twitter
    For Quick Alerts
    ALLOW NOTIFICATIONS  
    For Daily Alerts

    'ಭಜರಂಗಿ ಭಾಯ್ ಜಾನ್' ವಿಮರ್ಶೆ: ಹಿಂದೆಂದೂ ಕಂಡಿರದ 'ಸಲ್ಮಾನ್' ಚಿತ್ರ

    |

    ಸತತ ಆರು ವರ್ಷಗಳಿಂದ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಬಾಲಿವುಡ್ 'ಬಾಕ್ಸ್ ಆಫೀಸ್ ಸುಲ್ತಾನ್' ಸಲ್ಮಾನ್ ಖಾನ್ ಇಂದು ತೆರೆ ಮೇಲೆ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

    ರಂಜಾನ್ ಹಬ್ಬದ ಪ್ರಯುಕ್ತ 'ಭಜರಂಗಿ ಭಾಯ್ ಜಾನ್' ಆಗಿ ಸಲ್ಮಾನ್ ಖಾನ್ ಈ ಬಾರಿ ಎಲ್ಲರಿಂದ ಜೈ ಅನಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಎಂದಿನಂತೆ ಬರೀ ಹೊಡೆದಾಟ ಮತ್ತು ಡೈಲಾಗ್ ಗಳ ಅಬ್ಬರವಿಲ್ಲದೆ, 'ಕಾಮನ್ ಮ್ಯಾನ್' ಆಗಿ ಎಲ್ಲರ ಪ್ರೀತಿಯ 'ಭಾಯ್ ಜಾನ್' ಆಗಿ ಸಲ್ಮಾನ್ ಪ್ರೇಕ್ಷಕರ ಮನಮುಟ್ಟಿದ್ದಾರೆ ಅಂದ್ರೆ ಅದು ಖಂಡಿತ ಅತಿಶಯೋಕ್ತಿ ಅಲ್ಲ. ['ಭಜರಂಗಿ ಭಾಯ್ ಜಾನ್' ಸೂಪರ್ ಸ್ಪೆಷಾಲಿಟೀಸ್]

    'ಭಜರಂಗಿ ಭಾಯ್ ಜಾನ್' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

    Rating:
    3.5/5
    Star Cast: ಸಲ್ಮಾನ್ ಖಾನ್, ಕರೀನಾ ಕಪೂರ್, ಹರ್ಷಾಲಿ ಮಲ್ಹೋತ್ರ ಮತ್ತು ಇತರರು.
    Director: ಕಬೀರ್ ಖಾನ್

    ಕಥಾಹಂದರ

    ಕಥಾಹಂದರ

    ಇಂಡಿಯಾ v/s ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ನಿಂದ ಶುರುವಾಗುವ 'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಲೈವ್ ಮ್ಯಾಚ್ ನಷ್ಟೆ ಟೆನ್ಷನ್ ಇದೆ. ಜೊತೆಗೆ ಮಜಾ ಕೂಡ ಸಿಕ್ಕಾಪಟ್ಟೆ ಇದೆ. ಮಾತು ಬಾರದ ಮಗಳ ಆರೋಗ್ಯ ವೃದ್ಧಿಯಾಗಲಿ ಅಂತ ಪ್ರಾರ್ಥನೆ ಮಾಡುವುದಕ್ಕೆ ಪುಟಾಣಿ ಮುನ್ನಿ (ಹರ್ಷಾಲಿ ಮಲ್ಹೋತ್ರ) ಯನ್ನ ಆಕೆಯ ತಾಯಿ ಪಾಕಿಸ್ತಾನದಿಂದ ದೆಹಲಿಗೆ ಕರೆದುಕೊಂಡು ಬರುತ್ತಾರೆ.

    ಮಿಸ್ ಆಗುವ ಮುನ್ನಿ

    ಮಿಸ್ ಆಗುವ ಮುನ್ನಿ

    ಪಾಕಿಸ್ತಾನಕ್ಕೆ ವಾಪಸ್ ಮರಳುವಾಗ ಟ್ರೇನ್ ಮಿಸ್ ಮಾಡಿಕೊಳ್ಳುವ ಮುನ್ನಿ ಹಾಗೂ ಹೀಗೂ ಪವನ್ ಕುಮಾರ್ ಚತುರ್ವೇಧಿ (ಸಲ್ಮಾನ್ ಖಾನ್) ಕಣ್ಣಿಗೆ ಬೀಳುತ್ತಾಳೆ. ಓದುವುದಕ್ಕೆ, ಬರೆಯುವುದಕ್ಕೆ, ಮಾತನಾಡುವುದಕ್ಕೆ ಬಾರದ ಮುನ್ನಿ ಎಲ್ಲಿಯವಳು? ಆಕೆಯನ್ನ ಆಕೆಯ ತಾಯಿಯ ಜೊತೆ ಸೇರಿಸುವುದಕ್ಕೆ ಸಲ್ಮಾನ್ ಎದುರಿಸುವ ಸವಾಲುಗಳು ಬಾಕಿ ಕಥೆ. ಅದನ್ನ ನೀವು ಚಿತ್ರಮಂದಿರದಲ್ಲೇ ನೋಡಿ ಎಂಜಾಯ್ ಮಾಡಿ...

    ಹಿಂದೆಂದೂ ಕಂಡಿರದ ಸಲ್ಮಾನ್ ಖಾನ್

    ಹಿಂದೆಂದೂ ಕಂಡಿರದ ಸಲ್ಮಾನ್ ಖಾನ್

    ಆಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ಬಿಟ್ಟರೆ ಲವ್ವರ್ ಬಾಯ್ ಆಗಿ ಸದಾ ಕಾಣಿಸಿಕೊಳ್ಳುತ್ತಿದ್ದ ಸಲ್ಮಾನ್ ಖಾನ್ 'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಕೊಂಚ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಡಿಬಡಿಯುವುದಕ್ಕಿಂತ ಸಲ್ಮಾನ್ ಖಾನ್ ಕಣ್ಣಲ್ಲೇ ಹೆಚ್ಚು ಮಾತನಾಡಿದ್ದಾರೆ. ಕಾಮಿಡಿ ಸನ್ನಿವೇಶಗಳಲ್ಲಿ ಸಲ್ಮಾನ್ ಸೂಪರ್. ಸಿಂಪಲ್ ಆಗಿ ಹೇಳಬೇಕು ಅಂದ್ರೆ 'ಭಾಯ್ ಜಾನ್' ಆಗಿ ಸಲ್ಮಾನ್ ಖಾನ್ ರಾಕ್ಸ್.!

    ಹರ್ಷಾಲಿ ಸೂಪರ್, ಕರೀನಾ ಓಕೆ

    ಹರ್ಷಾಲಿ ಸೂಪರ್, ಕರೀನಾ ಓಕೆ

    ಇಡೀ ಚಿತ್ರದಲ್ಲಿ ಎಲ್ಲರ ಕಣ್ಮನ ಸೆಳೆಯುವುದು ಪುಟ್ಟ ಹುಡುಗಿ ಹರ್ಷಾಲಿ ಮಲ್ಹೋತ್ರ. ಒಂದೇ ಒಂದು ಡೈಲಾಗ್ ಕೂಡ ಹೇಳದೆ, ಮುಖ ಭಾವನೆಗಳಲ್ಲೇ ಆಟಾಡಿರುವ ಈ ಪುಟ್ಟ ಬಾಲಕಿ ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲಿಸುತ್ತಾಳೆ, ಜೊತೆಗೆ ಕಣ್ಣಾಲಿಗಳನ್ನು ಒದ್ದೆ ಮಾಡಿಸುತ್ತಾಳೆ. ಇನ್ನೂ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕರೀನಾ ನಟನೆ ಎಂದಿನಂತಿದೆ.

    ಕಿರಿಕಿರಿ ತರುವ ಗಿಮಿಕ್ ಗಳು

    ಕಿರಿಕಿರಿ ತರುವ ಗಿಮಿಕ್ ಗಳು

    ವಿ.ವಿಜಯೇಂದ್ರ ಪ್ರಸಾದ್ ರಚಿಸಿರುವ ಕಥೆಯಲ್ಲಿ ಗಟ್ಟಿತನ ಇದೆ. ಆದ್ರೆ, ಕೆಲವೊಂದು ಕಡೆ ನಿರ್ದೇಶಕ ಕಬೀರ್ ಖಾನ್ ಬೇಕಂತಲೇ ಗಿಮಿಕ್ ಗಳನ್ನ ತುರುಕಿರುವ ಕಾರಣ ಪ್ರೇಕ್ಷಕರಿಗೆ ಕಿರಿಕಿರಿಯಾಗುವುದು ಸಹಜ.

    ಫಸ್ಟ್ ಹಾಫ್ ಸ್ಲೋ

    ಫಸ್ಟ್ ಹಾಫ್ ಸ್ಲೋ

    ಫಸ್ಟ್ ಹಾಫ್ ನಲ್ಲಿ ಅನಾವಶ್ಯಕ ಸನ್ನಿವೇಶಗಳು ಹೇರಳವಾಗಿರುವ ಕಾರಣ ಕೊಂಚ ಸ್ಲೋ ಅಂತ ಭಾಸವಾಗುತ್ತೆ. ಆದ್ರೆ, ಮಧ್ಯಂತರದ ನಂತರ 'ಭಜರಂಗಿ ಭಾಯ್ ಜಾನ್' ವೇಗ ಪಡೆದುಕೊಳ್ಳುತ್ತದೆ.

    ಸೆಂಟಿಮೆಂಟ್ ಹೈಲೈಟ್

    ಸೆಂಟಿಮೆಂಟ್ ಹೈಲೈಟ್

    ಕಾಮಿಡಿ, ಆಕ್ಷನ್ ಗಿಂತ ಹೆಚ್ಚಾಗಿ 'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ಸೆಂಟಿಮೆಂಟ್ ಹೈಲೈಟ್. ಸಲ್ಮಾನ್ ಖಾನ್ ಮತ್ತು ಹರ್ಷಾಲಿ ಮಲ್ಹೋತ್ರ ನಡುವಿನ ಭಾವನಾತ್ಮಕ ಸನ್ನಿವೇಶಗಳು ಹೆಂಗಳೆಯರ ಮನಮುಟ್ಟುತ್ತದೆ.

    ಫೈನಲ್ ಸ್ಟೇಟ್ಮೆಂಟ್

    ಫೈನಲ್ ಸ್ಟೇಟ್ಮೆಂಟ್

    ಇಂಡಿಯಾ-ಪಾಕಿಸ್ತಾನ್ ವೈರತ್ವದ ನಡುವೆ ತಾಯಿ-ಮಗಳ ಅನುಬಂಧ. ಪುಟ್ಟ ಬಾಲಕಿ ಮೇಲೆ 'ಭಾಯ್ ಜಾನ್' ಅನುಕಂಪವಿರುವ 'ಭಜರಂಗಿ ಭಾಯ್ ಜಾನ್' ಹೆಂಗಳೆಯರಿಗೆ ಹೇಳಿಮಾಡಿಸಿದ ಸಿನಿಮಾ. ಸಲ್ಮಾನ್ ಅಭಿಮಾನಿಗಳಿಗೆ 'ಭಜರಂಗಿ ಭಾಯ್ ಜಾನ್' ಯಾವುದೇ ಆಂಗಲ್ ನಿಂದಲೂ ನಿರಾಸೆ ಮೂಡಿಸಲ್ಲ. ಲವ್ ಸ್ಟೋರಿ ಚಿತ್ರಗಳನ್ನೇ ನೋಡಿ ನೋಡಿ ಬೋರ್ ಆಗಿರುವವರು ಧಾರಾಳವಾಗಿ 'ಭಜರಂಗಿ ಭಾಯ್ ಜಾನ್' ಚಿತ್ರ ನೋಡಬಹುದು.

    English summary
    Bollywood Actor Salman Khan starrer 'Bajrangi Bhaijaan' has released world wide today (July 17th). This is not just a typical Salman Khan movie that is out an out entertainment, this Kabir Khan directorial has story, emotions, most important of all, you will see Salman Khan act like he has never done before. Here is the complete review of 'Bajrangi Bhaijaan'.
    Thursday, September 27, 2018, 11:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X