»   » ಉಳಿದವರು ಕಂಡಂತೆ ಸೂಪರ್ : ಟ್ವಿಟ್ಟರ್ ಅಭಿಮತ

ಉಳಿದವರು ಕಂಡಂತೆ ಸೂಪರ್ : ಟ್ವಿಟ್ಟರ್ ಅಭಿಮತ

Posted by:
Subscribe to Filmibeat Kannada

ಯಾವುದೇ ಗಿಮ್ಮಿಕ್ಕು, ಅಬ್ಬರದ ಪ್ರಚಾರವಿಲ್ಲದೆ ಚಿತ್ರರಸಿಕರಲ್ಲಿ ಕುತೂಹಲ ಕೆರಳಿಸಿರುವ ಚಿತ್ರ ರಕ್ಷಿತ್ ಶೆಟ್ಟಿ ರಚಿಸಿ, ನಟಿಸಿ, ನಿರ್ದೇಶಿಸಿರುವ 'ಉಳಿದವರು ಕಂಡಂತೆ ಚಿತ್ರದ ಟಿಕೆಟ್ ಎಲ್ಲೆಡೆ ಸೋಲ್ಡ್ ಔಟ್ ಆಗಿರುವ ಸುದ್ದಿ ಬಂದಿದೆ. ರಾಜ್ಯದೆಲ್ಲೆಡೆ ಸುಮಾರು 100 ಕ್ಕೂ ಚಿತ್ರಮಂದಿರಗಳಲ್ಲಿ ಶುಕ್ರವಾರ ತೆರೆ ಕಂಡಿರುವ ಚಿತ್ರದ ಓಪನಿಂಗ್ ಬಗ್ಗೆ ಗಾಂಧಿನಗರ ಕೂಡಾ ಅಭಿಮಾನಿಗಳಷ್ಟೇ ಕುತೂಹಲ ತಾಳಿದೆ.

ಕರ್ನಾಟಕದ ತೆಗೆ ಹೊರ ರಾಜ್ಯ, ವಿದೇಶಗಳಲ್ಲಿನ ಕನ್ನಡಿಗರ ಮುಂದೆಯೂ ಚಿತ್ರ ಬರುತ್ತಿದೆ.ಈ ಚಿತ್ರದಲ್ಲಿನ ಒಂದು ಕೋಲ್ಡ್ ಬ್ಲಡ್ಡೆಡ್ ವಾರ್ ಇರಬಹುದು, ಸೆಂಟಿಮೆಂಟ್ ಆಗಿರಬಹುದು, ಮನಸ್ಸಿಗೆ ಹಿತವಾದ ಹೃದಯಂಗಮ ಸನ್ನಿವೇಶಗಳಿರಬಹುದು ಹೀಗೆ ಚಿತ್ರವನ್ನು ಎಲ್ಲಾ ಕಮರ್ಷಿಯಲ್ ಅಂಶಗಳಿಂದಲೂ ತೆರೆಗೆ ತಂದಿದ್ದೇವೆ. ಸಿನಿಮಾ ನೋಡುತ್ತಿದ್ದಷ್ಟು ಹೊತ್ತೂ ಇದು ನಿಮ್ಮದೇ ಕಥೆ ಎನ್ನಿಸುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ. ಇದೊಂದು ಅತ್ಯುತ್ತಮ ಪ್ರಯೋಗಾತ್ಮಕ ಸಿನಿಮಾ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಸಿಂಪಲ್ ಸುನಿ..

ಉಳಿದವರು ಕಂಡಂತೆ ಚಿತ್ರ ಈಗಾಗಲೇ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹವಾ ಎಬ್ಬಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಟ್ವೀಟ್ ವಿಮರ್ಶೆಗಳ, ಅಭಿಪ್ರಾಯ, ಅನಿಸಿಕೆಗಳನ್ನು ನೇರವಾಗಿ ನಿಮ್ಮ ಮುಂದಿಡಲಾಗುತ್ತಿದೆ.. ತಪ್ಪದೇ ನೋಡಿ.. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಈ ಚಿತ್ರದ ವಿಶೇಷತೆ ಬಗ್ಗೆ ರಕ್ಷಿತ್ ಮಾತುಗಳು
  

ಈ ಚಿತ್ರದ ವಿಶೇಷತೆ ಬಗ್ಗೆ ರಕ್ಷಿತ್ ಮಾತುಗಳು

ಚಿತ್ರದ ಟ್ರೇಲರ್ ಈಗಾಗಲೇ ಬಹಳಷ್ಟು ಮಂದಿಗೆ ಇಷ್ಟವಾಗಿದೆ. ಟ್ರೇಲರ್ ಇಷ್ಟವಾದವರಿಗೆ ಚಿತ್ರವೂ ಖಂಡಿತ ಇಷ್ಟವಾಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಚಿತ್ರದ ಹಾಡುಗಳು. ಅಜನೀಶ್ ಲೋಕನಾಥ್ ಅವರ ಸಂಗೀತದ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿವೆ. ಹಿನ್ನೆಲೆ ಸಂಗೀತ ಚಿತ್ರದ ಪ್ರಮುಖ ಪಾತ್ರ ವಹಿಸಲಿದೆ.

ಇದು ಎಲ್ಲಾ ವರ್ಗದ ಪ್ರೇಕ್ಷಕರಿಗಾಗಿ
  

ಇದು ಎಲ್ಲಾ ವರ್ಗದ ಪ್ರೇಕ್ಷಕರಿಗಾಗಿ

ಈ ಚಿತ್ರ ಮಲ್ಟಿಫ್ಲೆಕ್ಸ್ ಆಡಿಯನ್ಸ್ ಗೆ ಅಷ್ಟೇ ಅಲ್ಲ. ಎಲ್ಲಾ ರೀತಿಯ ಆಡಿಯನ್ಸ್ ಗೂ ಇಷ್ಟವಾಗುತ್ತದೆ. ಕೇವಲ ಮನರಂಜನೆ ಬಯಸುವವರಿಗೂ, ಅದೇ ರೀತಿ ಸೂಕ್ಷ್ಮ ಮನಸ್ಸಿನ ಪ್ರೇಕ್ಷಕರಿಗೂ ಚಿತ್ರ ಖಂಡಿತ ಇಷ್ಟವಾಗುತ್ತದೆ. ಚಿತ್ರವನ್ನು ಒಮ್ಮೆ ನೋಡಿದರೆ ಒಂದು ತರಹ, ಇನ್ನೊಮ್ಮೆ ನೋಡಿದರೆ ಇನ್ನೊಂದು ಭಾವ, ಮತ್ತೆ ಮತ್ತೆ ನೋಡಿದರೆ ಬೇರೆ ಬೇರೆ ಅನುಭನ ನಿಮ್ಮದಾಗುತ್ತದೆ.

  

ಎಲ್ಲೆಡೆಯಿಂದ ಟಿಕೆಟ್ ಸೋಲ್ಡ್ ಔಟ್ ಸುದ್ದಿ

ಎಲ್ಲೆಡೆಯಿಂದ ಟಿಕೆಟ್ ಸೋಲ್ಡ್ ಔಟ್ ಸುದ್ದಿ ಬರುತ್ತಿದೆ

  

ಸಿಂಕ್ ಸೌಂಡ್ ಬಳಕೆ ಬಗ್ಗೆ ಪ್ರಶಂಸೆ

ಲಗಾನ್ ನಂತರ ನೇರ ಡಬ್ಬಿಂಗ್ ವಿಧಾನ ಸಿಂಕ್ ಸೌಂಡ್ ತಂತ್ರಜ್ಞಾನ ಬಳಸಿದ ಚಿತ್ರ ಎಂಬ ಹೆಗ್ಗಳಿಕೆ. ಈ ಮುಂಚೆ ಕನ್ನಡದ ಚಿತ್ರ ಶಾಪ ದಲ್ಲಿ ಈ ಪ್ರಯೋಗ ಮಾಡಲಾಗಿತ್ತು.

  

ಪಕ್ಕದ ರಾಜ್ಯಗಲ್ಲೂ ಉಳಿದವರು ಕಂಡಂತೆ

ಪಕ್ಕದ ರಾಜ್ಯಗಲ್ಲೂ ಉಳಿದವರು ಕಂಡಂತೆ ಇಂದೇ ಬಿಡುಗಡೆ ಕಾಣುತ್ತಿದೆ. ಮುಂಬೈ, ಚೆನ್ನೈ, ಕೊಚ್ಚಿಯಲ್ಲೂ ಚಿತ್ರ ವೀಕ್ಷಿಸಬಹುದು

  

ಉಳಿದವರು ಕಂಡಂತೆ FDFS ದೃಶ್ಯ ಹೀಗಿದೆ

ಬೆಂಗಳೂರಿನ ತ್ರಿಭುವನ್ ಚಿತ್ರಮಂದಿರದ ಫಸ್ಟ್ ಡೇ ಫಸ್ಟ್ ಶೋ ದೃಶ್ಯ

  

ಫೈಟ್ ಕೂಡಾ ಕಲಾತ್ಮಕವಾಗಿ ಮೂಡಿ ಬಂದಿದೆ

ಈ ಚಿತ್ರದಲ್ಲಿ ಫೈಟ್ ಕೂಡಾ ಕಲಾತ್ಮಕವಾಗಿ ಮೂಡಿ ಬಂದಿದೆ. ಗೌರೀಶ್ ಅಕ್ಕಿ ಹಾಗೂ ಶೀತಲ್ ಶೆಟ್ಟಿ ಜರ್ನಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ

  

ಬಾ ಬಾರೊ ಬಾರೋ ರಣಧೀರ ಹುಲಿ ಡ್ಯಾನ್ಸ್

ಬಾ ಬಾರೊ ಬಾರೋ ರಣಧೀರ ಹುಲಿ ಡ್ಯಾನ್ಸ್ ಸೂಪರ್ ಸಂಯೋಜನೆ ಪ್ರೇಕ್ಷಕರು ಸಿಳ್ಳೆ ಹೊಡೆದು ಕುಪ್ಪಳಿಸುತ್ತಿದ್ದಾರೆ.

  

ಮಧ್ಯಂತರದ ತನಕ ಸಕತ್ ಮಜಾ ನೀಡಿದೆ

ಮಧ್ಯಂತರದ ತನಕ ಸಕತ್ ಮಜಾ ನೀಡಿದೆ ತಾಂತ್ರಿಕವಾಗಿ ಚಿತ್ರ ಶ್ರೀಮಂತವಾಗಿದೆ. ಅಜನೀಶ್ ಸಂಗೀತ, ಕರಮ್ ಅವರ ಕೆಮೆರಾ ವರ್ಕ್ ಸೂಪರ್

  

ಡೈಲಾಗ್ ಗಳು ಸೂಪರ್ ಆದರೆ,

ಡೈಲಾಗ್ ಗಳು ಸೂಪರ್ ಆದರೆ, ಕೆಲವು ಅರ್ಥ ಆಗ್ತಾ ಇಲ್ಲ ಎಂದ ಬೆಂಗಳೂರು ಮಿರರ್ ನ ಶ್ಯಾಮ್ ಪ್ರಸಾದ್

  

ಉಳಿದವರು ಕಂಡಂತೆ: ಓದುಗರ ಅಭಿಮತ 4.5/5

ರಕ್ಷಿತ್ ಶೆಟ್ಟಿ Quentin Tarantino ಓದುಗ ವಿಜ್ಞೇಶ್ ಶೆಟ್ಟಿ ಅಭಿಮತ 4.5/5

  

ಮತ್ತೊಬ್ಬ ಓದುಗರ ಅಭಿಮತ ಹೀಗಿದೆ

ಮತ್ತೊಬ್ಬ ಓದುಗ ಸುಹಾಸ್ ಅಭಿಮತ ಹೀಗಿದೆ

  

ಮಂಡ್ಯ ಗೌಡರ ಅಭಿಮತ 3.5/5

Sunil HC Gowda (@Mandya_Gowdru) ಅಭಿಮತ 3.5/5

  

ಕೆಲವರಿಗೆ ಇಷ್ಟ, ಒಳ್ಳೆ ಪ್ರಯತ್ನ ನೋಡೊಕೆ ಕಷ್ಟ

ಕೆಲವರಿಗೆ ಇಷ್ಟ, ಒಳ್ಳೆ ಪ್ರಯತ್ನ ನೋಡೊಕೆ ಕಷ್ಟ: ಶ್ಯಾಮ್ 3/5

English summary
Sandalwood's much anticipated movie Ulidavaru Kandanthe (as seen by rest) released today(Mar. 28). The movie has simultaneously got released across the globe. The film is the directorial debut of actor Rakshith Shetty of Simple Aag Ond Love Story fame. Here are interesting Live Tweet Update about the movie
Please Wait while comments are loading...

Kannada Photos

Go to : More Photos