twitter
    For Quick Alerts
    ALLOW NOTIFICATIONS  
    For Daily Alerts

    ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ- ನನ್ನ ಅನಿಸಿಕೆ

    By * ಮಲೆನಾಡಿಗ
    |

    Rating:
    4.0/5
    ಮಾತಿನ ಮಳೆಯಲ್ಲಿ ಪ್ರೇಕ್ಷಕರನ್ನು ತೊಯ್ಯಿಸುತ್ತಾ ಮಿಂಚಿನಂತೆ ಸಂಚಲನ ಮೂಡಿಸಿರುವ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಬಗ್ಗೆ ಎಲ್ಲೆಡೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದ್ದೆ. ಸಾಮಾಜಿಕ ಜಾಲ ತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ಚಿತ್ರ ಕ್ಲಿಕ್ ಮಾಡಬಹುದು ಎಂಬುದನ್ನು SOLS ಉದಾಹರಣೆ.

    ಫೇಸ್ ಬುಕ್, ಟ್ವಿಟರ್, ಆಂಡ್ರಾಯ್ಡ್ ಆಪ್ ಸೇರಿದಂತೆ ಎಲ್ಲೆಡೆ ಚಿತ್ರದ ಪ್ರಚಾರ ಭರ್ಜರಿಯಾಗಿ ಆಗಿದೆ. ಟ್ರೈಲರ್ ನಲ್ಲಿ ಕಂಡಿದ್ದು ತೆರೆಯ ಮೇಲೆ ಹೇಗೆ ಮೂಡಿದೆ ಎಂಬ ಕುತೂಹಲದಿಂದ ರಾಜ್ಯದಾದ್ಯಂತ ಸಿನಿ ರಸಿಕರು ಥೇಟರ್ ಗಳತ್ತ ಮುಗಿ ಬಿದ್ದಿದ್ದಾರೆ.

    ನಿರ್ದೇಶಕ ಸುನಿ ಅಲಿಯಾಸ್ ಸುನಿಲ್ ಅವರ ಚೊಚ್ಚಲ ಪ್ರಯತ್ನವಿದು. ಹೇಮಂತ್ ನಿರ್ಮಿಸಿರುವ ಚಿತ್ರಕ್ಕೆ ಮನೋಹರ್ ಜೋಷಿ ಛಾಯಾಗ್ರಹಣವಿದೆ. ಚಿತ್ರದ ಟ್ರೇಲರ್ ಗಳು ಆರಂಭದಿಂದಲೂ ಕುತೂಹಲ ಕೆರಳಿಸುತ್ತಾ ಬಂದಿವೆ. ತುಘ್ಲಕ್ ಖ್ಯಾತಿಯ ರಕ್ಷಿತ್ ಶೆಟ್ಟಿ ಹಾಗೂ ಮನ್ವಂತರ ಸೀರಿಯಲ್ ಖ್ಯಾರಿಯ ಶ್ವೇತಾ ಶ್ರೀವಾತ್ಸವ್ ಚಿತ್ರದ ನಾಯಕ ನಾಯಕಿ. ಚಿತ್ರ ಗ್ರ್ಯಾಂಡ್ ಓಪನಿಂಗ್ ಪಡೆದಿರುವುದು

    ಆನ್ ಲೈನ್ ಬುಕ್ಕಿಂಗ್ ಮಾಡಿಸಿದ್ದರೂ ಸಮಯಕ್ಕೆ ಸರಿಯಾಗಿ ಟಿಕೆಟ್ ವಿಲೇವಾರಿ ಮಾಡಲು ಸಾಧ್ಯವಾಗದೆ ಥೇಟರ್ ನವರು ಒದ್ದಾಡಿದ್ದು ಖುಷಿ ಕೊಟ್ಟಿತು. ಚಿತ್ರದ ಓಪನಿಂಗ್ ಸೀನ್ ಐ ಮೀನ್ ಟೈಟಲ್ ಕಾರ್ಡ್ ತೋರಿಸಿದ ರೀತಿಗೆ ಫುಲ್ ಮಾರ್ಕ್ ಕೊಡಲು ಮನಸು ಒಪ್ಪುವುದಿಲ್ಲ. ತೀರಾ ಸಿಂಪಲ್ ಎನಿಸಿಬಿಟ್ಟಿತು. ಹಲವು ಕಡೆ ಚಿತ್ರಮಂದಿರಗಳ ಸೌಂಡ್ ಸಿಸ್ಟಮ್ ಕೆಟ್ಟಿದ್ದರಿಂದ ಚಿತ್ರವನ್ನು ಎರಡೆರಡು ಬಾರಿ ನೋಡಿದವರು ಇದ್ದಾರೆ..ಮುಂದೆ ಓದಿ...

    ನಿರೂಪಣಾ ಶೈಲಿ

    ನಿರೂಪಣಾ ಶೈಲಿ

    ಹೆಚ್ಚಿನ ಹೈಪ್ ಇಲ್ಲದೆ ನಾಯಕ, ನಾಯಕಿ ತೋರಿಸಿದ ರೀತಿ.. ರೇಡಿಯೋ ಸಿಟಿ ಆರ್ ಜೆ ಬಳಸಿಕೊಂಡಿರುವ ರೀತಿ ಕೂಡಾ ಓಕೆ. ಮೊದಲ ಕೆಲ ದೃಶ್ಯಗಳನ್ನು ನೋಡುತ್ತಿದ್ದಂತೆ ಸಂಭಾಷಣೆಯೇ ಚಿತ್ರದ ಜೀವಾಳ ಎನಿಸಿಬಿಡುತ್ತದೆ.

    ಆದರೆ, ನಿರ್ದೇಶಕ ಸುನಿ ಅವರನ್ನು ಇನ್ನೊಬ್ಬ ಯೋಗರಾಜ್ ಭಟ್ ರಂತೆ ಮಠ ಗುರುಪ್ರಸಾದ್ ರಂತೆ ಹೋಲಿಸುವ ಅಪಾಯವೂ ಇದೆ. ಕಾರಣ. ಮಾತಿನ ಮಂಟಪದಲ್ಲಿ ಕೆಲವೇ ಪಾತ್ರಧಾರಿಗಳನ್ನು ಇಟ್ಟುಕೊಂಡು ಚಿತ್ರವನ್ನು ಪ್ರೇಕ್ಷಕರಿಗೆ ಒಪ್ಪಿಸುವ ರೀತಿ ಸುಲಭವೇನಲ್ಲ.

    ನಿರೂಪಣಾ ಶೈಲಿ

    ನಿರೂಪಣಾ ಶೈಲಿ

    ದೃಶ್ಯದಿಂದ ದೃಶ್ಯಕ್ಕೆ ಸಂಭಾಷಣೆ ಮಜಾ ನೀಡುತ್ತಿದ್ದಂತೆ ಪ್ರೇಕ್ಷಕರಿಗೆ ಏಕತಾನತೆ ಕಾಡದಿರಲಿ ಎಂದು ಫ್ಲಾಶ್ ಬ್ಯಾಕ್ ನಂತೆ ಕಥೆ ಹೇಳುವ ತಂತ್ರ ಸುನಿ ಸಮರ್ಥವಾಗಿ ಬಳಸಿದ್ದಾರೆ. ಹಾಗೆ ನೋಡಿದರೆ ಉಪೇಂದ್ರ ನಂತರ ಫ್ಲಾಶ್ ಬ್ಯಾಕ್ ಟೆಕ್ನಿಕ್ ಬಳಸಿ ಚಿತ್ರಕಥೆಯ ಓಟ ಹೆಚ್ಚಿಸಿ, ಹುಚ್ಚು ಹಿಡಿಸುವಲ್ಲಿ ಸುನಿ ಗೆದ್ದಿದ್ದಾರೆ.

    ನಿರೂಪಣಾ ಶೈಲಿ

    ನಿರೂಪಣಾ ಶೈಲಿ

    ಎರಡೇ ಪಾತ್ರಗಳಲ್ಲಿ ಆಟವಾಡುತ್ತಾ ಫ್ಲಾಶ್ ಬ್ಯಾಕ್ ನಲ್ಲೂ ಅದೇ ಪಾತ್ರಧಾರಿಗಳನ್ನು ಬಳಸಿದ್ದು ಮಾತಿನ ಮಳೆಯಲ್ಲಿ ಮೀಯುತ್ತಿದ್ದ ಪ್ರೇಕ್ಷಕರು ಕೆಲವರಿಗೆ ಕನ್ ಫ್ಯೂಸ್ ಮಾಡಿದ್ದಂತೂ ನಿಜ. ಆದರೆ, ಈ ಕನ್ ಫ್ಯೂಸ್ ಸುನಿ ಪಾಲಿಗೆ ಪ್ಲಸ್ ಪಾಯಿಂಟ್ ಆಗಿದೆ.

    ಮಠದಲ್ಲಿ ಏಕತಾನತೆ ಒಡೆಯಲು ಉಪಕಥೆಗಳನ್ನು ಬಳಸಿದಂತೆ ಇಲ್ಲಿ ನಾಯಕ, ನಾಯಕಿ ತಮ್ಮ ಪ್ರೇಮಕಥೆ ಹೇಳುತ್ತಾರೆ. ಆದರೆ, ಮಠದಲ್ಲಿ ನಾಯಕ ಮಾತ್ರ ಫ್ಯಾಶ್ ಬ್ಯಾಕ್ ನಲ್ಲಿ ಕಾಣಿಸಿಕೊಂಡರೆ, ಇಲ್ಲಿ ನಾಯಕ ನಾಯಕಿ ಇಬ್ಬರೂ ಕಾಣಿಸಿಕೊಳ್ಳುತ್ತಾರೆ.

    ಬೋರ್ ಹೊಡೆಸಲ್ಲ

    ಬೋರ್ ಹೊಡೆಸಲ್ಲ

    ಮಧ್ಯಂತರ ತನಕ ಸರಾಗವಾಗಿ ಚಿತ್ರ ಮುಂದುವರೆಯುತ್ತದೆ. ಸಂಭಾಷಣೆಯಲ್ಲಿ ಡಬ್ಬಲ್ ಮೀನಿಂಗ್ ಎನಿಸಿದರೆ ಅದು ಉದ್ದೇಶಪೂರ್ವಕವಾಗಿಲ್ಲ, ಸಾಂದರ್ಭಿಕವಾಗಿದೆ ಅಷ್ಟೇ. ಪನ್ ಪಂಚ್ ಇಲ್ಲದ ನೀರಸ ಡೈಲಾಗ್ ಗಿಂತ ಎಷ್ಟೋ ವಾಸಿ.

    ಆಹ್ಲಾದಕರ ಹಿನ್ನೆಲೆ ಸಂಗೀತ, ಫ್ಲಾಶ್ ಬ್ಯಾಕ್ ನಿರೂಪಣೆ, ಸಾಂಗ್ಸ್ ದೃಶ್ಯ ವೈಭವ ಜೊತೆಗೆ ಮಸ್ತ್ ಡೈಲಾಗ್ಸ್ ಗಳು ನಿಮ್ಮನ್ನು ಹಿಡಿದಿಡಲಿದೆ.

    ಕೆಮೆರಾ ವರ್ಕ್

    ಕೆಮೆರಾ ವರ್ಕ್

    * ಮನೋಹರ್ ಜೋಶಿ ಹಾಗೂ ಸಚಿನ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಹಾಡುಗಳು ಕನ್ನಡ ಚಿತ್ರರಂಗಕ್ಕೆ ಹೊಸತನ ಮೂಡಿಸಿದೆ. ಹಾಡುಗಳನ್ನೇ ಪ್ರತ್ಯೇಕಿಸಿ ವಿಸಿಡಿ ಬಿಟ್ಟರೂ ಅಡ್ಡಿಯಿಲ್ಲ.
    * ಆದರೆ, ಒಂದು ಕ್ಷಣ ಕೂಡಾ ನಾಯಕ ನಾಯಕಿ ಬಿಟ್ಟು ಕೆಮೆರಾ ಬೇರೆಡೆಗೆ ತಿರುಗುವುದಿಲ್ಲ. ಹಲವೆಡೆ ನೆರಳು ಬೆಳಕಿನಾಟ ಕೈ ಕೊಟ್ಟಿದೆ
    * ಸ್ಮೈಲ್ ಏರುವಂತೆ ಸರಾಸರಿ...ಬಾನಲಿ ಬದಲಾಗೋ...ಹಾಗೂ ನನ್ನ ಪ್ರೀತಿ ಕುಸುರಿ ಹಾಡಿಗೆ ಫುಲ್ ಮಾರ್ಕ್ಸ್. ಆದರೆ, ಕರಗಿದ ಬಾನಿನಲ್ಲಿ ಎಫೆಕ್ಟಿವ್ ಆಗಿ ಮೂಡಿ ಬಂದಿಲ್ಲ.

    ಎಲ್ಲಕ್ಕೂ ಸ್ಪಷ್ಟನೆ ಬೇಕಿತ್ತಾ?

    ಎಲ್ಲಕ್ಕೂ ಸ್ಪಷ್ಟನೆ ಬೇಕಿತ್ತಾ?

    * ದೃಶ್ಯಗಳಲ್ಲಿ ಹೇಳಿ ಮುಗಿಸಬಹುದಾದ ವಿಷಯಗಳನ್ನು ಮಾತಿನ ಮೂಲಕ ಹೇಳುವ ಪ್ರಯತ್ನವನ್ನು ಸುನಿ ಮಾಡಿ ಗೆದ್ದಿದ್ದಾರೆ.
    * ಕದ್ದಿರೋ ಟ್ಯೂನ್ ಗೆ ರಚನೆಯ ಬರಿಯಿರಿ...ಯೂಟ್ಯೂಬ್ ನಲ್ಲಿರೋ ವಿಡಿಯೋ ಕದಿಯುವುದು inspiration ಎಂದು ಸಮಜಾಯಿಸಿ ನೀಡಿರುವುದು ಉದ್ದೇಶ ಪೂರ್ವಕವೇ?
    * ಆರ್ ಜೆ ರಚನಾ ಮೈಕ್ ಜೊತೆ ಗಿದ್ದಾಗ ನಟನೆಗಿಂತ ಸಹಜವಾಗಿ ಕಂಡಿದ್ದಾರೆ. ಪ್ರದೀಪ್ ಬಂದು ಮಾತನಾಡಿಸುವ ದೃಶ್ಯ ಅಗತ್ಯವಿತ್ತೆ? ನೇತ್ರಾ ರಜೆ ಪ್ರೇಕ್ಷಕರಿಗೆ ಅನಗತ್ಯ.

    ಎಲ್ಲಕ್ಕೂ ಸ್ಪಷ್ಟನೆ ಬೇಕಿತ್ತಾ?

    ಎಲ್ಲಕ್ಕೂ ಸ್ಪಷ್ಟನೆ ಬೇಕಿತ್ತಾ?

    ಮಂಗಳೂರು ಕಡೆ ಕೈಸ್ತ ಧರ್ಮೀಯ ಚರ್ಚ್ ನೊಳಗೆ ಸಂಸ್ಕೃತದ ಉಕ್ತಿ ವಾಚಿಸುವುದು ಯಾಕೋ? ಕಾಲೇಜು ದಿನಗಳ ಕತೆಯಲ್ಲಿ ಮೂಡಿ ಬರುವ ದೇಗುಲದ ಬಳಿ ದೃಶ್ಯ ಯಾವುದೇ ಭಾವನೆ ಉಕ್ಕಿಸುವುದಿಲ್ಲ. ಎರಡು ಫ್ಲಾಶ್ ಬ್ಯಾಕ್ ನಲ್ಲೂ ನಾಯಕಿ ಒಂದೇ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು ಯಾಕೋ ಗೊತ್ತಿಲ್ಲ.

    ನಾಯಕ, ನಾಯಕಿ ಸೇರಿದಂತೆ ಎಲ್ಲರೂ ಒಂದೇ ದಾಟಿಯಲ್ಲಿ ಮಾತನಾಡುವುದು ಉದ್ದೇಶ ಪೂರ್ವಕ ಇರಬಹುದು.

    ಎಲ್ಲಕ್ಕೂ ಸ್ಪಷ್ಟನೆ ಬೇಕಿತ್ತಾ?

    ಎಲ್ಲಕ್ಕೂ ಸ್ಪಷ್ಟನೆ ಬೇಕಿತ್ತಾ?

    ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರ ತಂಡ ಹೇಳುತ್ತಾ ಬಂದಿತ್ತು. ಅದರಂತೆ ಕಿಟ್ಟಿಗೆ ಒಳ್ಳೆ ರೋಲ್ ಸಿಕ್ಕಿದೆ.ಕಿಟ್ಟಿ ಚಿಕ್ಕದಿರುವುದರಿಂದ ಪ್ರೇಕ್ಷಕರಿಗೆ ಭಗ್ನಪ್ರೇಮಿ ಭ್ರಮೆಯಿಂದ ಬಚಾವ್

    ಒಟ್ಟಾರೆ, ಚಿತ್ರದ ಜೀವಾಳವಾಗಿರುವ ನಾಯಕ ನಾಯಕಿ ನಟನೆ, ಸಂಭಾಷಣೆ, ಛಾಯಾಗ್ರಹಣ, ಸಾಹಿತ್ಯ,ಸಂಗೀತ ಜೊತೆಗೆ ಸಂಕಲನಕಾರರ ಶ್ರಮ ಉಲ್ಲೇಖನಾರ್ಹ. ಸರಿಯಾದ ಎಡಿಟರ್ ಇಲ್ಲದಿದ್ದರೆ ಈ ಚಿತ್ರ ಏನಾಗುತ್ತಿತ್ತು ಎಂದು ವಿವರಿಸ ಬೇಕಾಗಿಲ್ಲ.

    ಪ್ರಥಮ ಚುಂಬನ ದಂತ ಫಳ ಫಳ

    ಪ್ರಥಮ ಚುಂಬನ ದಂತ ಫಳ ಫಳ

    ತಮ್ಮ ಬಳಿ ಇರುವ ಎಲ್ಲಾ ಡೈಲಾಗ್ಸ್ ಗಳನ್ನು ತುರುಕಿರುವ ಸುನಿಗೆ ಸಕ್ಸಸ್ ಆಗುವುದೇ ಇಲ್ಲವೆ ಎಂಬ ಭಯ ಕಾಡಿತ್ತೆ? ಎಲ್ಲವನ್ನು ಒಂದೇ ಚಿತ್ರದಲ್ಲಿ ನೀಡಿ ಮುಂದೆ ಸರಕು ಖಾಲಿ ಮಾಡಿಕೊಂಡು ಭಟ್ಟರ ರೀತಿ ಆಕಾಶವಾಣಿ ಆಗುವ ಆಪಾಯ ಎದುರಾಗದಿರಲಿ.

    ಚಿತ್ರ ತಂಡದ ಪ್ರಯತ್ನಕ್ಕೆ ಪೂರ್ಣ ಅಂಕ. ನಿರೂಪಣೆಗೆ, ಹೊಸತನಕ್ಕೆ, ಹೊಸ ಮುಖಗಳಿಗೆ ಮುಕ್ತ ಸ್ವಾಗತ. ನೂರಕ್ಕೆ 80 ಅಂಕಗಳು ಮಾತ್ರ ಕಳೆದು ಹೋದ 20 ಅಂಕ ತುಂಬಿಸಿ ಪರಿಪೂರ್ಣತೆಯತ್ತ ತಂಡ ಸಾಗಲಿ
    ಪ್ರಥಮ ಚುಂಬನ ದಂತ ಫಳ ಫಳ

    ಪ್ರಥಮ ಚುಂಬನ ದಂತ ಫಳ ಫಳ

    ಚಿತ್ರ ರಿಮೇಕೋ, ಸ್ವಮೇಕೋ ಅದ್ಭುತವೇನಲ್ಲ ಸಿಂಪಲ್ ಆಗಿರೋ 'ಸ್ಟೋರಿ'.. ಈಗ ಬರುತ್ತಿರುವ ರಿಮೇಕ್ ಚಿತ್ರಗಳಿಗಿಂತ ಎಷ್ಟೋ ಪಾಲು ಮೇಲು. ಹಾಲಿವುಡ್ ಚಿತ್ರದ ಸ್ಪೂರ್ತಿಯಾದರೂ ಓಕೆ..

    ಈ ಚಿತ್ರ ನೀಡುವ ಪಂಚ್ ಆ ಚಿತ್ರ ಡಬ್ ಮಾಡಿದರೆ ನೀಡಲಾರದು. ಹೀಗಾಗಿ ಚಿತ್ರದ ಮೂಲಕಥೆಯ ಬಗ್ಗೆ ಮೂಡಿರುವ ಸಂಶಯಗಳು ಚಿತ್ರದ ಓಟಕ್ಕೆ ಬ್ರೇಕ್ ಹಾಕುವುದಂತೂ ಸಾಧ್ಯವಿಲ್ಲ.

    English summary
    Simple aag ondu Love Story Kannada Movie review by a reader. SOLS has more positive points than negative and Very Choosy Kannada audience also liked the movie
    Friday, April 26, 2013, 17:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X