»   » ಟ್ವೀಟ್ ವರದಿ: ಹೊಳೆಯುತ್ತಿದೆ ನಲ್ಲ-ಮಲ್ಲ ಮಾಣಿಕ್ಯ

ಟ್ವೀಟ್ ವರದಿ: ಹೊಳೆಯುತ್ತಿದೆ ನಲ್ಲ-ಮಲ್ಲ ಮಾಣಿಕ್ಯ

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಕ್ಷನ್ ಕಟ್ ಹೇಳಿ ಅಭಿನಯಿಸಿರುವ ಮಾಣಿಕ್ಯ ಚಿತ್ರ ಕಾರ್ಮಿಕ ದಿನಾಚರಣೆಯಂದು ತೆರೆ ಕಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಬೆಂಗಳೂರಿನ ಎಲ್ಲಾ ಮಾಲ್ ಗಳಲ್ಲಿ ಈ ವಾರಾಂತ್ಯದ ಚಿತ್ರದ ಟಿಕೆಟ್ ದೊರೆಯುವುದು ಕಷ್ಟ ಕಷ್ಟ. ನಲ್ಲ ಸುದೀಪ್ ಹಾಗೂ ಮಲ್ಲ ರವಿಚಂದ್ರನ್ ಅವರ ಮೊದಲ ಕಾಂಬಿನೇಷನ್ ಗೆ ಸಿನಿರಸಿಕರು ಸಂಭ್ರಮದ ಜೈಕಾರ ಹಾಕಿದ್ದಾರೆ.

ಸರಿಸುಮಾರು 18 ಕೋಟಿ ರು ಬಂಡವಾಳ ಹೂಡಲಾಗಿರುವ ಬರೋಬ್ಬರಿ 140 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿರುವ ಬಹು ತಾರಾಗಣದ ಈ ರಿಮೇಕ್ ಚಿತ್ರವನ್ನು ಕನ್ನಡ ಪ್ರೇಕ್ಷಕರು ಮೊದಲ ಆಟಕ್ಕೆ ಮೆಚ್ಚಿಕೊಂಡಿದ್ದಾರೆ.

ಈ ಚಿತ್ರವನ್ನು ಎಂ.ಎನ್.ಕುಮಾರ್, ಕಿಚ್ಚ ಕ್ರಿಯೇಷನ್ಸ್ ಹಾಗೂ ಕೊಲ್ಲಾ ಪ್ರವೀಣ್ ಎಂಟರ್ ಟೈನ್ ಮೆಂಟ್ ಜಂಟಿಯಾಗಿ ನಿರ್ಮಿಸಲಾಗಿದೆ. ಈಗಾಗಲೆ ಸ್ಯಾಟಲೈಟ್ ರೈಟ್ಸ್ ನಲ್ಲಿ ಚಿತ್ರದ ಬಜೆಟ್ ನ ನಾಲ್ಕನೇ ಒಂದರಷ್ಟು ವಸೂಲಿಯಾಗಿದೆ. ಬಹು ದಿನಗಳ ನಂತರ ಒಂದೇ ಚಿತ್ರ ಬೆಂಗಳೂರಿನ ಕೆಂಪೇಗೌಡ ರಸ್ತೆಯ ಎರಡು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. 'ಮಾಣಿಕ್ಯ' ಚಿತ್ರದ ಹವಾ ಸಾಮಾಜಿಕ ಜಾಲ ತಾಣಗಳಲ್ಲಿ ಹೇಗಿದೆ ಮುಂದೆ ನೋಡಿ....

ಸಿನಿರಸಿಕರು ಸಂಭ್ರಮದ ಜೈಕಾರ ಹಾಕಿದ್ದಾರೆ
  

ಸಿನಿರಸಿಕರು ಸಂಭ್ರಮದ ಜೈಕಾರ ಹಾಕಿದ್ದಾರೆ

ತೆಲುಗು ಚಿತ್ರರಂಗದ ಯಶಸ್ವಿ ಚಿತ್ರ 'ಮಿರ್ಚಿ' ಯಲ್ಲಿದ್ದ ಖಾರವನ್ನು ಕಡಿಮೆಗೊಳಿಸಿ ರಕ್ತಪಾತಕ್ಕಿಂತ ಪ್ರೀತಿ ಪ್ರೇಮ ಮುಖ್ಯ ಎಂಬ ಸಂದೇಶವುಳ್ಳ ಸುಂದರ ಕೌಟುಂಬಿಕ ಚಿತ್ರವನ್ನಾಗಿಸಲು ಸುದೀಪ್ ಶ್ರಮ ಪಟ್ಟಿದ್ದಾರೆ. ಕನಸುಗಾರ ರವಿಚಂದ್ರನ್ ಅವರು ಮೊದಲ ಬಾರಿಗೆ ಪೋಷಕ ಪಾತ್ರದಲಿ ಅದೂ ಸುದೀಪ್ ಗೆ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಪ್ರೇಕ್ಷಕರಿಗೆ ಒಪ್ಪಿಗೆಯಾಗಿದೆ.

ರಾಜ್ಯದೆಲ್ಲೆಡೆ ನಲ್ಲ-ಮಲ್ಲನ ಮ್ಯಾಜಿಕ್
  

ರಾಜ್ಯದೆಲ್ಲೆಡೆ ನಲ್ಲ-ಮಲ್ಲನ ಮ್ಯಾಜಿಕ್

ಬೆಂಗಳೂರಿನ ಮಲ್ಟಿಪ್ಲೆಕ್ಸ್, ಬಹು ಸ್ಕ್ರೀನ್ ಚಿತ್ರಮಂದಿರಗಳಲ್ಲದೆ ರಾಜ್ಯದ ನೂರಾರು ಚಿತ್ರಮಂದಿರಗಳಲ್ಲಿ ಇಂದು ಮಾಣಿಕ್ಯ ಹೊಳೆಯುತ್ತಿದೆ. ಕಿಚ್ಚ ಸುದೀಪ್ ಅಭಿಮಾನಿಗಳ ಒತ್ತಾಯದ ಮೇರೆಗೆ ಅವಧಿಗೆ ಮುನ್ನ ಪ್ರಥಮ ಪ್ರದರ್ಶನ ಭಾಗ್ಯ ಸಿಕ್ಕಿದೆ.

  

ಬೆಳ್ಳಂಬೆಳ್ಲಗೆ ಶೋ ಹೌಸ್ ಫುಲ್

ರಾಕ್ ಲೈನ್ ಸಿನಿಮಾಸ್ ಸೇರಿದಂತೆ ಹಲವೆಡೆ 7 ಗಂಟೆ ಪ್ರಥಮ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ.

  

ರವಿಚಂದ್ರನ್ ಎಂಟ್ರಿ ಯಾವಾಗ ಗುರೂ

ಇಂಟರ್ವಲ್ ಗೂ ಸ್ವಲ್ಪ ಮುಂಚೆ ರವಿಚಂದ್ರನ್ ಎಂಟ್ರಿ ಆಗುತ್ತದೆ. ಮೊದಲರ್ದದಲ್ಲಿ ಸುದೀಪ್ ಕಥೆ ಹೇಳುವ ರೀತಿ ಪ್ರೇಕ್ಷಕರಿಗೆ ಹಿಡಿಸಿದೆ.

  

ಸುದೀಪ್ ನಿರ್ದೇಶನಕ್ಕೆ ತಲೆದೂಗಿದ ಪ್ರೇಕ್ಷಕ

ಸುದೀಪ್ ನಿರ್ದೇಶನಕ್ಕೆ ತಲೆದೂಗಿದ ಪ್ರೇಕ್ಷಕರ ಮೆಚ್ಚುಗೆಯ ಟ್ವೀಟ್

  

ರಾಜ್ಯದ 200ಕ್ಕೂ ಪ್ಲಸ್ ಚಿತ್ರಮಂದಿರಗಳಲ್ಲಿ

ರಾಜ್ಯದ 200ಕ್ಕೂ ಪ್ಲಸ್ ಚಿತ್ರಮಂದಿರಗಳಲ್ಲಿ ಮಾಣಿಕ್ಯ ಹವಾ ಶುರು

  

ಕೆಜಿ ರಸ್ತೆಯಲ್ಲಿ ಎರಡು ಕಡೆ ಮಾಣಿಕ್ಯ

ಬೆಂಗಳೂರು ಕೆಜಿ ರಸ್ತೆಯಲ್ಲಿ ಎರಡು ಕಡೆ ಮಾಣಿಕ್ಯ ಹೊಳೆಯುತ್ತಿರುವುದು ಸಂತೋಷದ ಸಂಗತಿ

  

ಬೆಂಗಳೂರಿಗೆ ಬಂದ ಚೆನ್ನೈ ಬೆಡಗಿ ವರೂ...

ಬೆಂಗಳೂರಿಗೆ ಬರುವ ಮುಂಚ್ ಟ್ವೀಟ್ ಮಾಡಿದ ವರಲಕ್ಷ್ಮಿ ಶರತ್ ಕುಮಾರ್

  

ಬೆಂಗಳೂರಿನಲ್ಲಿ ಬ್ಲಾಕ್ ಟಿಕೆಟ್ ಮಾರಾಟ

ಬೆಂಗಳೂರಿನಲ್ಲಿ ಟಿಕೆಟ್ ಸಿಗದೆ ಜನ ಎರಡು ಮೂರರಷ್ಟು ಬೆಲೆ ತೆತ್ತು ಟಿಕೆಟ್ ಖರೀದಿಸುತ್ತಿದ್ದಾರೆ. ಬೇಕಾದರೆ ಈ ಟ್ವೀಟ್ ನೋಡಿ

  

ಪ್ರಭಾಸ್ ರೀತಿ ಸುದೀಪ್ ಕೆಲವರಿಗೆ ಕಾಣಿಸಿದ್ದಾರೆ

ಪ್ರಭಾಸ್ ರೀತಿ ಸುದೀಪ್ ಕೆಲವರಿಗೆ ಕಾಣಿಸಿದ್ದಾರೆ ಎಂದು ಟ್ವೀಟ್

  

ಪೈಸಾ ವಸೂಲ್ ಚಿತ್ರ : ಶ್ಯಾಮ್ ಪ್ರಸಾದ್

ಇಂಟರ್ ವ್ಯೂಗೂ ಮುನ್ನವೇ ಪೈಸಾ ವಸೂಲ್ ಚಿತ್ರ ಎಂದು ಪತ್ರಕರ್ತ ಶ್ಯಾಮ್ ಪ್ರಸಾದ್ ಟ್ವೀಟ್

English summary
Maanikya - Movie First Day First show Twitter report: It's time for the Kannada audience to buck up for Abhinaya Chakravarthy Kiccha Sudeep's directorial venture Maanikya. The movie slated for Ugadi Festival release is finally hitting silver screen on May 1, 2014, May Day.
Please Wait while comments are loading...

Kannada Photos

Go to : More Photos