» 

ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಹಿರಿಯ ತಾರೆ ಲಕ್ಷ್ಮಿ

Posted by:
 
Share this on your social network:
   Facebook Twitter Google+    Comments Mail

ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ಹಿರಿಯ ತಾರೆ ಲಕ್ಷ್ಮಿ
ವರನಟ ಡಾ.ರಾಜ್ ಕುಮಾರ್ ಅವರೊಂದಿಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯ ಜೋಡಿ ಅನ್ನಿಸಿಕೊಂಡಿದ್ದ 'ಜೂಲಿ' ಖ್ಯಾತಿಯ ಹಿರಿಯ ತಾರೆ ಲಕ್ಷ್ಮಿ ಏ.24ರಂದು ಪ್ರಸಾರವಾಗುತ್ತಿರುವ 'ಕನ್ನಡದ ಕೋಟ್ಯಾಧಿಪತಿ' ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಅಣ್ಣಾವ್ರ 84ನೇ ಹುಟ್ಟುಹಬ್ಬದ ನಿಮಿತ್ತ ಲಕ್ಷ್ಮಿ ಅವರು ವಿಶೇಷ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.

ಅಣ್ಣಾವ್ರ ಜೊತೆ ಲಕ್ಷ್ಮಿ ಅವರು ಗೋವಾದಲ್ಲಿ ಸಿಐಡಿ 999, ನಾ ನಿನ್ನ ಮರೆಯಲಾರೆ, ಒಲವೇ ಗೆಲುವು, ನಾನೊಬ್ಬ ಕಳ್ಳ, ರವಿಚಂದ್ರ ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದರು. ಈ ಶೋನಲ್ಲಿ ಭಾಗವಹಿಸುವುದರ ಜೊತೆಗೆ ರಾಜ್ ಅವರೊಂದಿಗಿನ ಒಡನಾಟ, ಮಧುರ ನೆನಪುಗಳನ್ನು ಲಕ್ಷ್ಮಿ ಮೆಲುಕು ಹಾಕಲಿದ್ದಾರೆ.

ಗೋಲ್ಡನ್ ಗರ್ಲ್ ರಮ್ಯಾ ಅವರ ಬಳಿಕ ಕೋಟ್ಯಾಧಿಪತಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ಎರಡನೇ ಸೆಲೆಬ್ರಿಟಿ ಲಕ್ಷ್ಮಿ. ಈ ಶೋನಲ್ಲಿ ಗೆದ್ದ ಹಣವನ್ನು ಅವರು ಮಾತ್ರೋಶಿಕ್ಷಣ ಸಂಸ್ಥೆಗೆ ನೀಡುವುದಾಗಿ ತಿಳಿಸಿದ್ದಾರೆ. ಈ ಸಂಸ್ಥೆ ಅಂಧತ್ವದಿಂದ ಬಳಲುತ್ತಿರುವ ಮಕ್ಕಳ ಏಳಿಗೆಗೆ ಶ್ರಮಿಸುತ್ತಿದೆ. ಏ.24ರ ರಾತ್ರಿ 8 ಗಂಟೆಗೆ ಸರಿಯಾಗಿ ನಿಮ್ಮ ನೆಚ್ಚಿನ ಸುವರ್ಣ ವಾಹಿನಿಯಲ್ಲಿ ಶೋ ನೋಡಬಹುದು. (ಒನ್‌ಇಂಡಿಯಾ ಕನ್ನಡ)

Topics: ಪುನೀತ್ ರಾಜ್ ಕುಮಾರ್, ಲಕ್ಷ್ಮಿ, ಕಿರುತೆರೆ, ಸುವರ್ಣ ಟಿವಿ, ಕನ್ನಡದ ಕೋಟ್ಯಧಿಪತಿ, puneeth rajkumar, lakshmi, tv, suvarna tv, kannadada kotyadipathi
English summary
Kannada films senior actress Lakshmi is the second celebrity guest on Puneet Rajkumar’s quiz show Kannadada kotyadipathi. Watch the special episode on 24th April at 8:00 PM on Asianet Suvarna Channel. The game show is hosted by Puneet Rajkumar.

Kannada Photos

Go to : More Photos