»   » ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ

ವಿಮರ್ಶೆ: 'ಅಪೂರ್ವ' ಸುಂದರಿ, 'ಅಪೂರ್ಣ' ಮಾದರಿ

Posted by:
Subscribe to Filmibeat Kannada

61 ವರ್ಷದ ಮುದುಕ ಹಾಗೂ 19ರ ಹರೆಯದ ತರುಣಿ ನಡುವಿನ ಅಪರೂಪದ 'ಅಪೂರ್ವ' ಪ್ರೇಮ ಕಾವ್ಯವನ್ನು ತೆರೆಮೇಲೆ ನೋಡಲು ಹೋದ ಪ್ರೇಕ್ಷಕರಿಗೆ ಮೊದಲು ದರ್ಶನವಾಗುವುದು ನಮ್ಮ ಪ್ರಾದೇಶಿಕ ಸೆನ್ಸಾರ್ ಮಂಡಳಿ ನೀಡಿರುವ 'U' ಸರ್ಟಿಫಿಕೇಟ್.!


ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಚಿತ್ರವೊಂದಕ್ಕೆ 'U' ಸರ್ಟಿಫಿಕೇಟ್.? ಅಂತ ನಿಬ್ಬೆರಗಾಗಿ ನೋಡುವಷ್ಟರಲ್ಲೇ, ಕೆಂಪಾದ ದಪ್ಪ ಅಕ್ಷರಗಳಲ್ಲಿ ಬೆಳ್ಳಿ ಪರದೆ ಮೇಲೆ ನಮಗೆ XXX ನೋಡುವ ಅವಕಾಶ.! ಅದನ್ನ ಅಪಾರ್ಥ ಮಾಡಿಕೊಳ್ಳುವ ಮುನ್ನ XXX ಅಂದ್ರೆ Xperience, Xperiment, Xpectation ಅಂತ ತಮ್ಮದೇ ವ್ಯಾಖ್ಯಾನ ನೀಡುತ್ತಾರೆ ರವಿಮಾಮ.

ನಿಜಹೇಳ್ಬೇಕಂದ್ರೆ, ರವಿಚಂದ್ರನ್ ಮಾಡಿರುವ ವಿಭಿನ್ನ 'ಪ್ರಯೋಗ' (Xperiment) ನೋಡಲು ನಿರೀಕ್ಷೆ (Xpectation) ಹೊತ್ತು ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರಿಗೆ ಒಂಥರಾ 'ಅನುಭವ' (Xperience) ಆಗುವುದು ಖಂಡಿತ.


'ಅಪೂರ್ವ' ಚಿತ್ರದ ಸಂಪೂರ್ಣ ವಿಮರ್ಶೆ ಕೆಳಗಿರುವ ಸ್ಲೈಡ್ ಗಳಲ್ಲಿದೆ. ಒಂದೊಂದೇ ಕ್ಲಿಕ್ಕಿಸಿ, ಓದಿರಿ.....


Rating:
3.0/5

ಚಿತ್ರ - ಅಪೂರ್ವ
ನಿರ್ಮಾಣ - ಕಥೆ - ಚಿತ್ರಕಥೆ - ಸಂಗೀತ ನಿರ್ದೇಶನ - ವಿ.ರವಿಚಂದ್ರನ್
ಛಾಯಾಗ್ರಹಣ - ಜಿ.ಎಸ್.ವಿ.ಸೀತಾರಾಮ್
ಸಂಕಲನ - ವಿ.ರವಿಚಂದ್ರನ್
ತಾರಾಗಣ - ವಿ.ರವಿಚಂದ್ರನ್, ಅಪೂರ್ವ, ಸುದೀಪ್, ರವಿಶಂಕರ್, ವಿಜಯ್ ರಾಘವೇಂದ್ರ
ಬಿಡುಗಡೆ ದಿನಾಂಕ - ಮೇ 27, 2016


ಮೊದಲ ಸೀನ್ ನಲ್ಲೇ ಡೆತ್ ನೋಟ್.!

ಮೊದಲ ಸೀನ್ ನಲ್ಲೇ ಡೆತ್ ನೋಟ್.!

ಅಪೂರ್ವ ಐ ಲವ್ ಯೂ....ಹೀಗಂತ ಕೂಗಿ ಹೇಳಲು ಸಾಧ್ಯವಾಗದೆ, ತಮ್ಮ ಪ್ರೀತಿಯನ್ನ ಹೊರ ಜಗತ್ತಿಗೆ ತಿಳಿಸಲು ಆಗದೆ, ಮೌನವಾಗಿ ಮಾನಸಿಕವಾಗಿ ಕೊರಗುತ್ತಿರುವ ರಾಜ್ ಶೇಖರ್ (ರವಿಚಂದ್ರನ್)ಗೆ ಡೆತ್ ನೋಟ್ ಬರೆದಿಟ್ಟು ಸಾಯುವ ಇಚ್ಛೆ.


ಫ್ಲ್ಯಾಶ್ ಬ್ಯಾಕ್ ಶುರು

ಫ್ಲ್ಯಾಶ್ ಬ್ಯಾಕ್ ಶುರು

''ಹೀಗೆ ಆಗಬೇಕು ಅಂತ ಹೋದರೆ, ಯಾವುದೂ ಆಗಲ್ಲ. ಹೇಗೆ ಆಗ್ಬೇಕೋ ಹಾಗೇ ಆಗಲಿ ಅಂತ ಇದ್ರೆ ಏನೇನೋ ಆಗುತ್ತೆ'' ಎಂಬ ತತ್ವ-ಸಿದ್ಧಾಂತಗಳ ನಡುವೆ ಮೂರು ದಿನಗಳ ಹಿಂದೆ ನಡೆದ ಅಪರೂಪದ ಪ್ರೇಮ ಕಾವ್ಯದ ಫ್ಲ್ಯಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ.


ಮಾಲ್ ನಲ್ಲಿ ಭಯೋತ್ಪಾದಕರು.!

ಮಾಲ್ ನಲ್ಲಿ ಭಯೋತ್ಪಾದಕರು.!

ಒಂದು ಮಳಿಗೆಯ ಉದ್ಘಾಟನೆಗಾಗಿ ಮಾಲ್ ಗೆ ಬರುವ ಗೃಹಮಂತ್ರಿ (ಪ್ರಕಾಶ್ ರೈ) ಯವರನ್ನ ಲಾಕ್ ಮಾಡಿಕೊಂಡು ಇಡೀ ಸರ್ಕಾರವನ್ನು ಗಢಗಢ ನಡುಗಿಸುವ ಪ್ಲಾನ್ ಭಯೋತ್ಪಾದಕರದ್ದು. ಇತ್ತ ಅದೇ ಸಮಯಕ್ಕೆ ಮಾಲ್ ನ ಲಿಫ್ಟ್ ಒಂದರಲ್ಲಿ ರಾಜ್ ಶೇಖರ್ (ರವಿಚಂದ್ರನ್) ಹಾಗೂ ಅಪೂರ್ವ (ಅಪೂರ್ವ) ಲಾಕ್ ಆಗುತ್ತಾರೆ.


ಮುಂದಿನದ್ದೆಲ್ಲಾ ಲವ್ ಸ್ಟೋರಿ

ಮುಂದಿನದ್ದೆಲ್ಲಾ ಲವ್ ಸ್ಟೋರಿ

ಹೊರಗಡೆ ಬುಲೆಟ್ ಸದ್ದು, ಅಮಾಯಕರ ಆಕ್ರಂದನ, ಭಯೋತ್ಪಾದಕರ ಅಟ್ಟಹಾಸಕ್ಕೆ ಸಾವನ್ನಪ್ಪುವ ಪುಟ್ಟ ಕಂದಮ್ಮನ ತಾಯಿಯ ಅಳಲು ನಡುವೆ ಲಿಫ್ಟ್ ಒಳಗೆ ಅಪರೂಪದ ಪ್ರೇಮ ಕಥೆ ಶುರುವಾಗುತ್ತೆ. 'ಅಪೂರ್ವ' ಜೋಡಿ ಭಯೋತ್ಪಾದಕರಿಂದ ತಪ್ಪಿಸಿಕೊಳ್ಳುತ್ತಾ? ಇಬ್ಬರ ಪ್ರೀತಿಗೆ ಸಮಾಜ ಒಪ್ಪಿಕೊಳ್ಳುತ್ತಾ? ಎಂಬುದು ಬಾಕಿ ಸ್ಟೋರಿ.


ರವಿಚಂದ್ರನ್ ನಟನೆ ಹೇಗಿದೆ?

ರವಿಚಂದ್ರನ್ ನಟನೆ ಹೇಗಿದೆ?

61 ರ ಮುದುಕನ ಪಾತ್ರ ನಿರ್ವಹಿಸಿರುವ ರವಿಚಂದ್ರನ್ ನಟನೆ ಎಂದಿನಂತೆ ಸರಾಗ.


ಅಪೂರ್ವ ಹುಡುಗಿ ಬಗ್ಗೆ....

ಅಪೂರ್ವ ಹುಡುಗಿ ಬಗ್ಗೆ....

ಅಭಿನಯಕ್ಕಿಂತ ಹೆಚ್ಚಾಗಿ 'ಅಪೂರ್ವ' ಚಿತ್ರದಲ್ಲಿ ನಟಿ ಅಪೂರ್ವ ಬಳಕುವುದೇ ಹೆಚ್ಚು. ಮಾತಿಗಿಂತ 'ಸಾರಿ' ಕೇಳುವುದೇ ಜಾಸ್ತಿ. ಹೋಗಿ ಬಂದು ರವಿಚಂದ್ರನ್ ಮೇಲೆ ಬೀಳುವ ಅಪೂರ್ವ ಸೊಬಗು ಮಾತ್ರ ತೆರೆಮೇಲೆ ಹಿತ.


ಸುದೀಪ್ ಇಲ್ಲಿ ವಿಲನ್.!

ಸುದೀಪ್ ಇಲ್ಲಿ ವಿಲನ್.!

ಭಯೋತ್ಪಾದಕನ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಕೆಲವೇ ಸೆಕೆಂಡ್ ಮಾತ್ರ ತೆರೆ ಮೇಲೆ ಮಿಂಚುವ ಸುದೀಪ್ ಹಾಗೂ ನಟ ರವಿಶಂಕರ್ ಡಬ್ಬಿಂಗ್ ನಲ್ಲಿ ಗಮನ ಸೆಳೆಯುತ್ತಾರೆ.


ಉಳಿದವರು....

ಉಳಿದವರು....

ನಟ ವಿಜಯ್ ರಾಘವೇಂದ್ರ, ಪವಿತ್ರ ಲೋಕೇಶ್ ಹೀಗೆ ಬಂದ ಹಾಗೆ ಹೋಗುತ್ತಾರೆ. ಆಕ್ಟಿಂಗ್ ನಲ್ಲಿ ಅವರಿಗೆ ಹೆಚ್ಚು ಅವಕಾಶ ಇಲ್ಲ.


'ಅಪೂರ್ವ' ಕಲಾ ಕುಂಚ.!

'ಅಪೂರ್ವ' ಕಲಾ ಕುಂಚ.!

'ಅಪೂರ್ವ' ಚಿತ್ರ ಫ್ರೇಮ್ ಟು ಫ್ರೇಮ್ ಕಲರ್ ಫುಲ್ ಆಗಿದೆ. 'Life is ART, heART & ARTificial' ಎಂದು ಹೇಳುವ ಮೂಲಕ ಅಪರೂಪದ ಪ್ರೀತಿಯನ್ನ ಬಣ್ಣಗಳ ಮೂಲಕವೇ ತೆರೆಗೆ ತಂದಿದ್ದಾರೆ ರವಿಚಂದ್ರನ್. ಒಂದೇ ಲಿಫ್ಟ್ ನಲ್ಲಿ 'ಅಪೂರ್ವ' ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣವಾಗಿದ್ದರೂ, ಒಂದೊಂದು ಫ್ರೇಮ್ ನಲ್ಲೂ ರಂಗು ತುಂಬಿರುವುದು ಪ್ರೇಕ್ಷಕರ ಕಣ್ಣಿಗೆ ಹಬ್ಬ.


ತತ್ವ-ಸಿದ್ಧಾಂತಗಳ ಮಹಾಪೂರ.!

ತತ್ವ-ಸಿದ್ಧಾಂತಗಳ ಮಹಾಪೂರ.!

'Life is tennis court. Here skirts don't fly, emotions does', 'Love is dangerous paradise', 'Love destructs, Life reconstructs', 'fACT & ACT' - ಹೀಗೆ 'ಅಪೂರ್ವ' ಚಿತ್ರದ ಉದ್ದಕ್ಕೂ ತತ್ವ-ಸಿದ್ಧಾಂತಗಳನ್ನ ಪ್ರಾಸಬದ್ಧವಾಗಿ ಹೇಳಿರುವ ರವಿಚಂದ್ರನ್ ಪ್ರಯತ್ನ ಸಾಮಾನ್ಯ ಪ್ರೇಕ್ಷಕನಿಗೆ ಕಬ್ಬಿಣದ ಕಡಲೆ ಆದ್ರೆ ಆಶ್ಚರ್ಯ ಇಲ್ಲ.


ಫಾರ್ಮುಲಾ ಬ್ರೇಕ್ ಮಾಡಿರುವ ರವಿಚಂದ್ರನ್.!

ಫಾರ್ಮುಲಾ ಬ್ರೇಕ್ ಮಾಡಿರುವ ರವಿಚಂದ್ರನ್.!

Age 61 but Heart beats 19 ಎಂದು ಹೇಳುತ್ತಾ, 19 ವರ್ಷ ವಯಸ್ಸಿನ ಯುವತಿ ಜೊತೆ ಪ್ರಣಯ ಗೀತೆ ಹಾಡುವ ರವಿಚಂದ್ರನ್, ಗಾಂಧಿನಗರದ ಫಾರ್ಮುಲಾ ಬ್ರೇಕ್ ಮಾಡಿದ್ದಾರೆ. ಆದ್ರೆ, ಅದನ್ನ ಕನ್ನಡ ಪ್ರೇಕ್ಷಕ ಮಹಾಪ್ರಭು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟ.


ಒಂದೇ ತರಹದ ಹಾಡುಗಳು.!

ಒಂದೇ ತರಹದ ಹಾಡುಗಳು.!

ವಿ.ರವಿಚಂದ್ರನ್ ಸಂಗೀತ ನೀಡಿರುವ ಗೌತಮ್ ಶ್ರೀವತ್ಸ ಹಾಡಿರುವ ಎಲ್ಲಾ ಹಾಡುಗಳು ಒಂದೇ ತರಹ ಕೇಳಿಸುತ್ತೆ.


ಕ್ಲೈಮ್ಯಾಕ್ಸ್ ಯಾಕೆ ಹಾಗೆ?

ಕ್ಲೈಮ್ಯಾಕ್ಸ್ ಯಾಕೆ ಹಾಗೆ?

ಪ್ರೇಮಲೋಕ ಸೃಷ್ಟಿಸಿದ ದೇವರು, 'ಅಪೂರ್ವ' ಚಿತ್ರದ ಮೂಲಕ ನೀಡಿರುವ ಸಂದೇಶವಾದರೂ ಏನು ಎಂಬುದನ್ನು ಅರಿಯಲು ಕಷ್ಟ. 'ಪ್ರೀತ್ಸೋದ್ ತಪ್ಪಾ?' ಎಂದು ಕೇಳಿದ್ದ ರವಿಮಾಮ, 'ಅಪೂರ್ವ' ಚಿತ್ರದಲ್ಲಿ ನೀಡಿರುವ ಕ್ಲೈಮ್ಯಾಕ್ಸ್ 'ಅಪೂರ್ಣ'.


ಫೈನಲ್ ಸ್ಟೇಟ್ ಮೆಂಟ್.!

ಫೈನಲ್ ಸ್ಟೇಟ್ ಮೆಂಟ್.!

'ಏಕಾಂಗಿ' ಹಾಗೂ 'ಕಲಾವಿದ' ಸಂಗಮದಂತೆ ಇರುವ 'ಅಪೂರ್ವ' ಸಿನಿಮಾ ರವಿಚಂದ್ರನ್ ರವರ 'ಕ್ರೇಜಿ' ಅಭಿಮಾನಿಗಳಿಗೆ ಇಷ್ಟವಾಗಬಹುದು. ಮನರಂಜನೆಯನ್ನಷ್ಟೇ ಬಯಸುವ ಪ್ರೇಕ್ಷಕರಿಗೆ 'ಅಪೂರ್ವ' ಸ್ವಲ್ಪ 'Heavy' ಅನಿಸಬಹುದು. ಆದ್ರೂ, ರವಿಚಂದ್ರನ್ ರವರ ಪ್ರಯೋಗ ನೋಡ್ಬೇಕು ಅಂತಿದ್ರೆ, ಚಿತ್ರಮಂದಿರಕ್ಕೆ ಭೇಟಿ ಕೊಡಿ.


ವಿಡಿಯೋ ನೋಡಿ....

'ಅಪೂರ್ವ' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರ ಅಭಿಪ್ರಾಯ ಈ ವಿಡಿಯೋದಲ್ಲಿ...


English summary
Kannada Actor, Crazy Star V Ravichandran's One Man Show 'Apoorva' movie has hit the screens today (May 27th). The movie is a visual treat for the Audience, Actress Apoorva looks pleasant on the screen.
Please Wait while comments are loading...

Kannada Photos

Go to : More Photos