twitter
    For Quick Alerts
    ALLOW NOTIFICATIONS  
    For Daily Alerts

    'ಕಬಾಲಿ' ಕಣ್ತುಂಬಿಕೊಂಡ ವಿಮರ್ಶಕರು ಮಾಡಿದ ಕಾಮೆಂಟ್ ಏನು.?

    By Harshitha
    |

    ''ಕಬಾಲಿ' ರಜನಿಕಾಂತ್ ಸಿನಿಮಾ ಅಲ್ಲ, ರಂಜಿತ್ ಸಿನಿಮಾ'' - ಇದು ಇಂದಿನ ಎಲ್ಲಾ ದಿನ ಪತ್ರಿಕೆಗಳಲ್ಲೂ ಕಾಮನ್ ಆಗಿ ಕಂಡು ಬಂದಿರುವ ಸಾಲು.

    'ಕಬಾಲಿ' ಚಿತ್ರಕ್ಕೆ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಂತ, 'ಕಬಾಲಿ' ಸಿನಿಮಾ ಚೆನ್ನಾಗಿಲ್ಲ ಅಂತ ಯಾರೂ ಹೇಳ್ತಿಲ್ಲ. ರಜನಿ ಆಕ್ಟಿಂಗ್ ಬಗ್ಗೆ ತುಟಿ ಎರಡು ಮಾಡುವವರೂ ಇಲ್ಲ. ಆದ್ರೆ, ರಜನಿ ಇಮೇಜ್ ಗೆ ತಕ್ಕಂತೆ 'ಕಬಾಲಿ' ಮೂಡಿ ಬಂದಿಲ್ಲ ಎಂಬುದೇ ಎಲ್ಲರ ಬೇಸರ.

    ಟ್ರೈಲರ್ ನಲ್ಲಿ ಒಂದು ತರಹ ಬಿಲ್ಡಪ್ ಕೊಟ್ಟು, ಚಿತ್ರವನ್ನ ಬೇರೆ ತರಹ ಚಿತ್ರೀಕರಿಸಿರುವುದಕ್ಕೆ ಪ್ರೇಕ್ಷಕರ ಜೊತೆ ವಿಮರ್ಶಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. [ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

    ಹಾಗಾದ್ರೆ ಬನ್ನಿ, 'ಕಬಾಲಿ' ಚಿತ್ರದ ಬಗ್ಗೆ ಕರ್ನಾಟಕದ ಖ್ಯಾತ ದಿನ ಪತ್ರಿಕೆಗಳು ನೀಡಿರುವ ವಿಮರ್ಶೆಗಳತ್ತ ಒಮ್ಮೆ ಕಣ್ಣಾಡಿಸೋಣ....

    ನಿರೀಕ್ಷೆಯ ಭಾರಕ್ಕೆ ನಲುಗಿದ ಕೃತಿ - ಪ್ರಜಾವಾಣಿ

    ನಿರೀಕ್ಷೆಯ ಭಾರಕ್ಕೆ ನಲುಗಿದ ಕೃತಿ - ಪ್ರಜಾವಾಣಿ

    ದೇಸಿ ಶೈಲಿಯಲ್ಲಿ ಸೂಪರ್‌ಸ್ಟಾರ್‌ ಗಿರಿ ಪ್ರಕಟಪಡಿಸುವ ಮೂಲಕವೇ ದಶಕಗಳಿಂದ ಛಾಪು ಮೂಡಿಸಿರುವ ರಜನಿಕಾಂತ್ ‘ಕಬಾಲಿ' ಸಿನಿಮಾದಲ್ಲಿ ನಿರ್ದೇಶಕರಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅವರ ಹಳೆಯ ಶೈಲಿಯ ದೇಸಿ ‘ಖದರ್' ನಾಪತ್ತೆ. ಸೂಟು-ಬೂಟುಗಳ ನಾಜೂಕು ಗ್ಯಾಂಗ್ ಸ್ಟರ್‌ ಆಗಿ ಅವರು ಇಡೀ ಸಿನಿಮಾವನ್ನು ತಣ್ಣಗೆ ಆವರಿಸಿಕೊಂಡಿದ್ದಾರೆ. ಅವರ ಕಟ್ಟಾ ಅಭಿಮಾನಿಗಳಿಗೆ ಇಂಥ ಅತಿ ನಾಜೂಕು ಪೋಷಾಕು, ವ್ಯಕ್ತಿತ್ವವನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾದೀತು. ಇದನ್ನು ಕೊರತೆ ಎಂದು ಮನಗಂಡಂತೆ ಆಗೀಗ ಸಂಭಾಷಣೆಯ ಚಾಟಿ ಏಟನ್ನು ರಜನಿಕಾಂತ್ ಕೈಯಿಂದ ಕೊಡಿಸಿದ್ದಾರೆ. ಅದನ್ನೇ ಮನರಂಜನೆ ಎಂದು ಭಾವಿಸಬೇಕು - ವಿಶಾಖ.ಎನ್ [ಟ್ವಿಟ್ಟರ್ ವಿಮರ್ಶೆ: ರಜನಿ ಓಕೆ ಆದ್ರೆ 'ಕಬಾಲಿ' ಅಷ್ಟಕಷ್ಟೆ.!]

    ಇಮೇಜ್ ಬಿಟ್ಟು ನಟಿಸಿದ ಸೂಪರ್ ಸ್ಟಾರ್ - ವಿಜಯ ಕರ್ನಾಟಕ

    ಇಮೇಜ್ ಬಿಟ್ಟು ನಟಿಸಿದ ಸೂಪರ್ ಸ್ಟಾರ್ - ವಿಜಯ ಕರ್ನಾಟಕ

    ಮೊದಲಿಗೆ ಒಂದು ಮಾತು. 'ಶಿವಾಜಿ', 'ರೋಬೋ' ಹ್ಯಾಂಗೋವರ್ ನಲ್ಲಿದ್ದುಕೊಂಡೇ 'ಕಬಾಲಿ' ನೋಡಬೇಡಿ. ಬೇಕಿದ್ದರೆ ರಜನಿಯ ಹಳೆಯ ಚಿತ್ರಗಳೆಲ್ಲವನ್ನೂ ಮರೆತು ಥಿಯೇಟರ್ ಗೆ ಹೋಗಿ. ಆಗ ಸಿಗೋ ಕಿಕ್ಕೇ ಬೇರೆ. ಯೆಸ್. 'ಕಬಾಲಿ' ಕೊಂಚ ವಿಭಿನ್ನ. ಶಿವಾಜಿ ಸ್ಟೈಲ್, ರೋಬೋ ಕ್ರಿಯೇಟಿವಿಟಿ ಮನಸ್ಸಿನಲ್ಲಿಟ್ಟುಕೊಂಡು ನೋಡಿದರೆ ನಿರಾಶೆ ಪಕ್ಕಾ. ಕಾರಣವಿಷ್ಟೇ, ಅದು ರಜನಿ ಸಿನಿಮಾ ಅಲ್ಲ. ಹುಡುಕಿದರೂ ಸೂಪರ್ ಸ್ಟಾರ್ ಸಿಗುವುದಿಲ್ಲ. ಹಾಗಿದ್ದರೆ ಏನು? ಒಂದೇ ಲೈನ್ ನಲ್ಲಿ ಹೇಳಬೇಕಾದರೆ 'ಕಬಾಲಿ ಬ್ರದರ್ ಆಫ್ ಲಿಂಗಾ.' - ಪಿ.ಕೆ.ಚನ್ನಕೃಷ್ಣ

    ಬದಲಾದ ರಜನಿ ಗಂಧ - ಕನ್ನಡ ಪ್ರಭ

    ಬದಲಾದ ರಜನಿ ಗಂಧ - ಕನ್ನಡ ಪ್ರಭ

    ಈ ಸಿನಿಮಾ ನೋಡಿ ಬಂದವರು ಮೊದಲು ಹೊಗಳುವುದು ನಂತರ ಬಯ್ದುಕೊಳ್ಳುವುದು ಒಬ್ಬರನ್ನೇ. ಅದು ಚಿತ್ರದ ಟ್ರೈಲರ್ ಕಟ್ ಮಾಡಿದವರನ್ನು. ಹೊಗಳುವುದಕ್ಕೆ ಕಾರಣ, ಇಂಥ ಬೋರಿಂಗ್ ಚಿತ್ರಕ್ಕೂ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡುವಂತೆ ಟ್ರೈಲರ್ ಮಾಡಿದ್ದಕ್ಕೆ. ನಂತರ ಬಯ್ಯುವುದಕ್ಕೂ ಕಾರಣ, ಅದೇ ಟ್ರೈಲರ್ ಮೂಲಕ ಕುತೂಹಲ ಹುಟ್ಟಿಸಿ ಚಿತ್ರಮಂದಿರಕ್ಕೆ ಹೋಗುವಂತೆ ಮಾಡಿದ್ದಕ್ಕೆ. ಅಲ್ಲಿಗೆ 'ಕಬಾಲಿ' ಹೇಗಿದೆ ಎನ್ನುವ ಎರಡ್ಮೂರು ವಾರಗಳ ಯಕ್ಷಪ್ರಶ್ನೆಗೆ ಖಚಿತ ಉತ್ತರ ಸಿಕ್ಕಿದೆ ಅಂದುಕೊಳ್ಳುತ್ತೇವೆ. - ಆರ್.ಕೇಶವಮೂರ್ತಿ

    ಮಾಸ್ ಮಾಂತ್ರಿಕನ ಕ್ಲಾಸ್ ಸಿನಿಮಾ - ವಿಜಯವಾಣಿ

    ಮಾಸ್ ಮಾಂತ್ರಿಕನ ಕ್ಲಾಸ್ ಸಿನಿಮಾ - ವಿಜಯವಾಣಿ

    ರಜನಿಯ ರಂಜನೀಯ ಮ್ಯಾನರಿಸಂಗಳಿಗೆ 'ಕಬಾಲಿ'ಯಲ್ಲಿ ಮೂಟೆ ಕಟ್ಟಲಾಗಿದೆ. ಅಷ್ಟಾಗಿಯೂ ಶರ್ಟ್ ನ ತೋಳಿನಿಂದ ರಾಡು, ಗನ್ ತೂರಿಬಂದಾಗ ಪ್ರೇಕ್ಷಕರಿಂದ ಶಿಳ್ಳೆಗಳು ಮಿಸ್ ಆಗಲ್ಲ. ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗುವ ರಜನಿ, ಪಂಚಿಂಗ್ ಡೈಲಾಗ್ ಹೊಡೆಯುವಾಗ ಫುಲ್ ಮಿಂಚಿಂಗ್. ಮೊದಲ ಬಾರಿ ಮಗಳನ್ನು ಕಂಡಾಗ ಅವರ ಸಂಭ್ರಮ, ಬಹಳ ದಿನಗಳ ನಂತರ ಹೆಂಡತಿ ನೋಡಲು ಅವರು ಚಡಪಡಿಸುವ ರೀತಿಯನ್ನು ನೋಡಿಯೇ ಆನಂದಿಸಬೇಕು. ಆರಂಭದ 20 ನಿಮಿಷ ಫುಲ್ ಜೋಶ್ ನಿಂದ ಸಾಗುವ ಚಿತ್ರ, ನಂತರ ನಿಧಾನಗತಿ ಮೊರೆ ಹೋಗುತ್ತದೆ. - ಅವಿನಾಶ್.ಜಿ.ರಾಮ್

    An unsatisfying clash between the impulses of star and Director - The Hindu

    An unsatisfying clash between the impulses of star and Director - The Hindu

    Remove the Malaysian-Tamil setting, and Kabali plays like... a Rajinikanth movie. A revenge drama. It would be silly to expect grime and grit in a mega-budget Superstar movie whose seemingly endless pre-release publicity has spanned the earth to the sky (courtesy, Air Asia), but given that Pa. Ranjith is behind the camera, there is a sense of a letdown. It's as though, given the biggest stage of his still-young career, the director went up before the audience and got a severe case of the jitters. - Baradwaj Rangan

    Rajinikanth's Film lacks pace and mass - The Indian Express

    Rajinikanth's Film lacks pace and mass - The Indian Express

    We have seen many movies in the past which couldn't measure up to the vaulting hype around their release, and Kabali makes it to the list as well. What Kabali lacks is pace and mass, an unwanted trait in many Rajinikanth movies of late. Director Pa Ranjith appears to be affected by the pressure of handling superstar Rajinikanth and fails to find the right balance between his filming style and Rajinikanth's larger-than-life screen persona. Thus the film is enjoyable in parts but tests your patience at many points and falls just short of a great cinematic experience. - Goutham VS

    There's nothing Rajni Can't - Bangalore Mirror

    There's nothing Rajni Can't - Bangalore Mirror

    Conventional metrics for reviewing films need to be ditched for those starring Rajnikanth. The 64-year-old actor's enviable filmography and superhuman persona ensure his very screen sighting is a cause for celebration. That said, this one manages to hold your attention and interest for quite some time - provided you don't scope for logic or question why multiple bullets couldn't punch life out of the superstar in question.

    Kabali Review - Times of India

    Kabali Review - Times of India

    Though, with Kabali, most of the audiences were expecting a 'Ranjith film which has Rajini', it is the Superstar, like in most of his previous films, who carries the entire film in his shoulders, even though other actors shine in their respective roles. His scores of fans, needless to say, are in for a treat, watching him in, probably, the most stylish and dapper avatar in his recent outings. His majestic screen presence and the fast movements in intense sequences make the film watchable. Radhika, who has been cast opposite him is apt and their chemistry, their combination scenes, though only few, are convincing. Watching Yogi (Dhansikaa) is a delight, given her stylish makeover and ease in fight sequences. The climax of the film, however, is something that one least expects from a Rajini film. Just when viewers erupt with joy, with Thalaivar finishing off the baddies in style, there comes an unconventional twist. - Thinkal Menon

    English summary
    Super Star Rajinikanth starrer Tamil Movie 'Kabali' has received mixed response from the critics. Here is the collection of 'Kabali' reviews by Top News Papers of Karnataka.
    Saturday, July 23, 2016, 13:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X