twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ : ಬಣ್ಣದ ಬದುಕಿಗೆ ಕನ್ನಡಿ ಹಿಡಿಯುವ 'ಆಕ್ಟರ್'

    By ಸುನೀತಾ ಗೌಡ
    |

    ಒಬ್ಬ ಸಿನಿಮಾ ಕಲಾವಿದ ತೆರೆಯ ಮೇಲೆ ತನ್ನ ಅದ್ಭುತ ನಟನೆಯ ಮೂಲಕ ನಮ್ಮನ್ನು ನಗಿಸುತ್ತಾನೆ, ಅಳಿಸುತ್ತಾನೆ, ಕೋಪ ಬರಿಸುತ್ತಾನೆ. ಒಟ್ನಲ್ಲಿ ನಮ್ಮೆಲ್ಲಾ ಭಾವನೆಗಳನ್ನು ಚಿತ್ರಮಂದಿರದಲ್ಲಿಯೇ ಒಂದು ಕ್ಷಣ ಹೊರಹಾಕುವಂತೆ ಮಾಡುತ್ತಾನೆ.

    ಆದರೆ ಸಾಮಾನ್ಯ ಪ್ರೇಕ್ಷಕರಾದ ನಮ್ಮೆಲ್ಲರ ಭಾವನೆಗಳಿಗೆ ಸ್ಪಂದಿಸುವ ಅದೇ ಕಲಾವಿದನ ಮನದಲ್ಲಿ, ಹೃದಯದ ಒಳಗೆ ಅದೆಷ್ಟೋ ನೋವುಗಳು ಮಡುಗಟ್ಟಿರುತ್ತವೆ. ಅದು ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ ಯಾಕೆ ಕಾಣುವುದಿಲ್ಲ ಅಂದರೆ ನಾವು ಅವರನ್ನು ಬರೀ ಒಬ್ಬ ಸ್ಟಾರ್ ಆಗಿ ನೋಡುತ್ತೇವೆ ಅಷ್ಟೆ.

    ಯಾವುದಾದರೂ ಒಬ್ಬ ಸ್ಟಾರ್ ನಟನ ಸಿನಿಮಾ ಹಿಟ್ ಆದರೆ ಅವರನ್ನು ನಾವು ಹೊಗಳಿ ಅಟ್ಟಕ್ಕೇರಿಸುತ್ತೇವೆ. ಅದೇ ಪ್ಲಾಪ್ ಆದರೆ ಅವರನ್ನು ನೋಡುವುದು ಬಿಡಿ ಅವರತ್ತ ಮೂಸಿಯೂ ನೋಡುವುದಿಲ್ಲ. ಜೊತೆಗೆ ಅವರ ಬಗ್ಗೆ ಹಾಗೂ ಅವರ ಪ್ಲಾಪ್ ಸಿನಿಮಾದ ಬಗ್ಗೆ ಇಲ್ಲ ಸಲ್ಲದ ಮೂದಲಿಕೆ ಬೇರೆ ಮಾಡುತ್ತೇವೆ.

    ಇದು ನಟ ನವೀನ್ ಕೃಷ್ಣ ಅಭಿನಯದ ವಿಭಿನ್ನ ಸಿನಿಮಾ 'ಆಕ್ಟರ್' ನಲ್ಲೂ ನಡೆಯುವ ಕಥೆ. ಸಾಮಾನ್ಯವಾಗಿ ಒಬ್ಬ ಸ್ಟಾರ್ ನಟನ ಜೀವನದಲ್ಲಿ ನಡೆಯುವ ಕಥೆಯನ್ನೇ ಸಿನಿಮಾ ಮಾಡಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್ ['ಆಕ್ಟರ್' ನವೀನ್ ಕೃಷ್ಣ ಬರೆದಿರುವ ಪತ್ರದಲ್ಲಿ ಏನಿದೆ?]

    Rating:
    3.5/5

    ಚಿತ್ರ: 'ಆಕ್ಟರ್'
    ನಿರ್ಮಾಣ: ಕೆ.ಎಂ ವೀರೇಶ್, ಸಹ ನಿರ್ಮಾಣ: ಅವಿನಾಶ್
    ಕಥೆ-ಸಾಹಿತ್ಯ: ನವೀನ್ ಕೃಷ್ಣ
    ನಿರ್ದೇಶನ: ದಯಾಳ್ ಪದ್ಮನಾಭನ್
    ಸಂಗೀತ: ಗೌತಮ್ ಶ್ರೀವತ್ಸ
    ಛಾಯಾಗ್ರಹಣ: ಸುರೇಶ್ ಭೈರಸಂದ್ರ
    ತಾರಾಗಣ: ನವೀನ್ ಕೃಷ್ಣ, ಸಿಹಿ ಕಹಿ ಗೀತಾ,
    ಬಿಡುಗಡೆ: ಫೆಬ್ರವರಿ 19

    ಬರೀ ಒಂದೇ ಮನೆಯಲ್ಲಿ, ಇಡೀ ಸಿನಿಮಾವನ್ನು ಕೇವಲ 100 ನಿಮಿಷಗಳಲ್ಲಿ ಚಿತ್ರೀಕರಿಸಿರುವ ನಟ ನವೀನ್ ಕೃಷ್ಣ ಮತ್ತು ಸಿಹಿ ಕಹಿ ಗೀತಾ ಅವರ 'ಆಕ್ಟರ್' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

    'ಆಕ್ಟರ್' ಕಥೆ ಏನು?

    'ಆಕ್ಟರ್' ಕಥೆ ಏನು?

    ಚಾರ್ಲಿ ಚಾಪ್ಲಿನ್ ಅವರನ್ನು ಆದರ್ಶವಾಗಿಟ್ಟುಕೊಂಡಿರುವ ಯಶಸ್ಸಿನ ಉತ್ತುಂಗದಲ್ಲಿರುವ ಸ್ಟಾರ್ ನಟ 'ಕಲಾವಿದ ಸಂಜಯ್' 2013ರ ನಂತರ ಅಭಿನಯಿಸಿದ ಎಲ್ಲಾ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗುತ್ತವೆ. ಆದರೆ ಅದೇ 2016 ಬಂದಾಗ ಎಲ್ಲಾ ಬದಲಾಗುತ್ತದೆ. ಸ್ಟಾರ್ ನಟನ ಸಿನಿಮಾಗಳು ಬರುಬರುತ್ತಾ ಸೋಲುತ್ತಾ ಹೋಗುತ್ತದೆ. ಆವಾಗ ಆತನ ಪರಿಸ್ಥಿತಿ ಹೇಗಿರಬಹುದು?. ಎಂಬುದು ಇಡೀ ಸಿನಿಮಾದ ಕಥೆ.

    ಮತಿಭ್ರಮಣೆಗೆ ಒಳಗಾಗುವ ಕಲಾವಿದ ಸಂಜಯ್

    ಮತಿಭ್ರಮಣೆಗೆ ಒಳಗಾಗುವ ಕಲಾವಿದ ಸಂಜಯ್

    2013 ರಲ್ಲಿ ಇದ್ದ ಯಶಸ್ಸು, ಹೆಸರು, ಖ್ಯಾತಿ ಯಾವುದು 2016 ಬಂದಾಗ ಇಲ್ಲವಾಗುತ್ತದೆ. ಸ್ಟಾರ್ ಆಗಿದ್ದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಎಲ್ಲರೂ ಸೋತಾಗ ಕೆಲಸ ಇಲ್ಲದ ಸೋಂಬೇರಿ ಎಂದು ಮೂದಲಿಕೆ ಮಾಡುತ್ತಾರೆ. ಇದು ಕಲಾವಿದ ಸಂಜಯ್ ಮನಸ್ಸಲ್ಲಿ ಅಡ್ಡ ಪರಿಣಾಮ ಬೀರುತ್ತದೆ. ತದನಂತರ ಒಬ್ಬ 'ಆಕ್ಟರ್'ನ ಕಥೆ ಏನಾಗುತ್ತದೆ ಎಂಬುದನ್ನು ನೀವು ನೋಡಬೇಕೆ? ಹಾಗಿದ್ರೆ ಖುದ್ದು ನೀವೊಮ್ಮೆ ಥಿಯೇಟರ್ ಗೆ ಭೇಟಿ ಕೊಡಿ.

    ನಟ ನವೀನ್ ಕೃಷ್ಣ ನಟನೆ

    ನಟ ನವೀನ್ ಕೃಷ್ಣ ನಟನೆ

    ಕಲಾವಿದ ಸಂಜಯ್ ಪಾತ್ರದಲ್ಲಿ ನಟ ನವೀನ್ ಕೃಷ್ಣ ಅವರು ತಮ್ಮ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದ್ದಾರೆ. ನಗು-ಅಳು, ಕೋಪ-ಬೇಸರ ಎಲ್ಲವನ್ನೂ ವಿಭಿನ್ನ ರೀತಿಯಲ್ಲಿ ತಮ್ಮ ನಟನೆಯ ಮೂಲಕ ವ್ಯಕ್ತಪಡಿಸಿದ್ದಾರೆ. ಚಿತ್ರದಲ್ಲಿ ಇವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ತನಗೆ ನಟನೆಯೇ ಜೀವ ಎಂದು ನಂಬಿರುವ ಕಲಾವಿದ ಸಂಜಯ್ ಗೆ ನಟನೆಗೆ ಅವಕಾಶಗಳು ಇಲ್ಲ ಅಂತಾದಾಗ ಅವರ ಮನಸ್ಸಿನಲ್ಲಿ ಎಷ್ಟು ಕೋಲಾಹಲ ಸೃಷ್ಟಿ ಮಾಡಬಹುದು ಎಂಬುದನ್ನು ನವೀನ್ ಕೃಷ್ಣ ಅವರು ಅದ್ಭುತವಾಗಿ ತಮ್ಮ ಅಭಿನಯದ ಮೂಲಕ ಹೊರ ಹಾಕಿದ್ದಾರೆ.

    ಸಿಹಿ ಕಹಿ ಗೀತಾ ನಟನೆ

    ಸಿಹಿ ಕಹಿ ಗೀತಾ ನಟನೆ

    ಸಿನಿಮಾದ ಮಧ್ಯಂತರ ಭಾಗ ಮುಗಿದ ನಂತರ ನಟಿ ಸಿಹಿ ಕಹಿ ಗೀತಾ ಅವರ ಆಗಮನ. ಮನೆಕೆಲಸದವರ ಪಾತ್ರದಲ್ಲಿ ಮಿಂಚಿರುವ ನಟಿ ಜೀವನದಲ್ಲಿ ಜಿಗುಪ್ಸೆ ಹೊಂದಿರುವ ವ್ಯಕ್ತಿಯನ್ನು ಒಳ್ಳೆಯ ಮಾತಿನಿಂದ ಹೇಗೆ ಸರಿಪಡಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಪಾತ್ರ ಚಿಕ್ಕದಾಗಿದ್ದರು ಈ ಇಡೀ ಸಿನಿಮಾದಲ್ಲಿ ಇವರೇ ಹೈಲೈಟ್.

    ಇಡೀ ಸಿನಿಮಾದಲ್ಲಿ ಇಬ್ಬರೇ

    ಇಡೀ ಸಿನಿಮಾದಲ್ಲಿ ಇಬ್ಬರೇ

    ಇಡೀ ಸಿನಿಮಾವನ್ನು ಒಂದೇ ಮನೆಯಲ್ಲಿ ಬರೀ ನೂರು ನಿಮಿಷದಲ್ಲಿ, ಇಬ್ಬರೇ ಇಬ್ಬರು ಕಲಾವಿದರನ್ನು ಇಟ್ಟುಕೊಂಡು ಸಿನಿಮಾ ಮಾಡಬಹುದು ಎಂಬುದನ್ನು ನಿರ್ದೇಶಕ ದಯಾಳ್ ಪದ್ಮನಾಭನ್ ತೋರಿಸಿಕೊಟ್ಟಿದ್ದಾರೆ.

    ಸಂಗೀತ

    ಸಂಗೀತ

    ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಅವರ ಮ್ಯೂಸಿಕ್ ಕಂಪೋಸಿಷನಲ್ಲಿ ಮೂಡಿಬಂದಿರುವ ಹಾಡುಗಳು ಅರ್ಥಪೂರ್ಣವಾಗಿದ್ದು, ಥಿಯೇಟರ್ ನಿಂದ ಹೊರ ಬಂದ ಮೇಲೂ ಮನಸ್ಸಿಗೆ ಕಾಡುತ್ತವೆ.

    ಚಿತ್ರದ ನಿರೂಪಣೆ

    ಚಿತ್ರದ ನಿರೂಪಣೆ

    ಚಿತ್ರದ ಮೊದಲ ಭಾಗದಲ್ಲಿ ತೆರೆಯ ಮೇಲೆ ಬರೀ ನವೀನ್ ಕೃಷ್ಣ ಅವರು ಒಬ್ಬರೇ ಇರುತ್ತಾರೆ. ಯಾವುದೇ ಉಳಿದ ಪಾತ್ರ ಇಲ್ಲದೆ, ಒಬ್ಬರನ್ನೇ ಇಟ್ಟುಕೊಂಡು ಫಸ್ಟ್ ಹಾಫ್ ಮುಗಿಸಿದ್ದು, ನಿರ್ದೇಶಕರ ಪ್ಲಸ್ ಪಾಯಿಂಟ್. ಅದರೊಂದಿಗೆ ಅಮ್ಮನ ಪಾತ್ರದಲ್ಲಿ ತಂದಿಟ್ಟ ಟ್ವಿಸ್ಟ್ ಕೂಡ 'ಆಕ್ಟರ್' ನ ಪ್ರಮುಖ ಅಂಶ.

    ಕ್ಯಾಮರಾ ವರ್ಕ್

    ಕ್ಯಾಮರಾ ವರ್ಕ್

    ಛಾಯಾಗ್ರಾಹಕ ಸುರೇಶ್ ಭೈರಸಂದ್ರ ಅವರ ಕೈ ಚಳಕದಲ್ಲಿ ಕ್ಯಾಮರಾ ಕೆಲಸಗಳು ಅದ್ಭುತವಾಗಿ ಮೂಡಿಬಂದಿದೆ. ಕಲರ್ ಫುಲ್ ಲೈಟಿಂಗ್ಸ್ ಗಳ ಜೊತೆ ಜೊತೆಗೆ ಆಗಾಗ ಮೂಡಿಬರುವ ಹಿನ್ನಲೆ ಸಂಗೀತ ಸಖತ್ತಾಗಿ ಮ್ಯಾಚ್ ಆಗುತ್ತಿದ್ದು, ಇಡೀ ಸಿನಿಮಾದ ಆಕರ್ಷಣೆ.

    ಕ್ಲೈಮ್ಯಾಕ್ಸ್

    ಕ್ಲೈಮ್ಯಾಕ್ಸ್

    ಜೀವನದಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿರುವ ಕಲಾವಿದ ಸಂಜಯ್ ಅವರು ಕ್ಲೈಮ್ಯಾಕ್ಸ್ ನಲ್ಲಿ ಯಾವ ರೀತಿ ಬದಲಾಗುತ್ತಾರೆ ಎಂಬುದು 'ಆಕ್ಟರ್' ಸಿನಿಮಾದಲ್ಲಿ ಕೊನೆ ತನಕ ಇರುವ ಕುತೂಹಲ. ಜೊತೆಗೆ ಚಿತ್ರದಲ್ಲಿರುವ ಸುಂದರವಾದ ಸಂದೇಶ ಸಮಾಜಕ್ಕೆ ಹಾಗೂ ಮುಖ್ಯವಾಗಿ ಸ್ಟಾರ್ ನಟರ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದೆ.

    ತಪ್ಪದೇ ನೋಡಿ

    ತಪ್ಪದೇ ನೋಡಿ

    ಸೈಲೆಂಟಾಗಿ ಸಿನಿಮಾ ಸಾಗುತ್ತದೆ. ಪಕ್ಕಾ ಫ್ಯಾಮಿಲಿ ಎಲ್ಲಾ ಕುಳಿತು ನೋಡಬಹುದಾದ ಸಿನಿಮಾ 'ಆಕ್ಟರ್'. ಸಮಾಜಕ್ಕೆ ಬೇಕಾದ ಉತ್ತಮ ಸಂದೇಶ ಈ ಸಿನಿಮಾದಲ್ಲಿರುವುದರಿಂದ ಎಲ್ಲರೂ ಒಮ್ಮೆ ತಪ್ಪದೇ ಈ ಸಿನಿಮಾ ನೋಡಿ.

    English summary
    Kannada Movie Actor' Review, Kannada Actor Naveen Krishna, Actress Sihi Kahi Geetha in the lead role. The movie is directed by Dayal Padmanabhan.
    Friday, February 19, 2016, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X