»   » ಯಶ್ 'ಗಜಕೇಸರಿ' ಟ್ವಿಟ್ಟರ್ ನಲ್ಲಿ ರಾಕಿಂಗ್

ಯಶ್ 'ಗಜಕೇಸರಿ' ಟ್ವಿಟ್ಟರ್ ನಲ್ಲಿ ರಾಕಿಂಗ್

Written by: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಗಜಕೇಸರಿ' ಇದೇ ಶುಕ್ರವಾರ (ಮೇ.23) ತೆರೆಗೆ ಬಂದಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಸರಿಸುಮಾರು 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು ಪ್ರೇಕ್ಷಕರಲ್ಲಿ ಭಾರಿ ಕುತೂಹಲವನ್ನು ಹುಟ್ಟುಹಾಕಿದೆ.

ಭಾರಿ ಬಜೆಟ್ ನ ಪರಭಾಷಾ ಚಿತ್ರಗಳಾದ 'ಕೊಚ್ಚಡಿಯಾನ್' (ತಮಿಳು) ಹಾಗೂ 'ಮನಂ' (ತೆಲುಗು) ಚಿತ್ರಗಳು 'ಗಜಕೇಸರಿ' ಚಿತ್ರದ ಜೊತೆಗೆ ಸ್ಪರ್ಧಿಸುತ್ತಿರುವುದು ಇನ್ನೊಂದು ವಿಶೇಷ. ಆದರೆ ತಮ್ಮ ಚಿತ್ರಕ್ಕೆ ಯಾವುದೇ ಚಿತ್ರ ಸ್ಪರ್ಧಿಯಲ್ಲ ಎಂದಿದ್ದಾರೆ ಯಶ್. ಗಜಕೇಸರಿ ಚಿತ್ರದ ವಿಭಿನ್ನತೆಯೇ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ, ನಿರ್ದೇಶಕರ ಕಲ್ಪನೆಗೆ ತಕ್ಕಂತೆ ನನ್ನ ಪಾತ್ರ ನಿರ್ವಹಿಸಿದ್ದೇನೆ. ಇನ್ನೇನಿದ್ದರೂ ಜನ ನೋಡಿ ಮೆಚ್ಚಿಕೊಳ್ಳಬೇಕು ಎಂದು ಯಶ್ ಹೇಳಿದ್ದಾರೆ.

ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬದಲಾಗಿರುವ ಛಾಯಾಗ್ರಾಹಕ ಕೃಷ್ಣ ಅವರು ಮೊದಲ ಬಾರಿಗೆ ಯಶ್ ಹಾಗೂ ಅಮೂಲ್ಯ ಜೋಡಿಯನ್ನು ನಿರ್ದೇಶಿಸುತ್ತಿದ್ದು, ಯಶ್ ಗೆಟಪ್, ಚಿತ್ರದ ಸಂಗೀತ, ಲೊಕೇಷನ್, ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಬಂದಿರುವ ಪ್ರತಿಕ್ರಿಯೆಗಳನ್ನು ಇಲ್ಲಿ ನೀಡಲಾಗಿದೆ ತಪ್ಪದೆ ನೋಡಿ...

ಹಲವು ವಿಶೇಷಗಳಿರುವ ಮನರಂಜನೆ ಪ್ಯಾಕೇಜ್
  

ಹಲವು ವಿಶೇಷಗಳಿರುವ ಮನರಂಜನೆ ಪ್ಯಾಕೇಜ್

ಗಜಕೇಸರಿ ಚಿತ್ರ ಹಲವು ವಿಶೇಷಗಳಿರುವ ಮನರಂಜನೆ ಪ್ಯಾಕೇಜ್ ಆಗಿದ್ದು, ಪ್ರೇಕ್ಷಕ ಮೊದಲ ನೋಟಕ್ಕೆ ಫಿದಾ ಆಗಿದ್ದಾನೆ. ಸುಮಾರು 160ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತುಂಬಿದ ಗೃಹ ಪ್ರದರ್ಶನ ಕಂಡು ಬಂದಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸಿನಿರಸಿಕರು ಯಶ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಈ ವಾರಾಂತ್ಯದ ತನಕ ಮಲ್ಟಿಪೆಕ್ಸ್ ಗಳಲ್ಲಿ ಮುಂಗಡ ಬುಕ್ಕಿಂಗ್ ಮುಕ್ತಾಯವಾಗಿದೆ ಎಂಬ ಸುದ್ದಿಯೂ ಬಂದಿದೆ.

  

ಯಶ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ

ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸಿನಿರಸಿಕರು ಯಶ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಅಮೂಲ್ಯ ಯಶ್ ಗೆ ಜೋಡಿ
  

ಅಮೂಲ್ಯ ಯಶ್ ಗೆ ಜೋಡಿ

ಮುದ್ದಾಗಿ ಕಾಣುವ ಅಮೂಲ್ಯ ಮೊದಲ ಬಾರಿಗೆ ಯಶ್ ಗೆ ಜೋಡಿಯಾಗಿದ್ದಾರೆ.ಇದರ ಜತೆಗೆ ಕೃಷ್ಣ ಅವರು ನಿರ್ದೇಶಕನಾಗಿ ಬಡ್ತಿ ಪಡೆದಿರುವುದು, ಯಶ್ ಚಿತ್ರ ಮೊದಲ ಬಾರಿಗೆ ನಿರ್ದೇಶಿಸುತ್ತಿರುವುದು, ಹಿಟ್ ಚಿತ್ರ ನೀಡಿ ಕೂಡಾ ಸಹಾಯಕ ನಿರ್ದೇಶಕರಾಗಿ ತರುಣ್ ಸುಧೀರ್ ಅವರು ಕಲಿಕೆಗಾಗಿ ಈ ಚಿತ್ರದಲ್ಲಿ ದುಡಿದಿರುವುದು ಚಿತ್ರದ ಹೈಲೇಟ್ ಎನಿಸಿದೆ.

  

ಸಾಧು, ರಂಗಾಯಣ ರಘು ಹಾಸ್ಯದ ಹೊನಲು

ಮೊದಲೇ ಹೇಳಿದಂತೆ ಗಜಕೇಸರಿ ಮನರಂಜನೆಯ ಫುಲ್ ಪ್ಯಾಕೇಜ್ ಆಗಿದ್ದು, ಹಾಸ್ಯರಸ ಉಕ್ಕಿ ಹರಿಸಲು ಸಾಧುಕೋಕಿಲ, ರಂಗಾಯಣ ರಘು ನಿಮಗಾಗಿ ಕಾದಿದ್ದಾರೆ.

ಕೇಶ ವಿನ್ಯಾಸ ಕನ್ನಡ ಚಿತ್ರರಂಗದಲ್ಲೇ ಮೊದಲು
  

ಕೇಶ ವಿನ್ಯಾಸ ಕನ್ನಡ ಚಿತ್ರರಂಗದಲ್ಲೇ ಮೊದಲು

ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ವಿಶಿಷ್ಟ ಕೇಶ ವಿನ್ಯಾಸದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಇನ್ನಷ್ಟು ಉದ್ದಗೂದಲು ಬಿಟ್ಟಿದ್ದಾರೆ. ಮೂರು ಗಂಟೆಗಳ ಕಾಲ ಕೂದಲನ್ನು ಹೆಣೆದು ಅಂಟಿಸಿ ಉದ್ದ ಮಾಡಲಾಗಿದೆ. ಕೇಶ ವಿನ್ಯಾಸಕ್ಕಾಗಿ ಹೈದರಾಬಾದಿನ ಅಲೆಕ್ಸ್ ಎಂಬ ಹೇರ್ ಸ್ಟೈಲಿಸ್ಟ್ ಬಂದು ಯಶ್ ಗೆ ಹೊಸ ಹೇರ್ ಸ್ಟೈಲ್ ನೀಡಿದ್ದಾರೆ. ಹೊಸ ಹೇರ್ ಸ್ಟೈಲ್ ಫುಲ್ ಗೆಟೆಪ್ ಸಿಗಲು ಸುಮಾರು 12-16 ಗಂಟೆ ಬೇಕಂತೆ. ಉದ್ದ ಕೂದಲಿರುವ ಹೆಣ್ ಮಕ್ಕಳ ಕಷ್ಟ ಏನಂತಾ ಈಗ ಅರ್ಥ ಆಯ್ತು ಎಂದು ಯಶ್ ನಮಸ್ಕರಿಸುತ್ತಾರೆ.

  

ಗಜಕೇಸರಿ ಟಿಕೆಟ್ ದರ ಬಗ್ಗೆ

ನರ್ತಕಿ ಚಿತ್ರಮಂದಿರದಲ್ಲಿ ಗಜಕೇಸರಿ ಚಿತ್ರದ ಟಿಕೆಟ್ ದರ ಬಗ್ಗೆ ಪತ್ರಕರ್ತ ಎಸ್ ಶಾಮಸುಂದರ್ ಟ್ವೀಟ್ ಮಾಡಿದ್ದಾರೆ.

ಕೃಷ್ಣ ಅವರ ಪ್ರಯತ್ನ, ಪ್ರಯೋಗಕ್ಕಾಗಿ ನೋಡಿ
  

ಕೃಷ್ಣ ಅವರ ಪ್ರಯತ್ನ, ಪ್ರಯೋಗಕ್ಕಾಗಿ ನೋಡಿ

* ನಿರ್ದೇಶಕ ಯೋಗರಾಜಭಟ್ಟರ ಗರಡಿಯ ಛಾಯಾಗ್ರಾಹಕ ಕೃಷ್ಣ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿರುವುದು. * ವಿಕ್ಟರಿ ಯಂಥ ಹಿಟ್ ಸಿನಿಮಾ ನೀಡಿರುವ ತರುಣ್ ಸುಧೀರ್ ಈ ಚಿತ್ರಕ್ಕೆ ಕೋ-ಡೈರೇಕ್ಟರ್.
* ಮುಖ್ಯವಾದ ವಿಷಯ ಎಂದರೆ ಈ ಚಿತ್ರಕ್ಕೆ ಯೋಗರಾಜ ಭಟ್ ಅವರು ಕಥೆ ಒದಗಿಸಿದ್ದಾರೆ.
* ಸತ್ಯ ಹೆಗ್ಡೆ ಕ್ಯಾಮೆರಾ ಹಿಂದಿದ್ದರೆ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ಟರ ಸಾಹಿತ್ಯವಿದೆ. ಕಲೆ ವಿಭಾಗದಲ್ಲಿ ಮೋಹನ್, ರವಿವರ್ಮ ಸಾಹಸ, ಹರಿಕೃಷ್ಣ ಸಂಗೀತವಿರುವ ಈ ಚಿತ್ರವನ್ನು ಜಯಣ್ಣ ಕಂಬೈನ್ಸ್ ನಿರ್ಮಿಸಿದೆ.
* ಅನಂತ್ ನಾಗ್ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  

ಅಭಿಮಾನಿಗಳಿಂದ ಶುಭಹಾರೈಕೆ ಮಹಾಪೂರ

ಅಭಿಮಾನಿಗಳಿಂದ ಶುಭಹಾರೈಕೆ ಮಹಾಪೂರ ಹರಿದು ಬರುತ್ತಿದ್ದು, ಚಿತ್ರದ ಬಗ್ಗೆ ಕ್ರೇಜ್ ಕಾಯ್ದುಕೊಳ್ಳಲಾಗಿದೆ. ಚಿತ್ರ ನೋಡಿದವರು ಮೆಚ್ಚುಗೆ ಮಾತುಗಳನ್ನಾಡಿದ್ದರೆ, ಟಿಕೆಟ್ ಗಾಗಿ ಫ್ಯಾನ್ಸ್ ಪರದಾಡುತ್ತಿರುವ ಸುದ್ದಿ ಬಂದಿದೆ.

  

ಚಿತ್ರದ ನಿರೂಪಣೆ ಬಗ್ಗೆ ಶ್ಯಾಮ್ ಟ್ವೀಟ್

ಚಿತ್ರದ ನಿರೂಪಣೆ ಬಗ್ಗೆ ಶ್ಯಾಮ್ ಟ್ವೀಟ್ ಮಾಡುತ್ತಾ ನಿರೂಪಣಾ ಶೈಲಿ ಕೊಂಚ ನಿಧಾನಗತಿಯಲ್ಲಿದೆ ಎಂದಿದ್ದಾರೆ.

English summary
Yash, Amoolya Starrer Gajakesari Movie First Day First Show Twitter report is here from many cine fans. For the first time Krisha is directing Rocking Star Yash who is basking in the success of Drama, Googly and Raja Huli appearing in different role in this movie.
Please Wait while comments are loading...

Kannada Photos

Go to : More Photos