twitter
    For Quick Alerts
    ALLOW NOTIFICATIONS  
    For Daily Alerts

    ಸಲ್ಮಾನ್ 'ಟ್ಯೂಬ್ ಲೈಟ್' ಪ್ರಭಾವ ಹೆಚ್ಚು, ಪ್ರಕಾಶ ಕಡಿಮೆ

    By Naveen
    |

    ಪ್ರತಿ ವರ್ಷದಂತೆ ಈ ವರ್ಷವೂ ಸಲ್ಮಾನ್ ಖಾನ್ ಈದ್ ಹಬ್ಬಕ್ಕೆ ತಮ್ಮ ಸಿನಿಮಾವನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ 'ಟ್ಯೂಬ್ ಲೈಟ್' ಇಂದು ತೆರೆಗೆ ಬಂದಿದೆ. 1962ರಲ್ಲಿ ನಡೆದ ಸೈನೋ-ಇಂಡಿಯನ್ ಯುದ್ಧದ ಹಿನ್ನೆಲೆಯ ಚಿತ್ರ ಇದಾಗಿದೆ. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದ ಸಲ್ಮಾನ್ 'ಟ್ಯೂಬ್ ಲೈಟ್' ಸಿನಿಮಾ ಪ್ರೇಕ್ಷಕರಿಗೆ ಕೊಂಚ ನಿರಾಸೆ ಮೂಡಿಸಿದೆ.

    Rating:
    2.0/5

    ಚಿತ್ರ: ಟ್ಯೂಬ್ ಲೈಟ್
    ನಿರ್ಮಾಣ: ಸಲ್ಮಾನ್ ಖಾನ್
    ಕಥೆ, ನಿರ್ದೇಶನ: ಕಬೀರ್ ಖಾನ್
    ಸಂಗೀತ: ಪ್ರೀತಮ್
    ಸಂಕಲನ: ರಾಮೇಶ್ವರ್ ಎಸ್.ಭಗತ್
    ತಾರಾಗಣ: ಸಲ್ಮಾನ್ ಖಾನ್, ಸೊಹೈಲ್ ಖಾನ್, ಝು ಝು (zhu zhu), ಮಾಟಿನ್ ರೇ ಟ್ಯಾಂಗ್, ಲೇಟ್, ಓಂ ಪುರಿ, ಮೊಹಮ್ಮದ್ ಝೀಶನ್ ಆಯುಬ್ ಮತ್ತು ಇತರರು.
    ಬಿಡುಗಡೆ ದಿನಾಂಕ: ಜೂನ್ 23

    ಅಣ್ಣ-ತಮ್ಮನ ಭಾವನಾತ್ಮಕ ಕಥೆ

    ಅಣ್ಣ-ತಮ್ಮನ ಭಾವನಾತ್ಮಕ ಕಥೆ

    ಲಕ್ಷ್ಮಣ್ ಕುಮಾರ್ (ಸಲ್ಮಾನ್ ಖಾನ್) ಮತ್ತು ಸಹೋದರ ಭರತ್ (ಸೊಹೈಲ್ ಖಾನ್) ಇಬ್ಬರ ಜೀವನದ ಮೇಲೆ ಸಾಗಿದೆ. ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿ ಕಳೆದುಕೊಂಡ ಈ ಅಣ್ಣ-ತಮ್ಮಂದಿರು ಒಬ್ಬರಿಗೊಬ್ಬರು ಅವಲಂಬಿತರಾಗಿರುತ್ತಾರೆ. ಮುಂದೆ ತಮ್ಮ ಭರತ್ ಗೆ (ಸೊಹೈಲ್ ಖಾನ್) ಇಂಡಿಯನ್ ಆರ್ಮಿಯಲ್ಲಿ ಕೆಲಸ ಸಿಗುತ್ತೆ. ಭಾರತ ಮತ್ತು ಚೀನಾ ನಡುವಿನ ಸೈನೋ-ಇಂಡಿಯನ್ ಯುದ್ಧದಲ್ಲಿ ಭರತ್ ಭಾಗಿಯಾಗಿರುತ್ತಾರೆ. ಇದೇ ಸಮಯದಲ್ಲಿ ನಾಯಕಿ ಝು ಝು (zhu zhu) ಎಂಟ್ರಿ ಸಹ ಆಗುತ್ತೆ. ಅತ್ತ ಯುದ್ಧ ಮಾಡುವುದರಲ್ಲಿ ನಿರತನಾಗಿದ್ದ ಭರತ್ ಅಲ್ಲಿಂದ ಕಾಣೆಯಾಗಿರುವ ವಿಷಯ ಅಣ್ಣನಿಗೆ ತಿಳಿಯುತ್ತದೆ. ನಂತರ ಅಣ್ಣ ಕಾಣೆಯಾದ ತಮ್ಮನನ್ನು ಹುಡುಕುವುದಕ್ಕೆ ಮುಂದಾಗುತ್ತಾನೆ. ಆಮೇಲೆ ಏನಾಯ್ತು, ಭರತ್ ಏನಾದ? ಎಂಬುದು ಕಥಾ ಹಂದರ.

    ಸಲ್ಮಾನ್ ನಟನೆ ಸೂಪರ್

    ಸಲ್ಮಾನ್ ನಟನೆ ಸೂಪರ್

    ಸಲ್ಮಾನ್ ಖಾನ್ ಇಲ್ಲಿ ಲಕ್ಷ್ಮಣ್ ಕುಮಾರ್ ಎಂಬ ಮುಗ್ಧ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹುಡುಗನ ಅಡ್ಡ ಹೆಸರೇ 'ಟ್ಯೂಬ್ ಲೈಟ್'. ಏನು ತಿಳಿಯದ ಮಕ್ಕಳ ಮನಸ್ಸಿನ ಹುಡುಗನಾಗಿರುವ ಆ ಪಾತ್ರವನ್ನು ಸಲ್ಮಾನ್ ಚೆನ್ನಾಗಿ ನಿಭಾಯಿಸಿದ್ದಾರೆ. ಆದ್ರೆ, ಒಬ್ಬ ಆಕ್ಷನ್ ಹೀರೋ ಸಲ್ಮಾನ್ ಅವರನ್ನು ಆ ಪಾತ್ರದಲ್ಲಿ ಒಪ್ಪಿಕೊಳ್ಳುವುದು ಅವರ ಅಭಿಮಾನಿಗಳಿಗೆ ಕಷ್ಟ ಆಗಬಹುದು.

    ನಿಧಾನಗತಿಯ ನಿರೂಪಣೆ

    ನಿಧಾನಗತಿಯ ನಿರೂಪಣೆ

    ಸಿನಿಮಾ ನೋಡಿದ ಅನೇಕರ ಆರೋಪ ಚಿತ್ರದ ನಿರೂಪಣೆಯ ಬಗ್ಗೆ ಇದೆ. ಅಣ್ಣ-ತಮ್ಮಂದಿರ ಜೀವನವನ್ನು ಹೇಳುವ ಈ ಕಥೆಯ ನಿರೂಪಣೆ ಬಹಳ ನಿಧಾನವಾಗಿದ್ದು, ನೋಡುಗರಿಗೆ ಸ್ವಲ್ಪ ಬೋರ್ ಎನಿಸುತ್ತದೆ.

    ನಿರ್ದೇಶನ ಹೇಗಿದೆ?

    ನಿರ್ದೇಶನ ಹೇಗಿದೆ?

    ನಿರ್ದೇಶಕ ಕಬೀರ್ ಖಾನ್ ಈ ಚಿತ್ರವನ್ನು ತಮ್ಮ ರೆಗ್ಯೂಲರ್ ಸ್ಟೈಲ್ ನಲ್ಲಿಯೇ ತೆರೆ ಮೇಲೆ ತಂದಿದ್ದಾರೆ. ಪ್ರತಿ ಸಿನಿಮಾದಲ್ಲಿಯೂ ದೇಶ-ದೇಶಗಳ ನಡುವಿನ ಬಾಂದವ್ಯ, ಯುದ್ಧ, ಗಡಿವಿವಾದ, ವಿಷಯಗಳ ಬಗ್ಗೆ ಹೇಳುವ ನಿರ್ದೇಶಕರು ಇಲ್ಲಿಯೂ ಅದೇ ರೀತಿಯ ಕಥೆ ಹೇಳಿದ್ದಾರೆ.

    ಉಳಿದವರ ಪಾತ್ರ ಹೇಗಿದೆ?

    ಉಳಿದವರ ಪಾತ್ರ ಹೇಗಿದೆ?

    ಸಲ್ಮಾನ್ ರಿಯಲ್ ಸಹೋದರ ಸೊಹೈಲ್ ಖಾನ್ ಚಿತ್ರದಲ್ಲಿ ಅವರ ತಮ್ಮನಾಗಿದ್ದಾರೆ. ಇಬ್ಬರ ಕಾಂಬಿನೇಶನ್ ಸಹಜವಾಗಿ ಮೂಡಿಬಂದಿದೆ. ಚೀನಿ ನಾಯಕಿ ಝು ಝು (zhu zhu) ಅನೇಕ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ನಟ ಓಂ ಪುರಿ ಸಹ ತಮ್ಮ ಪಾತ್ರವನ್ನು ಹಚ್ಚುಕಟ್ಟಾಗಿ ಮಾಡಿದ್ದಾರೆ. ವಿಶೇಷ ಪಾತ್ರದಲ್ಲಿ ಶಾರೂಖ್ ಖಾನ್ ಹೀಗೆ ಬಂದು ಹಾಗೆ ಹೋಗುತ್ತಾರೆ.

    ತಾಂತ್ರಿಕವಾಗಿ ಸಿನಿಮಾ ಹೇಗಿದೆ?

    ತಾಂತ್ರಿಕವಾಗಿ ಸಿನಿಮಾ ಹೇಗಿದೆ?

    ಸಿನಿಮಾ ತಾಂತ್ರಿಕವಾಗಿ ಚೆನ್ನಾಗಿದೆ. ಮೇಕಿಂಗ್ ಸಿನಿಮಾದ ಹೈಲೈಟ್ ಗಳಲ್ಲಿ ಒಂದು. ಪ್ರೀತಮ್ ಸಂಗೀತದ 'ರೇಡಿಯೋ ಹಾಡು' ಬಿಟ್ಟರೆ ಬೇರೆ ಯಾವ ಹಾಡು ಪ್ರೇಕ್ಷಕರು ಕಿವಿಯಲ್ಲಿ ಕೂರುವುದಿಲ್ಲ.

    ಕೊನೆಯ ಮಾತು

    ಕೊನೆಯ ಮಾತು

    'ಟ್ಯೂಬ್ ಲೈಟ್' ಚಿತ್ರದ ಕಥಾವಸ್ತು ತುಂಬ ಚೆನ್ನಾಗಿದೆ. ಅದನ್ನು ಸಿನಿಮಾವಾಗಿ ತೋರಿಸುವಲ್ಲಿ ನಿರ್ದೇಶಕರು ಕೊಂಚ ಎಡವಿದ್ದಾರೆ. ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಸಿನಿಮಾ ಸ್ವಲ್ಪ ಬೇಜಾರು ಮೂಡಿಸಬಹುದು. ಆದ್ರೆ, ಸಿನಿಮಾದ ಎಮೋಷನಲ್ ಅಂಶಗಳಿಂದಾಗಿ ಒಮ್ಮೆ ಸಿನಿಮಾ ನೋಡುವುದಕ್ಕೆ ತೊಂದರೆ ಇಲ್ಲ.

    English summary
    Salman Khan Starrer 'Tubelight' Movie has hit the screens today (june 23). The Movie is family Entertainer. But it is a bit Disappointing for the Salman Fans. ''Tubelight' Review is here.
    Friday, June 23, 2017, 11:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X