twitter
    For Quick Alerts
    ALLOW NOTIFICATIONS  
    For Daily Alerts

    ಉಪ್ಪಿ ಬ್ರಹ್ಮ ಚಿತ್ರದ ವಿಮರ್ಶಕರ ವಿಮರ್ಶೆ

    By ಜೇಮ್ಸ್ ಮಾರ್ಟಿನ್
    |

    ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಯಶಸ್ವಿ ನಿರ್ದೇಶಕ ಆರ್ ಚಂದ್ರು ಪ್ರಪ್ರಥಮ ಬಾರಿಗೆ ಒಟ್ಟಿಗೆ ಒಂದೇ ಚಿತ್ರಕ್ಕೆ ದುಡಿದ್ದಾರೆ. ಸದ್ಯದ ಬೇಡಿಕೆ ನಟಿ ಪ್ರಣೀತಾ ಹಾಗೂ ಉಪೇಂದ್ರ ಜೋಡಿಯೂ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದೆ. ಉಪ್ಪಿ ಫ್ಯಾನ್ಸ್ ರಸದೌತಣ ನೀಡಿರುವ ಚಿತ್ರ ಎಲ್ಲರನ್ನು ಮೆಚ್ಚಿಸಲು ಸಾಧ್ಯವಾಗಿದೆಯೇ?

    ಬ್ರಹ್ಮ ಚಿತ್ರ ಭರ್ಜರಿ ಓಪನಿಂಗ್ ಪಡೆದಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಘೋಷಿಸಿದ್ದಾರೆ. ಆದರೆ, ಸಿನಿ ವಿಮರ್ಶಕರು ಮಾತ್ರ ಚಿತ್ರ ಸಾಧಾರಣದಿಂದ ಉತ್ತಮ ಚಿತ್ರ ಅಂತರದಲ್ಲಿದೆ ಅಷ್ಟೇ ಅದ್ಭುತವೇನಲ್ಲ ಎಂದು ಷರಾ ಬರೆದುಬಿಟ್ಟಿದ್ದಾರೆ.

    ನಿರ್ದೇಶಕ ಆರ್ ಚಂದ್ರು ಅವರ ಹುಟ್ಟುಹಬ್ಬದ ದಿನ ಫೆಬ್ರವರಿ 7 ರಂದು ಸರಿಸುಮಾರು 250ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬ್ರಹ್ಮನ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಚಿತ್ರದ ಹಾಸ್ಯ ಸನ್ನಿವೇಶ, ಫೈಟ್ ,ಚೇಸಿಂಗ್, ಉಪ್ಪಿ ನಟನೆ, ಪ್ರಣೀತಾ ಕುಣಿತ, ಆರ್ ಚಂದ್ರು ಕಥೆಗೆ ನೀಡಿರುವ ಟ್ವಿಸ್ಟ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಆದರೆ, ಚಿತ್ರ ಸಂಪೂರ್ಣವಾಗಿ ಗೆಲುವು ಸಾಧಿಸುವಲ್ಲಿ ಸೋತಿದೆ ಎನ್ನುತ್ತಿದೆ ವಿಮರ್ಶಕರ ವಿಮರ್ಶೆ

    ಇಲ್ಲಿ ಎಲ್ಲವೂ ಬ್ರಹ್ಮಮಯ: ಉದಯವಾಣಿ

    ಇಲ್ಲಿ ಎಲ್ಲವೂ ಬ್ರಹ್ಮಮಯ: ಉದಯವಾಣಿ

    ಈ ಬ್ರಹ್ಮ 1600ನೇ ಇಸವಿಯಲ್ಲಿ ಹುಟ್ಟುತ್ತಾನೆ, 1970 ರಲ್ಲಿ ಬರುತ್ತಾನೆ, 2014ಕ್ಕೆ ಜಿಗಿಯುತ್ತಾನೆ.

    ಎರಡೂವರೆ ಗಂಟೆಗಳ ಬ್ರಹ್ಮ ಉಪ್ಪಿ ಅಭಿಮಾನಿಗಳಿಗೆ ಅವರೆಕಾಳು ಉಪ್ಪಿಟ್ಟು ಮಾತ್ರವಲ್ಲ, ಕತೆಯಲ್ಲಿ ನಾನಾ ಥರದ ಟ್ವಿಸ್ಟು, ಟರ್ನುಗಳನ್ನು ಅಪೇಕ್ಷಿಸುವವರಿಗೂ ತಂಬಿಟ್ಟು.

    ಮೊದಲಾರ್ಧ ಬುದ್ಧಿವಂತರಿಗೆ ಮಾತ್ರ, ದ್ವಿತೀಯಾರ್ಧ ಮೊದಲರ್ಧ ಅರ್ಥ ಆಗದವರಿಗೆ ಮಾತ್ರ
    ಉಪೇಂದ್ರ ಅವರ ಡೈಲಾಗ್ ಗೆ ಇಲ್ಲಿವರೆಗೆ ಕಿವಿ ಚಪ್ಪರಿಸಿದವರು ಚಂದ್ರು ಬರೆದ ಅಷ್ಟೇ ರಸವತ್ತಾದ ಸಂಭಾಷಣೆಯನ್ನು ಈ ಚಿತ್ರದಲ್ಲಿ ಚಪ್ಪರಿಸಬಹುದು.

    ಮೊದಲಾರ್ಧದಲ್ಲಿ ನಡೆಯುವ ಮ್ಯಾಜಿಕುಗಳನ್ನು ದ್ವಿತೀಯಾರ್ಧದಲ್ಲಿ ಲಾಜಿಕ್ಕುಗಳ ಜೊತೆ ನಿರೂಪಿಸುತ್ತಾ ಬ್ರಹ್ಮನನ್ನು ಸೃಷ್ಟಿ ಮಾಡಲಾಗಿದೆ. ಒಟ್ಟಾರ್ ಇದು ಗುರು-ಚಂದ್ರು ಉಪೇಂದ್ರ ಸುರಾರ್ಚಿತ ಬ್ರಹ್ಮಂ !- ವಿಕಾಸ್ ನೇಗಿಲೋಣಿ

    ಮತ್ತೆ ತಲೆಗೆ ಕೈ ಹಾಕಿದ ಉಪ್ಪಿ: ವಿಕ ವಿಮರ್ಶೆ

    ಮತ್ತೆ ತಲೆಗೆ ಕೈ ಹಾಕಿದ ಉಪ್ಪಿ: ವಿಕ ವಿಮರ್ಶೆ

    ಉಪ್ಪಿ ಚಿತ್ರಗಳು ಅಂದ್ರೆ ತಲೆಗೆ ಹುಳ ಬಿಡುತ್ತವೆ. ಒಂದು ಸಾರಿ ನೋಡಿದ್ರೆ ಅರ್ಥ ಆಗೋಲ್ಲ, ಬ್ರಹ್ಮ ಚಿತ್ರ ಕೂಡಾ ಅದೇ ವರ್ಗಕ್ಕೆ ಸೇರುವ ಚಿತ್ರ.

    ಚಿತ್ರದ ಮೇಕಿಂಗ್ ಚೆನ್ನಾಗಿದೆ. ಆದರೆ, ಫೈಟ್ ನಲ್ಲಿ ವಿಶೇಷತೆ ಇಲ್ಲ. ಆರ್ ಚಂದ್ರು ಅವರು ಚಿಕ್ಕಬಳ್ಳಾಪುರದವರು ಆಗಿರುವುದರಿಂದಲೋ ಏನೋ ಹೆಚ್ಚಾಗಿ ತೆಲುಗು ಚಿತ್ರಗಳ ಪ್ರಭಾವಕ್ಕೆ ಒಳಗಾಗಿ ಚಿತ್ರಕತೆ ಬರೆದಿದ್ದಾರೆ.

    ಗ್ಲಾಮರ್ ಪಾತ್ರದಲ್ಲಿ ಪ್ರಣೀತಾ ನೋಡಬಹುದು. ರಂಗಾಯಣ ರಘು, ಸಾಧು ಕೋಕಿಲಾ ಕಾಮಿಡಿ ನಗು ತರಿಸುತ್ತದೆ. ಗುರು ಕಿರಣ್ ಹಿನ್ನೆಲೆ ಸಂಗೀತ ಅಷ್ಟಾಗಿ ಸಾಥ್ ಕೊಟ್ಟಿಲ್ಲ. ಚಂದ್ರು ಕನ್ನಡ ನೆಟಿವಿಟಿಗೆ ತಕ್ಕಂತೆ ಚಿತ್ರ ಮಾಡುವುದು ಒಳ್ಳೆಯದು-ಎಚ್ ಮಹೇಶ್

    ಪಾಪ ಪುಣ್ಯ ಬದನೆಕಾಯಿ: ವಿಜಯವಾಣಿ

    ಪಾಪ ಪುಣ್ಯ ಬದನೆಕಾಯಿ: ವಿಜಯವಾಣಿ

    ಬ್ರಹ್ಮ ಯಾರ ಹಣೆಬರಹ ಬರೆದ, ಯಾರ ಹಣೆಬರಹ ಬದಲಾಯಿಸಿದ ಅನ್ನೋ ಚರ್ಚಾಹೀನ ಪ್ರಶ್ನೆಗಳಾಚೆ ನಿಂತು ನೋಡಿದಾಗ 'ಉಪ್ಪಿ ಬ್ರಹ್ಮ' ನಿಜಕ್ಕೂ ಭರ್ತಿ ಮನರಂಜನೆ.

    ವಿರಾಮದ ಹೊತ್ತಿಗೆ ಟ್ವಿಸ್ಟ್, ಕ್ಲೈಮ್ಯಾಕ್ಸ್ ಗೆ ಉಪದೇಶ, ತೆಲುಗು ಸಿನಿಮಾಗಳ ತತ್ವದಡಿ ಬ್ರಹ್ಮ ನ ಸೃಷ್ಟಿಗೈದಿದ್ದಾರೆ ನಿರ್ದೇಶಕ ಆರ್ ಚಂದ್ರು

    ಗುರು ಕಿರಣ್ ಅವರ ಒಂದು ಹಾಡು ಗುನುಗುನುಗು ಮತ್ತೊಂದು ಮಿನುಮಿನುಗು, ಶೇಖರ್ ಚಂದ್ರ ಕ್ಯಾಮರಾ, ಕೆ.ಎಂ ಪ್ರಕಾಶ್ ಕತ್ತರಿ ನಿರ್ದೇಶಕರ ಆಶಯವರಿತು ಕೆಲಸಗೈದಿವೆ.

    ಲವ್ವಿ ಡವ್ವಿ ಹೊರತುಪಡಿಸಿ ಸಿದ್ದಸೂತ್ರ ಮಾದರಿ ಚಿತ್ರಕ್ಕೂ ಸೈ ಅನ್ನೋದನ್ನು ಚಂದ್ರು ಇಲ್ಲಿ ಸಾಕ್ಷೀಕರಿಸಿದ್ದಾರೆ-ರಾಜಶೇಖರಮೂರ್ತಿ

    ರಾಜಕೀಯ ಡೈಲಾಗ್ ಸಮ್ಮಿಶ್ರಿತ ಉಪ್ಪಿ ಬ್ರಹ್ಮ

    ರಾಜಕೀಯ ಡೈಲಾಗ್ ಸಮ್ಮಿಶ್ರಿತ ಉಪ್ಪಿ ಬ್ರಹ್ಮ

    ಸೂಪರ್ ಚಿತ್ರದ ನಂತರ ಉಪ್ಪಿ ಅವರು ಬ್ರಹ್ಮ ಚಿತ್ರದಲ್ಲೂ ರಾಜಕೀಯ ಪ್ರವೇಶದ ಸದ್ದು ಮಾಡಿದ್ದಾರೆ. ಬ್ರಹ್ಮದಲ್ಲಿ ಉಪ್ಪಿ ಸ್ಟೈಲ್ ಡೈಲಾಗ್ ಡೆಲಿವರಿ ಇಲ್ಲ. ಚಿತ್ರದ ಕೊನೆ 20 ನಿಮಿಷ ನೋಡುವಂತಿದೆ. ಒಟ್ಟಾರೆ ಉಪೇಂದ್ರರಿಗೆ ಚಂದ್ರು ಬೇರೆ ಇಮೇಜ್ ನೀಡಲು ಪ್ರಾಮಾಣಿಕ ಯತ್ನ ಮಾಡಿದ್ದಾರೆ.

    ಪ್ರಣೀತಾ ಪಾತ್ರಕ್ಕೆ ಸ್ಕೋಪ್ ಇಲ್ಲ, ರಂಗಾಯಣ ರಘು, ಸಾಧು ಕೋಕಿಲರಿಗೆ ಇಮೇಜ್ ಬದಲಾಯಿಸುವ ಕಾಲ ಬಂದಿದೆ. ಶೇಖರ್ ಚಂದ್ರು ಕೆಮೆರಾ ವರ್ಕ್ ಸೂಪರ್, ಗುರುಕಿರಣ್ ಸಂಗೀತ ಸಪ್ಪೆ, ಒಮ್ಮೆ ನೋಡಬಹುದು..- ಎಸ್ ಶ್ಯಾಮ್ ಪ್ರಸಾದ್ ಅವರ ಮಿಕ್ಕ ವಿಮರ್ಶೆ ಇಲ್ಲಿ ಓದಿ

    ಉಪ್ಪಿ ಬ್ರಹ್ಮ ಚಿತ್ರ ವಿಮರ್ಶೆ-ಸಿನಿಸಿಂಚನ

    ಉಪ್ಪಿ ಬ್ರಹ್ಮ ಚಿತ್ರ ವಿಮರ್ಶೆ-ಸಿನಿಸಿಂಚನ

    ‘Donate dudes', says Upendra with an intent gaze, meant to convey the message to every tom dick and harry. But the only sad part of this holy message is that it is delivered in the climax. ಏನು ಬೇಕಾದರೂ ಮಾಡಬಲ್ಲ ಶಕ್ತಿವಂತ ಬ್ರಹ್ಮ ಮರೆಯಬಲ್ಲ ಸೃಷ್ಟಿ. ಉಪೇಂದ್ರ ಅಭಿನಯ ಬಿಟ್ಟರೆ, ಪ್ರಣೀತಾ ಗ್ಲಾಮರ್ ಓಕೆ, ಅವಿನಾಶ್ ಗೆ ಪಾತ್ರವಿಲ್ಲ. ಪೂರ್ತಿ ವಿಮರ್ಶೆ ಇಲ್ಲಿ ಓದಿ- ರಾಜು ಶಾನುಭಾಗ್

    ಉಪ್ಪಿ ಮೇಲೆ ಚಂದ್ರು ಬ್ರಹ್ಮಾಸ್ತ್ರ : ಕನ್ನಡಪ್ರಭ

    ಉಪ್ಪಿ ಮೇಲೆ ಚಂದ್ರು ಬ್ರಹ್ಮಾಸ್ತ್ರ : ಕನ್ನಡಪ್ರಭ

    ಚಿತ್ರ ನೋಡಿದಾಗ ಇಷ್ಟವಾಗುವುದು ಚಿತ್ರದ ಕ್ಲೈಮಾಕ್ಸ್. ಅಂತಿಮ ಹತ್ತು ನಿಮಿಷಗಳ 'ಮತ್ತು' ಇಡೀ ಚಿತ್ರದಲ್ಲಿದ್ದರೆ ಎಷ್ಟು ಸೊಗಸಿತ್ತು ಎನ್ನಿಸದೇ ಇರದು. ಕಡೆಯ ಕ್ಷಣಗಳಲ್ಲಿ ನಶೆ ಹೊತ್ತಿಸುವ ಚಂದ್ರು ಮೊದಲಾರ್ಧದಲ್ಲಿ ನಿಶೆಯಲ್ಲಿ ಮುಳುಗಿಸಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಇಲ್ಲಿನ ಗೊಂದಲಕ್ಕೆ ಕಥೆಯಲ್ಲಿ ಕ್ರಮೇಣ ಏರಬೇಕಾದ ಕಾವಿಲ್ಲದಿರುವುದು ಕಾರಣ.

    2 ಗಂಟೆ 20 ನಿಮಿಷದ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಬಹುದೊಡ್ಡ ಕೊರತೆ ಆಗಿದೆ. ಗುರುಕಿರಣ್ ತಮ್ಮ ಝಂಕಾರ್ ಬೀಟ್ಸ್ ಬಿಡದೆ ಮುಂದುವರಿಸಿದ್ದಾರೆ. ಉಪ್ಪಿ ಮತ್ತು ಚಂದ್ರು ಜೋಡಿಯ ಈ ಚಿತ್ರ ಅನೇಕರಿಗೆ ಭ್ರಮನಿರಸನ ತಂದರೂ ಅವರ ಹಿಂದಿನ ಚಿತ್ರಗಳನ್ನು ಮೆಚ್ಚುವವರಿಗೆ ಕಿಚ್ಚು ಹತ್ತಿಸುವಲ್ಲಿ ಯಶಸ್ವಿಯಾಗಿದೆ.

    - ಹರ್ಷವರ್ಧನ್, ಕನ್ನಡ ಪ್ರಭ.ಕಾಂನಲ್ಲಿ ಪೂರ್ತಿ ವಿಮರ್ಶೆ ಓದಿ

    ಮೇಸೇಜ್, ಮನರಂಜನೆಯುಕ್ತ ಚಿತ್ರ : ಚಿತ್ರಲೋಕ.ಕಾಂ

    ಮೇಸೇಜ್, ಮನರಂಜನೆಯುಕ್ತ ಚಿತ್ರ : ಚಿತ್ರಲೋಕ.ಕಾಂ

    Upendra's subtle acting and Pranitha's glamorous presence are the highlights of the film. Though their romantic indulgences are not part of the main narrative, it is still good to watch the lovely actress cornering the attention.

    ಪೂರ್ತಿ ವಿಮರ್ಶೆ ಓದಿ

    English summary
    Real Star Upendra's Brahma movie critics review. It is a historical drama romance film directed by R. Chandru and produced by Manjunath Babu. The film spanning four generations, from the 16th to the 21st century, features an original soundtrack by Gurukiran
    Saturday, February 8, 2014, 17:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X