twitter
    For Quick Alerts
    ALLOW NOTIFICATIONS  
    For Daily Alerts

    ರಾಮ ಲೀಲಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ

    By ಜೇಮ್ಸ್ ಮಾರ್ಟಿನ್
    |

    ರಾಮ ಲೀಲ ಚಿತ್ರದ ಟ್ರೇಲರ್ ಬಿಡುಗಡೆ ದಿನದಿಂದ ವಿವಾದದ ನಡುವೆ ಬೆಳೆದ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅವರ ಬಹು ನಿರೀಕ್ಷಿತ ಚಿತ್ರ ನೋಡಲೇ ಬೇಕು ಎಂದು ಕೆಲ ವಿಮರ್ಶಕರು ಪ್ರಶಂಸಿಸಿದರೆ, ಮತ್ತೆ ಕೆಲವರು ಇದು ಜಸ್ಟ್ ಟೈಮ್ ಪಾಸ್ ಚಿತ್ರ ಎಂದಿದ್ದಾರೆ.
    ವಿಲಿಯಂ ಷೇಕ್ಸ್ ಪಿಯರ್ ರೋಮಿಯೋ ಹಾಗೂ ಜೂಲಿಯಟ್ ಕಥೆಯನ್ನು ಭಾರತೀಯರ ರುಚಿಗೆ ತಕ್ಕಂತೆ ಉಣಬಡಿಸಿರುವ ಬನ್ಸಾಲಿಗಂತೂ ಚಿತ್ರದ ಬಗ್ಗೆ ಬಂದಿರುವ ಪ್ರತಿಕ್ರಿಯೆ ತೃಪ್ತಿ ತಂದಿದೆಯಂತೆ. ಪ್ರೇಕ್ಷಕರು ಕೂಡಾ ಒಟ್ಟಾರೆಯಾಗಿ ಈ ಚಿತ್ರ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದಿದ್ದಾರೆ.

    ರೋಮಿಯೋ ಹಾಗೂ ಜೂಲಿಯಟ್ ಪಾತ್ರದಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದೇಸಿ ರೋಮಿಯೋ-ಜೂಲಿಯಟ್ ನಲಿದಾಟ, ಪ್ರಣಯ ಚೇಷ್ಟೆಗಳು ಈ ಚಿತ್ರಕ್ಕೆ ಕೃಷ್ಣಲೀಲೆ ಎಂದು ಹೆಸರಿಡಬೇಕಿತ್ತು ಎಂದು ಪ್ರೇಕ್ಷಕರಿಂದ ಪ್ರತಿಕ್ರಿಯೆ ಪಡೆದಿದೆ.

    ಈ ಚಿತ್ರದ ದೃಶ್ಯಗಳು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಇದೆ ಎಂದು ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರೂ ಸಿನಿರಸಿಕರು ಮಾತ್ರ ಧೈರ್ಯವಾಗಿ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ ಅಭಿಪ್ರಾಯ ಮಂಡಿಸಿದ್ದಾರೆ.

    ಟೈಮ್ಸ್ ವಿಮರ್ಶೆ(ಐದಕ್ಕೆ ಐದು ಸ್ಟಾರ್): ದೀಪಿಕಾ ಅದ್ಭುತ ನಟನೆ ಮೂಲಕ ನಟಿಯಿಂದ ಸೂಪರ್ ಸ್ಟಾರ್ ಪಟ್ಟಕ್ಕೆ ಬಡ್ತಿ ಪಡೆಯಲು ರಾಮ್ ಲೀಲ ಚಿತ್ರ ಕಾರಣವಾಗಲಿದೆ. ರಣವೀರ್ ಸಿಕ್ಸ್ ಪ್ಯಾಕ್ ನಟನೆ, ಬನ್ಸಾಲಿ ಕಥೆ ಆಶಯ ಎಲ್ಲವೂ ಚಿತ್ರನ್ನು ಐತಿಹಾಸಿಕ ಚಿತ್ರವಾಗುವಂತೆ ಮಾಡಿದೆ. ವಿಮರ್ಶಕರ ವಿಮರ್ಶೆ ಮುಂದೆ ಓದಿ...

    ಒನ್ ಇಂಡಿಯಾ (ನಾಲ್ಕು ಸ್ಟಾರ್)

    ಒನ್ ಇಂಡಿಯಾ (ನಾಲ್ಕು ಸ್ಟಾರ್)

    ಪ್ರಣಯ, ಹೊಡೆದಾಟ, ರಾಗ ದ್ವೇಷ, ಸಂಸ್ಕೃತಿ, ಸಂಗೀತ ಅನಾವರಣಗೊಳಿಸುವ ಬನ್ಸಾಲಿ ವಿಧಾನವೇ ಚಿತ್ರವನ್ನು ನೋಡುವಂತೆ ಮಾಡುತ್ತದೆ

    ಇಂಡಿಯನ್ ಏಕ್ಸ್ ಪ್ರೆಸ್ (ಎರಡೂವರೆ ಸ್ಟಾರ್)

    ಇಂಡಿಯನ್ ಏಕ್ಸ್ ಪ್ರೆಸ್ (ಎರಡೂವರೆ ಸ್ಟಾರ್)

    ಪ್ರಣಯ ಕಥೆಯ ಮಧ್ಯೆ ಹಲವು ಸನ್ನಿವೇಶಗಳನ್ನು ಅನಗತ್ಯವಾಗಿ ಪೋಣಿಸಿದಂತೆ ತೋರುತ್ತದೆ. ಇದು ಪ್ರೇಕ್ಷಕರಿಗೆ ಇರುಸು ಮುರುಸು ಉಂಟು ಮಾಡುತ್ತದೆ. ಇದು ಬಿಟ್ಟರೆ, ರಣವೀರ್- ದೀಪಿಕಾ ಬೆಳ್ಳಿತೆರೆಗೆ ಕಿಚ್ಚು ಹಚ್ಚಿದ್ದಾರೆ.

    ಫಸ್ಟ್ ಪೋಸ್ಟ್

    ಫಸ್ಟ್ ಪೋಸ್ಟ್

    ಬನ್ಸಾಲಿ ಅಭಿಮಾನಿ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಚಿತ್ರ. ಮೊದಲ ಬಾರಿಗೆ ಬನ್ಸಾಲಿ ಚಿತ್ರ ನೋಡುವವರಿಗೆ ಕೊಂಚ ಹೆಚ್ಚು ಎನಿಸುವಷ್ಟು ಸನ್ನಿವೇಶಗಳು ಈ ಚಿತ್ರದಲ್ಲಿವೆ.

     ಬಾಲಿವುಡ್ ಲೈಫ್ (ಮೂರು ಸ್ಟಾರ್)

    ಬಾಲಿವುಡ್ ಲೈಫ್ (ಮೂರು ಸ್ಟಾರ್)

    ಗಾಲಿಯಾನ್ ಕಿ ರಾಸ್ ಲೀಲ ರಾಮ್ ಲೀಲ ನೋಡಬಹುದಾದ ಚಿತ್ರ. ರಣವೀರ್ ಹಾಗೂ ದೀಪಿಕಾ ಜೋಡಿ, ಬನ್ಸಾಲಿ ಸಂಗೀತ ಮೋಡಿ ಮಾಡಲಿದೆ.

    ಜೀ ನ್ಯೂಸ್(ಮೂರೂವರೆ ಸ್ಟಾರ್)

    ಜೀ ನ್ಯೂಸ್(ಮೂರೂವರೆ ಸ್ಟಾರ್)

    ಚಿತ್ರದ ಸೆಟ್ ಗಳು, ನಟ ನಟಿಯರ ವಸ್ತ್ರ ವಿನ್ಯಾಸ ಎಲ್ಲವೂ ಸುಂದರ ಕಲಾಕೃತಿ ಚಲಿಸುವಂತೆ ಭಾಸವಾಗುತ್ತದೆ. ಷೇಕ್ಸ್ ಪಿಯರ್ ಗೆ ಭಾರತದಿಂದ ನೀಡುತ್ತಿರುವ ಉತ್ತಮ ಗೌರವ ಇದಾಗಿದೆ.

    Koimoi (ಮೂರೂವರೆ ಸ್ಟಾರ್)

    Koimoi (ಮೂರೂವರೆ ಸ್ಟಾರ್)

    ಷೇಕ್ಸ್ ಪಿಯರ್ ನ ಮಹೋನ್ನತ ಕೃತಿಯನ್ನು ದೇಸಿ ಮಾರುಕಟ್ಟೆಗೆ ಒಗ್ಗಿಕೊಳ್ಳುವಂತೆ ಮಾಡುವಲ್ಲಿ ಬನ್ಸಾಲಿ ಯಶಸ್ವಿಯಾದರೂ ನಿರೂಪಣೆಯಲ್ಲಿ ಹೊಸತನ ತರುವಲ್ಲಿ ವಿಫಲರಾಗಿದ್ದಾರೆ.

    ಬಾಲಿವುಡ್ ಹಂಗಾಮ(ನಾಲ್ಕೂವರೆ ಸ್ಟಾರ್)

    ಬಾಲಿವುಡ್ ಹಂಗಾಮ(ನಾಲ್ಕೂವರೆ ಸ್ಟಾರ್)

    ಸಂಜಯ್ ಲೀಲಾ ಬನ್ಸಾಲಿ, ದೀಪಿಕಾ, ರಣವೀರ್ ಅವರ ಈವರೆಗಿನ ಅತ್ಯುತ್ತಮ ಚಿತ್ರ ಎಂದು ಘೋಷಿಸಬಹುದು. ಕಲೆಯನ್ನು ಎಲ್ಲರಿಗೂ ತಲುಪಿಸುವ ರೀತಿಯಲ್ಲಿ ಬನ್ಸಾಲಿ ಗೆದ್ದಿದ್ದಾರೆ.

    ರೀಡಿಫ್ ವಿಮರ್ಶೆ(ಎರಡೂವರೆ ಸ್ಟಾರ್)

    ರೀಡಿಫ್ ವಿಮರ್ಶೆ(ಎರಡೂವರೆ ಸ್ಟಾರ್)

    ಚಿತ್ರದ ಆರಂಭದಲ್ಲಿ ನೀಡುವ ಭರವಸೆ ಕೊನೆ ತನಕ ಉಳಿಸಿಕೊಳ್ಳುವಲ್ಲಿ ನಟನಾ ವರ್ಗ ಯಶಸ್ವಿಯಾದರೆ, ಬನ್ಸಾಲಿ ಸೋಲುತ್ತಾರೆ. ಪ್ರೇಕ್ಷಕರ ಮನಸ್ಸಿನಲ್ಲಿ ಗೊಂದಲ ಮೂಡಿಸುವ ನಿರೂಪಣೆ ಬನ್ಸಾಲಿ ಚಿತ್ರಕ್ಕೆ ಸಲ್ಲುವುದಿಲ್ಲ. ಪ್ರಣಯ ಕಥೆ ಪೂರ್ಣಪ್ರಮಾಣದಲ್ಲಿ ಆಸ್ವಾದಿಸಲು ಬಿಡಬೇಕಿತ್ತು.

    ಇಂಡಿಯಾ ಟುಡೇ(ನಾಲ್ಕೂವರೆ ಸ್ಟಾರ್)

    ಇಂಡಿಯಾ ಟುಡೇ(ನಾಲ್ಕೂವರೆ ಸ್ಟಾರ್)

    ನಾಯಕ, ನಾಯಕಿಯರಿಂದ ಉತ್ತಮ ನಟನೆ, ನೃತ್ಯ ಪ್ರದರ್ಶನ ಪಡೆಯುವಲ್ಲಿ ಬನ್ಸಾಲಿ ಎತ್ತಿದ ಕೈ. ಕಥೆ ಹೇಳುವ ರೀತಿಯೂ ಅನನ್ಯ.

    English summary
    Sanjay Leela Bhansali's latest release Ram Leela, that features Ranveer Singh and Deepika Padukone in the leads, is an adaptation of Shakespeare's novel 'Romeo and Juliet'. Deepika is breathtaking and in top form. Go through the slider to check out more critics' review
    Sunday, November 17, 2013, 18:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X