twitter
    For Quick Alerts
    ALLOW NOTIFICATIONS  
    For Daily Alerts

    ರಾಗ ಕದ್ದ ಆರೋಪದಲ್ಲಿ ಅಮೀರ್ ಸತ್ಯಮೇವ ಜಯತೆ

    By Rajendra
    |

    Aamir Khan TV Show
    ಅಮೀರ್ ಖಾನ್ ಅವರ ಟಿವಿ ಶೋ ಹೆಸರೇ 'ಸತ್ಯಮೇವ ಜಯತೆ'. ಸತ್ಯಕ್ಕೆ ಯಾವತ್ತಿದ್ದರೂ ಜಯ ಎಂಬುದು ಅದರ ಅರ್ಥ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಆದರೆ ಶೋನ ಹೆಸರಿಗೆ ಅಪವಾದ ಎಂಬಂತಹ ಆರೋಪವೊಂದು ಕೇಳಿಬಂದಿದೆ. ಅದೇನೆಂದರೆ ರಾಗ ಕದ್ದ ಆರೋಪ.

    ಯುಪೋರಿಯಾ ಬ್ಯಾಂಡ್‌ನ ಗಾಯಕಿ ಪಾಲಶ್ ಸೇನ್ ಎಂಬುವವರು ತಮ್ಮ ಬ್ಯಾಂಡ್‌ನ ದಶದ ಹಳೆಯ ಗೀತೆಯ ರಾಗವನ್ನು ಕಾಪಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅವರು ಸ್ಟಾರ್ ಪ್ಲಸ್ ವಾಹಿನಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.

    "ಟಿವಿ ವಾಹಿನಿಗಳಲ್ಲಿ ಶೋನ ಟ್ರೇಲರ್ ಬಹಳ ದಿನಗಳಿಂದಲೇ ಪ್ರಸಾರವಾಗುತ್ತಿದೆ. ಆದರೆ ನಾನು ನೋಡಿರಲಿಲ್ಲ. ಇತ್ತೀಚೆಗೆ 'ಸತ್ಯಮೇವ ಜಯತೆ' ಹಾಡನ್ನು ಕೇಳಿದಾಗ ಶಾಖ್ ಆಯಿತು. 2000ನೇ ಇಸವಿಯಲ್ಲೇ ನಮ್ಮ ಯುಫೇರಿಯಾದ ಎರಡನೇ ಆಲ್ಬಂ 'ಫಿರ್ ಧೂಮ್' ಬಿಡುಗಡೆಯಾಗಿತ್ತು. ಆಲ್ಬಂನ ಒಂದು ಗೀತೆ 'ಸತ್ಯಮೇವ ಜಯತೆ'ಯ ರಾಗವನ್ನು ಬಹುತೇಕ ಹೋಲುತ್ತದೆ" ಎಂದಿದ್ದಾರೆ.

    ಈಗ 'ಸತ್ಯಮೇವ ಜಯತೆ' ಶೋಗಾಗಿ ರಾಮ್ ಸಂಪತ್ ಸಂಯೋಜಿಸಿರುವ ಗೀತೆ ತಮ್ಮ ಮೂಲಗೀತೆಯ ಸಂಗೀತವನ್ನು ಹೋಲುತ್ತದೆ. ಹಾಗಾಗಿ ಟಿವಿ ವಾಹಿನಿಗೆ ಲೀಗಲ್ ನೋಟೀಸ್ ಜಾರಿ ಮಾಡಿದ್ದೇನೆ ಎಂದಿದ್ದಾರೆ ಪಾಲಾಶ್ ಸೇನ್. "ನನಗೇನು ದುಡ್ಡು ಬೇಕಾಗಿಲ್ಲ. ಆದರೆ ಅವರು ಕನಿಷ್ಠಪಕ್ಷ ಅವರು ತಮಗೆ ಕೃತಜ್ಞತೆಗಳನ್ನು ತಿಳಿಸಬೇಕಾಗಿತ್ತು" ಎಂದು ಪಾಲಾಶ್ ಬೇಸರದಿಂದ ಹೇಳಿದ್ದಾರೆ. (ಏಜೆನ್ಸೀಸ್)

    English summary
    Aamir Khan's TV debut show lands in legal trouble. Singer Palash Sen of Euphoria band has alleged that the chorus of the show's 22-minute anthem, Satyamev Jayate, had been lifted from the band's decade-old song Satyamev Jayate from their second album Phir Dhoom, reports a daily.
    Monday, May 7, 2012, 14:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X