ಸುವರ್ಣದಲ್ಲಿ ಬೆಳಗೆರೆ ವೇಷ ಕಳಚಿದ ದುನಿಯಾ ವಿಜಯ್

Posted by:
Give your rating:

'ಸೌಜನ್ಯ'ಕ್ಕೆ ಆರಂಭವಾದ ಭೀಮಾತೀರದಲ್ಲಿ ಜಗಳ ಟಿವಿ 9 ತೀರ ಬಿಟ್ಟು ಸುವರ್ಣ ಸುದ್ದಿ ವಾಹಿನಿಗೆ ಶಿಫ್ಟ್ ಆಗಿಬಿಟ್ಟಿದೆ.

ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಶನಿವಾರ (ಏ.7) ಮಧ್ಯಾಹ್ನ ಪ್ರಸಾರವಾದ "ಭೀಮಾ ತೀರದಲ್ಲಿ ವಿವಾದ" ವಿಶೇಷ ಕಾರ್ಯಕ್ರಮ ಸತತ ನಾಲ್ಕು ಗಂಟೆಗಳಿಗೂ ಅಧಿಕ ಕಾಲ ನೇರ ಪ್ರಸಾರ ಕಾರ್ಯಕ್ರಮದ ನಂತರ ಸಂಜೆಯಿಂದ ರಾತ್ರಿವರೆಗೂ ಸುವರ್ಣ ವಾಹಿನಿಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ, ವಾದ, ವಿವಾದ ನಡೆಯಿತು

ಭೀಮಾ ತೀರದಲ್ಲಿ ವಿವಾದ ಈಗ ಸಿನಿಮಾ ಮಂದಿ ಹಾಗೂ ಪತ್ರಕರ್ತ ರವಿ ಬೆಳೆಗೆರೆ ಅವರ ವೈಯಕ್ತಿಕ ಸಮರಕ್ಕೆ ನಾಂದಿ ಹಾಡಿದೆ. ದ್ವೇಷಕ್ಕಾಗಿ ಕೊಲ್ಲುತ್ತಾರೆ ಭೀಮಾ ತೀರದಲ್ಲಿ....ಈಗ ಸೌಜನ್ಯಕ್ಕಾಗಿ ವಾಗ್ದಾಳಿ ಮಾಡುತ್ತಾರೆ ಬೆಂಗಳೂರಿನಲ್ಲಿ ಎಂಬಂತಾಗಿದೆ.

ಬೆಳಗೆರೆ ಬಣ್ಣ ಕಳಚಿದ ದುನಿಯಾ ವಿಜಯ್ : ನನ್ನ ಹಾಗೂ ನನ್ನ ಹೆಂಡತಿ ಮಧ್ಯೆ ನಟಿ ಶುಭಾ ಪೂಂಜಾ ಹೆಸರು ಸೇರಿಸಿ ಏನೇನೋ ಹೊಲಸಾಗಿ ಬರೆದು ನಮ್ಮ ಸಂಸಾರ ಕೆಡಿಸಲು ನೋಡಿದರು.

ಶುಭಾ ಜೊತೆ ಇರೋ ಫೊಟೋ ಕದ್ದು ಬರೆಯುವುದಾದರೂ ಏನು..? ಏಕೆ? ನಾನೇ ಫೊಟೋ ಕೊಡ್ತಾ ಇದ್ದೆ ಬೇಕಾದರೆ..

ಸಿನಿಮಾ ರಂಗದಲ್ಲೇ ಕೆಲವರು ಸಪೋರ್ಟರ್ಸ್ ಇದ್ದಾರೆ. ಅವರು ಮಾಡಿದ್ದಕ್ಕೆಲ್ಲ ನೀವೇ ಸರಿಯಣ್ಣ ಎಂದು ಹೇಳುತ್ತಿರುತ್ತಾರೆ. ಹಾಗಾಗಿ ಎಲ್ಲಾ ಗೊತ್ತಿದ್ದರೂ ಸುಮ್ಮನಿರಬೇಕಾದ ಪರಿಸ್ಥಿತಿ ಬಂದಿದೆ. ನಾನು ಕೆಲವರಿಗೆ ಡೇಟ್ ಕೊಟ್ಟರೆ ಒಳ್ಳೆಯವನು.. ಇಲ್ಲ ಅಂದ್ರೆ ನನ್ನ ಟಾರ್ಗೆಟ್ ಮಾಡೋದು ಇದೇ ಆಗಿ ಬಿಟ್ಟಿದೆ.

ನಾಯಕಿ ಬಾಳು ಗೋಳಾಯ್ತು: ಎಷ್ಟೊ ಜನ ಹೆದರಿಕೊಂಡು ಅಳ್ತಾ ಇದ್ದಾರೆ. ಇನ್ನೊಂದು ಹುಡುಗಿ (ನನ್ನ ಸಿನಿಮಾದಲ್ಲಿ ಹೀರೋಯಿನ್) ಜೊತೆ ನನ್ನ ಹೆಸರು ಸೇರಿಸಿ ಕೆಟ್ಟದಾಗಿ ಬರೆದರು.

ಅವರು ಮನೆಯಲ್ಲಿ ಅವಳನ್ನು ವಿಷ ಹಾಕಿ ಸಾಯಿಸುಬಿಡುತ್ತೀನಿ ಎಂದು ಅವರ ಅಪ್ಪ ಅಮ್ಮ ಹೇಳಿದ್ರು ಸಾರ್..ಇವರು ಮಾಡಿರುವ ಅನ್ಯಾಯ ಒಂದೆರಡಲ್ಲ. ಎಷ್ಟು ಜನ ಆರ್ಟಿಸ್ಟ್ ಜೀವನ ಹಾಳು ಮಾಡಿದ್ದಾರೆ ಎಂದು ನನ್ನ ಹತ್ರಾ ಪ್ರೂಫ್ ಇದೆ.

ಹೆಣ್ಣಿನ ಮೇಲೆ ಗೌರವವಿರಲಿ: ನನ್ನ ಮೇಲೆ ಬರ್ಕೋತ್ತಿರಾ ಬರೆದುಕೊಳ್ಳಿ...ನಾನು ಕೇರ್ ಮಾಡೋಲ್ಲ..

ಮನೆ ಹೆಣ್ಣಿಗೆ ಕೈ ಹಾಕ್ಬೇಡಿ. ನನ್ನ ಮೂರು ವರ್ಷದ ಮಗು ಅಳುತ್ತಾ ಬಂದು.. ಅಪ್ಪ  ನಿನ್ನ ಬಗ್ಗೆ ಏನೇನೋ ಬಂದಿದೆ ಪೇಪರ್ ನಲ್ಲಿ ಎಂದು ಹೇಳಿದ ದಿನವೇ ತಿರುಗಿ ಬೀಳಬೇಕಿತ್ತು..

ಇಷ್ಟು ವರ್ಷ ನಮ್ಮ ಇಂಡಸ್ಟ್ರಿ ಬಗ್ಗೆ ಏನೇನೋ ಬರೆದಿದ್ದಾರಾ.  ಇನ್ನು ಮೇಲೆ ಕೆಟ್ಟದಾಗಿ ಬರೆಯಬೇಡಿ.

ಮುಖ್ಯಮಂತ್ರಿ ಐ ಲವ್ ಯೂ ನೀವೇ ಹೀರೋ ಅಲ್ವ?: ನನಗೂ ಅವರಿಗೂ ಸಂಬಂಧ ಹಳಸೋದಿರಲಿ. ಮೊದಲಿಂದಲೂ ಆಗೋದಿಲ್ಲ...ಕಷ್ಟಪಟ್ಟು ಸಿನಿಮಾ ಮುಗಿಸಿಕೊಟ್ಟಿದ್ದೇನೆ. ಯಾಕೆ ರಿಲೀಸ್ ಮಾಡಿಲ್ಲ ಎಂದರೆ ಕೋರ್ಟ್ ಕಚೇರಿ ಎನ್ನುತ್ತಾರೆ.

ತಪ್ಪು ಇದ್ದರೆ ಹೇಳಿ ಆದರೆ, ಸುಮ್ಮನೆ ಒಂದಕ್ಕೆ ಹತ್ತು ಬರೆಯಬೇಡಿ.

ಆರ್ ಬಿ ವೇಷಧಾರಿ ಅಂಥ ಇವತ್ತು ಗೊತ್ತಾಗಿದೆ. ನಾನು ತುಂಬಾ ಶೋಷಣೆ ಒಳಗಾಗಿದ್ದೇನೆ...ಸಾರ್.. ಮುಂಚೆ ಏನು ಮಾಡೋಕು ಒಳ್ಳೆ ವೇದಿಕೆ ಸಿಗಲಿಲ್ಲ. ಇವತ್ತು ನಿಮ್ಮ(ಮಾಧ್ಯಮ) ಬೆಂಬಲ ಸಿಕ್ಕ ಮೇಲೆ ಏನು ಬಂದರೂ ಎದುರಿಸುತ್ತೀವಿ. ಕನ್ನಡ ಚಿತ್ರರಂಗದ ಹೆಣ್ಣು ಕಲಾವಿದರ ರಕ್ಷಣೆಗೆ ನಾವೆಲ್ಲ ಒಂದಾಗಿ ಹೋರಾಡಬೇಕಿದೆ ಎಂದು ವಿಜಯ್ ಹೇಳಿದರು.

ಸುವರ್ಣ ಚರ್ಚೆ: ಪತ್ರಕರ್ತ ರವಿ ಬೆಳಗೆರೆ ಅವರು ಭೀಮಾ ತೀರದಲ್ಲಿ ಚಿತ್ರತಂಡದ ಸೌಜನ್ಯದ ಬಗ್ಗೆ ಎತ್ತಿದ ಪ್ರಶ್ನೆ ತಕರಾರು ಚರ್ಚಿಸಲು ಸುವರ್ಣ ಸುದ್ದಿ ವಾಹಿನಿ ಸ್ಟುಡಿಯೋದಲ್ಲಿ ನಟ ದುನಿಯಾ ವಿಜಯ್, ನಿರ್ಮಾಪಕ ಅಣಜಿ ನಾಗರಾಜ್, ಪತ್ರಕರ್ತ ಪ್ರತಾಪ್ ಸಿಂಹ, ಮೈಸೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶಕ ಓಂಪ್ರಕಾಶ್ ರಾವ್ ಪ್ಯಾನಲ್ ನಲ್ಲಿದ್ದರು. ಚರ್ಚಾ ಕಾರ್ಯಕ್ರಮವನ್ನು ಹಮೀದ್ ಪಾಳ್ಯ ಹಾಗೂ ರಂಗನಾಥ್ ಭಾರದ್ವಾಜ್ ನಿರೂಪಿಸಿದರು.

ರವಿ ಬೆಳೆಗೆರೆ ಅವರಿಗೆ ಪ್ರತಾಪ್ ಸಿಂಹ ಅವರು ಹಾಕಿದ ಬಹಿರಂಗ ಸವಾಲ್ ಏನು? ಮುಂದೆ ಓದಿ...

Read more about: ರವಿ ಬೆಳಗೆರೆ, ಓಂ ಪ್ರಕಾಶ್ ರಾವ್, ದುನಿಯಾ ವಿಜಯ್, ಸುವರ್ಣ ವಾಹಿನಿ, ಅಣಜಿ ನಾಗರಾಜ್, ravi belagere, duniya vijay, anaji nagaraj, suvarna channel, ಭೀಮಾ ತೀರದಲ್ಲಿ, bheema theeradalli

English summary
War of words between Kannada film Bheema Theeradalli team Noted Kannada journalist Ravi Belagere shifted to Suvarna Kannada News. Actor Duniya Vijay claims that Ravi Belagere has spoiled life of many artist in the film industry with his defamatory reports. and Industry should unite and condemn his act.
Please Wait while comments are loading...

Kannada Photos

Go to : More Photos
 
X

X
Skip Ad
Please wait for seconds

Bringing you the best live coverage @ Auto Expo 2016! Click here to get the latest updates from the show floor. And Don't forget to Bookmark the page — #2016AutoExpoLive