twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ರಂಗನ ಕಿಕ್ ಗೆ ಪ್ರೇಕ್ಷಕ ಕ್ಲೀನ್ ಬೌಲ್ಡ್

    By ಉದಯರವಿ
    |

    ತೆಲುಗಿನ 'ಕಿಕ್' ಚಿತ್ರದ ಎರವಲು ಸರಕಾದರೂ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಹೇಳಿ ಮಾಡಿಸಿದ ಸಬ್ಜೆಕ್ಟ್ ಇದು. ಚಿತ್ರದ ನಾಯಕ ರಂಗ ಅಲಿಯಾಸ್ ಶ್ರೀರಂಗ ತಾನು ಮಾಡುವ ಕೆಲಸದಲ್ಲಿ ಕಿಕ್ ಇಲ್ಲ ಎಂದು ಯಾವ ಕೆಲಸವನ್ನೂ ಮಾಡಲ್ಲ. ಕಡೆಗೆ ರಂಗ ಕಳ್ಳತನ ಮಾಡುತ್ತಾನೆ. ಕೋಟಿ ಕೋಟಿ ಲೂಟಿ ಮಾಡ್ತಾನೆ.

    ಈಗ ಸಖತ್ ಕಿಕ್ ಸಿಗುತ್ತಿದೆ ಅಂತಾನೆ. ಆ ಕೋಟ್ಯಾಂತರ ಹಣವನ್ನೆಲ್ಲಾ ಏನು ಮಾಡ್ತಾನೆ? ಇದೇ ಕಳ್ಳ ಕೊನೆಗೆ ಪೊಲೀಸ್ ಅಧಿಕಾರೀನೂ ಆಗ್ತಾನೆ. ಕೋಟಿ ಕೋಟಿ ಲೂಟಿ ಮಾಡಿದ ಕಳ್ಳನನ್ನು ಹಿಡಿಯುವ ಜವಾಬ್ದಾರಿಯನ್ನೂ ಇವನ ಕೈಗೆ ವಹಿಸಲಾಗುತ್ತದೆ. ಅಲ್ಲಿಗೆ ಕಥೆ ರೋಚಕ ಅಂತ್ಯ ಕಾಣುತ್ತದೆ.

    ಇದೇನಿದು ಟ್ವಿಸ್ಟ್ಸ್, ಟರ್ನ್ಸ್ ಎಂದು ಕನ್ಫ್ಯೂಸ್ ಆಗ್ತಿದೆಯಾ? ಹಾಗಿದ್ದರೆ ನೀವು ಸಿನಿಮಾವನ್ನು ಒಮ್ಮೆ ನೋಡಲೇಬೇಕು. ಉಪೇಂದ್ರ ಅವರು ಗಿರಗಿರ ಕಣ್ಣುಗಳನ್ನು ತಿರುಗಿಸುತ್ತಾ ತಮ್ಮದೇ ಮ್ಯಾನರಿಸಂ ಮೂಲಕ ಅಭಿಮಾನಿಗಳ ಹೃದಯ ಕದಿಯುತ್ತಾರೆ. ಕಿಕ್ ಮೇಲೆ ಕಿಕ್ ಕೊಡುತ್ತಾರೆ.

    Rating:
    3.0/5

    ಚಿತ್ರ: ಸೂಪರ್ ರಂಗ
    ನಿರ್ಮಾಪಕರು: ಕೆ ಮಂಜು
    ನಿರ್ದೇಶನ: ಕೋಕಿಲ ಸಾಧು
    ಸಂಗೀತ ನಿರ್ದೇಶನ: ಅರ್ಜುನ್ ಜನ್ಯ
    ಛಾಯಾಗ್ರಹಣ: ಅಶೋಕ್ ಕಶ್ಯಪ್
    ಸಂಕಲನ: ಜೋನಿ ಹರ್ಷ
    ಪಾತ್ರವರ್ಗ: ಉಪೇಂದ್ರ, ಕೃತಿ ಕರಬಂಧ, ರಘು ಮುಖರ್ಜಿ, ಅವಿನಾಶ್, ಪ್ರಿಯಾಂಕಾ, ದೊಡ್ಡಣ್ಣ, ರಂಗಾಯಣ ರಘು, ಸಾಧು ಕೋಕಿಲ, ಬುಲ್ಲೆಟ್ ಪ್ರಕಾಶ್, ದಯಾನಂದ, ಸಿದ್ಲಿಂಗು ಶ್ರೀಧರ್ ಹಾಗೂ ಇನ್ನಿತರರು.

    ಕೃತಿ ಕರಬಂಧ ಗ್ಲಾಮರ್ ಕಿಕ್

    ಕೃತಿ ಕರಬಂಧ ಗ್ಲಾಮರ್ ಕಿಕ್

    ಕೃತಿ ಕರಬಂದ ಅವರು ನೋಡಲು ದಸರಗೊಂಬೆ. ಗ್ಲಾಮರ್ ಜೊತೆಗೆ ಅಭಿನಯದಲ್ಲೂ ಕಿಕ್ ಕೊಡ್ತಾರೆ. ಸ್ವಾತಿಯಾಗಿ ತಮ್ಮ ಪಾತ್ರಕ್ಕೆ ಅವರು ಎಷ್ಟು ಬೇಕೋ ಅಷ್ಟು ಅಭಿನಯ ಜೊತೆಗೆ ಚಿತ್ರರಸಿಕರ ಕಣ್ಣು ತಂಪು ಮಾಡಲು ಅಗತ್ಯಕ್ಕಿಂತ ಒಂಚೂರು ಹೆಚ್ಚಿಗೆ ಗ್ಲಾಮರ್ ಪ್ರದರ್ಶನ ಮಾಡಿದ್ದಾರೆ.

    ಕೋಕಿಲ ಸಾಧು ಆಕ್ಷನ್ ಕಟ್

    ಕೋಕಿಲ ಸಾಧು ಆಕ್ಷನ್ ಕಟ್

    ಕೋಕಿಲ ಸಾಧು ಹಾಗೂ ಉಪೇಂದ್ರ ಅವರ ಕಾಂಬಿನೇಷನಲ್ಲಿ ಬರುತ್ತಿರುವ ಮೂರನೇ ಚಿತ್ರ ಇದು. ಈ ಹಿಂದೆ ಬಂದಂತಹ 'ರಕ್ತಕಣ್ಣೀರು' ಹಾಗೂ 'ಅನಾಥರು' ಚಿತ್ರದ ಬಳಿಕ ಬಂದಿರುವ ಚಿತ್ರ 'ಸೂಪರ್ ರಂಗ'. ಇವರಿಬ್ಬರ ಕಾಂಬಿನೇಷನ್ ಈ ಬಾರಿಯೂ ಮ್ಯಾಜಿಕ್ ಮಾಡುವುದರಲ್ಲಿ ಅನುಮಾನವಿಲ್ಲ.

    ಪೊಲೀಸ್ ಅಧಿಕಾರಿಯಾಗಿ ರಘು

    ಪೊಲೀಸ್ ಅಧಿಕಾರಿಯಾಗಿ ರಘು

    ಹಲ್ವಾ ರಾಜನಾಗಿ ಕಾಮಿಡಿಯಲ್ಲೂ ಕಿಲಕಿಲ ನಗಿಸುತ್ತಾರೆ ಸಾಧು ಕೋಕಿಲ. ಇನ್ನು ರಂಗನ ತಂದೆಯ ಪಾತ್ರದಲ್ಲಿ ಅವಿನಾಶ್ ಅವರದು ಮಗನ ಕಿಕ್ ಗೆ ಸಾಥ್ ನೀಡುವ ಪಾತ್ರ. ಚಿತ್ರದ ಇನ್ನೊಂದು ಗಮನಾರ್ಹ ಪಾತ್ರ ಎಂದರೆ ಅದು ರಘು ಮುಖರ್ಜಿ ಅವರದು. ಪೊಲೀಸ್ ಅಧಿಕಾರಿಯಾಗಿ ಅವರು ತಮ್ಮ ಪಾತ್ರಕ್ಕೆ ಬಹುತೇಕ ನ್ಯಾಯ ಸಲ್ಲಿಸಿದ್ದಾರೆ.

    ತಂಪೆರೆಯುವ ಕಶ್ಯಪ್ ಕ್ಯಾಮೆರಾ

    ತಂಪೆರೆಯುವ ಕಶ್ಯಪ್ ಕ್ಯಾಮೆರಾ

    ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ ಕಣ್ಣಿಗೆ ತಂಪೆರೆಯುತ್ತದೆ, ಮನಸ್ಸಿಗೆ ಮುದ ನೀಡುತ್ತದೆ. ಮಲೇಷ್ಯಾದ ಸುಂದರ ತಾಣಗಳ ಜೊತೆಗೆ ಯೂರೋಪ್ ನ ರಮಣೀಯ ದೃಶ್ಯಗಳು ಅವರ ಕ್ಯಾಮೆರಾ ಕೈಚಳಕದಲ್ಲಿ ಸೊಗಸಾಗಿ ಮೂಡಿಬಂದಿವೆ. ರೋಟೊಗ್ರಫಿ ತಂತ್ರಜ್ಞಾನದಲ್ಲಿ ಮೂಡಿಬಂದಿರುವ "ಡಾನ್ಸ್ ರಾಜ ಡಾನ್ಸ್" ಹಾಡಿನ ಚಿತ್ರೀಕರಣ ಕಣ್ಣಿಗೆ ಹಬ್ಬ ನೀಡುತ್ತದೆ.

    'ಸೂಪರ್ ರಂಗ' ಖಂಡಿತ ಕಿಕ್ ಕೊಡುತ್ತಾನೆ

    'ಸೂಪರ್ ರಂಗ' ಖಂಡಿತ ಕಿಕ್ ಕೊಡುತ್ತಾನೆ

    ಅರ್ಜುನ್ ಜನ್ಯ ಅವರ ಸಂಗೀತ ಹಿತಮಿತವಾಗಿದ್ದು, ಜೋನಿ ಹರ್ಷ ಅವರ ಸಂಕಲನ ಲೆಕ್ಕಾಚಾರ ತಪ್ಪಿಲ್ಲ. ಉಪೇಂದ್ರ ಅಭಿಮಾನಿಗಳಿಗೆ 'ಸೂಪರ್ ರಂಗ' ಖಂಡಿತ ಕಿಕ್ ಕೊಡುತ್ತಾನೆ. ಚಿತ್ರ ಎಲ್ಲೂ ನಿರಾಸೆಪಡಿಸುವುದಿಲ್ಲ.

    ರಂಗನ ಬಗ್ಗೆ ಕೊನೆಯ ಮಾತು

    ರಂಗನ ಬಗ್ಗೆ ಕೊನೆಯ ಮಾತು

    ಸಾಂಗ್ ಅಲ್ಲಿ ಸಖತ್ ರಂಗ, ಫೈಟ್ ಅಲ್ಲಿ ಪಂಟ ಈ ರಂಗ, ಲವಲ್ಲಿ ಲೈಕ್ ಆಗುತ್ತಾನೆ ರಂಗ, ಕಾಮಿಡಿಯಲ್ಲಿ ಕಿಲಾಡಿ ರಂಗ, ಟೋಟಲ್ ಆಗಿ ಫ್ಯಾಮಿಲಿ ಇಷ್ಟ ಪಡೋ ಸೂಪರ್ ರಂಗ. ಕಥೆ ಎರವಲಾದರೂ ಅಭಿನಯದಲ್ಲಿ ಮಾತ್ರ ಉಪೇಂದ್ರ ಅವರಿಗೆ ಅವರೇ ಸಾಟಿ.

    English summary
    Super Ranga is a tailor made movie for Real Star Upendra. The role suits his crazy mannerism. Viewers will be entertained by his antics and comic timing. Kannada movie Supere Ranga review.
    Friday, September 19, 2014, 16:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X