twitter
    For Quick Alerts
    ALLOW NOTIFICATIONS  
    For Daily Alerts

    'Straight ಸಂತು..' ಬಗ್ಗೆ ವಿಮರ್ಶಕರು ಏನು ಹೇಳ್ತಾರೆ?

    ಭಾವಿ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಕಾಣಿಸಿಕೊಂಡಿರುವ 'ಸಂತು Straight Forward' ನಿನ್ನೆ (ಅಕ್ಟೋಬರ್ 28) ಹಲವು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಚಿತ್ರದ ಬಗ್ಗೆ ವಿಮರ್ಶಕರು ಕೂಡ ರೆಸ್ಪಾನ್ಸ್ ನೀಡಿದ್ದಾರೆ. ವಿಮರ್ಶಕರ ವಿಮರ್ಶೆ..

    By Suneetha
    |

    ಸದ್ಯದಲ್ಲೇ ಸಪ್ತಪದಿ ತುಳಿಯಲು ತಯಾರಾಗಿ ನಿಂತಿರುವ ಮುದ್ದಾದ ಜೋಡಿ, ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಸತತ ನಾಲ್ಕನೇ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ 'ಸಂತು Straight Forward' ದೀಪಾವಳಿ ಹಬ್ಬಕ್ಕೆ ಗ್ರ್ಯಾಂಡ್ ಆಗಿ ತೆರೆ ಕಂಡಿದೆ.

    ಪಕ್ಕಾ ಕಮರ್ಷಿಯಲ್ ಸಿನಿಮಾಗೆ ಗಂಟು ಬಿದ್ದಿರುವ ನಿರ್ದೇಶಕ ಮಹೇಶ್ ರಾವ್ ಅವರು, ಯಶ್ ಅವರ ಅಭಿಮಾನಿಗಳಿಗಾಗಿಯೇ ಸಿನಿಮಾ ಮಾಡಿದಂತಿದೆ. ಅದ್ಧೂರಿ ಹಾಡುಗಳು, ಯಶ್ ಗೆ ಕೊಡಲೇಬೇಕಾದ ಬಿಲ್ಡಪ್, ಇದರ ಜೊತೆಗೆ ಲವ್-ಸೆಂಟಿಮೆಂಟ್ ದೃಶ್ಯಗಳು.[ವಿಮರ್ಶೆ: ಸ್ಟ್ರೈಟ್ ಆಗಿ ಹೇಳ್ಬೇಕಂದ್ರೆ ಸ್ಟೋರಿ ಸುಮಾರು, 'ಸಂತು' ಸೂಪರ್ರು!]

    ಫಸ್ಟ್ ಡೇ ಫಸ್ಟ್ ಶೋ ನೋಡಿದ ಯಶ್-ರಾಧಿಕಾ ಅಭಿಮಾನಿಗಳು ಮಾತ್ರ ಸಿನಿಮಾ ಸೂಪರ್ ಎಂದಿದ್ದಾರೆ. ಕೆ.ಮಂಜು ನಿರ್ಮಾಣದಲ್ಲಿ ಮೂಡಿಬಂದಿದ್ದ 'ಸಂತು Straight Forward' ಚಿತ್ರದಲ್ಲಿ ತಮಿಳಿನ 'ವಾಲು' ಚಿತ್ರದ ಛಾಯೆ ಅಲ್ಲಲ್ಲಿ ಎದ್ದು ಕಾಣುತ್ತಿದೆ ಎಂಬುದು ವಿಮರ್ಶಕರ ಅಭಿಪ್ರಾಯ.

    ಲವ್-ರೋಮ್ಯಾನ್ಸ್, ಆಕ್ಷನ್-ಡ್ರಾಮ 'ಸಂತು....' ಬಗ್ಗೆ ಕನ್ನಡದ ಖ್ಯಾತ ವಿಮರ್ಶಕರು ಬರೆದ ವಿಮರ್ಶೆಯ ಕಲೆಕ್ಷನ್ಸ್ ನೋಡಲು ಮುಂದೆ ಓದಿ...

    'ಸೂತ್ರಪ್ರಿಯ ಸಂತು!' - ಪ್ರಜಾವಾಣಿ

    'ಸೂತ್ರಪ್ರಿಯ ಸಂತು!' - ಪ್ರಜಾವಾಣಿ

    ನಾಲ್ಕೆಂಟು ಆಕ್ಷನ್, ಲವ್ ಸಬ್ಜೆಕ್ಟ್ ಇರುವ ಕಮರ್ಷಿಯಲ್ ಸಿನಿಮಾಗಳ ಆಯ್ದ ಭಾಗಗಳನ್ನು ಒಂದೇ ಸಿನಿಮಾದಲ್ಲಿ ಪ್ಯಾಕೇಜ್ ರೀತಿ ಕೊಟ್ಟರೆ ಹೇಗಿರುತ್ತದೆ ಎಂದು ಗೊತ್ತಾಗಬೇಕಿದ್ದರೆ ‘ಸಂತೂ ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ನೋಡಬಹುದು. ಯಾವ ದೃಶ್ಯ ನೋಡಿದರೂ ಇದನ್ನು ಎಲ್ಲೋ ನೋಡಿದ್ದೇವೆ ಎನ್ನಿಸುತ್ತದೆ, ಸಂಭಾಷಣೆಗಳು ಎಲ್ಲೋ ಕೇಳಿದ್ದೇವೆ ಎನ್ನಿಸುತ್ತದೆ. ಅಷ್ಟರ ಮಟ್ಟಿಗೆ ನಿರ್ದೇಶಕ ಮಹೇಶ್ ರಾವ್ ಕಮರ್ಷಿಯಲ್ ಸಿನಿಮಾಗಳಲ್ಲಿ ಇರಲೇಬೇಕಾದ ಸೂತ್ರಕ್ಕೆ ಗಂಟುಬಿದ್ದಿದ್ದಾರೆ. ಸಿನಿಮಾ ಆರಂಭವಾಗುವಾಗ ಭೂಗತ ಜಗತ್ತಿನ ಹಿನ್ನೆಲೆ ಕಾಣಿಸಿದರೂ ಇಡೀ ಸಿನಿಮಾದಲ್ಲಿ ಆ ಎಳೆಯೇ ಇಲ್ಲ. - ಗಣೇಶ ವೈದ್ಯ.['ಸಂತು' ಚಿತ್ರದ ಕಡೆಯಿಂದ ಬಂದ ಇನ್ನೊಂದು ದಾಖಲೆ ಸುದ್ದಿ]

    'ಸಂತು ಎಂಬ ಕಥಾಸಂಕಲನ!' - ವಿಜಯವಾಣಿ

    'ಸಂತು ಎಂಬ ಕಥಾಸಂಕಲನ!' - ವಿಜಯವಾಣಿ

    ಶೀರ್ಷಿಕೆಗೆ ತಕ್ಕಂತೆ ಸಂತು (ಯಶ್) ನೇರ ಸ್ವಭಾವದ ಹುಡುಗ. ಒಮ್ಮೆ ಕೈ ಹಿಡಿದರೆ, ಜೀವನದಲ್ಲಿ ಮತ್ಯಾವತ್ತೂ ಕೈ ಬಿಡದ ವ್ಯಕ್ತಿತ್ವ ಆತನದು. ಹಾಗಾಗಿ, ನಾಯಕಿ ಅನನ್ಯ (ರಾಧಿಕಾ) ಆತನ ಕೈಕುಲುಕುವುದೇ ಇಲ್ಲ. ಕಾರಣ, ಆಕೆಗೆ ಈಗಾಗಲೇ ಬೇರೊಬ್ಬನ ಜೊತೆ ಮದುವೆ ಫಿಕ್ಸ್ ಆಗಿರುತ್ತದೆ. ಮುಂದೆ ಪ್ರೇಕ್ಷಕ ಊಹಿಸಿದಂತೆ ಕ್ಲೈಮ್ಯಾಕ್ಸ್ ನಡೆಯುತ್ತದೆ. ಆದರೆ ಆ ಮಧ್ಯೆ ಬರುವ ಟ್ವಿಸ್ಟ್ ಆಂಡ್ ಟರ್ನ್ ಗಳೇ 'ಸಂತು..'ನ ಹೈಲೈಟ್. ತಮಿಳಿನ 'ವಾಲು' ಕಥೆಯನ್ನೇ 'ಸಂತು' ಹೋಲುತ್ತಾನಾದರೂ, ಚಿತ್ರಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ನಿರ್ದೇಶಕ ಮಹೇಶ್ ರಾವ್.[ಟ್ವಿಟ್ಟರ್ ವಿಮರ್ಶೆ: 'ಸಂತು Straight' ಹಿಟ್ ಗೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆದ್ರಾ?]

    'ಯಶ್ ಹೀರೋಯಿಸಂನ ಅಬ್ಬರ' - ವಿಜಯ ಕರ್ನಾಟಕ

    'ಯಶ್ ಹೀರೋಯಿಸಂನ ಅಬ್ಬರ' - ವಿಜಯ ಕರ್ನಾಟಕ

    ಮಹೇಶ್ ರಾವ್ ನಿರ್ದೇಶನದ ಈ ಚಿತ್ರ ಯಶ್ ಅಭಿಮಾನಿಗಳಿಗಾಗಿಯೇ ಮಾಡಿದಂತಿದೆ. ಅವರ ಹಿಂದಿನ ಚಿತ್ರಗಳಂತೆಯೇ ಬಿಲ್ಡಪ್ ಗಳೇ ಹೆಚ್ಚು. ಕತೆಗಿಂತ ಹೀರೊಯಿಸಂಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಚಿತ್ರದಲ್ಲಿ ಹೇಳಿಕೊಳ್ಳುವಂತ ಕತೆ ಇಲ್ಲ. ಪ್ರೇಕ್ಷಕ ಭಯಂಕರ ಸೀರಿಯಸ್ ಫೈಟ್ ಅಂದುಕೊಂಡು ನೋಡಿದ್ದನ್ನು ಯಶ್ ತಮ್ಮ ಒಂದು ಡೈಲಾಗ್‌ನಿಂದ ಅದನ್ನು ನಕಲಿ ಮಾಡುತ್ತಾರೆ. ವೆಜ್ ಕಬಾಬ್ ನಂತೆ. ನೋಡಿದಾಗ ಅನ್ನಿಸಿದ್ದು ತಿಂದಾಗ ಸಿಗುವುದಿಲ್ಲ. ಬಿಲ್ಡಪ್ ಜಾಸ್ತಿ. ಸೂತ್ರಗಳ ಬಂಧದಲ್ಲಿ ರಂಜನೀಯವಾಗಿ ಹೆಣೆದ ಮಾಮೂಲಿ ಸಿನಿಮಾ ಆದರೂ, ಒಮ್ಮೆ ಹಾಗೆ ಸುಮ್ಮನೆ ನೋಡಿ ಎಂಜಾಯ್ ಮಾಡಲು ಅಡ್ಡಿ ಇಲ್ಲ. ರೇಟಿಂಗ್: 3/5. -ಪದ್ಮಾ ಶಿವಮೊಗ್ಗ.

    'ಮಾವ ಗೆಳೆಯ ಸವಾಲ್, ಡಿಚ್ಚಿ ಡಮಾಲ್ ಡಿಮೀಲ್!' -ಉದಯವಾಣಿ

    'ಮಾವ ಗೆಳೆಯ ಸವಾಲ್, ಡಿಚ್ಚಿ ಡಮಾಲ್ ಡಿಮೀಲ್!' -ಉದಯವಾಣಿ

    ಯಶ್ ಅವರ ಹಿಂದಿನ ಚಿತ್ರಗಳಂತೆ, ಈ ಚಿತ್ರದ ಪೂರಾ ಅವರೇ ತುಂಬಿದ್ದಾರೆ. ಮತ್ತು ಸಲೀಸಾಗಿ 'ಸಂತು' ಪಾತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಅವರ ಅಟಿಡ್ಯೂಟ್ ಹಿಂದಿನ ಚಿತ್ರಗಳ ಮುಂದುವರೆದ ಭಾಗದಂತಿರುವುದರಿಂದ ಅವರ ಹೆಚ್ಚು ಕಷ್ಟಪಟ್ಟಂತೆ ಕಾಣುವುದಿಲ್ಲ. ರಾಧಿಕಾ ಪಂಡಿತ್ ತೆರೆಯ ಮೇಲೆ ಮುದ್ದಾಗಿ ಕಾಣಿಸುತ್ತಾರೆ. ಎಂಬುದು ಬಿಟ್ಟರೆ, ಅವರಿಗೆ ಓಹೋ ಎನ್ನುವಂತಹ ಪಾತ್ರವೇನಿಲ್ಲ. ಶ್ಯಾಮ್ ಗಿಂತ ಅವರಿಗೆ ಧ್ವನಿ ಕೊಟ್ಟಿರುವ ರಾಜೇಶ್ ನಟರಂಗ ಕಣ್ಣಮುಂದೆ ಬರುತ್ತಾರೆ. ಚಿತ್ರದ ಕೊನೆಗೆ ಬಂದರೂ ರವಿಶಂಕರ್ ನೆನಪಿನಲ್ಲಿ ಉಳಿಯುತ್ತಾರೆ. -ಚೇತನ್ ನಾಡಿಗೇರ್.

    'ಸ್ಟೋರಿ ನಿನ್ನದು, ಸ್ಕ್ರೀನ್ ಪ್ಲೇ ನನ್ನದು' -ಕನ್ನಡ ಪ್ರಭ

    'ಸ್ಟೋರಿ ನಿನ್ನದು, ಸ್ಕ್ರೀನ್ ಪ್ಲೇ ನನ್ನದು' -ಕನ್ನಡ ಪ್ರಭ

    ಸ್ಟಾರ್ ಜೋಡಿ ಯಶ್ ಹಾಗೂ ರಾಧಿಕಾ ರಿಯಲ್ ಮದುವೆಗೆ ದಿನಾಂಕ ಫಿಕ್ಸ್ ಆಗಿದೆ. ರೀಲ್ ಮೇಲೆ ಬಂದ ನಾಯಕ ಸಂತು ಹಾಗೂ ನಾಯಕಿ ಅನನ್ಯ ಮದುವೆಗೂ ಅದೇ ದಿನಾಂಕವೇ ಫಿಕ್ಸ್ ಆಗುತ್ತದೆ. ಫಿಕ್ಸ್ ಆದಂತೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಮದುವೆಯೂ ನಡೆದುಹೋಗಿದೆ. ರಿಯಲ್ ಲೈಫ್ ನಲ್ಲಿ ಅವರಿಬ್ಬರ ಮದುವೆ ಸಮಾರಂಭ ಮಾತ್ರ ಬಾಕಿಯಿದೆ. ಇಂಥ ಹಲವು ಸಂಗತಿಗಳ ಹೋಲಿಕೆಗಳು ಅಲ್ಲಿವೆ. ಆ ಮೂಲಕ ಇದು ಅವರದ್ದೇ ಕತೆ ಎನಿಸುತ್ತದೆ. 'ನೋಡು ಬ್ರದರ್ ಇಲ್ಲಿ ಸ್ಟೋರಿ ನಿಂದು, ಆದರೆ ಚಿತ್ರಕತೆ ನಂದು' ಎಂದು ಯಶ್ ಹೇಳುವ ಮಾತು, ಕತೆಯ ಸನ್ನಿವೇಶಕ್ಕೆ ಸಾಂದರ್ಭಿಕವಾಗಿದ್ದರೂ, ಪ್ರೇಕ್ಷಕನ ಮಟ್ಟಿಗೆ ಅದು ಅವರದ್ದೇ ಎನಿಸುತ್ತದೆ. ರೇಟಿಂಗ್: 3/5. -ದೇಶಾದ್ರಿ ಹೊಸ್ಮನೆ.

    English summary
    Kannada Movie 'Santhu Straight Forward' Critics Review. Kannada Actor Yash, Kannada Actress Radhika Pandit starrer 'Santhu Straight Forward' has received mixed response from the critics. Here is the collection of reviews by Top News Papers of Karnataka. The movie is directed by Mahesh Rao and Produced by K Manju.
    Saturday, October 29, 2016, 12:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X