»   » ಚಿತ್ರ ವಿಮರ್ಶೆ: ಹಳೆಯ ದಾರಿ ಹೊಸತು 'ಸವಾರಿ 2'

ಚಿತ್ರ ವಿಮರ್ಶೆ: ಹಳೆಯ ದಾರಿ ಹೊಸತು 'ಸವಾರಿ 2'

Posted by:
Subscribe to Filmibeat Kannada

ಜೇಕಬ್ ವರ್ಗೀಸ್ ಅವರ ಈ ಹಿಂದಿನ 'ಸವಾರಿ' ಚಿತ್ರ ತೆಲುಗಿನ 'ಗಮ್ಯಂ' ರೀಮೇಕ್ ಆದರೂ ತನ್ನದೇ ಆದಂತಹ ನಿರೂಪಣಾ ಶೈಲಿ, ನಿರ್ವಹಣೆ ಹಾಗೂ ಪರಿಣಾಮಕಾರಿ ಕ್ಲೈಮ್ಯಾಕ್ಸ್ ನಿಂದ ಎಲ್ಲರ ಮನಗೆದ್ದಿತ್ತು. ಈ ಬಾರಿಯೂ ಅವರು ತಮ್ಮ 'ಸವಾರಿ 2' ಚಿತ್ರದ ಮೇಲೆ ಅದೇ ರೀತಿಯ ಹಿಡಿತ ಸಾಧಿಸಿರುವುದನ್ನು ಕಾಣಬಹುದು.

ಚಿತ್ರದ ಮೊದಲರ್ಧದಲ್ಲಿ ಕಥೆ ವೇಗ ಪಡೆದುಕೊಳ್ಳದಿದ್ದರೂ ಪ್ರೇಕ್ಷಕರಿಗೆ ಖಂಡಿತ ಬೋರಂತೂ ಆಗುವುದಿಲ್ಲ. ಕಾಡುಗಳ್ಳ ವೀರಪ್ಪನ್ ಹತನಾದ ಬಳಿಕ ಅವನು ಕಾಡಿನಲ್ಲಿ ಬಚ್ಚಿಟ್ಟಿರುವ ನೂರು ಕೋಟಿ ಹಣದ ಗುಟ್ಟು ಒಬ್ಬನಿಗೆ ಮಾತ್ರ ಗೊತ್ತಿರುತ್ತದೆ.

ಅದನ್ನು ತೆಗೆದುಕೊಂಡು ಬರಲು 'ಮುಖವಾಡ' ಎಂಬ ಪತ್ರಿಕಾ ಸಂಪಾದಕ (ಗಿರೀಶ್ ಕಾರ್ನಾಡ್) ಹಾಗೂ ಗೃಹ ಸಚಿವರ ಅಳಿಯ ಸೀನೂ (ಶ್ರೀನಗರಕಿಟ್ಟಿ) ಹೊರಡುತ್ತಾರೆ. ಇವರಿಬ್ಬರ ನಡುವಿನ ಮೊಬೈಲ್ ಸಂಭಾಷಣೆಯನ್ನು ಟ್ರ್ಯಾಪ್ ಮಾಡುವ ಪೊಲೀಸರು ಇವರ ಚಲನವಲನದ ಮೇಲೆ ಕಣ್ಣಿಟ್ಟಿರುತ್ತಾರೆ.

Rating:
3.0/5

ಚಿತ್ರ: ಸವಾರಿ 2
ಕಥೆ, ಚಿತ್ರಕಥೆ, ನಿರ್ಮಾಣ: ಜೇಕಬ್ ವರ್ಗೀಸ್
ಛಾಯಾಗ್ರಹಣ: ಡಿ.ಶಶಿಕುಮಾರ್
ಸಂಗೀತ: ಮಣಿಕಾಂತ್ ಕದ್ರಿ
ಸಾಹಸ: ಡಿಫರೆಂಟ್ ಡ್ಯಾನಿ
ಸಂಕಲನ: ಭವನ್ ಶ್ರೀಕುಮಾರ್
ಸಂಭಾಷಣೆ: ಮಂಜು ಮಾಂಡವ್ಯ
ಪಾತ್ರವರ್ಗ: ಶ್ರೀನಗರ ಕಿಟ್ಟಿ, ಶೃತಿ ಹರಿಹರನ್, ಕರಣ್ ರಾವ್, ಅಬ್ಬಾಸ್, ಮಧುರಿಮಾ ಬ್ಯಾನರ್ಜಿ, ಗಿರೀಶ್ ಕಾರ್ನಾಡ್, ಸಾಧುಕೋಕಿಲ, ಅವಿನಾಶ್, ಶರತ್ ಲೋಹಿತಾಶ್ವ ಮುಂತಾದವರು.

ಮಧ್ಯಂತರದ ವೇಳೆಗೆ ಇನ್ನೊಂದು ತಿರುವು

ಮಧ್ಯಂತರದ ವೇಳೆಗೆ ಇನ್ನೊಂದು ತಿರುವು

ಅಲ್ಲಿಂದ ಕುತೂಹಲ ಪಡೆದುಕೊಳ್ಳುವ ಕಥೆ ಒಂದಷ್ಟು ಫ್ಲ್ಯಾಶ್ ಬ್ಯಾಕ್ ಗಳ ಮೂಲಕ ಸಾಗುತ್ತದೆ. ಮಧ್ಯಂತರದ ವೇಳೆಗೆ ಇನ್ನೊಂದು ತಿರುವು ಪಡೆದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತದೆ. ಇಲ್ಲಿ ನೂರು ಕೋಟಿಗೆ ಬದಲಾಗಿ ಸೀನೂನನ್ನು ಕಿಡ್ನಾಪ್ ಮಾಡಲಾಗಿರುತ್ತದೆ. ಪತ್ರಿಕಾ ಸಂಪಾದಕ ಹೂಡಿದ ತಂತ್ರಕ್ಕೆ ಸೀನೂ ಬಲಿಯಾಗಿರುತ್ತಾನೆ.

ಕಥೆಯಲ್ಲಿ ವೇಗವಿಲ್ಲದೆ ಇರುವುದು ದೊಡ್ಡ ಕೊರತೆ

ಕಥೆಯಲ್ಲಿ ವೇಗವಿಲ್ಲದೆ ಇರುವುದು ದೊಡ್ಡ ಕೊರತೆ

ಕಾಡುಗಳ್ಳ ಚಂದಪ್ಪನಿಂದ ಸೀನೂ ಹಾಗೂ ಮತ್ತಿತರರು ಹೊರಬೀಳುತ್ತಾರಾ ಇಲ್ಲವೇ ಎಂಬುದೇ ಚಿತ್ರದ ತಿರುಳು. ಈ ರೀತಿಯ ಕುತೂಹಲಭರಿತ ಕಥೆಯನ್ನು ಜೇಕಬ್ ವರ್ಗೀಸ್ ಅವರು ಬಹಳ ನೀಟಾಗಿ ಪ್ರೆಸೆಂಟ್ ಮಾಡಿದ್ದಾರೆ. ಆದರೆ ಕಥೆಯಲ್ಲಿ ವೇಗವಿಲ್ಲದೆ ಇರುವುದು ಪ್ರೇಕ್ಷಕರು ಒಂಚೂರು ಚಡಪಡಿಸುವಂತಾಗುತ್ತದೆ.

ಗೃಹ ಸಚಿವನ ಅಳಿಯನಾಗಿ ಶ್ರೀನಗರ ಕಿಟ್ಟಿ

ಗೃಹ ಸಚಿವನ ಅಳಿಯನಾಗಿ ಶ್ರೀನಗರ ಕಿಟ್ಟಿ

ಇನ್ನು ಶ್ರೀನಗರ ಕಿಟ್ಟಿ ಅವರದು ಲವಲವಿಕೆಯಿಂದ ಕೂಡಿದ ಪಕ್ಕಾ ಲೋಕಲ್ ಹುಡುಗನ ಪಾತ್ರ. ಗೃಹ ಸಚಿವನ (ಮುಖ್ಯಮಂತ್ರಿ ಚಂದ್ರು) ಅಳಿಯನಾದರೂ ಕೈಯಲ್ಲಿ ಬಿಡಿಗಾಸಿಲ್ಲದೆ ಸಣ್ಣಪುಟ್ಟ ಕಳ್ಳತನಗಳನ್ನು ಮಾಡಿಕೊಂಡಿರುವ ಮಾವನಿಗೆ ತಲೆನೋವಾಗಿರುವ ಪಾತ್ರ ಅವರದು.

ಆದರೆ ಮಾವನ ಮಗಳಿಗೆ ಒಳ್ಳೆಯ ಜೋಡಿ

ಆದರೆ ಮಾವನ ಮಗಳಿಗೆ ಒಳ್ಳೆಯ ಜೋಡಿ

ಮಾವನಿಗೆ ತಕ್ಕ ಅಳಿಯ ಅಲ್ಲದಿದ್ದರೂ ಮಾವನ ಮಗಳಿಗೆ ಮಾತ್ರ ಒಳ್ಳೆ ಜೋಡಿಯಾಗಿರುತ್ತಾನೆ. ಸೀನೂ ಹೆಂಡತಿಯಾಗಿ ಶ್ರುತಿ ಹರಿಹರನ್ ಅವರು ಗಮನಸೆಳೆಯುತ್ತಾರೆ.

ಕಾರ್ನಾಡ್ ಅವರದು ನೆಗಟೀಶ್ ಶೇಡ್ ಉಳ್ಳ ಪಾತ್ರ

ಕಾರ್ನಾಡ್ ಅವರದು ನೆಗಟೀಶ್ ಶೇಡ್ ಉಳ್ಳ ಪಾತ್ರ

ಪತ್ರಿಕಾ ಸಂಪಾದಕರಾಗಿ ಗಿರೀಶ್ ಕಾರ್ನಾಡ್ ಅವರದು ಒಂದು ರೀತಿಯಲ್ಲಿ ನೆಗಟೀವ್ ಶೇಡ್ ವುಳ್ಳ ಪಾತ್ರವಾದರೂ ಮನೋಜ್ಞವಾಗಿ ಮೂಡಿಬಂದಿದೆ. ಕಾಡಿನಲ್ಲಿ ನಡೆಯುವ ಕೆಲವು ಅಚಾನಕ್ ಘಟನೆಗಳಿಗೆಲ್ಲಾ ಇವರೇ ಕಾರಣ ಎಂಬ ಗುಮಾನಿಗೆ ಅವರು ಜೀವ ತೆರಬೇಕಾಗುತ್ತದೆ.

ಪೊಲೀಸ್ ಅಧಿಕಾರಿಯಾಗಿ ಕರಣ್ ರಾವ್

ಪೊಲೀಸ್ ಅಧಿಕಾರಿಯಾಗಿ ಕರಣ್ ರಾವ್

ಪೊಲೀಸ್ ಅಧಿಕಾರಿಯಾಗಿ ಕರಣ್ ರಾವ್ ಅವರದು ಇನ್ನೊಂದು ಗಮನಾರ್ಹ ಪಾತ್ರ. ಅವರಿಗೆ ಜೋಡಿಯಾಗಿ ಮಧುರಿಮಾ ಬ್ಯಾನರ್ಜಿ ಕಣ್ಸೆಳೆಯುತ್ತಾರೆ.

ಕಾಮಿಡಿ ತಕ್ಕಮಟ್ಟಿಗೆ ವರ್ಕ್ ಔಟ್ ಆಗಿದೆ

ಕಾಮಿಡಿ ತಕ್ಕಮಟ್ಟಿಗೆ ವರ್ಕ್ ಔಟ್ ಆಗಿದೆ

ಚಿತ್ರದಲ್ಲಿ ಹಾಸ್ಯ ಸನ್ನಿವೇಶಗಳಿಗೂ ಒಂದಷ್ಟು ಸ್ಥಾನ ನೀಡಲಾಗಿದ್ದು ತಕ್ಕಮಟ್ಟಿಗೆ ವರ್ಕ್ ಔಟ್ ಆಗಿದೆ. ಸಾಧುಕೋಕಿಲ, ದೊಡ್ಡಣ್ಣ, ಚಿಕ್ಕಣ್ಣ ನಡುವಿನ ಹಾಸ್ಯ ಸನ್ನಿವೇಶ ನಗುವನ್ನು ಒತ್ತರಿಸಿಕೊಂಡು ಬರುವಂತಿವೆ.

ಕಾಡುಗಳ್ಳ ಚಂದಪ್ಪನಾಗಿ ಜೀವಾ ಗಮನಾರ್ಹ ಪಾತ್ರ

ಕಾಡುಗಳ್ಳ ಚಂದಪ್ಪನಾಗಿ ಜೀವಾ ಗಮನಾರ್ಹ ಪಾತ್ರ

ಇನ್ನು ಕಾಡುಗಳ್ಳ ಚಂದಪ್ಪನಾಗಿ ಖ್ಯಾತ ಖಳನಟ ಜೀವಾ ಅವರದು ಗಮನಾರ್ಹ ಪಾತ್ರ. ಬಹಳ ಗ್ಯಾಪ್ ನ ಬಳಿಕ ನಟ ಅಬ್ಬಾಸ್ ಒಂದು ಉತ್ತಮ ಪಾತ್ರವನ್ನು ಪೋಷಿಸಿದ್ದಾರೆ. ಒಂದುಕಡೆ ವಿಚ್ಛೇದನ ನೀಡುವಂತೆ ಒತ್ತಾಯಿಸುವ ಹೆಂಡತಿ, ಇನ್ನೊಂದು ಕಡೆ ಮುದ್ದು ಮಗಳ ಪ್ರೀತಿಯ ಅಪ್ಪನಾಗಿ, ವೈದ್ಯನಾಗಿ ಅವರದು ಭಿನ್ನ ಅಭಿನಯ.

ಅತಿಥಿ ಪಾತ್ರದಲ್ಲಿ ಮಾಜಿ ಪೊಲೀಸ್ ಅಧಿಕಾರಿ

ಅತಿಥಿ ಪಾತ್ರದಲ್ಲಿ ಮಾಜಿ ಪೊಲೀಸ್ ಅಧಿಕಾರಿ

ಇನ್ನು ಮಾಜಿ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಅವರು ಅದೇ ಹೆಸರಿನ ಪಾತ್ರವನ್ನು ಪೋಷಿಸಿದ್ದಾರೆ. ಚಿತ್ರದಲ್ಲಿ ಅವರನ್ನು ಖಡಕ್ ಪೊಲೀಸ್ ಆಫೀಸರ್ ಆದರೆ ಮನುಷ್ಯ ಸ್ವಲ್ಪ ತಿಕ್ಕಲು ಎಂದೇ ಪರಿಚಯಿಸಲಾಗಿದೆ. ಅವಿನಾಶ್ ಹಾಗೂ ಶರತ್ ಲೋಹಿತಾಶ್ವ ಪಾತ್ರಗಳಿಗೆ ಚಿತ್ರದಲ್ಲಿ ಅಂತಹ ಮಹತ್ವವಿಲ್ಲ.

ಕಣ್ಣಿಗೆ ಮುದ ನೀಡುವ ಛಾಯಾಗ್ರಹಣ

ಕಣ್ಣಿಗೆ ಮುದ ನೀಡುವ ಛಾಯಾಗ್ರಹಣ

ಮಣಿಕಾಂತ್ ಕದ್ರಿ ಅವರ ಸಂಗೀತದಲ್ಲಿ ಅಡಿಗರ "ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನ್ನು..." ಹಾಡಿಗೆ ಭಿನ್ನ ಸ್ಪರ್ಶ ನೀಡಿದ್ದಾರೆ. ಇನ್ನು ಡಿ.ಶಶಿಕುಮಾರ್ ಅವರ ಛಾಯಾಗ್ರಹಣ ಕಣ್ಣಿಗೆ ಮುದ ನೀಡುತ್ತದೆ. ಮಂಜು ಮಾಂಡವ್ಯ ಅವರ ಸಂಭಾಷಣೆ ಅಲ್ಲಲ್ಲಿ ಪಂಚಿಂಗ್ ಇದ್ದರೂ ಕಥೆಗೆ ಪೂರಕವಾಗಿ ಹರಿದಿದೆ.

ಕಡೆಗೂ ನಿಗೂಢವಾಗಿ ಉಳಿಯುವ ಕತ್ತೆ

ಕಡೆಗೂ ನಿಗೂಢವಾಗಿ ಉಳಿಯುವ ಕತ್ತೆ

ಪೋಸ್ಟರ್ ಗಳಲ್ಲಿ ಗಮನಸೆಳೆದಿರುವ ಕತ್ತೆ, ಆಗಾಗ ಕಥೆಯಲ್ಲಿ ಕಾಣಿಸಿಕೊಳ್ಳುತ್ತದೆ. ಕಡೆಗೆ ಅದರ ಬೆನ್ನ ಮೇಲಿನ ಚೀಲಗಳಲ್ಲಿ ಕೋಟ್ಯಾಂತರ ದುಡ್ಡೇ ಇದೆಯೋ ಅಥವಾ ಖಾಲಿ ಸೋಪು ಪೆಟ್ಟಿಗಳೋ ಎಂಬುದು ನಿಗೂಢವಾಗಿಯೇ ಉಳಿಯುತ್ತದೆ.

'ಸವಾರಿ 2' ಬೆಸ್ಟ್ ಜಾಲಿ ರೈಡ್

'ಸವಾರಿ 2' ಬೆಸ್ಟ್ ಜಾಲಿ ರೈಡ್

ಇಷ್ಟೆಲ್ಲಾ ವಿಶೇಷಗಳಿಂದ ಕೂಡಿರುವ 'ಸವಾರಿ 2' ಚಿತ್ರದಲ್ಲಿ ಅದ್ಭುತ ಕಾಡಿನ ಸೌಂದರ್ಯವನ್ನು ಸೆರೆಹಿಡಿಯುವ ಪ್ರಯತ್ನವನ್ನಾಗಲಿ, ಕಥೆಯಲ್ಲಿ ವೇಗವಾಗಲಿ ಇಲ್ಲದಿರುವುದು ಬಲು ದೊಡ್ಡ ಕೊರತೆ. ಇವೆರಡನ್ನು ಹೊರತುಪಡಿಸಿದರೆ ಜೇಕಬ್ ವರ್ಗೀಸ್ ಅವರ ಹೊಸಶೈಲಿಗೆ ಬೆನ್ನುತಟ್ಟಲೇಬೇಕು. ದಾರಿ ಹಳೆಯದಾದರೂ ಸವಾರಿ 2 ಹೊಸ ಅನುಭವವಂತೂ ನೀಡುತ್ತದೆ.

English summary
Kannada Movie Savaari 2 review. At the end of the first half, Savaari 2 will never disappoint you. The suspense in the second half has kept the audience in edge of the seat. Srinagar Kitty, Karan Rao, Abbas, Girish Karnad, Sadhu Kokila, Sruthi Hariharan, Madurima Banerji are in cast.
Please Wait while comments are loading...

Kannada Photos

Go to : More Photos