twitter
    For Quick Alerts
    ALLOW NOTIFICATIONS  
    For Daily Alerts

    ಪೋಲಿ ಶ್ರೀನಿಗೆ ಮೋಕ್ಷ ಕಲ್ಪಿಸುವ ಕಲ್ಯಾಣ ಎಂದ ವಿಮರ್ಶಕರು

    By Suneel
    |

    ಕೇವಲ ಟ್ರೈಲರ್ ಮೂಲಕವೇ ಸಖತ್ ಸದ್ದು ಮಾಡಿದ ಕಾಮಿಡಿ ಸಿನಿಮಾ 'ಶ್ರೀನಿವಾಸ ಕಲ್ಯಾಣ'. ನಿನ್ನೆ(ಫೆ.24) ರಾಜ್ಯಾದ್ಯಂತ ತೆರೆ ಕಂಡಿರುವ ಭಗ್ನ ಪ್ರೇಮಿಯ ಪುರಾಣ ಕಥೆಯನ್ನು ನೋಡಿದ ಯಾರಿಗೆ ಆದರೂ ಅವರ ಹಳೆಯ ಡವ್ ಗಳು ನೆನಪಾಗದೆ ಇರುವುದಿಲ್ಲ. ಪ್ರೀತಿಸಿದ ಹುಡುಗಿ ಮನಸ್ಸಿಗೆ ಬಂದಾಗೆಲ್ಲಾ ಕವನಗಳನ್ನು ಹೇಳುತ್ತಾ, ಸಖತ್ ಮನರಂಜನೆ ನೀಡುತ್ತದೆ ಸಿನಿಮಾ. 'ಶ್ರೀನಿವಾಸ ಕಲ್ಯಾಣ' ಚಿತ್ರವನ್ನು ನೋಡಿದ ಪ್ರೇಕ್ಷಕರು ಸಹ ಎಂಜಾಯ್ ಮಾಡಿದ್ದಾರೆ.

    ಕಾಲೇಜು ಲೈಫ್ ನಲ್ಲಿ ಯುವಕರು ತಮ್ಮ ಪ್ರೀತಿ, ಮದುವೆ ವಿಚಾರದಲ್ಲಿ ಅನುಭವಿಸುವ ಒದ್ದಾಟಗಳನ್ನು ತಮ್ಮ ನಿರೂಪಣೆಯಲ್ಲಿ ನಿರ್ದೇಶಕ ಶ್ರೀನಿವಾಸ್ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಯುವ ಮನಸ್ಸುಗಳಿಗೆ ಬಿಟ್ಟುಹೋದ ಹಳೇ ಪ್ರೇಮಿಗಳನ್ನು ನೆನಪಿಸುವ ಶ್ರೀನಿಯ ಕಲ್ಯಾಣಕ್ಕೆ ಸಿನಿ ಪ್ರಿಯರು ಸಿಳ್ಳೆ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ಶ್ರೀನಿವಾಸ್ ಅವರ ಕಲ್ಯಾಣದ ಅದ್ಭುತ ಚಿತ್ರಕಾವ್ಯಕ್ಕೆ ಚಿತ್ರ ವಿಮರ್ಶಕರು ಏನಂದ್ರು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.[ವಿಮರ್ಶೆ: ಹಳೇ ಡವ್ ಗಳನ್ನು ನೆನಪಿಸುವ 'ಶ್ರೀನಿವಾಸ ಕಲ್ಯಾಣ']

    ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಇಂದು ಪ್ರಕಟ ಮಾಡಿರುವ 'ಶ್ರೀನಿವಾಸ ಕಲ್ಯಾಣ' ಚಿತ್ರದ ವಿಮರ್ಶಕರ ಕಲೆಕ್ಷನ್ ಇಲ್ಲಿದೆ ನೋಡಿ....

    ಭಗ್ನಪ್ರೇಮಿಗೆ ಮೋಕ್ಷ ಕಲ್ಪಿಸುವ ಕಲ್ಯಾಣ - ವಿಜಯವಾಣಿ

    ಭಗ್ನಪ್ರೇಮಿಗೆ ಮೋಕ್ಷ ಕಲ್ಪಿಸುವ ಕಲ್ಯಾಣ - ವಿಜಯವಾಣಿ

    ಇದು ನಿರ್ದೇಶಕ ಎಂ.ಜಿ. ಶ್ರೀನಿವಾಸ್(ಶ್ರೀನಿ) ನಾಯಕನಾಗಿ ನಟಿಸಿರುವ ಪ್ರಥಮ ಚಿತ್ರ. ಜತೆಗೆ ಕಥೆ, ಚಿತ್ರಕಥೆ, ನಿರ್ದೇಶನವೂ ಅವರದ್ದೇ. ಮೊದಲಾರ್ಧಕ್ಕಷ್ಟೇ ಸೀಮಿತವಾದ ಮೊದಲ ಪ್ರೇಯಸಿಯಾಗಿ ನಟಿ ಕವಿತಾ ಗೌಡ ಗ್ಲ್ಯಾಮರ್-ಅಭಿನಯ ಎರಡೂ ಗಮನ ಸೆಳೆಯುತ್ತದೆ. ಗಂಡುಬೀರಿ ಪ್ರೇಯಸಿಯಾಗಿ ನಟಿ ನಿಖಿಲಾ ಸುಮನ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಕಷ್ಟ ಎದುರಾದಾಗೆಲ್ಲ ‘ಬೆಂಕಿ ಐಡ್ಯಾ ಕೊಡುತ್ತೇನೆ..' ಎನ್ನುವ ಬೆಂಕಿ ಸೀನನಾಗಿ ಸುಜಯ್ ಶಾಸ್ತ್ರಿ ಚಿತ್ರದುದ್ದಕ್ಕೂ ನಗು ಉಕ್ಕಿಸುವ ಮೂಲಕ ಭರವಸೆಯ ಕಾಮಿಡಿಯನ್ ಎನಿಸುತ್ತಾರೆ. ನಾಯಕನ ಅಪ್ಪನ ಪಾತ್ರದಲ್ಲಿ ಅಚ್ಯುತ್ ಕುಮಾರ್ ಎಂದಿನಂತೆ ಚೆನ್ನಾಗೇ ನಟಿಸಿದ್ದಾರೆ. ನಾಯಕ ಶ್ರೀನಿವಾಸ್ ನೋಡಲು ಸ್ವಲ್ಪ ಶಾರುಖ್ ಖಾನ್ ಥರ ಕಾಣಿಸುತ್ತಿದ್ದೇನೆ ಎಂದುಕೊಂಡು ನಟನೆಯಲ್ಲೂ ಶಾರುಖ್​ನ ಅನುಕರಣೆ ಮಾಡಲು ಯತ್ನಿಸಿದಂತೆ ಭಾಸವಾಗುತ್ತದೆ ಎಂಬುದನ್ನು ಹೊರತುಪಡಿಸಿದರೆ ಮತ್ತೆಲ್ಲ ಓಕೆ. ನಟ ದತ್ತಣ್ಣ ಕೆಲವೇ ದೃಶ್ಯಗಳಲ್ಲಷ್ಟೇ ಕಾಣಿಸಿದರೂ ಮನಸೆಳೆಯುತ್ತಾರೆ. ಇನ್ನು ವಿಭಿನ್ನವಾಗಿ ಟೈಟಲ್ ಕಾರ್ಡ್ ತೋರಿಸುವ ಮೂಲಕ ಆರಂಭವಾಗುವ ಚಿತ್ರ, ಆಮೇಲಾಮೇಲೆ ಬರೀ ಮಾತಷ್ಟೇ ಏನೋ ಎಂಬಂತನಿಸುತ್ತದೆ. ಕೆಲವೆಡೆ ಡಬಲ್ ಮೀನಿಂಗ್ ಅತಿ ಎನಿಸಿದರೂ ಸಂಭಾಷಣೆ ಖುಷಿ ಕೊಡುತ್ತದೆ. ಹೀಗೆ ಸಾಗುವ ಚಿತ್ರ ಕುತೂಹಲ ಹುಟ್ಟಿಸುವುದೇ ದ್ವಿತೀಯಾರ್ಧದಲ್ಲಿನ ಒಂದಷ್ಟು ಸಮಯದ ನಂತರ. ಈ ಮಧ್ಯೆ ಇಬ್ಬರು ಪ್ರೇಯಸಿಯರೂ ತಪ್ಪಿ ಹೋದರು, ಇನ್ನೆಲ್ಲಿ ಮದುವೆ ಎಂದುಕೊಳ್ಳುತ್ತಿರುವಾಗಲೇ ನಿಜವಾದ ‘ಶ್ರೀನಿವಾಸ ಕಲ್ಯಾಣ' ಆರಂಭವಾಗಿರುತ್ತದೆ. ಹಳೆಯ ಪ್ರೇಯಸಿಯರ ನೆನಪನ್ನು ಮೀರುವುದು ಒಂದು ರೀತಿಯಲ್ಲಿ ಅರಿಷಡ್ವರ್ಗಗಳನ್ನು ಗೆದ್ದಂತೆ ಎನ್ನುತ್ತ ನಾಯಕನ ಮನಸ್ಸನ್ನು ಪರಿವರ್ತನೆಗೊಳಿಸುತ್ತ ಜೀವನೋತ್ಸಾಹ ಮೂಡಿಸುವ ಹಿರಿಯರಾಗಿ ದತ್ತಣ್ಣನ ಪ್ರಯತ್ನ ಇಷ್ಟವಾಗುತ್ತದೆ. ಭಗ್ನಪ್ರೇಮಿಗೂ ಬದುಕಿದೆ, ಭವಿಷ್ಯವಿದೆ ಎಂಬ ಸಂದೇಶ ನೀಡುವ ನಾಯಕನ ಪಾತ್ರ ನೈಜ ಭಗ್ನಪ್ರೇಮಿಗಳಿಗೆ ಆದರ್ಶ ಎನಿಸಿದರೂ ಅಚ್ಚರಿ ಇಲ್ಲ.

    ಹಾಸ್ಯ ಅರಳಿದ ಶ್ರೀನಿವಾಸನ ಕಲ್ಯಾಣ - ವಿಜಯ ಕರ್ನಾಟಕ

    ಹಾಸ್ಯ ಅರಳಿದ ಶ್ರೀನಿವಾಸನ ಕಲ್ಯಾಣ - ವಿಜಯ ಕರ್ನಾಟಕ

    ಡಾ.ರಾಜ್ ಕುಮಾರ್ ಅಭಿನಯದ ಶ್ರೀನಿವಾಸ ಕಲ್ಯಾಣ ಒಂದು ಅದ್ಭುತ ಚಿತ್ರಕಾವ್ಯ. ಅದೇ ಹೆಸರಿಟ್ಟುಕೊಂಡು ಬಂದ ಈಗಿನ ಶ್ರೀನಿವಾಸ ಕಲ್ಯಾಣ ನವೀನ ಕತೆಯನ್ನು ಒಳಗೊಂಡ ತಿಳಿಹಾಸ್ಯದ ಚಿತ್ರ. ಈ ಸಿನಿಮಾ ನೋಡಿ ಬಂದ ಪ್ರೇಕ್ಷಕನಿಗೆ ತನ್ನ ಹಳೆಯ ಪ್ರೀತಿ ನೆನಪಾಗದೆ ಇರುವುದಿಲ್ಲ. ಕಾಲೇಜು ಲೈಫ್ ನಲ್ಲಿ ಯುವಕರು ತಮ್ಮ ಪ್ರೀತಿ, ಮದುವೆ ವಿಚಾರದಲ್ಲಿ ಅನುಭವಿಸುವ ಒದ್ದಾಟಗಳನ್ನು ನಿರ್ದೇಶಕ ಶ್ರೀನಿವಾಸ್ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಈ ರೀತಿಯ ಸಾಕಷ್ಟು ಚಿತ್ರಗಳು ಬಂದಿದ್ದರೂ ನಿರ್ದೇಶಕರ ನಿರೂಪಣಾ ಶೈಲಿ ಹಾಗೂ ಎಪಿಸೋಡ್ ಗಳ ರೀತಿಯಲ್ಲಿ ಕಟ್ಟಿಕೊಟ್ಟಿರುವುದು ಪ್ರೇಕ್ಷಕರನ್ನು ಸೆಳೆಯುತ್ತದೆ. ಚಿತ್ರದ ಎಲ್ಲಾ ಸೀನ್ ಗಳನ್ನು ನಿರ್ದೇಶಕರು ಚೆಂದವಾಗಿ ಚಿತ್ರಿಸಿದ್ದಾರೆ. ಎಲ್ಲವೂ ಫ್ರೆಶ್ ಆಗಿ ಕಾಣುವುದರಿಂದ ಒಂದು ರೀತಿಯಲ್ಲಿ ತಾಜಾತನವಿದೆ. ಇಂಟ್ರಡಕ್ಷನ್ ಸಾಂಗ್ ನಲ್ಲಿ ಸೂಪರ್ ಆಗಿ ಸ್ಟೆಪ್ ಹಾಕುವ ಮೂಲಕ ಶ್ರೀನಿ ಪ್ರೇಕ್ಷಕರನ್ನು ಸೆಳೆಯುತ್ತಾರೆ. ನಾಯಕನ ಗೆಳೆಯನ ಪಾತ್ರದಲ್ಲಿ ನಟಿಸಿರುವ ರಂಗಭೂಮಿ ಕಲಾವಿದ ಸುಜಯ್ ಶಾಸ್ತ್ರಿ ಸಿನಿಮಾಗೆ ಪ್ಲಸ್ ಪಾಯಿಂಟ್. ಎರಡು ಹಾಡುಗಳು ಗುನುಗುವಂತಿದ್ದು, ಅದ್ಧೂರಿ ಲೋಕೇಶನ್ ಗಳಿರದ ಕಾರಣ ಸಿನಿಮಾಟೋಗ್ರಾಫರ್ ಅಶ್ವಿನ್ ಕಡಂಬೂರ್ ಇರುವುದರಲ್ಲೇ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ತಾಂತ್ರಿಕವಾಗಿ ಸಿನಿಮಾವನ್ನು ಇನ್ನಷ್ಟು ಉತ್ತಮ ಪಡಿಸಬಹುದಿತ್ತು ಮತ್ತು ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಕಡಿಮೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಈ ಎರಡು ಅಂಶಗಳನ್ನು ಬದಿಗಿಟ್ಟರೆ ಶ್ರೀನಿವಾಸ ಕಲ್ಯಾಣ ಈ ವಾರಂತ್ಯಕ್ಕೆ ಒಳ್ಳೆ ಮನರಂಜನೆಯುಳ್ಳ ಸಿನಿಮಾ.

    ಊಟಕ್ಕಿಲ್ಲದ ಕಾಮಿಡಿ ಉಪ್ಪಿನಕಾಯಿ - ಕನ್ನಡಪ್ರಭ

    ಊಟಕ್ಕಿಲ್ಲದ ಕಾಮಿಡಿ ಉಪ್ಪಿನಕಾಯಿ - ಕನ್ನಡಪ್ರಭ

    ಈ ಸಿನಿಮಾದ ವಿಶೇಷವೆಂದರೆ ಕಾಮಿಡಿ. ಆ ಮೂಲಕವೇ ಟ್ರೇಲರ್ ನಲ್ಲಿ ಸದ್ದು ಮಾಡಿದ ಸಿನಿಮಾ ಇದು. ಹಾಗಾಗಿ ಅದೇ ನಿರೀಕ್ಷೆಯಿಂದ ಸಿನಿಮಾಗೆ ಹೋಗುವವರ ಸಂಖ್ಯೆ ಜಾಸ್ತಿ. ಅದಕ್ಕೆ ತಕ್ಕಂತೆ ಬೇಜಾನ್ ಕಾಮಿಡಿ ಮಾತುಗಳಿವೆ. ಸಾಮಾನ್ಯವಾಗಿ ಸಿನಿಮಾ ಮಾಡುವವರು ಚೆಂದವಾಗಿ ದೃಶ್ಯಗಳನ್ನು ತೋರಿಸುವ ಕಲೆ ಒಲಿಸಿಕೊಂಡಿರುತ್ತಾರೆ. ಶ್ರೀನಿವಾಸ್ ಅಂತೂ ಆ ಕಲೆಯನ್ನೂ ಮುದ್ದಾಡಿ ಯಾರ್ರಾ ಬಿರ್ರಿ ಒಲಿಸಿಕೊಂಡಿದ್ದಾರೆ. ಹಾಗಾಗಿ ಇಲ್ಲಿ ಎಲ್ಲರೂ ಚೆಂದ ಚೆಂದ. ಆದರೆ ಯಾವಾಗೆಲ್ಲಾ ಶ್ರೀನಿವಾಸ್ ಸೈಲೆಂಟಾಗಿರುತ್ತಾರೋ ಆಗೆಲ್ಲಾ ತುಂಬಾ ಖುಷಿಯಾಗುತ್ತದೆ. ಶ್ರೀನಿವಾಸ ಕಲ್ಯಾಣದಲ್ಲಿ ತುಂಬಾ ವಿಶೇಷಗಳಿವೆ. ಮೊದಲನೆಯದಾಗಿ ಇಲ್ಲಿರುವುದು ಮಾತಿನ ಮಂಟಪ. ಈ ಮಂಟಪದೊಳಗೆ ಎಲ್ಲರೂ ಹಾಗೆ ಬಂದೂ ಹೀಗೆ ಹೋಗುತ್ತಾರೆ. ಹೀರೋ ಮಾತ್ರ ಅಲ್ಲೇ ನಿಂತು ಮಂಟಪವನ್ನು ಕೆತ್ತಿ ಕೆತ್ತಿ ಇಡುತ್ತಾರೆ. ಯಾಕೋ ಏನೋ ಕತೆಗಿಂತಲೂ ಶ್ರೀನಿ ಮಾತಿಗೆ ನಿಷ್ಠರಾದಂತಿದೆ. ಹಾಗಾಗಿ ಮಾತು ಬೆಳ್ಳಿ ಮೌನ ಬಂಗಾರ ಅನ್ನಿಸಿದರೂ ಅಚ್ಚರಿಯಿಲ್ಲ. ಶ್ರೀನಿವಾಸ ಕಲ್ಯಾಣ ಜೋಡಿ ಸೂಪರು. ಧಾರಾವಾಹಿ ಜಗತ್ತಿನಿಂದ ಬಂದ ಕವಿತಾ ಮತ್ತು ನಿಖಿಲಾ ಇಬ್ಬರೂ ಹಾರ್ಟಲ್ಲೊಂದು ತಂತಿ ಮೀಟುತ್ತಾರೆ. ಅದನ್ನು ಹೊರತುಪಡಿಸಿದರೆ ದತ್ತಣ್ಣ ಮತ್ತು ಅಚ್ಯುತ್ ಎಲ್ಲಿದ್ದರೂ ಸೂಪರೇ ಬಿಡಿ. ಇಲ್ಲಿ ಸರ್ಪ್ರೈಸ್ ಪ್ಯಾಕೇಜ್ ಸುಜಯ್ ಶಾಸ್ತ್ರಿ ಅವರು ಆಗಾಗ ಕಚಗುಳಿ ಇಟ್ಟು ನಗಿಸುತ್ತಾರೆ. ಇನ್ನೂ ಊಟದ ವಿಷಯಕ್ಕೆ ಬಂದರೆ ಪಾಯಸದಲ್ಲಿ ಅಲ್ಲಲ್ಲಿ ಸಿಗುವ ಕಾಮಿಡಿಯೆಂಬ ಗೋಡಂಬಿ ಸಕತ್ತಾಗಿದೆ. ಆದರೆ ಊಟಕ್ಕಿಂತ ಉಪ್ಪಿನಕಾಯಿ ಜಾಸ್ತಿಯಾದರೆ ಉಪ್ಪಿನಕಾಯಿ ಎಷ್ಟೇ ಚೆನ್ನಾಗಿದ್ದರೂ ಊಟ ಮಾಡಿದಂತೆ ಅನ್ನಿಸುವುದಿಲ್ಲ.

    Srinivasa Kalyana Movie Review - The Times of India

    Srinivasa Kalyana Movie Review - The Times of India

    MG Srinivas, who has previously directed the Upendra-starrer Topiwala, has this time chosen to direct a romcom that traces the life story of a young man with himself in the lead. The film falls in the category of flicks like Autograph, Premam, Lifeu Ishtene and the recent Kirik Party that follow the travails of a protagonist through his encounters with love. The film, a little over two hours long, proves to be a fun, entertaining ride. Though, like most films of the genre, it does seem to drag at places but eventually makes for a good watch. The film had proved through its trailers that this is no candyfloss romance, but has a little bit of sass and naughty touch to it. The first half is rather cutesy, with some trademark raunchy humour. The scenes are handled well and evoke laughter. The film has cleverly put together two halves of the film with two diametrically different sides to relationships. The first half sees a more innocent young love the second half sees a naughtier adult relationship. The dialogues are fun, at times cheesy, and clever at other times, more in sync with what youngsters talk in everyday life, rather than the long-winding filmi ones. The background score and cinematography add to all the masti that's seen on screen. Srinivas has done a good job in his acting debut, with a good ensemble cast backing him up. Go watch Srinivasa Kalyana for some trademark timepass entertainment, with a good dose of naughty jokes to keep you chuckling.

    A jolly ride for the youth - Bangalore Mirror

    A jolly ride for the youth - Bangalore Mirror

    Srinivasa Kalyana is a light-hearted comedy that chronicles the love affairs of an individual who seems to be forever on the losing side. The idea is not unfamiliar.

    He takes the audience on a jolly ride and the film ends up becoming a good one for timepass. The film has been pieced together from a bunch of incidents and jokes and connected to form a story. But it is seamlessly done and the film has a lively narrative. There are not too many characters for such a film, but those there are are given good characterisation. The film has a youthful charm around it. Srinivas has managed to do come up good in both direction and acting. It is Nikhila and Kavitha who steal the show, charming their way through the film. Achyuth is at his usual best. Sujay Shastry, who makes his debut, plays a supporting comedy role. He shows big promise. On a jarring note, the quality of the images on screen is not satisfactory. They threaten to pixelate. The songs could have been better. You need a really good song or two to complement such a film. Srinivasa Kalyana is a modestly made film which does not hide its modesty. It knows its audience are the youngsters who would lap up what it has to offer.

    English summary
    RJ M.G.Srinivas Starrer 'Srinivasa Kalyana' movie has hit the screen Yesterday(February 24). Here is the movie Critics.
    Saturday, February 25, 2017, 11:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X