twitter
    For Quick Alerts
    ALLOW NOTIFICATIONS  
    For Daily Alerts

    ಕಾಮನ್ ಮ್ಯಾನ್ 'ಶ್ರೀಕಂಠ'ನಿಗೆ ವಿಮರ್ಶಕರಿಂದ ಬಂದ ಕಾಮೆಂಟ್ ಗಳೇನು!

    By Bharath Kumar
    |

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಶ್ರೀಕಂಠ' ಚಿತ್ರದ ಮೂಲಕ 'ಕಾಮನ್ ಮ್ಯಾನ್' ಆಗಿ ತೆರೆಮೇಲೆ ಮಿಂಚಿದ್ದಾರೆ. ಶ್ರೀಸಾಮಾನ್ಯರಿಗೆ ಶಿವಣ್ಣನ ಅವತಾರ ಇಷ್ಟವಾಗಿದ್ದು, ಸಖತ್ ಖುಷಿಯಾಗಿದ್ದಾರೆ.

    ಆದ್ರೆ, ವಿಮರ್ಶಕರು ಸೆಂಚುರಿ ಸ್ಟಾರ್ ಅಭಿನಯಕ್ಕೆ ಏನಂದ್ರು? 'ಕಾಮನ್ ಮ್ಯಾನ್' ಗೆಟಪ್ ಗೆ ವಿಮರ್ಶಕರು ನೀಡಿದ ಕಾಮೆಂಟ್ ಗಳೇನು?[ವಿಮರ್ಶೆ: ಪ್ರೀತಿಗೆ ನೆಂಟ, ದುಷ್ಟರಿಗೆ ಒರಟ ಈ ಕಾಮನ್ ಮ್ಯಾನ್ 'ಶ್ರೀಕಂಠ']

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಶ್ರೀಕಂಠ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿ....

    ''ಶ್ರೀಸಾಮಾನ್ಯನಾಗಿ ಮಿಂಚಿದ ಶ್ರೀಕಂಠ''-ವಿಜಯ ಕರ್ನಾಟಕ

    ''ಶ್ರೀಸಾಮಾನ್ಯನಾಗಿ ಮಿಂಚಿದ ಶ್ರೀಕಂಠ''-ವಿಜಯ ಕರ್ನಾಟಕ

    ''ಸಾಮಾನ್ಯ ಮನುಷ್ಯನೊಬ್ಬ ಏನೂ ಬೇಕಾದರೂ ಮಾಡುತ್ತಾನೆ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ. ಶಿವರಾಜ್ ಕುಮಾರ್ ಸ್ಟಾರ್ ನಟನಾಗಿದ್ದರೂ, ಅದನ್ನೆಲ್ಲ ಪಕ್ಕಕ್ಕಿಟ್ಟು ಪಾತ್ರವಾಗಿದ್ದಾರೆ. ಬೀದಿ ಬೀದಿಯಲ್ಲಿ ಮಲುಗುವ, ರಸ್ತೆ ಬದಿಯ ಹೋಟೆಲ್ ಗಳಲ್ಲಿ ತಿನ್ನುವ ಪಾತ್ರವನ್ನ ಮನೋಘ್ನವಾಗಿ ಅಭಿನಯಿಸಿದ್ದಾರೆ. ನಿರ್ದೇಶಕ ಮಂಜು ಸ್ವರಾಜ್ ಕೂಡ ಜಾಣ್ಮೆಯ ರೀತಿಯಲ್ಲಿ ಪಾತ್ರ ಮಾಡಿಸಿದ್ದಾರೆ. ಸಿನಿಮಾ ಕತೆ ಹಾಗೂ ಚಿತ್ರಕಥೆಯಲ್ಲಿ ವಿಷಾದವಿದ್ದರೂ, ಅದನ್ನ ಲವಲವಿಕೆಯ ನಿರೂಪಣೆ ಚೆಂದಗಾಣಿಸಿದ್ದಾರೆ. ಇಡೀ ಸಿನಿಮಾವನ್ನ ಶಿವರಾಜ್ ಕುಮಾರ್ ಆವರಿಸಿಕೊಂಡಿದ್ದಾರೆ. ನಾಯಕನ ಜತೆಯಲ್ಲಿ ಸಾಗುವ ವಿಜಯ್ ರಾಘವೇಂಧ್ರ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಾಂದಿನಿ ಶ್ರೀಧರನ್ ಹಾಗೂ ಸ್ವರ್ಶಾ ರೇಖಾ ಗಮನ ಸೆಳೆಯುತ್ತಾರೆ. ಸಿನಿಮಾದಲ್ಲಿ ಗಮನ ಸೆಳೆಯುವುದೇ ಇರುವುದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಒಬ್ಬರೇ''-ವಿಜಯ ಕರ್ನಾಟಕ.

    ''ಮನಕುಲುಕುವ ಶ್ರೀಕಂಠನ ಸಂಕಟ'' -ವಿಜಯವಾಣಿ

    ''ಮನಕುಲುಕುವ ಶ್ರೀಕಂಠನ ಸಂಕಟ'' -ವಿಜಯವಾಣಿ

    ''ಶ್ರೀಕಂಠ ಪತ್ನಿಯೊಂದಿಗೆ ನೆಮ್ಮದಿ ಬದುಕು ಕಟ್ಟಿಕೊಳ್ಳುವ ಪಣ ತೊಡುತ್ತಾನೆ. ಆದರೆ ವಿಧಿಯಾಟ ಬೇರೆಯೇ ಇರುತ್ತದೆ, ಅದು ಪ್ರೇಕ್ಷಕನ ಮನಕುಲಕುತ್ತದೆ. ನಿರ್ದೇಶಕ ಮಂಜು ಸ್ವರಾಜ್ ಫ್ಲ್ಯಾಶ್​ಬ್ಯಾಕ್ ತಂತ್ರದೊಂದಿಗೆ ಚಿತ್ರವನ್ನು ನಿರೂಪಿಸುತ್ತಾರೆ. ಅದರ ಮಧ್ಯೆ ರಾಜಕೀಯ ಮೇಲಾಟಗಳು, ಪ್ರಸಕ್ತ ರಾಜಕಾರಣದಲ್ಲಿ ಚರ್ಚೆಯಾಗುತ್ತಿರುವ ವಿಷಯಗಳನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ದಾಟಿಸುವ ಕೆಲಸ ಮಾಡಿದ್ದಾರೆ. ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ. ಚಿತ್ರಕಥೆಯಲ್ಲಿ ಕೆಲವೆಡೆ ಹಿಡಿತ ತಪ್ಪಿದ್ದಾರೇನೋ ಎಂದೆನಿಸಬಹುದು. ಸಂಗೀತಕ್ಕೆ ಗುಂಗು ಹಿಡಿಸುವ ಚಾಮ್ರ್ ಇಲ್ಲ ಎಂಬುದು ಹಿನ್ನಡೆ. ಸುರೇಶ್ ಬಾಬು ಛಾಯಾಗ್ರಹಣ ಸೊಗಸಾಗಿದೆ. ಆನಾಥನಾಗಿ ಶಿವರಾಜ್​ಕುಮಾರ್ ಅಭಿನಯ ಪ್ರಶಂಸಾರ್ಹ. ಕೋಪ, ಒರಟುತನ, ಪ್ರೀತಿ, ವಾತ್ಸಲ್ಯ ಎಲ್ಲವನ್ನು ಒಂದೇ ಪಾತ್ರದಲ್ಲಿ ತೋರಿಸಿರುವ ಅವರ ನಟನಾಕೌಶಲ ಚೆನ್ನಾಗಿದೆ. ನಾಯಕಿ ಚಾಂದಿನಿ ಸಿಕ್ಕಿದ ಪಾತ್ರಕ್ಕೆ ಜೀವ ತುಂಬಿದ್ದಾರೆ''-ವಿಜಯವಾಣಿ

    ವಿಳಾಸವಿಲ್ಲದವರ ಆಪ್ತಕಥೆ: ಪ್ರಜಾವಾಣಿ

    ವಿಳಾಸವಿಲ್ಲದವರ ಆಪ್ತಕಥೆ: ಪ್ರಜಾವಾಣಿ

    ''ಶ್ರೀಕಂಠ', ನಗರ ಪರಿಸರದಲ್ಲಿನ ಅಂಚಿನ ಜನರ ಬದುಕಿನ ತುಣುಕುಗಳನ್ನು ಕಾಣಿಸಲು ಪ್ರಯತ್ನಿಸಿರುವ ಸಿನಿಮಾ. ನಾಯಕನ ತಾರಾವರ್ಚಸ್ಸಿನ ಲಾಭ ಪಡೆಯುವ ಬಗ್ಗೆ ಯೋಚಿಸದೆ, ಕಥೆಗೆ ಒತ್ತು ನೀಡಿರುವ ನಿರ್ದೇಶಕ ಮಂಜು ಸ್ವರಾಜ್‌ - ಇಬ್ಬರೂ ಸಹೃದಯರ ಮೆಚ್ಚುಗೆಗೆ ಅರ್ಹರು. ಐಟಂ ಸಾಂಗ್ ಹಾಗೂ ಅಶ್ಲೀಲ ಹಾಸ್ಯದಿಂದ ಹೊರತಾದ ಈ ಸಿನಿಮಾ - ಮೌಲ್ಯ ವ್ಯವಸ್ಥೆ, ಭಾವುಕತೆ, ಸಂಬಂಧಗಳ ಕುರಿತು ವ್ಯಕ್ತಪಡಿಸಿರುವ ಕಾಳಜಿಯನ್ನೂ ವಿಶೇಷವಾಗಿ ಗಮನಿಸಬೇಕು.

    ಶಿವರಾಜ್ ಕುಮಾರ್‌ ಅಭಿನಯ ಚಿತ್ರದ ಆಕರ್ಷಕ ಅಂಶಗಳಲ್ಲೊಂದು. ಲವಲವಿಕೆ -ವಿಷಾದ ಎರಡನ್ನೂ ಒಳಗೊಂಡಿರುವ ಪ್ರಬುದ್ಧ ಅಭಿನಯ ಅವರದು. ನಾಯಕನ ಪಯಣದ ಜೊತೆಗಾರನ ಪಾತ್ರದಲ್ಲಿ ವಿಜಯ ರಾಘವೇಂದ್ರ, ಅಮಾಯಕ ಹುಡುಗಿಯ ಪಾತ್ರದಲ್ಲಿನ ನಾಯಕಿ ಚಾಂದಿನಿ ಹಾಗೂ ಬದುಕಿನ ಸತ್ಯಗಳನ್ನು ಬಡಬಡಿಸುವ ಹೆಣ್ಣಿನ ಪಾತ್ರದಲ್ಲಿ ರೇಖಾ (‘ಸ್ಪರ್ಶ' ಚಿತ್ರದ ನಾಯಕಿ) ಪಾತ್ರಪೋಷಣೆ ಚೇತೋಹಾರಿಯಾಗಿದೆ. ಅವಸರವಿಲ್ಲದ ನಡಿಗೆ ‘ಶ್ರೀಕಂಠ' ಚಿತ್ರದ ವಿಶೇಷಗಳಲ್ಲೊಂದು. ಈ ಸಾವಧಾನ ಗುಣಕ್ಕೆ ಸುರೇಶ್‌ ಬಾಬು ಅವರ ಛಾಯಾಗ್ರಹಣ ಪೂರಕವಾಗಿದೆ. ಆದರೆ, ಅಜನೀಶ್ ಲೋಕನಾಥ್‌ ಸಂಗೀತ ಸಂಯೋಜನೆಯಲ್ಲಿನ ಗೀತೆಗಳು ಆ ಕ್ಷಣದ ತುರ್ತನ್ನು ಮೀರಲು ಯಶಸ್ವಿಯಾಗಿಲ್ಲ''-ಪ್ರಜಾವಾಣಿ

    ನೋವುಂಡರೂ ರಂಜಿಸುವ ಶ್ರೀಕಂಠ - ಕನ್ನಡ ಪ್ರಭ

    ನೋವುಂಡರೂ ರಂಜಿಸುವ ಶ್ರೀಕಂಠ - ಕನ್ನಡ ಪ್ರಭ

    ''ಅನಾಥ ಹುಡುಗನೊಬ್ಬ ದುಷ್ಟ ರಾಜಕಾರಣಕ್ಕೆ ಸಿಲುಕಿ ದುರಂತಕ್ಕೆ ಸಿಲುಕುವ ಹೊತ್ತಿನಲ್ಲಿ, ಪ್ರೀತಿ, ಪ್ರೇಮದೊಂದಿಗೆ ತಮ್ಮ ಬದುಕಲ್ಲಿ ಹೊಸ ಬೆಳಕು ಮೂಡಿಸಿದವಳಿಂದ ಒಳ್ಳೆಯನಾಗುವ ಶ್ರೀಕಂಠನ ರೋಚಕ ಒಯಣ ಕುತೂಹಲಕಾರಿಯಾದದ್ದು. ಚಿತ್ರದ ಮೊದಲಾರ್ಧದಲ್ಲಷ್ಟೇ ಲವಲವಿಕೆಯ ಓಟ ದ್ವಿತೀಯಾರ್ಧದಲ್ಲೂ ಇದೆ. ಸುರೇಶ್ ಬಾಬು ಅವರ ಛಾಯಗ್ರಹಣ ಉತ್ತಮ. ಪ್ರಕಾಶ್ ಒಡೆಯರ್ ವಾರ ಸಂಭಾಷಣೆಯಲ್ಲಿ ಇನ್ನಷ್ಟು ಖಡಕ್ ಮಾತುಗಳು ಸಿಡಿಯಬೇಕಿತ್ತು. ಶಿವರಾಜ್ ಕುಮಾರ್ ಅಭಿನಯದ ಬಗ್ಗೆ ಹೆಚ್ಚು ಹೇಳುವಂತಿಲ್ಲ. ಅವರದ್ದು ಇಲ್ಲಿ ಭರ್ಜಿ ಮಿಂಚಿಂಗ್. ಚಾಂದಿನಿ ಶ್ರೀಧರನ್ ಅವರ ಮುದ್ದು ಮುಖ ನಟನೆಯಲ್ಲಿ ಇಷ್ಟವಾದಷ್ಟೂ, ದುಃಖದ ಸನ್ನಿವೇಶಗಳಲ್ಲಿ ಸಹಿಸಿಕೊಳ್ಳವುದು ಕಷ್ಟ. ಒಟ್ನಲ್ಲಿ, ಇಡೀ ಚಿತ್ರ, ಪ್ರತಿ ವಿಭಾಗದಲ್ಲೂ ನೋಡಿಸುವ ಕಾಡಿಸುವ ತನ್ನ ವಿಶಿಷ್ಟ ಗುಣದೊಂದಿಗೆ ನಿರ್ದೇಶಕ ಮಂಜು ಸ್ವರಾಜ್ ಅವರ ಜಾಣ್ಮೆಯನ್ನ ಮೆರೆಸುವಂತೆ ಮಾಡಿದೆ'' -ಕನ್ನಡ ಪ್ರಭ

    ''SRIKANTA’ IS WELL CRAFTED, VERY ENGAGING''-Bangalore Mirror

    ''SRIKANTA’ IS WELL CRAFTED, VERY ENGAGING''-Bangalore Mirror

    ''The film is the usual story of exploitation of the politicians of the poor people. But in making it the tale of one character, Swaraj gives the audience a journey to experience. Except for a few moral sermons, the film is practical just like the protagonist. Shiva Rajkumar gives an assured and mature performance. Chandini makes an impressive debut in Kannada. Swaraj utilises all the characters and actors to the maximum. Some of them, however, like the character played by Rekha, seem to be present only to give the twist to the tale. On the technical front, Ajaneesh Loknath churns out some engrossing tunes and the cinematography by Sureshbabu gives the film a realistic touch. But it is Deepu S Kumar who is the star on the other side of the screen, apart from the director''- Bangalore Mirror

    English summary
    Kannada Actor Shiva Rajkumar starrer Kannada Movie 'Srikanta' has has received positive response from the critics. Here is the collection of 'Srikanta' reviews by Top News Papers of Karnataka.
    Saturday, January 7, 2017, 13:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X