» 

ಚಡ್ಡಿ ಒಳಗಿನ ಚಡ್ಡಿಗಾಗಿ ರಚ್ಚೆ ಹಿಡಿದ ರಾಖಿ ಸಾವಂತ್

Posted by:
 
Share this on your social network:
   Facebook Twitter Google+    Comments Mail

ರಾಖಿ ಸಾವಂತ್ ಎಂದರೆ ಹಟಮಾರಿ ಹೆಂಗಸು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.ಅದರಲ್ಲೂ ನಿರ್ಮಾಪಕರಂತೂ ರಾಖಿ ಎಂದರೆ ಕನಸಿನಲ್ಲೂ ಬೆಚ್ಚಿ ಬೀಳುತ್ತಾರೆ. ಎನ್‌ಡಿಟಿವಿ ಇಮ್ಯಾಜಿನ್ 'ಗಜಬ್ ದೇಸಿ ಕಿ ಅಜಬ್ ಕಹಾನಿಯಾನ್' ಎಂಬ ಕಾರ್ಯಕ್ರಮದಲ್ಲಿ ರಾಖಿ ಕೊಟ್ಟ ಕಾಟ ಅಷ್ಟಿಷ್ಟಿಲ್ಲ ಎಂಬ ಸುದ್ದಿ ಲೀಕ್ ಆಗಿದೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಕೆಯ ಡಿಮ್ಯಾಂಡ್‌ಗಳು ಒಂದೆರಡಲ್ಲವಂತೆ. ನನಗೆ ಅದು ಬೇಕು ಇದು ಬೇಕು ಎಂದು ನಿರ್ಮಾಪಕರ ಜೇಬು ಖಾಲಿ ಮಾಡಿಸಿದ್ದಾರೆ. ಆಕೆ ಕೇಳಿದ್ದು ತೆಗೆದುಕೊಡಲಿಲ್ಲ ಎಂದರೆ ಚಿತ್ರೀಕರಣಕ್ಕೆ ಬರಲ್ಲ ಎಂದು ಚಂಡಿ ಹಿಡಿದ ಪಿಚ್ಚಂಡಿಯಂತೆ ಹಾಡುತ್ತಿದ್ದರಂತೆ.

ಕಡೆಗೆ ಈಕೆಯ ಬೇಡಿಕೆಗಳು ತಾನು ಉಡುವ ಬಟ್ಟೆ, ಬ್ರಾ ಕಡೆಗೆ ಚಡ್ಡಿಯೂ ಬೇಕು ಎಂದು ರಂಪ ರಾದ್ಧಾಂತ ಮಾಡಿದ ಸುದ್ದಿ ಇದೆ. ಅವೆಲ್ಲ ಕೊಡಿಸಿದರೂ ಸುಮ್ಮನಾಗದ ರಾಖಿ ಕಡೆಗೆ ಕೇಳಿದ್ದೇನೆಂದರೆ ಸಿ ಸ್ಟ್ರಿಂಗ್ ಬೇಕೇ ಬೇಕು ಎಂದು. ಅದು ಭಾರತದಲ್ಲಿ ಸಿಗೋದಿಲ್ಲ ಎಂದರೂ ಕೇಳದೆ ವಿದೇಶದಿಂದ ತರಿಸಿಕೊಟ್ಟಿದ್ದಾರೆ.

ಅಂದಹಾಗೆ ಸಿ ಸ್ಟ್ರಿಂಗ್ ಎಂದರೆ ಭಾರತದಲ್ಲಿ ಅಷ್ಟಾಗಿ ಇನ್ನೂ ಬಳಕೆಯಲ್ಲಿಲ್ಲದ ಒಳ ಉಡುಪು. ಅಂದರೆ ಇದನ್ನು ಚಡ್ಡಿ ಒಳಗಿನ ಚಡ್ಡಿ ಎನ್ನಬಹುದು. ಇದು ಮಹಿಳೆಯರ ಒಳಚಡ್ಡಿಗಿಂತಲೂ ಕಿರಿದಾಗಿದ್ದು, ಕೇವಲ ಮುಂಭಾಗವನ್ನು ಮಾತ್ರ ಮರೆ ಮಾಚುತ್ತದೆ. ಇಂತಹ ಸಿ ಸ್ಟ್ರಿಂಗ್ ಬೇಕೆ ಬೇಕೆಂದು ಹಟ ಮಾಡಿ ತರಿಸಿಕೊಂಡಿದ್ದಾರೆ ರಾಖಿ ಸಾವಂತ್. (ಏಜೆನ್ಸೀಸ್)

Topics: ರಾಖಿ ಸಾವಂತ್, ರಿಯಾಲಿಟಿ ಶೋ, ವಿವಾದ, rakhi sawant, reality show, controversy
English summary
That which is seen is sold is the only mantra followed by celebs in the entertainment industry. The latest prey to this show-off attitude is item girl Rakhi Sawant. Read on to know her C-String tantrums.

Kannada Photos

Go to : More Photos