twitter
    For Quick Alerts
    ALLOW NOTIFICATIONS  
    For Daily Alerts

    ಭಾವುಕಯಾನದ 'ಪುಷ್ಪಕ ವಿಮಾನ' ನೋಡಿ ವಿಮರ್ಶಕರು ಹೇಳಿದ್ದು ಹೀಗೆ..

    By Suneel
    |

    ಎಸ್.ರವೀಂಧ್ರನಾಥ್ ಆಕ್ಷನ್ ಕಟ್ ಹೇಳಿರುವ ತಂದೆ-ಮಗಳ ಬಾಂಧವ್ಯವನ್ನು ವಿವರಿಸುವ ಚಿತ್ರಕಥೆಯ 'ಪುಷ್ಪಕ ವಿಮಾನ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ರಮೇಶ್ ಅರವಿಂದ್ ಬುದ್ಧಿಮಾಂದ್ಯ ಪಾತ್ರದಲ್ಲಿ ಅಭಿನಯಿಸಿರುವ ಚಿತ್ರ ನೋಡಿ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ನೋಡಿದ ಕೆಲವರು ಹೆಚ್ಚು ಅಳಿಸುತ್ತದೆ ಎಂದು ಹೇಳಿದ್ದಾರೆ.[ 'ಪುಷ್ಪಕ ವಿಮಾನ' ಚಿತ್ರ ನೋಡಲು ಕರ್ಚೀಫ್ ತೆಗೆದುಕೊಂಡು ಹೋಗಿ]

    ತಂದೆ-ಮಗಳ ಬಾಂಧವ್ಯ ನೋಡಿದ ಕ್ಲಾಸ್ ವರ್ಗದ ಪ್ರೇಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಅವರಂತೆ ನಮ್ಮ ವಿಮರ್ಶಕರು ಚಿತ್ರ ನೋಡಿ ಕಣ್ಣೀರು ಸುರಿಸಿದರಾ? ಅಥವಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರಾ?[ವಿಮರ್ಶೆ: ಅದ್ಭುತ ಭಾವನಾತ್ಮಕ 'ಯಾನ', ಅಪ್ಪ-ಮಗಳ ಈ 'ಪುಷ್ಟಕ ವಿಮಾನ']

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಪುಷ್ಪಕ ವಿಮಾನ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿ....

    ಭಾವುಕ ಲೋಕದಲ್ಲೊಂದು ಹಗುರ ವಿಹಾರ: ಪ್ರಜಾವಾಣಿ

    ಭಾವುಕ ಲೋಕದಲ್ಲೊಂದು ಹಗುರ ವಿಹಾರ: ಪ್ರಜಾವಾಣಿ

    ‘ಮಿರಾಕಲ್‌ ಇನ್‌ ಸೆಲ್ ನಂ.7' ಎಂಬ ಕೊರಿಯನ್‌ ಸಿನಿಮಾವನ್ನು ‘ಸ್ಫೂರ್ತಿ' ಎಂಬ ಪೋಷಾಕಿನಡಿ ‘ಪುಷ್ಪಕ ವಿಮಾನ' ಎಂಬ ಹೆಸರಿಟ್ಟು ಅಚ್ಚುಕಟ್ಟಾಗಿ ಕನ್ನಡಕ್ಕೆ ರೀಮೇಕ್‌ ಮಾಡಿದ್ದಾರೆ ಎಸ್‌. ರವೀಂದ್ರನಾಥ್‌. ಚಿತ್ರದ ಎಲ್ಲ ಪಾತ್ರಗಳು ಮತ್ತು ಬಹುತೇಕ ದೃಶ್ಯಗಳಲ್ಲಿ ಮೂಲ ಚಿತ್ರದ ಸ್ಫೂರ್ತಿ ಎದ್ದು ಕಾಣುತ್ತದೆ. ಅನಂತರಾಮಯ್ಯ ಎಂಬ ಬುದ್ಧಿಮಾಂದ್ಯ ಮತ್ತು ಅವನ ಮಗಳು ಪುಟ್ಟಲಕ್ಷ್ಮಿಯ ಬಾಂಧವ್ಯವನ್ನು ನವಿಲುಗರಿಯಷ್ಟೇ ನವಿರಾಗಿ ಹೆಣೆದಿರುವ ಕಾರಣಕ್ಕೆ ‘ಪುಷ್ಪಕ ವಿಮಾನ' ಪ್ರೇಕ್ಷಕನ ಭಾವನಾವಲಯದಲ್ಲಿ ಸರಿಯಾಗಿ ಲ್ಯಾಂಡ್‌ ಆಗುತ್ತದೆ. ನವಿಲುಗರಿಯ ಮಿದುತನ ಮತ್ತು ಅದರ ಜತೆಗೆ ಹೆಣೆದುಕೊಂಡಿರುವ ಭಾವುಕ ಪ್ರಭಾವಳಿ ಎರಡೂ ಈ ಸಿನಿಮಾಕ್ಕಿದೆ. ನಿರ್ದೇಶಕರು ತಮ್ಮ ಸ್ವಂತಿಕೆ-ಸೃಜನಶೀಲತೆಯನ್ನು ಬಳಸಿಕೊಳ್ಳುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲದಿರುವುದೂ ವರವಾಗಿಯೇ ಪರಿಣಮಿಸಿದಂತಿದೆ. ರಮೇಶ್‌ ಅರವಿಂದ್‌ ಬುದ್ಧಿಮಾಂದ್ಯ ತಂದೆಯ ಪಾತ್ರಕ್ಕೆ ಸಂಪೂರ್ಣವಾಗಿ ತಮ್ಮನ್ನು ಕೊಟ್ಟುಕೊಂಡಿದ್ದಾರೆ. ಇರುವುದಕ್ಕಿಂತ ಹೆಚ್ಚಾಗಿಯೇ ಸುಂದರವಾಗಿ ತೋರಿಸಲು ಭುವನ್‌ ಪಟ್ಟಿರುವ ಶ್ರಮ ಪ್ರತಿ ದೃಶ್ಯದಲ್ಲಿ ಎದ್ದು ಕಾಣುತ್ತದೆ. ಭಾವಗೀತಾತ್ಮಕ ಗುಣವುಳ್ಳ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಿನಿಮಾದ ಗುಣಾತ್ಮಕತೆಯನ್ನು ಹೆಚ್ಚಿಸಿದೆ. ಗುರುಪ್ರಸಾದ್‌ ಸಂಭಾಷಣೆ, ನೋಡುಗ ಭಾವುಕಲೋಕದಲ್ಲಿ ಮುಳುಗಿ ಮೈಮರೆಯದಂತೆ ನೋಡಿಕೊಳ್ಳುತ್ತದೆ. ಮೂಲ ಸಿನಿಮಾ ನೋಡಿದವರು, ನೋಡದಿರುವರು ಎರಡೂ ವರ್ಗದವರೂ ‘ಪುಷ್ಪಕ ವಿಮಾನ'ದಲ್ಲಿ ಹತ್ತಿ ಭಾವುಕ ಲೋಕದಲ್ಲೊಂದು ಹಗುರ ವಿಹಾರ ಮಾಡಬಹುದು.[ಆಸ್ಕರ್ ಗೆ ಅಂಗಳಕ್ಕೆ ಹಾರಲಿದೆಯೇ 'ಪುಷ್ಪಕ ವಿಮಾನ'?]

    ರಮೇಶ್ ವೃತ್ತಿ ಜೀವನದ ಸಾರ್ಥಕ ಯಾನ: ವಿಜಯಕರ್ನಾಟಕ

    ರಮೇಶ್ ವೃತ್ತಿ ಜೀವನದ ಸಾರ್ಥಕ ಯಾನ: ವಿಜಯಕರ್ನಾಟಕ

    ವಿಮಾನದ ಕಲ್ಪನೆಯೇ ಬೆರಗು ಮೂಡಿಸುವಂಥದ್ದು. ಆ ಬೆರಗಿನ ಬೆಳಕಿನಲ್ಲಿ ಸಾಗುವ ಈ ವಿಮಾನ, ತಾನು ಸಾಗುವ ಹಾದಿಯಲ್ಲಿ ಬದುಕಿನ ನಾನಾ ಮಜಲುಗಳನ್ನು ದಾಟುತ್ತದೆ. ದಟ್ಟ ಮೋಡವೋ, ಭಯ ಹುಟ್ಟಿಸುವ ಸಿಡಿಲೋ ತಾನು ಸಾಗಲೇಬೇಕು. ಗುರಿ ಸೇರಲೇಬೇಕು. ಗುರಿ ಮುಟ್ಟುವ ತವಕದಲ್ಲಿ ಮತ್ತೆ ನಾನಾ ಅಡೆತಡೆಗಳು. ಈ ಏರಿಳಿತವನ್ನೇ ಭಾವನಾತ್ಮಕ ದೃಶ್ಯಗಳನ್ನಾಗಿಸಿ 'ಪುಷ್ಪಕ ವಿಮಾನ' ಚಿತ್ರ ಮಾಡಿದ್ದಾರೆ ನಿರ್ದೇಶಕರು. ಹಾಗಾಗಿ ಈ ವಿಮಾನದಲ್ಲಿ ಅಪ್ಪ ಮತ್ತು ಮಗಳ ಜೀವನ ಯಾದವಿದೆ. ಅವರ ನಡುವಿನ ಭಾವನಾತ್ಮಕ ತಾಣವಿದೆ. ನಾನಾ ಪ್ರಯಾಣಿಕರ ಜತೆಗಿನ ಪಯಣವಿದೆ. ಹಾಗಾಗಿ ಪ್ರಯಾಣ ಮಾಡಿದಷ್ಟು ನೋಡುಗರಿಗೆ ಹೊಸ ನೋಟ ದಕ್ಕುತ್ತದೆ. ಸಿನಿಮಾ ದಲ್ಲಿ ಆಯಾ ಪಾತ್ರಕ್ಕೆ ಪ್ರತಿ ಕಲಾವಿದರೂ ಜೀವ ತುಂಬಿದ್ದರಿಂದ ಇಡೀ ಸಿನಿಮಾ ಕಾಡುತ್ತದೆ. ಹಾಲಿವುಡ್ ಚಿತ್ರವೊಂದರ ಸ್ಪೂರ್ತಿ ಪಡೆದು ಕನ್ನಡದ ನೆಲಕ್ಕೆ ಒಪ್ಪುವಂತೆ ಚಿತ್ರಕತೆ ಬರೆಯಲಾಗಿದ್ದರೂ, ಅಲ್ಲಲ್ಲಿ ನೈಜತೆಯ ಕೊರತೆ ಕಾಣುತ್ತದೆ. ಮೂಲ ಸಿನಿಮಾದ ಅನುಕರಣೆಯಲ್ಲಿ ಗೊಂದಲ ಮೂಡುತ್ತದೆ. ಈ ಎಲ್ಲಾ ಕೊರತೆಯನ್ನು ರಮೇಶ್ ಮತ್ತು ಯುವಿನಾ ಅಭಿನಯ ಅಳಿಸಿ ಹಾಕುತ್ತದೆ. ಬಹುತೇಕ ಸಿನಿಮಾ ಗಂಭೀರವಾಗಿದೆ. ಸಿನಿಮಾದ ಪ್ಲಸ್ ಪಾಯಿಂಟ್ ಸಿನಿಮಾಟೋಗ್ರಫಿ ಮತ್ತು ಹಿನ್ನೆಲೆ ಸಂಗೀತ. ರಮೇಶ್ ಅರವಿಂದ್ ಅವರ ನೂರನೆಯ ಚಿತ್ರದ ಮೂಲಕ ಅಭಿಮಾನಿಗಳಿಗೆ ಉತ್ತಮ ಸಿನಿಮಾವನ್ನೇ ಕೊಟ್ಟಿದ್ದಾರೆ.

    ಎಲ್ಲರೂ ಮೆಚ್ಚಬಹುದಾದ ಭಾವುಕ ಪಡಿಯಚ್ಚು

    ಎಲ್ಲರೂ ಮೆಚ್ಚಬಹುದಾದ ಭಾವುಕ ಪಡಿಯಚ್ಚು

    ರಮೇಶ್ ಅರವಿಂದ್ 100ನೇ ಸಿನಿಮಾ ಎಂಬ ಮೈಲಿಗಲ್ಲಿಗೆ ಹೇಳಿಮಾಡಿಸಿದಂತಹ ಚಿತ್ರವಿದು. ಈವರೆಗೂ ನೂರಾರು ಪಾತ್ರಗಳಲ್ಲಿ ನಟಿಸಿರುವ ಅವರನ್ನು ಅನಂತರಾಮಯ್ಯ ಎಂಬ ಕಥಾನಾಯಕನ ವೇಷದಲ್ಲಿ ನೋಡುವುದಕ್ಕಾದರೂ ‘ಪುಷ್ಪಕ ವಿಮಾನ'ವನ್ನು ವೀಕ್ಷಿಸಬೇಕು. ‘ಮಿರಾಕಲ್ ಇನ್ ಸೆಲ್ ನಂ.7' ಚಿತ್ರದ ಪಡಿಯಚ್ಚು ಎಂಬಂತೆ ‘..ವಿಮಾನ' ತಯಾರಾಗಿದೆ. ಕೊರಿಯಾ ಅಥವಾ ಕನ್ನಡ ಮಾತ್ರವಲ್ಲದೆ, ಜಗತ್ತಿನ ಯಾವುದೇ ಭಾಷೆಗಾದರೂ ರಿಮೇಕ್ ಆಗಬಹುದಾದ ತಾಕತ್ತು ಈ ಕಥೆಗಿದೆ. ನಟನೆಯಲ್ಲಿ ರಮೇಶ್ ಸೈ ಎನಿಸಿಕೊಳ್ಳುತ್ತಾರೆ. ಕೆಲವೇ ಹೊತ್ತು ಕಾಣಿಸಿಕೊಂಡರೂ ರಚಿತಾ ರಾಮ್ ಭಾವನಾತ್ಮಕವಾಗಿ ಆವರಿಸಿಕೊಳ್ಳುತ್ತಾರೆ. ನಾಯಕಿಯ ಸ್ಥಾನವನ್ನು ತುಂಬುವ ಶಕ್ತಿ ಯುವೀನಾಳ ಪಾತ್ರಕ್ಕಿದೆ. ಚರಣ್​ರಾಜ್ (ಹಿನ್ನೆಲೆ ಸಂಗೀತ) ಮತ್ತು ಭುವನ್ ಗೌಡ (ಛಾಯಾಗ್ರಹಣ) ಪರಸ್ಪರ ಪೈಪೋಟಿಗೆ ಇಳಿದವರಂತೆ ಕಸುಬುದಾರಿಕೆ ಮೆರೆದಿದ್ದಾರೆ. ನಗಿಸುವುದಕ್ಕೂ ಅಳಿಸುವುದಕ್ಕೂ ಸೈ ಎಂಬಂತಿವೆ ಕೆ.ಎನ್. ಗುರುಪ್ರಸಾದ್ ಬರೆದಿರುವ ಸಂಭಾಷಣೆಗಳು. ಕುಟುಂಬ ಸಮೇತ ನೋಡುವ ಅಪರೂಪದ ಚಿತ್ರ. ಚರಣ್​ರಾಜ್ ಸಂಗೀತವೂ ಇಲ್ಲಿನ ಪ್ಲಸ್ ಪಾಯಿಂಟ್. ಯಾವ ಪರಭಾಷಾ ಚಿತ್ರಕ್ಕೂ ಕಮ್ಮಿ ಇಲ್ಲದಂತೆ ನಿರೂಪಣೆ ಮಾಡಿರುವ ನಿರ್ದೇಶಕರಿಗೆ ಹ್ಯಾಟ್ಸ್​ಆಫ್.

    ಮಹತ್ವಕಾಂಕ್ಷೆಯ ಯಾನ; ವಿಮಾನದಲ್ಲಿ ತಾಂತ್ರಿಕ ದೋಷ: ಕನ್ನಡಪ್ರಭ

    ಮಹತ್ವಕಾಂಕ್ಷೆಯ ಯಾನ; ವಿಮಾನದಲ್ಲಿ ತಾಂತ್ರಿಕ ದೋಷ: ಕನ್ನಡಪ್ರಭ

    ಕೊರಿಯಾ ಭಾಷೆಯ 'ಮಿರಾಕಲ್ ಇನ್ ಸೆಲ್ ನಂ ೭' ಎಂಬ ಸಿನೆಮಾವನ್ನು ಹೆಚ್ಚು ಕಡಿಮೆ ಯಾವುದೇ ಬದಲಾವಣೆಗಳಿಲ್ಲದೆ ಕನ್ನಡಕ್ಕೆ ತಂದಿರುವ ನಿರ್ದೇಶಕ ಎಸ್ ರವೀಂದ್ರನಾಥ್ ಮತ್ತು ನಟ ರಮೇಶ್ ಅರವಿಂದ್ ಅವರ ಮಹತ್ವಕಾಂಕ್ಷೆ ದೊಡ್ಡದಾದರೂ, ಅದರ ನಿರ್ವಹಣೆ ಮಾಡಿರುವ ರೀತಿ ಮಾತ್ರ ನಿರಾಸೆ ಮೂಡಿಸುತ್ತದೆ. ಮಾನಸಿಕ ಅಸ್ವಸ್ಥರು ಎದುರಿಸಬೇಕಾದ ಸಮಾಜದ ತಾರತಮ್ಯ, ವಿಷಣ್ಣ ಮನೋಭಾವದ ಬಗ್ಗೆ ಮಹತ್ವದ ಪ್ರಶ್ನೆ ಎತ್ತುವ ಸಿನೆಮಾ, ಅದನ್ನು ಪರಿಣಾಮಕಾರಿಯಾಗಿ ದಾಟಿಸುವಲ್ಲಿ ವಿಫಲವಾಗಿದೆ. ಸಿನೆಮಾದ ಸಂಭಾಷಣೆಯಲ್ಲಿ ಬಹುತೇಕ ಕಡೆ ಮೂಲವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದರು, ಜೈಲು ಪರಿಸರದಲ್ಲೂ ಮೂಡುವ ಸಂಭಾಷಣೆ ಕೆಲವೊಮ್ಮೆ ಅತಿರೇಕ ಎಂದೆನಿಸಿ ಗಂಭೀರತೆಗೆ ಅನಗತ್ಯವಾಗಿ ತೊಡಕಾಗುತ್ತದೆ. ಮುಗ್ಧರ, ಹಕ್ಕು-ಅನುಕೂಲ ವಂಚಿತ ಸಂತ್ರಸ್ತರ ಬಗ್ಗೆ ಇತರರಿಗೆ ಮಾನವೀಯತೆ, ಅನುಕಂಪ ಮೂಡಬೇಕು ಎಂಬ ಉದಾತ್ತವಾದಕ್ಕೆ ಕಥೆ ಕಟಿಬಿದ್ದಿದ್ದರು, ಬುದ್ಧಿಮಾಂಧ್ಯನ ಪಾತ್ರದಲ್ಲಿ ನಟಿಸಲು ಜನಪ್ರಿಯ ನಟ ರಮೇಶ್ ಅರವಿಂದ್ ಮುಂದಾಗಿರುವುದು ಪ್ರಶಂಸನೀಯ. ಆದರೆ ಎಲ್ಲೋ ಮತ್ತೆ ಒತ್ತಾಯಪೂರ್ವಕವಾಗಿ ನಟಿಸಿದ್ದಾರೇನೋ ಎಂಬ ಸಂದೇಹ ಉಳಿದುಬಿಡುತ್ತದೆ. ಮೂಲಕ್ಕೆ ನಿಷ್ಠನಾಗಿರುವ ಹಠದಿಂದಲೋ ಏನೋ, ಇಲ್ಲಿನ ಸಮಯಕ್ಕೆ, ಸಂದರ್ಭಕ್ಕೆ, ಇಲ್ಲಿನ ಸಮಾಜಕ್ಕೆ ಅದನ್ನು ಪರಿಣಾಮಕಾರಿಯಾಗಿ ಒಗ್ಗಿಸಿಕೊಳ್ಳಲು ಸಾಧ್ಯವಾಗದೆ, ತೀವ್ರ ಭಾವನೆಗಳನ್ನು ಕೆರಳಿಸುವ ಒಂದೇ ಉದ್ದೇಶದಿಂದ ಎಲ್ಲೋ ಪ್ರೇಕ್ಷಕರಲ್ಲಿ ಪ್ರಶ್ನಾರ್ಥಕ ಮತ್ತು ನಿರಾಶೆಯ ಭಾವವನ್ನು ಉಳಿಸಿಬಿಡುತ್ತಾರೆ ನಿರ್ದೇಶಕ.

    Pushpaka Vimana Movie Review: The Times Of India

    Pushpaka Vimana Movie Review: The Times Of India

    The film scores high technically. Bhuvan Gowda's fantastic visuals are complemented beautifully by Charan Raj's soulful background score. There story is no edge-of-the-seat thriller but instead is a wonderful tale of love between a father and daughter, which unfolds in its own pace but keeps you hooked to the screen. The film also has a cast that does ample justice to the film. Led from the front by Ramesh Aravind, for whom this could be an apt tale for a milestone 100th film, and young Yuvina Parthavi, each of the cast member adds their own touch. S Ravindranath and his young bunch of producers have done a good job. The film, which is the maker's tribute to films like Life Is Beautiful and Miracle in Cell No 7, is a lot like the latter, but is justified considering the makers have bought the rights to the Korean film officially. This film is no fast paced mass film, but the narrative, dialogues and performances more than make up for it.

    Pushpaka Vimana: A turbulent flight - The Hindu

    Pushpaka Vimana: A turbulent flight - The Hindu

    Not just the story, there is a lot more in S. Ravindranath's Pushpaka Vimana that aspires to be identical to Lee Hwan-kyung's South Korean tearjerker Miracles in Cell No. 7 (2013). A majority of the film is in fact a frame-by-frame remake of the original. However, there is one aspect of the Korean film that did not make it to this Kannada re-creation: an element of subtlety. But there is something more understated about the original film, especially its performances. Well, at least in contrast to Pushpaka Vimana. Film tends to exaggerate moments instead of downplaying them - whether it is the relationship between the father and daughter or the sequences in jail. It relies heavily on dialogue focussing more on telling rather than showing, at times even screaming the sentiment at its audience. The tragedy of this method of narration is that we get no time to discover the characters for ourselves. The screenplay of Pushpaka Vimana is often simplistic. The song featuring Juhi Chawla seems entirely out of place and unnecessary. But otherwise, music by Charan Raj offers the much-needed reprieve, anchoring the narrative in the locale and conveying a lot more emotion too. The letdown of Pushpaka Vimana is that it tells you that it is telling you a heart-breaking tale. One only wished it showed one instead.

    English summary
    Kannada Actor Ramesh Aravind, Rachita Ram and Baby Yuvina Starerr 'Pushpaka Vimana' has received some positive and some negative response from the critics. Here is the collection of 'Pushpaka Vimana' ' reviews by Top News Papers of Karnataka.
    Saturday, January 7, 2017, 11:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X