»   » ನಿಂಬೆಹುಳಿ: ಚಪಲ ನೀಗಿಸುವ ಪೆಪ್ಪರ್ಮಿಂಟ್

ನಿಂಬೆಹುಳಿ: ಚಪಲ ನೀಗಿಸುವ ಪೆಪ್ಪರ್ಮಿಂಟ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಒಂದು ವೇಳೆ ನೀವು ಚಿತ್ರ ನೋಡಿ ನಗು ಬರಲಿಲ್ಲ ಅಂದ್ರೆ ನಿಮಗೆ ಬಹುಮಾನ ಉಂಟು. ಎಂದು ನಟ, ನಿರ್ದೇಶಕ ಹೇಮಂತ್ ಎಸೆದಿದ್ದ ಚಾಲೆಂಜ್ ಧೈರ್ಯವಾಗಿ ಸ್ವೀಕರಿಸಬಹುದು. ನಿಂಬೆ ಹುಳಿ ನೋಡಿ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಂಡು ಭೂಮಿಕಾ ಚಿತ್ರಮಂದಿರದಿಂದ ಹೊರಕ್ಕೆ ಬಂದು ನಿಂಬೆ ಜ್ಯೂಸ್ ಕುಡಿದು ಮನೆಗೆ ತೆರಳಬಹುದು.

ಬೇಸಿಗೆಯ ಬಿಸಿಯಲ್ಲಿ ತಂಪು ನೀಡಲು ನಿಂಬೆಹುಳಿಯನ್ನು ಆರಿಸಿಕೊಂಡಿರುವ ಹೇಮಂತ್ ಈ ಬಾರಿ ನಿಮಗೆ ನಿರಾಶೆ ಮೂಡಿಸುವುದಿಲ್ಲ. ಒಳ್ಳೆ ನಿಂಬೆ ಪೆಪ್ಪರ್ಮಿಂಟ್ ತಿನ್ನುವಾಗ ನೀಡುವ ಮಜಾವನ್ನು ಈ ಚಿತ್ರವೂ ನೀಡುತ್ತದೆ. ಆದರೆ, ಚಿತ್ರಮಂದಿರದಿಂದ ಹೊರಬಿದ್ದ ಮೇಲೆ ಅಷ್ಟಾಗಿ ಕಾಡುವುದಿಲ್ಲ. ಪೆಪ್ಪರ್ಮಿಂಟ್ ನಂತೆ ಆ ಸಮಯಕ್ಕೆ ಮಾತ್ರ ಒಳ್ಳೆ ಸ್ವಾದ ಒಳ್ಳೆ ರುಚಿ ನೀಡುತ್ತದೆ. ಆದರೆ, ಚಿತ್ರದ ಅಭಿರುಚಿ ಬಗ್ಗೆ ಮಡಿವಂತರು ಆಕ್ಷೇಪಿಸಬಹುದು. ಹೇಳಿ ಕೇಳಿ ಇದು ಹೇಮಂತ್ ಚಿತ್ರ ಎರಡು ಮೂರು ನಾಯಕಿಯರು, ಹನಿಮೂನ್, ಬೆಡ್ ರೂಮ್ ಜೋಕುಗಳು ಕಟ್ ಆಗದಿದ್ದರೆ ಟ್ರೇಡ್ ಮಾರ್ಕ್ ಗೆ ತೊಂದರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

Rating:
3.0/5

ಇದೇ ಮೊದಲ ಬಾರಿಗೆ ದಕ್ಷಿಣ ಭಾರತೀಯ ಸಿನಿಮಾವೊಂದರ ನಿರ್ಮಾಣಕ್ಕೆ ಕೈಹಾಕಿರುವ ಖ್ಯಾತ ನಿರ್ದೇಶಕ ಸುಭಾಷ್ ಘಾಯ್ ಅವರಿಗೆ ಅಂತೂ ಇಂತೂ ಕನ್ನಡ ಸಿನಿಮಾ ನಿರ್ಮಿಸಿ ಬಿಡುಗಡೆ ಮಾಡಿದ ಖುಷಿ ಸಿಕ್ಕಿದೆ. ಈ ನಡುವೆ ನಿಂಬೆಹುಳಿ ಚಿತ್ರಕಥೆ ಬಗ್ಗೆ ಇದ್ದ ಕುತೂಹಲಕ್ಕೂ ಮುಂಚಿತವಾಗಿ ತೆರೆ ಬಿದ್ದಿತ್ತು. ಈ ಚಿತ್ರಕ್ಕೆ ಕ್ರಿಕೆಟ್ ಬೆಟ್ಟಿಂಗ್ ಹಗರಣವೇ ಸ್ಪೂರ್ತಿ ಎಂಬ ವಿಷಯ ಬಹಿರಂಗಗೊಂಡಿತ್ತು ಆದರೆ, ಕಥೆ ಇಷ್ಟೇ ಅಲ್ಲ..ಹಾಗಾದರೆ ಹೇಮಂತ್ ಏನು ಹೇಳ ಹೊರಟ್ಟಿದ್ದಾರೆ ಮುಂದೆ ಓದಿ..

ಮೂರು ಎಳೆ ನಿಂಬೆಗಳು ಓಕೆ, ನಟನೆ ಏಕೆ?

ಎಲ್ಲಾ ಕಾಮಿಡಿಗಳ ದೊಡ್ಡಪ್ಪ ನಿಂಬೆಹುಳಿ ಚಿತ್ರ ಪಕ್ಕಾ ಕಾಮಿಡಿ ಚಿತ್ರವಾಗಿರುವುದರಿಂದ ಇಲ್ಲಿ ಮೂವರು ನಾಯಕಿಯರಿಗೆ ಅಷ್ಟಾಗಿ ಕೆಲಸವಿಲ್ಲ. ಮುಂಬೈ ಬೆಡಗಿಯರಾದ ಕೋಮಲ್ ಝಾ, ಮಧುರಿಮಾ ಬೊಂಬೆಗಳ ಜತೆ ತಕ್ಕಮಟ್ಟಿನ ನಟನೆ ನೀಡಿರುವ ನಿವೇದಿತಾ ಗಮನ ಸೆಳೆಯುತ್ತಾರೆ. ಡೈಲಾಗ್ ಗಳೇ ಜೀವಾಳವಾಗಿರುವುದರಿಂದ ನಾಯಕಿಯರಿಂದ ಇನ್ನಷ್ಟು ಅಭಿನಯ ಹೊರ ತೆಗೆಸಲು ಹೇಮಂತ್ ಹೆಣಗಿರುವುದು ಕಂಡು ಬರುತ್ತದೆ.

ಇಷ್ಟಕ್ಕೂ ಕಥೆ ಏನು ಶಿವಾ?

ಗೋಲ್ ಮಾಲ್ ರಾಧಾಕೃಷ್ಣ, ರೋಲ್ ಕಾಲ್ ರಾಧಾ ಕೃಷ್ಣ, ಚಪಲ ಚನ್ನಿಗರಾಯ.. ಇತ್ಯಾದಿ ಚಿತ್ರಗಳ ಸಿಡಿ ಮನೆಯಲ್ಲಿ ಇದ್ದರೆ ನೋಡಿ ಆನಂದಿಸಿ. ಇಲ್ಲದಿದ್ದರೆ ಈ ಚಿತ್ರಕ್ಕೆ ಬನ್ನಿ.. ಚಿತ್ರ ಮಂದಿರವನ್ನು ತುಂಬಿದ ಗೃಹ ಪ್ರದರ್ಶನ ಮಾಡಿದ ಕೀರ್ತಿ ನಿಮಗೂ ಸಲ್ಲಲಿ. ಈ ಚಿತ್ರದಲ್ಲಿ ನಾಯಕ ಮೂವರು ನಾಯಕಿಯರು ಹೇಗೆ ನಿಭಾಯಿಸುತ್ತಾನೆ ಎಂಬುದೇ ಕಥೆ. ಸ್ಕ್ರಿಪ್ಟ್ ಟೈಟ್ ಆಗಿರುವುದರಿಂದ ಬಚಾವ್ ಇಲ್ಲದಿದ್ದರೆ ರಾಮ ರಾಮಾ.. ಪಂಗನಾಮ

ವಿವಾದಗಳೇ ಈ ಚಿತ್ರದ ಜೀವಾಳ

ಈ ಹಿಂದೊಮ್ಮೆ ವಿಶಿಷ್ಟ ಬಗೆಯ ಕಾರ್ಟೂನ್ ಗಳಿಂದ 'ನಿಂಬೆಹುಳಿ' ಪತ್ರಿಕಾ ಜಾಹೀರಾತಿನಿಂದ ಹೇಮಂತ್ ಹೆಗಡೆ ಗಮನಸೆಳೆದಿದ್ದರು. ಆಗ ಸುದ್ದಿ ಮಾಡಿದ 'ನಿಂಬೆಹುಳಿ' ಚಿತ್ರ ಕೆಲದಿನ ನಾಪತ್ತೆಯಾಗಿ ಇದೀಗ ಪ್ರೇಕ್ಷಕರ ಮುಂದೆ ಥಟ್ಟನೆ ಪ್ರತ್ಯಕ್ಷವಾಗಿದೆ. ಲೇಟ್ ಆಗಿ ಬಂದರೂ ಲೇಟೇಸ್ಟ್ ಆಗಿದೆ. ಬೆಟ್ಟಿಂಗ್, ನಿಜ ಜೀವನದ ಪಾತ್ರಗಳನ್ನು ಹೋಲುವ ಪಾತ್ರಗಳು, ಡಬ್ಬಲ್ ಮೀನಿಂಗ್ ಡೈಲಾಗ್ಸ್ ಜತೆ ಒಂದಿಷ್ಟು ಕಥೆ ಅಂಥ ತುರುಕಲಾಗಿದೆ.

ನಿಂಬೆಹುಳಿ:ಚಿತ್ರ ನೋಡಬಹುದೇ?

ನಿಂಬೆಹುಳಿ ಚಿತ್ರಕಥೆ ಬೋರ್ ಹೊಡೆಸುವುದಿಲ್ಲ, ಡೈಲಾಗ್ ಗಳಂತೂ ಸುಮ್ಮನೆ ಕಚಗುಳಿ ಇಡುತ್ತಲೇ ಇರುತ್ತವೆ. ಯಾವಾಗ ನಗಬೇಕು ಯಾವಾಗ ಚಿತ್ರವನ್ನು ಗಂಭೀರವಾಗಿ ನೋಡಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ. ಚಿತ್ರ ಒಮ್ಮೆ ನೋಡಲು ಅಡ್ಡಿಯಿಲ್ಲ. ಕೊಟ್ಟ ಕಾಸಿಗೆ ಮೋಸವಾಗುವುದಿಲ್ಲ. ಭಾರಿ ಹಾಸ್ಯ ಪ್ರಧಾನ ಇತ್ರ ಎಂಬ ಭ್ರಮ ಇಟ್ಟುಕೊಂಡು ಚಿತ್ರಮಂದಿರಕ್ಕೆ ಮಾತ್ರ ಹೋಗಬೇಡಿ.

ಹಾಡುಗಳು, ಡೈಲಾಗ್ ಕೈ ಹಿಡಿಯಬಹುದು

ಚಿತ್ರದ ಹಾಡುಗಳ ಚಿತ್ರೀಕರಣ, ಸಾಹಿತ್ಯ, ಡೈಲಾಗ್ ಚಿತ್ರವನ್ನು ಕೈ ಹಿಡಿದು ಮುನ್ನಡೆಸಬಹುದು ದುಂಡೀರಾಜ್ ಹನಿಗವನದ ಪಂಚ್ ಕೂಡಾ ಪಡೆಯಬಹುದು. ನಟನೆ ವಿಷಯದಲ್ಲಿ ಹೇಮಂತ್,  ಬುಲೆಟ್ ಪ್ರಕಾಶ್, ಓಂ ಪ್ರಕಾಶ್, ರಂಗ ಪ್ರತಿಭೆಗಳಾದ ಕಿರಣ್ ವಟಿ, ಜಯದೇವ್, ಗಿರೀಜಾ ಲೋಕೇಶ್ ಎಲ್ಲರೂ ಚಿತ್ರದಲ್ಲಿ ನಿಮ್ಮನ್ನು ನಗಿಸಲು ಸಿದ್ಧರಾಗಿದ್ದಾರೆ. ಈ ಚಿತ್ರ ಈಗಾಗಲೇ ತಮಿಳಿಗೆ ಮಾರಾಟವಾಗಿದೆ. ಇಲ್ಲಿ ಕೂಡಾ ಗಲ್ಲಾಪೆಟ್ಟಿಗೆ ತುಂಬಿಸುವ ಲಕ್ಷಣಗಳು ಕಂಡುಬಂದಿದೆ. ಆದರೆ, ಚಿತ್ರಮಂದಿರದಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣವಾದರೆ ಅದಕ್ಕೆ ನಿರ್ದೇಶಕರೇ ಹೊಣೆ

English summary
Nimbehuli,a movie is directed by Kannada actor-director Hemanth Hegde of Housefull fame. This is the Kannada film produced by Subhash Ghai under his Muktha arts banner. Nimbehuli is a out and out comedy movie, script is engaging and unique and complete entertainer movie
Please Wait while comments are loading...

Kannada Photos

Go to : More Photos