twitter
    For Quick Alerts
    ALLOW NOTIFICATIONS  
    For Daily Alerts

    ಬ್ಯೂಟಿಫುಲ್ ಆದ 'ಬ್ಯೂಟಿಫುಲ್ ಮನಸ್ಸುಗಳು' ಗೆ ವಿಮರ್ಶಕರ ಕಾಮೆಂಟ್‌ಗಳಿವು...

    By Suneel
    |

    ಕನ್ನಡದ ಮೋಹಕ ನಟಿ ಶೃತಿ ಹರಿಹರನ್ ಮತ್ತು ಸತೀಶ್ ನಿನಾಸಂ ಅಭಿನಯದ 'ಬ್ಯೂಟಿಫುಲ್ ಮನಸ್ಸುಗಳು' ಸಖತ್ ಬ್ಯೂಟಿಫುಲ್ ಆಗೇ ಇದೆ. ಸಿನಿ ಪ್ರಿಯರಿಗೆ ಮಾತ್ರವಲ್ಲದೇ ಚಿತ್ರ ವಿಮರ್ಶಕರು ಶೃತಿ ಹರಿಹರನ್ ಮತ್ತು ಸತೀಶ್ ನಿನಾಸಂ ಅವರ ನಟನೆ ಮೆಚ್ಚಿದ್ದಾರೆ.[ವಿಮರ್ಶೆ: 'ಬ್ಯೂಟಿಫುಲ್ ಮನಸ್ಸುಗಳು' ಪ್ರಸ್ತುತ ಸಮಾಜಕ್ಕೆ ಕನ್ನಡಿ]

    ವಿಮರ್ಶಕರು ಮೆಚ್ಚಿದ್ದು ಓಕೆ. ಆದ್ರೆ ಚಿತ್ರದ ಬಗ್ಗೆ ಏನಂದ್ರು? ಸತೀಶ್ ನಿನಾಸಂ ಮತ್ತು ಶೃತಿ ಹರಿಹರನ್ ಅಭಿನಯದ ಬಗ್ಗೆ ವಿಮರ್ಶಕರು ನೀಡಿದ ಕಾಮೆಂಟ್‌ ಗಳೇನು?[ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ನೋಡಿದವರ ಟ್ವಿಟರ್ ಕಾಮೆಂಟ್ಸ್]

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿ....

    ಮಗದೊಮ್ಮೆ ಮಂದಾರ - ಪ್ರಜಾವಾಣಿ

    ಮಗದೊಮ್ಮೆ ಮಂದಾರ - ಪ್ರಜಾವಾಣಿ

    ಯತೀರ್ಥ ನಿರ್ದೇಶನದ ‘ಬ್ಯೂಟಿಫುಲ್ ಮನಸುಗಳು' ಸಮಾಜದ ಹುಳುಕುಗಳನ್ನು ತೋರಿಸುತ್ತಲೇ, ಅದೇ ಸಮಾಜದ ಭಾಗವಾಗಿರುವ ಚಂದದ ಮನಸುಗಳನ್ನು ಅನಾವರಣಗೊಳಿಸುವ ಸಿನಿಮಾ. ಲಂಚಗುಳಿ ಪೊಲೀಸರ ಹೊಣೆಗೇಡಿತನ, ಟಿಆರ್‌ಪಿ ಹಪಹಪಿಗೆ ಬಿದ್ದು ಒಂದೇ ಸಂಗತಿಯನ್ನು ದಿನವಿಡೀ ಪ್ರಸಾರ ಮಾಡುವ ವಾಹಿನಿಗಳ ನೈತಿಕ ಅಧಃಪತನ, ಅವಕಾಶ ಸಿಕ್ಕರೆ ಯಾರನ್ನಾದರೂ ಮಾತಿನಲ್ಲೇ ಬೀದಿಗೆಳೆಯುವ ಜನರ ವಿಚಾರಶೂನ್ಯತೆ, ಜೊತೆಗೆ ಒಂದಷ್ಟು ಸುಂದರವಾದ ಮನಸುಗಳನ್ನು ಇಟ್ಟುಕೊಂಡು ನಿರ್ದೇಶಕರು ಕಥೆ ಹೆಣೆದಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರದಲ್ಲಿ ಬಳಸಲಾಗಿರುವ ‘ಸೋರುತಿಹುದು ಮನೆಯ ಮಾಳಿಗೆ' ಹಾಡು ಇಡೀ ಚಿತ್ರಕ್ಕೆ ರೂಪಕದಂತಿದೆ. ಸಂಭಾಷಣೆಯಲ್ಲಿನ ಚುರುಕುತನ ಮತ್ತು ವೇಗದ ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಚಿತ್ರದ ಒಟ್ಟುಗುಣದಲ್ಲಿ ಕಿರಣ್ ಹಂಪಾಪುರ ಅವರ ಛಾಯಾಗ್ರಹಣದ ಕಾಣಿಕೆಯೂ ಸೇರಿದೆ. ಬಿ.ವಿ. ಕಾರಂತರು ನಾಟಕವೊಂದಕ್ಕೆ ಸಂಯೋಜಿದ್ದ ಹಾಡಿನ ರಾಗವನ್ನೇ ಯಥಾವತ್ತಾಗಿ ಬಳಸಿಕೊಂಡಿರುವುದು ಮತ್ತು ಹಿನ್ನೆಲೆಯಲ್ಲಿ ಆಗಾಗ ಜನಪ್ರಿಯ ಹಾಡುಗಳು ಬರುವುದನ್ನು (ಸಂದರ್ಭಕ್ಕೆ ಸೂಕ್ತವಾಗಿದ್ದರೂ) ಗಮನಿಸಿದರೆ ಸಂಗೀತ ಸಂಯೋಜಕ ಬಿ.ಜೆ. ಭರತ್ ಹೆಚ್ಚೇನೂ ಶ್ರಮವಹಿಸಿದಂತೆ ಕಾಣುವುದಿಲ್ಲ. ನೀನಾಸಂ ಸತೀಶ್ ಬಿಲ್ಡಪ್ ಇಲ್ಲದೆ ತಮ್ಮ ಸಹಜಾಭಿನಯ ಮುಂದುವರಿಸಿದ್ದಾರೆ. ನಂದಿನಿ ಪಾತ್ರವನ್ನು ಶ್ರುತಿ ಹರಿಹರನ್ ಜೀವಂತವಾಗಿಸಿದ್ದಾರೆ. ಪಾತ್ರದ ಮಹತ್ವ ಮತ್ತು ಅದನ್ನು ಪೋಷಿಸಿದ ರೀತಿಯಿಂದಾಗಿ ಅಚ್ಯುತಕುಮಾರ್, ತಬಲಾ ನಾಣಿ ನೆನಪಿನಲ್ಲಿ ಉಳಿಯುತ್ತಾರೆ.‘ಒಲವೇ ಮಂದಾರ'. ‘ಟೋನಿ'ಯಂಥ ಸದಭಿರುಚಿಯ ಸಿನಿಮಾಗಳ ನಿರ್ದೇಶಕ, ಅಡ್ಡದಾರಿಯಿಂದ ಮತ್ತೆ ತಮ್ಮ ಟ್ರ್ಯಾಕ್‌ಗೆ ಮರಳಿರುವುದನ್ನು ‘ಬ್ಯೂಟಿಫುಲ್‌ ಮನಸುಗಳು' ಅಚ್ಚುಕಟ್ಟಾಗಿ ಸಾಬೀತುಪಡಿಸಿದೆ.

    ಬ್ಯೂಟಿಫುಲ್‌ ಆದ ಸಿನಿಮಾ- ವಿಜಯ ಕರ್ನಾಟಕ

    ಬ್ಯೂಟಿಫುಲ್‌ ಆದ ಸಿನಿಮಾ- ವಿಜಯ ಕರ್ನಾಟಕ

    ಹೆಸರೇ ಹೇಳುವಂತೆ ಬ್ಯೂಟಿಫುಲ್‌ ಮನಸುಗಳು ಪ್ರೇಮ ಕತೆಯುಳ್ಳ ಚಿತ್ರ. ಇಲ್ಲಿ ಮಧ್ಯಮ ವರ್ಗದ ನವಿರಾದ ಪ್ರೇಮವಿದೆ. ಹುಡುಗರು ತಮ್ಮ ಹರೆಯದಲ್ಲಿ ಮಾಡುವ ತಮಾಷೆಗಳು, ಚೇಷ್ಟೆಗಳು ಇಲ್ಲಿವೆ. ಮೇಲ್ನೋಟಕ್ಕೆ ಈ ಸಿನಿಮಾ ಖಾಲಿ ಖಾಲಿ ಎನಿಸಿದರೂ ಕೆಲವೆಡೆ ಸೂಜಿಗಲ್ಲಿನಂತೆ ಸೆಳೆದುಬಿಡುತ್ತದೆ. ಬ್ಯೂಟಿಫುಲ್‌ ಮನಸುಗಳು ಸ್ವಲ್ಪ ಸಿದ್ಧಸೂತ್ರವನ್ನು ಬಿಟ್ಟಿರುವ ಸಿನಿಮಾ. ಈ ಕತೆಯಲ್ಲಿ ಒಂದಷ್ಟು ಫೈಟ್‌ಗಳನ್ನು, ಮತ್ತೊಂದಷ್ಟು ಡ್ಯುಯೆಟ್‌ಗಳನ್ನು , ಬೇಡದ ಎಮೋಷನ್‌ ಸೀನ್‌ಗಳನ್ನು ತರಬಹುದಾಗಿತ್ತು. ಆದರೆ ನಿರ್ದೇಶಕ ಜಯತೀರ್ಥ ಅದಾವುದನ್ನು ಮಾಡದೆ ವಿಭಿನ್ನವಾಗಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

    ನೀನಾಸಂ ಸತೀಶ್‌ ಅವರದ್ದು ಸಿನಿಮಾದ ಮೊದಲರ್ಧ ತಮ್ಮ ಚತುರತೆಯಿಂದ ನಗಿಸಿದರೆ, ಉಳಿದರ್ಧ ಜವಾಬ್ದಾರಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಹರಿಹರನ್‌ ಅಭಿನಯದಲ್ಲಿ ನೂರಕ್ಕೆ ನೂರು ಅಂಕವನ್ನು ಗಳಿಸುತ್ತಾರೆ. ಮಧ್ಯಮ ವರ್ಗದ ಹುಡುಗಿಯಾಗಿ ಅವರದ್ದು ಮನೋಜ್ಞ ಅಭಿನಯ. ಆಗಾಗ ಬಂದು ಹೋಗುವ ತಬಲಾ ನಾಣಿ ಮಾತುಗಳಲ್ಲಿ ಲಾಲಿತ್ಯವಿದೆ. ಅಚ್ಯುತ್‌ ಕುಮಾರ್‌ ಪ್ರೇಕ್ಷಕರನ್ನು ಹಿಡಿದಿಡುತ್ತಾರೆ. ಇವರೆಲ್ಲರಿಗೂ ಸಂದೀಪ್‌, ಪ್ರಶಾಂತ್‌, ಸ್ವಾತಿ ಕೊಂಡೆ ಸಾಥ್‌ ನೀಡಿದ್ದಾರೆ. ಇಡೀ ಚಿತ್ರದಲ್ಲಿ ಎರಡೇ ಹಾಡಿದ್ದರೂ ಸಂಗೀತ ನಿರ್ದೇಶಕ ಬಿ.ಜೆ. ಭರತ್‌ ಗಮನ ಸೆಳಯುತ್ತಾರೆ. ಎಲ್ಲಕ್ಕಿಂತ ಟೈಟಲ್‌ ಟ್ರ್ಯಾಕ್‌ನ್ನು ಜನ ಹೊರಗೆ ಬಂದರೂ ಗುನುಗಿಕೊಂಡು ಹೋಗುತ್ತಾರೆ. ಇದಕ್ಕೆ ಸಾಹಿತ್ಯ ಬರೆದ ಮದನ್‌ ಕುಮಾರ್‌ ಬೆಳ್ಳಿಸಾಲು ಅವರನ್ನು ಮೆಚ್ಚಬೇಕು. ನಿರ್ದೇಶಕರ ಪರಿಕಲ್ಪನೆಗೆ ತಕ್ಕಂತೆ ಸಿನಿಮಾಟೋಗ್ರಾಫರ್‌ ಕಿರಣ್‌ ಹಂಪಾಪುರ ಕೆಲಸ ಮಾಡಿದ್ದಾರೆ.ಸಂಭಾಷಣೆ ಚೂಪಾಗಿದೆ. ಈ ವೀಕೆಂಡ್‌ಗೆ ಬ್ಯೂಟಿಫುಲ್‌ ಮನಸುಗಳು ಒಳ್ಳೆಯ ಚಿತ್ರ.

    ದುರುಳತನಕ್ಕೆ ಎದುರಾಗಿ ಬ್ಯೂಟಿಫುಲ್ ಮಾತಿನ ಮಲ್ಲರು -ಕನ್ನಡಪ್ರಭ

    ದುರುಳತನಕ್ಕೆ ಎದುರಾಗಿ ಬ್ಯೂಟಿಫುಲ್ ಮಾತಿನ ಮಲ್ಲರು -ಕನ್ನಡಪ್ರಭ

    ತಾಂತ್ರಿಕವಾಗಿ ಸಿನೆಮಾ ಇನ್ನು ಉತ್ತಮಗೊಳ್ಳಬಹುದಿತ್ತು. ಬಿ ಜೆ ಭರತ್ ಸಂಗೀತ ನಿರ್ದೇಶನದಲ್ಲಿ ಮೂಡಿರುವ ಒಂದೆರಡು ಹಾಡುಗಳು ಮನಸ್ಸಿನಲ್ಲುಳಿಯುತ್ತವೆ. ನಗರ ಜೀವನದಲ್ಲಿ ಬದುಕುಕಟ್ಟಿಕೊಳ್ಳುವ ಜನರ ಪರಿಪಾಡನ್ನು ತೋರಿಸಲು ಹಿನ್ನಲೆಯಲ್ಲಿ ಆಗಾಗ ಬಳಸಿಕೊಂಡಿರುವ (ರಘು ದೀಕ್ಷಿತ್ ಹಾಡಿರುವ) ಶಿಶುನಾಳ ಶರೀಫರ 'ಸೋರುತಿಹುದು ಮನೆಯ ಮಾಳಿಗೆ' ಹಾಡು ಆಪ್ತವಾಗುತ್ತದೆ. ಲೀನಿಯರ್ ನಿರೂಪಣೆಗೆ ಬದಲಾಗಿ, ಇನ್ನಷ್ಟು ರೋಚಕತೆ ತಂದಿದ್ದರೆ ಹೆಚ್ಚು ಕುತೂಹಲಕಾರಿಯಾಗುವ ಸಾಧ್ಯತೆ ಇತ್ತು. ಛಾಯಾಗ್ರಹಣ ಪೂರಕವಾಗಿದ್ದರು, ಇನ್ನಷ್ಟು ಉತ್ತಮಗೊಳ್ಳಬಹುದಿತ್ತು. ಬ್ರೈಟ್ ಲೈಟಿಂಗ್ ಹೇರಳವಾಗಿ ಬಳಕೆಯಾಗಿದ್ದು, ದುಃಖದ, ದುರಂತದ ಸನ್ನಿವೇಶಗಳಲ್ಲಾದರೂ (ನಂದಿನಿ ಮನೆಯ ಪರಿಸರ) ಅದನ್ನು ಬದಲಿಸುವ ಅವಶ್ಯಕತೆಯಿತ್ತು. ಹಿನ್ನಲೆ ಸಂಗೀತ, ಸಂಭಾಷಣೆಗಳಂತೆ ಅಬ್ಬರವಾಗಿಯೇ ಉಳಿದಿದೆ. ನೀನಾಸಂ ಸತೀಶ್, ಶ್ರುತಿ ಹರಿಹರನ್ ಮತ್ತು ಇತರ ನಟರು ಉತ್ತಮವಾಗಿ ಅಭಿನಯಿಸಿದ್ದರು, ಅಚ್ಯುತ್ ಕುಮಾರ್ ತಮ್ಮ ನಿಯಂತ್ರಿತ ಮತ್ತು ನಿಖರವಾದ ನಟನೆಯಿಂದ ಮನಸೂರೆಗೊಳ್ಳುತ್ತಾರೆ. ಸಮಾಜದ ಓರೆಕೋರೆಗಳನ್ನು ಸಿನೆಮಾ ಮಾಧ್ಯಮದಲ್ಲಿ ಒಳಗೊಳ್ಳಬೇಕು ಎಂಬ ಬದ್ಧತೆಯ ದೃಷ್ಟಿಯಿಂದ ಒಳ್ಳೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು, ಅದರ ನಿರ್ವಹಣೆಯಲ್ಲಿ ಅಷ್ಟೇನೂ ಪರಿಣಾಮಕಾರಿಯಾಗದೆ ನಿರ್ದೇಶಕ ಜಯತೀರ್ಥ ಮಿಶ್ರಭಾವನೆ ಮೂಡಿಸುತ್ತಾರೆ. ಆದರೆ ಸಮಾಜದ ಸುತ್ತಮುತ್ತಲಿನ ಘಟನೆಗಳಿಗೆ ಸ್ಪಂದಿಸುವ ಮನಸ್ಸು ನಿಮ್ಮದಾದರೆ ಒಮ್ಮೆ ನೋಡಲು ಅಡ್ಡಿಯೇನಿಲ್ಲ.

    ಭಾವನಾತ್ಮಕವಾಗಿ ಚಿತ್ರಿಸಿದ ಬ್ಯೂಟಿಫುಲ್ ವಿಡಂಬನೆ- ವಿಜಯವಾಣಿ

    ಭಾವನಾತ್ಮಕವಾಗಿ ಚಿತ್ರಿಸಿದ ಬ್ಯೂಟಿಫುಲ್ ವಿಡಂಬನೆ- ವಿಜಯವಾಣಿ

    ಸಿನಿಮಾ ಪ್ರತಿ ಹಂತದಲ್ಲೂ ಕುತೂಹಲ ಕೆರಳಿಸುತ್ತವೆ. ಮಧ್ಯಮವರ್ಗದ ಕುಟುಂಬಗಳಿಂದ ಆರಿಸಿಕೊಂಡಿರುವ ಪಾತ್ರಗಳು ಜನಸಾಮಾನ್ಯರಿಗೂ ಕನೆಕ್ಟ್ ಆಗುವಂತಿವೆ. ಅವುಗಳಿಗೆ ಜೀವ ತುಂಬುವಲ್ಲಿ ಸತೀಶ್, ಶ್ರುತಿ ಮತ್ತು ಪೋಷಕ ಕಲಾವಿದರ ಕೊಡುಗೆಯೂ ದೊಡ್ಡದಿದೆ. ಮೊದಲರ್ಧ ಸರಳ, ದ್ವಿತೀಯಾರ್ಧ ಸುಂದರ ಎಂಬಂತಿದೆ ಚಿತ್ರಕಥೆಯ ಹೆಣಿಗೆ. ಸನ್ನಿವೇಶಕ್ಕೆ ತಕ್ಕಂತೆ ನಗಿಸುವ, ನಲುಗಿಸುವ ಸಂಭಾಷಣೆಗಳು ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಚೌಕಟ್ಟು ಮೀರದ ಕೈಚಳಕ ಛಾಯಾಗ್ರಾಹಕ ಕಿರಣ್ ಹಂಪಾಪುರ ಅವರದ್ದು. ಹದವರಿತ ಹಿನ್ನೆಲೆ ಸಂಗೀತ (ಬಿ.ಜೆ. ಭರತ್) ಇಲ್ಲಿನ ಮತ್ತೊಂದು ಪ್ಲಸ್ ಪಾಯಿಂಟ್. ನಿರ್ದೇಶಕರು ಲಾಜಿಕ್​ನ ಬಗ್ಗೆ ಇನ್ನಷ್ಟು ಗಮನ ಹರಿಸುವ ಅಗತ್ಯವಿತ್ತು. ಅಮಾಯಕ ಪ್ರೇಮಿಗಳ ಅಪರೂಪದ ಕಥಾಹಂದರವಿರುವ ಈ ಚಿತ್ರಕ್ಕೆ ‘ವಿಜಯವಾಣಿ' ಓದುಗ ವಿಮರ್ಶಕರು ನೀಡಿರುವ ಸರಾಸರಿ ಅಂಕ ಹತ್ತಕ್ಕೆ ಏಳು. ಸ್ಟಾರ್ ***

    Beautiful Manasugalu Movie Review - The Times of India

    Beautiful Manasugalu Movie Review - The Times of India

    Director Jayatheertha, with his previous films, has proven how he is one of the more capable writers today in Kannada films. With Beautiful Manasugalu, he proves the same once again. The film, which is based on a real incident, has a clever narrative, which manages to keep the viewer engaged, especially in the second half, which is crucial for a romantic thriller like this. The Lucia pair give their all to ensure this tale translates like how the director had envisioned it, or so the audience are made to feel. Sathish Ninasam moves from being goofy and lovable to edgy and despicable in different scenes, playing his part well. Sruthi Hariharan has given one of her better performances till date and owns most of the emotional scenes with her convincing acting. An extra mention must be made for her good dubbing skills. Achyuth Kumar delivers another rock solid performance.

    The film, which is set in a surrounding that require it to be rustic, is glossy and good looking, which is pleasing to the eyes. Bharath BJ's tunes linger in one's mind long after the film is done. If you like love stories that are not all candyfloss and have a bit of a reality check, and aren't looking for obvious over-the-top masala, then Beautiful Manasugalu makes for a refreshing watch.

    English summary
    Sathish Neenasam, Sruthi Hariharan Starrer Kannada Movie 'Beautiful Manassugalu' has hit the screens yesterday (January 20th). Here is the Twitter review of 'Beautiful Manassugalu'
    Saturday, January 21, 2017, 14:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X