twitter
    For Quick Alerts
    ALLOW NOTIFICATIONS  
    For Daily Alerts

    ದೂದ್ ಪೇಡಾ 'ಶಾರ್ಪ್ ಶೂಟರ್' ವಿಮರ್ಶಕರಿಗೆ ಇಷ್ಟ ಆಯ್ತಾ?

    By ಸೋನು ಗೌಡ
    |

    ಮೊನ್ನೆ ಮೊನ್ನೆಯಷ್ಟೆ ಮಿಂಚಾಗಿ ನೀನು ಬರಲು ಎಂದಿದ್ದ ದೂದ್ ಪೇಡಾ ದಿಗಂತ್ ಅವರು ಈ ವಾರ 'ಶಾರ್ಪ್ ಶೂಟರ್' ಆಗಿ ಗುರಿ ಇಟ್ಟು ನಿಂತಿದ್ದಾರೆ. ನಟ ದಿಗಂತ್ ನಟಿ ಸಂಗೀತಾ ಚೌವ್ಹಾಣ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ಶಾರ್ಪ್ ಶೂಟರ್' ಡಿಸೆಂಬರ್ 11 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆ ಕಂಡಿದೆ.

    ಸಾಹಿತಿಯಾಗಿದ್ದ ಗೌಸ್ ಪೀರ್ ಅವರು ದಿಗಿ 'ಶಾರ್ಪ್ ಶೂಟರ್' ಗೆ ಆಕ್ಷನ್-ಕಟ್ ಹೇಳುವ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕನ ಸ್ಥಾನ ಅಲಂಕರಿಸಿದ್ದಾರೆ. ಜೊತೆಗೆ ಸ್ಯಾಂಡಲ್ ವುಡ್ ಗೆ ಹೊಸ ಎಂಟ್ರಿ, ನಟಿ ಸಂಗೀತಾ ಚೌವ್ಹಾಣ್ ಅವರ ನಟನೆ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ.[ವಿಮರ್ಶೆ: ಗುರಿ ತಪ್ಪದ ದೂದ್ ಪೇಡಾ ದಿಗಂತ್ 'ಶಾರ್ಪ್ ಶೂಟರ್']

    ಮೇಕಿಂಗ್ ನಿಂದ ಗಮನ ಸೆಳೆದ ಚೊಚ್ಚಲ ನಿರ್ದೇಶಕ 'ಶಾರ್ಪ್ ಶೂಟರ್' ಗೆ ನಮ್ಮ ಕನ್ನಡ ದಿನಪತ್ರಿಕೆಯ ಖ್ಯಾತ ವಿಮರ್ಶಕರು ಮನಸೋತರಾ?, ಇಲ್ವಾ?, ಎಂಬುದನ್ನು ನಾವು ನಿಮಗೆ ಹೇಳ್ತೀವಿ, ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ.

    'ಹುಸಿಯಾಗದ ಶಾರ್ಪ್ ಶೂಟರ್ ಗುರಿ'-ವಿಜಯ ಕರ್ನಾಟಕ

    'ಹುಸಿಯಾಗದ ಶಾರ್ಪ್ ಶೂಟರ್ ಗುರಿ'-ವಿಜಯ ಕರ್ನಾಟಕ

    ಕತ್ತಲಲ್ಲೂ ಗುರಿ ಇಡಬಲ್ಲ ಸಾಮರ್ಥ್ಯ ಇರೋ ನಾಯಕ(ದಿಗಂತ್) ನಿಗೆ ಒಂದು ದೈಹಿಕ ದೌರ್ಬಲ್ಯವಿದ್ದರೆ, ಬುಲೆಟ್ ಹೊಡೆದಂತೆ ವಾದ ಮಾಡುವ ಲಾಯರ್ ಆದ ನಾಯಕಿ (ಸಂಗೀತಾ) ಗೆ ಮಾನಸಿಕ ದೌರ್ಬಲ್ಯ. ದಿಗಂತ್ ಗೆ ಈ ತೊಂದರೆ ವಂಶಪಾರಂಪರ್ಯದ ಕೊಡುಗೆಯಾದರೆ, ಸಂಗೀತಾಗೆ ಚಿಕ್ಕವಳಿದ್ದಾಗ ನಡೆದ ಕೊಲೆ ಕಾರಣಕ್ಕೆ ಶುರುವಾಗುತ್ತದೆ. ನಿರ್ದೇಶಕ ಗೌಸ್ ಪೀರ್ ತಮ್ಮ ಚಾಣಾಕ್ಷ ಸಂಭಾಷಣೆ ಮತ್ತು ಮೇಕಿಂಗ್ ನಿಂದ ಮೆಚ್ಚುಗೆ ಗಳಿಸುತ್ತಾರೆ. ಆದರೆ 'ನೋ ಫೀಲಿಂಗ್ಸ್ ಬಟ್ ಬ್ಯೂಟಿಫುಲ್' ಎನ್ನುವಂತಿದೆ ಚಿತ್ರ. - ಪದ್ಮಾ ಶಿವಮೊಗ್ಗ, ರೇಟಿಂಗ್: 2/5.

    'ಇಟ್ಟ ಗುರಿ ಮಿಸ್ಸಿಲ್ಲ ಕೊಟ್ಟ ಕಾಸಿಗೆ ಲಾಸಿಲ್ಲ! - ವಿಜಯವಾಣಿ

    'ಇಟ್ಟ ಗುರಿ ಮಿಸ್ಸಿಲ್ಲ ಕೊಟ್ಟ ಕಾಸಿಗೆ ಲಾಸಿಲ್ಲ! - ವಿಜಯವಾಣಿ

    ಅವನೊಬ್ಬ ಸ್ಫುರದ್ರೂಪಿ ಯುವಕ 'ದೂದ್ ಪೇಡಾ' ದಂತಿರುವ ಅವನ ಒಂದೇ ಒಂದು ಮೈನಸ್ ಪಾಯಿಂಟ್, ಇರುಳು ಕುರುಡು. ಇಂಥವನೊಬ್ಬ ಸರಿ ರಾತ್ರಿ 500ಮೀ ದೂರದಿಂದ ಅಂತಾರಾಷ್ಟ್ರೀಯ ಕುಖ್ಯಾತಿ ಪಡೆದ ಡಾನ್ ಒಬ್ಬನ ಹಣೆಗೆ ಗುರಿ ಇಟ್ಟು ಶೂಟ್ ಮಾಡಿಬಿಟ್ಟರೆ? ಅವನನ್ನು 'ಶಾರ್ಪ್ ಶೂಟರ್' ಎನ್ನಲೇಬೇಕು. ಅಯ್ಯೋ ಅದು ಸಾಧ್ಯನೇ ಇಲ್ಲ ಎಂಬ ವಾದ ನಿಮ್ಮದಾದರೆ, ಒಮ್ಮೆ 'ಶಾರ್ಪ್ ಶೂಟರ್' ನೋಡಿ. ರೇಟಿಂಗ್ : 7/10.[ನಾಯಕಿ ಸಂಗೀತಾ ಚೌಹಾಣ್ ಗಳಗಳನೆ ಅತ್ತಿದ್ದು ಯಾಕೆ?]

    'ಹತ್ತು ಹಾಸ್ಯ ಹೇಳಿ, ಒಂದು ಮದುವೆ ಮಾಡಿ' - ಕನ್ನಡ ಪ್ರಭ

    'ಹತ್ತು ಹಾಸ್ಯ ಹೇಳಿ, ಒಂದು ಮದುವೆ ಮಾಡಿ' - ಕನ್ನಡ ಪ್ರಭ

    ಗೌಸ್ ಪೀರ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ 'ಶಾರ್ಪ್ ಶೂಟರ್'ಗೆ ಆಯ್ಕೆ ಮಾಡಿಕೊಂಡಿರುವ ಕಥೆಯಲ್ಲಿ ಹೊಸತನ ಜೊತೆಗೆ ಅಚ್ಚರಿ ತಿರುವುಗಳೂ ಇವೆ. ಹ್ಯೂಮರಸ್ ನೆರಳಿನಲ್ಲಿ ಪ್ರೇಮದ ಎಳೆಯನ್ನು ತೆರೆದಿಡುವ ಈ ಚಿತ್ರಕ್ಕೆ ಹಾಸ್ಯ ಮತ್ತು ನಾಯಕ-ನಾಯಕಿಗೆ ಇರುವ ವೀಕ್ ನೆಸ್ ಮುಖ್ಯ ಪಿಲ್ಲರ್. ನಗಿಸುವುದಕ್ಕೆ ಚಿಕ್ಕಣ್ಣ ಹಾಗೂ ಮಿತ್ರ ಇದ್ದಾರೆ. ಇನ್ನು ವೀಕ್ ನೆಸ್ ಏನೆಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು. ಮತ್ತು ಅದೂ ಕಥೆಗೆ ಹ್ಯೂಮರಸ್ ಟಚ್ ಕೊಡುವುದರಿಂದಲೇ ಮನರಂಜನೆಗೆ ಕೊರತೆಯಾಗದೆ ನೋಡುಗನನ್ನು ಖುಷಿ ಪಡಿಸುತ್ತದೆ.- ಆರ್ ಕೇಶವಮೂರ್ತಿ. ರೇಟಿಂಗ್: 3/5.

    'ಯದ್ವಾ ತದ್ವಾ!' - ಪ್ರಜಾವಾಣಿ

    'ಯದ್ವಾ ತದ್ವಾ!' - ಪ್ರಜಾವಾಣಿ

    ಪಟ್ಟಣದಲ್ಲಿ ಕೆಲಸ ಹುಡುಕಿಕೊಂಡು ಅಲೆಯುವ ತರುಣ ಹಾಗೂ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸುವ ಹುಮ್ಮಸ್ಸಿನ ಯುವ ವಕೀಲೆ ನಡುವಿನ ಪ್ರೇಮಪ್ರಸಂಗ 'ಶಾರ್ಪ್ ಶೂಟರ್'ನ ಕಥೆ. ಇಬ್ಬರಿಗೂ ಒಂದೊಂದು ಐಬಿದೆ. ನಾಯಕಿಯೇನೋ ತನ್ನ ಸಮಸ್ಯೆಯನ್ನು ತನ್ನ ಪ್ರೇಮಿಗೆ ಹೇಳಿಕೊಳ್ಳುತ್ತಾಳೆ. ಆದರೆ ಅಮ್ಮನ ಮಾತಿಗೆ ಕಟ್ಟುಬಿದ್ದ ನಾಯಕ ತನ್ನ ಐಬನ್ನು ಮುಚ್ಚಿಟ್ಟುಕೊಳ್ಳುತ್ತಾನೆ. ಆನಂತರ, ಆ ಸಮಸ್ಯೆಯನ್ನು ನಾಯಕಿಗೆ ಮನವರಿಕೆ ಮಾಡಿ ಕೊಡಲು ಮುಂದಾದರೂ ಅವಳು ನಂಬಲು ತಯಾರಿಲ್ಲ. ಇಂಥ ವಿಚಿತ್ರ ಸಿಕ್ಕುಗಳನ್ನು ಹಾಸ್ಯದ ಪರಿವೇಷದಲ್ಲಿ ನಿರೂಪಿಸಲು ಗೌಸ್ ಪೀರ್ ಪ್ರಯತ್ನಿಸಿದ್ದಾರೆ.- ರಘುನಾಥ ಚ.ಹ.

    'ಪಾಪಿಗಳ ಲೋಕಕ್ಕೆ ತಮಾಷೆ ಲೇಪ' - ಉದಯವಾಣಿ

    'ಪಾಪಿಗಳ ಲೋಕಕ್ಕೆ ತಮಾಷೆ ಲೇಪ' - ಉದಯವಾಣಿ

    ಹೆಸರು ಕೇಳಿದರೆ ಮೇಲ್ನೋಟಕ್ಕೆ ಇದೊಂದು ಆಕ್ಷನ್ ಚಿತ್ರ ಎನಿಸುವುದುಂಟು. ಆದರೆ ಇದೊಂದು ಕಾಮಿಡಿ ಚಿತ್ರ. ಎಲ್ಲರನ್ನೂ ನಗಿಸುವ ಒಂದು ಮನರಂಜನಾತ್ಮಕ ಚಿತ್ರ. ಒಂದು ಸ್ಲಾಪ್ ಸ್ಟಿಕ್ ಕಾಮಿಡಿಯನ್ನು ಹೇಗೆ ಗಂಭೀರವಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲವೋ? ಒಂದು ಸಿಲ್ಲಿ ಕಾಮಿಡಿಗೆ ಹೇಗೆ ಆ ಕ್ಷಣಕ್ಕೆ ನಕ್ಕು ಹಗುರಾಗಿ ಹೊರಗೆ ಬರುತ್ತೀವೋ? 'ಶಾರ್ಪ್ ಶೂಟರ್' ಚಿತ್ರವನ್ನು ಸಹ ಅದೇ ರೀತಿಯಲ್ಲಿ ಪರಿಗಣಿಸಬೇಕು. ಇಲ್ಲಿ ಯಾವುದೂ ಗಂಭೀರವಲ್ಲ, ಯಾವುದನ್ನು ತರ್ಕ ಮಾಡುವುದಕ್ಕೆ ಸಾಧ್ಯವಿಲ್ಲ. - ಚೇತನ್ ನಾಡಿಗೇರ್.

    English summary
    Kannada Movie 'Sharp Shooter' critics review. Actor Diganth, Actress Sangeetha Chauhan Starrer 'Sharp Shooter' has received mixed response from the critics. Here is the collection of reviews by Top News Papers of Karnataka. The movie is directed by debut director Ghouse Peer.
    Saturday, December 12, 2015, 12:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X