕ್ಕೆ ತಕ್ಕಂತೆ ಬಳಸಿರುವ ದುನಿಯಾ ವಿಜಯ್ ಅವರ ಅತೀ ಸಾಧಾರಣ ನಟನೆ, ಆದರೆ ಅವರ ಅತಿರಂಜಿತ ಹಿರೋಯಿಸಂ. ವಿಜಯ್ಗೆ ಸೆಡ್ಡು ಹೊಡೆದು ತಮ್ಮ ಹಿಂದಿನ ಸಿನೆಮಾಗಳ ಅತಿರೇಕತೆಯನ್ನು ಮೀರಿ ನಟಿಸಿರುವ ರವಿಶಂಕರ್, ವಲ್ಗರ್ ಎನಿಸುವ ಸಾಧು ಕೋಕಿಲಾ ಮತ್ತು ಬುಲೆಟ್ ಪ್ರಕಾಶ್ ಹಾಸ್ಯ ಟ್ರ್ಯಾಕ್, ಪ್ರಶಾಂತ್ ಸಿದ್ಧಿಯ ಕೆಟ್ಟ ನಟನೆ ಪ್ರೇಕ್ಷಕನನ್ನು ಬುಲೆಟ್ ವೇಗದಲ್ಲಿ ಸಿನೆಮಾ ಮಂದಿರದಿಂದ ಒದ್ದೋಡಿಸುತ್ತದೆ. ಗಟ್ಟಿ ಮನಸ್ಸು ಮಾಡಿ ಕೂತವರಿಗೆ ಮಾತ್ರ ಸಿನೆಮಾ ಮುಂದೆಯೇ ಹೋಗುವುದಿಲ್ಲ. ಸಿನೆಮಾ ದೃಶ್ಯಗಳಲ್ಲಿ ಮಚ್ಚು ಲಾಂಗುಗಳಿಂದ ರಕ್ತ ಹೊಳೆ ಹರಿಸುತ್ತಿದ್ದರೆ, ಅರ್ಜುನ್ ಜನ್ಯ ಸಂಗೀತ ಆಯುಧಗಳಿಲ್ಲದೆಯೇ ಕಿವಿಗಳಲ್ಲಿ ರಕ್ತ ಸುರಿಸುತ್ತದೆ. ಅದಕ್ಕೆ ಗೀತರಚನಕಾರರು ಸಕತ್ ಸಾಥ್ ನೀಡಿದ್ದಾರೆ. ದೃಶ್ಯಗಳು ಎಲ್ಲಿ ಮುಗಿಯುತ್ತವೆ ಮತ್ತೆಲ್ಲಿ ಪ್ರಾರಂಭವಾಗುತ್ತವೆ ಏಕೆ ಹೀಗೆ ಎಂದು ಪ್ರಶ್ನೆ ಹಾಕಿಕೊಂಡರೆ ತಲೆನೋವು ಖಚಿತ. ಆ ಮಟ್ಟಿಗಿದೆ ಸಂಕಲನಕಾರನ ಕೆಲಸ. - ಗುರುಪ್ರಸಾದ್ ನಾರಾಯಣ

    ಆರ್.ಎಕ್ಸ್.ಸೂರಿಗೆ ಅಪಘಾತ, ಗಾಯಗೊಂಡ ಪ್ರೇಕ್ಷಕ! - ವಿಜಯ ಕರ್ನಾಟಕ

    ಆರ್.ಎಕ್ಸ್.ಸೂರಿಗೆ ಅಪಘಾತ, ಗಾಯಗೊಂಡ ಪ್ರೇಕ್ಷಕ! - ವಿಜಯ ಕರ್ನಾಟಕ

    ದುನಿಯಾ ವಿಜಯ್ ಅಭಿನಯದ 'ಆರ್.ಎಕ್ಸ್.ಸೂರಿ' ಚಿತ್ರಕ್ಕೆ ಅಪಘಾತ ಆಗಿದೆ. ಪ್ರೇಕ್ಷಕರು ಗಾಯಗೊಂಡು, ಚಿತ್ರದ ತಾರಾಬಳಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೌದು, ಈ ಚಿತ್ರದ ಬಗ್ಗೆ ಇನ್ನಿಲ್ಲದ ನಿರೀಕ್ಷೆ ಹುಟ್ಟು ಹಾಕಲಾಗಿತ್ತು. ಸುಖಾ ಸುಮ್ಮನೇ ತೆಲುಗಿನ ಪೆರಿಟಾಲ್ ರವಿ, ಸೂರಿ ನಡುವಿನ ಕಾಳಗದ ಸಿನಿಮಾ ಇದು ಎಂಬ ಪ್ರಚಾರ ಮಾಡಲಾಗಿತ್ತು. ಆದರೆ ಇಲ್ಲಿ ರವಿಯ ಬೆಳಕೂ ಇಲ್ಲ, ಸೂರಿಯ ತಾಕತ್ತೂ ಇಲ್ಲ. ನಾಯಕ, ಖಳ ನಾಯಕನ ನಡುವೆ ನಡೆಯುವ ಸಾಧಾರಣ ಜಿದ್ದಾಜಿದ್ದಿಯ ಕತೆ ಇಲ್ಲಿದೆ. - ಎಚ್.ಮಹೇಶ್

    Movie review ‘RX Suri’: Breakdown as the engine seizes! - Deccan Chronicle

    Movie review ‘RX Suri’: Breakdown as the engine seizes! - Deccan Chronicle

    After forgetful Daksha and Jackson, there was some hope in the ‘air' for an entertaining ride with RX Suri, but it turns out to be one hell of a bumpy ride which assures a definite injury if dared to stay on to it till the final break down.
    After all that gaga over story being inspired by the real life of an underworld don, reality bites when it is revealed that the protagonist is a small time local rowdy with a gang of handful men amongst them one ‘obviously' being unfaithful. By now we have all the basics of RX Suri: Rowdies, chasing to death sequences, a regular adda (place), tit-bits of family sentiments, police enquiries and then comes the icing on top - a love story and most of all, the main villain with an only aim to hack Suri to death to avenge the killing of his mentor. - Shashiprasad S M

    Movie Review: RX Suri - Bangalore mirror

    Movie Review: RX Suri - Bangalore mirror

    It was not a statutory requirement, but in the end there is the usual sermon that those who live by the sword (in this case the Sandalwood rowdy's preferred weapon longu) die by it. Until that point the film is an inglorious glorification of rowdyism supported by misogynist characters and cheap comedy. Overall RX Suri is a slap on sensibilities. The film is a throwback to the kind of films a hordeof realtors-turned-producers churned out a few years ago. - Shyam Prasad S

    English summary
    Kannada Actor Duniya Vijay starrer 'RX Suri' has received mixed response from the critics. Here is the collection of reviews from Karnataka's leading News Papers.
    Saturday, September 5, 2015, 16:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X